06 September 2021 KANNADA Murli Today | Brahma Kumaris

Read and Listen today’s Gyan Murli in Kannada

September 5, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

``ಮಧುರ ಮಕ್ಕಳೇ - ಪತಿತ-ಪಾವನ ತಂದೆಯ ಶ್ರೀಮತದಂತೆ ನೀವು ಪಾವನರಾಗುತ್ತೀರಿ, ಆದ್ದರಿಂದ ನಿಮಗೆ ಪಾವನ ಪ್ರಪಂಚದ ರಾಜ್ಯಭಾಗ್ಯ ಸಿಗುತ್ತದೆ, ತನ್ನ ಮತದಂತೆ ಪಾವನರಾಗುವವರಿಗೆ ಯಾವುದೇ ಪ್ರಾಪ್ತಿಯಿಲ್ಲ''

ಪ್ರಶ್ನೆ:: -

ಮಕ್ಕಳು ಸರ್ವೀಸಿನಲ್ಲಿ ವಿಶೇಷವಾಗಿ ಯಾವ ಮಾತಿನ ಗಮನ ಇಡಬೇಕಾಗಿದೆ?

ಉತ್ತರ:-

ಸರ್ವೀಸಿನಲ್ಲಿ ಹೋದಾಗ ಎಂದೂ ಚಿಕ್ಕ ಪುಟ್ಟ ಮಾತಿನಲ್ಲಿ ಒಬ್ಬರು ಇನ್ನೊಬ್ಬರೊಂದಿಗೆ ಮುನಿಸಿಕೊಳ್ಳಬಾರದು ಅರ್ಥಾತ್ ಬೇಸರ ಪಡಬಾರದು. ಒಂದುವೇಳೆ ಪರಸ್ಪರ ಉಪ್ಪು ನೀರಾಗುತ್ತೀರಿ, ಪರಸ್ಪರ ಮಾತನಾಡದಿದ್ದರೆ ಡಿಸ್ಸರ್ವೀಸ್ ಮಾಡಲು ನಿಮಿತ್ತರಾಗುತ್ತೀರಿ. ಕೆಲವು ಮಕ್ಕಳು ತಂದೆಯೊಂದಿಗೂ ಮುನಿಸಿಕೊಳ್ಳುತ್ತಾರೆ, ಉಲ್ಟಾ ಕರ್ಮ ಮಾಡತೊಡಗುತ್ತಾರೆ ಮತ್ತೆ ಅಂತಹ ಮಕ್ಕಳನ್ನು ತಂದೆಯು ದತ್ತು ಮಾಡಿಕೊಳ್ಳುವುದನ್ನೇ ನಿಲ್ಲಿಸಿ ಬಿಡುತ್ತಾರೆ.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಪತಿತ-ಪಾವನ ತಂದೆ ಯಾವ ಮಕ್ಕಳು ಪಾವನ ಆಗುವರೋ ಅವರಿಗೇ ಕುಳಿತು ತಿಳಿಸುತ್ತಾರೆ. ಪತಿತ ಮಕ್ಕಳೇ ಪಾವನರನ್ನಾಗಿ ಮಾಡುವ ತಂದೆಯನ್ನು ಕರೆಯುತ್ತಾರೆ. ಡ್ರಾಮಾದ ಪ್ಲಾನ್ ಎಂತಲೂ ಹೇಳುತ್ತಾರೆ, ರಾವಣ ರಾಜ್ಯ ಆಗಿರುವ ಕಾರಣ ಎಲ್ಲಾ ಮನುಷ್ಯರು ಪತಿತರಾಗಿದ್ದಾರೆ. ಯಾರು ವಿಕಾರದಲ್ಲಿ ಹೋಗುವರೋ ಅವರಿಗೆ ಪತಿತರೆಂದು ಹೇಳಲಾಗುತ್ತದೆ. ವಿಕಾರದಲ್ಲಿ ಹೋಗದೇ ಇರುವವರು ಅನೇಕರಿದ್ದಾರೆ, ಬ್ರಹ್ಮಚಾರಿಯಾಗಿರುತ್ತಾರೆ. ನಾವು ನಿರ್ವಿಕಾರಿಯಾಗಿದ್ದೇವೆ ಎಂದು ತಿಳಿದುಕೊಳ್ಳುತ್ತಾರೆ. ಹೇಗೆ ಪಾದ್ರಿಗಳಿದ್ದರೆ ಬೌದ್ಧಿಯರು ಇರುತ್ತಾರೆ, ಪವಿತ್ರರಾಗಿರುತ್ತಾರೆ. ಅವರನ್ನು ಪವಿತ್ರರನ್ನಾಗಿ ಯಾರು ಮಾಡಿದರು? ಅವರು ತಾವಾಗಿಯೇ ಪವಿತ್ರರಾಗಿದ್ದಾರೆ. ಪ್ರಪಂಚದಲ್ಲಿ ಹೀಗೆ ಅನೇಕ ಧರ್ಮಗಳಲ್ಲಿ ವಿಕಾರದಲ್ಲಿ ಹೋಗದೇ ಇರುವವರು ಅನೇಕರಿರುತ್ತಾರೆ ಆದರೆ ಅವರನ್ನು ಪತಿತ-ಪಾವನ ತಂದೆಯಂತೂ ಪಾವನರನ್ನಾಗಿ ಮಾಡುವುದಿಲ್ಲ ಅಲ್ಲವೆ. ಆದ್ದರಿಂದ ಅವರು ಪಾವನ ಪ್ರಪಂಚದ ಮಾಲೀಕರಾಗಲು ಸಾಧ್ಯವಿಲ್ಲ. ಪಾವನ ಪ್ರಪಂಚದಲ್ಲಿ ಹೋಗಲು ಸಾಧ್ಯವಿಲ್ಲ. ಸನ್ಯಾಸಿಗಳೂ ಸಹ ಪಂಚ ವಿಕಾರಗಳನ್ನು ಬಿಡುತ್ತಾರೆ ಆದರೆ ಅವರಿಗೆ ಸನ್ಯಾಸ ಯಾರು ಮಾಡಿಸಿದರು? ಪತಿತ-ಪಾವನ ಪರಮಪಿತ ಪರಮಾತ್ಮನಂತೂ ಸನ್ಯಾಸ ಮಾಡಿಸಲಿಲ್ಲ ಅಲ್ಲವೆ. ಪತಿತ-ಪಾವನ ತಂದೆಯಿಲ್ಲದೆ ಸಫಲತೆ ಸಿಗಲು ಸಾಧ್ಯವಿಲ್ಲ. ಪಾವನ ಪ್ರಪಂಚ, ಶಾಂತಿಧಾಮಕ್ಕೆ ಹೋಗಲು ಸಾಧ್ಯವಿಲ್ಲ. ಇಲ್ಲಂತೂ ತಂದೆಯು ಬಂದು ನಿಮಗೆ ಪಾವನರಾಗುವ ಶ್ರೀಮತವನ್ನು ಕೊಡುತ್ತಾರೆ. ಸತ್ಯಯುಗಕ್ಕೆ ನಿರ್ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ, ಇದರಿಂದ ಸಿದ್ಧವಾಗುವುದೇನೆಂದರೆ ಸತ್ಯಯುಗದಲ್ಲಿ ಬರುವವರು ಖಂಡಿತ ಪವಿತ್ರರಾಗಿರುತ್ತಾರೆ, ಸತ್ಯಯುಗದಲ್ಲಿಯೇ ಪವಿತ್ರರಿದ್ದರು. ಶಾಂತಿಧಾಮದಲ್ಲಿಯೂ ಆತ್ಮರು ಪವಿತ್ರರಾಗಿರುತ್ತಾರೆ. ಈ ರಾವಣ ರಾಜ್ಯದಲ್ಲಿ ಎಲ್ಲರೂ ಪತಿತರಾಗಿದ್ದಾರೆ. ಪುನರ್ಜನ್ಮವನ್ನಂತೂ ತೆಗೆದುಕೊಳ್ಳಲೇಬೇಕಾಗಿದೆ, ಸತ್ಯಯುಗದಲ್ಲಿಯೂ ಪುನರ್ಜನ್ಮ ತೆಗೆದುಕೊಳ್ಳುತ್ತಾರೆ ಆದರೆ ವಿಕಾರದಿಂದಲ್ಲ, ಅದು ಸಂಪೂರ್ಣ ನಿರ್ವಿಕಾರಿ ಪ್ರಪಂಚವಾಗಿದೆ. ಭಲೆ ತ್ರೇತಾಯುಗದಲ್ಲಿ ಎರಡು ಕಲೆಗಳು ಕಡಿಮೆಯಾಗುತ್ತವೆ, ಆದರೂ ಸಹ ಅವರಿಗೆ ವಿಕಾರಿಗಳೆಂದು ಹೇಳುವುದಿಲ್ಲ. ಭಗವಾನ್ ಶ್ರೀ ರಾಮ, ಭಗವತಿ ಶ್ರೀ ಸೀತಾ ಎಂದು ಹೇಳುತ್ತಾರಲ್ಲವೆ. 16 ಕಲೆ ನಂತರ 14 ಕಲೆಗಳೆಂದು ಹೇಳಲಾಗುತ್ತದೆ. ಚಂದ್ರಮನಿಗೂ ಇದೇರೀತಿ ಆಗುತ್ತದೆಯಲ್ಲವೆ ಅಂದಾಗ ಇದರಿಂದ ಸಿದ್ಧವಾಗುತ್ತದೆ – ಎಲ್ಲಿಯವರೆಗೆ ಪತಿತ-ಪಾವನ ತಂದೆಯು ಪಾವನರನ್ನಾಗಿ ಮಾಡುವುದಿಲ್ಲವೋ ಅಲ್ಲಿಯವರೆಗೆ ಯಾರೂ ಮುಕ್ತಿ-ಜೀವನ್ಮುಕ್ತಿಯಲ್ಲಿ ಹೋಗಲು ಸಾಧ್ಯವಿಲ್ಲ. ತಂದೆಯೇ ಮಾರ್ಗದರ್ಶಕನಾಗಿದ್ದಾರೆ. ಈ ಪ್ರಪಂಚದಲ್ಲಿ ಪವಿತ್ರರು ಅನೇಕರಿದ್ದಾರೆ, ಸನ್ಯಾಸಿಗಳಿಗೂ ಸಹ ಪವಿತ್ರತೆಯ ಕಾರಣ ಮಾನ್ಯತೆಯಿದೆ ಆದರೆ ತಂದೆಯ ಮೂಲಕ ಪವಿತ್ರರಾಗುವುದಿಲ್ಲ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ನಮ್ಮನ್ನೂ ಪಾವನರನ್ನಾಗಿ ಮಾಡುವವರು ನಿರಾಕಾರ ಪರಮಪಿತ ಪರಮಾತ್ಮನಾಗಿದ್ದಾರೆ. ಆ ಮನುಷ್ಯರಂತೂ ತಾವಾಗಿಯೇ ತನ್ನ ಮತದಂತೆ ಪವಿತ್ರರಾಗಿದ್ದಾರೆ, ನೀವು ತಂದೆಯ ಮೂಲಕ ಪವಿತ್ರರಾಗುತ್ತೀರಿ. ಪತಿತ-ಪಾವನ ತಂದೆಯ ಮೂಲಕವೇ ಪಾವನ ಪ್ರಪಂಚದ ಆಸ್ತಿಯು ಸಿಗುತ್ತದೆ. ತಂದೆಯು ತಿಳಿಸುತ್ತಾರೆ – ಹೇ ಮಕ್ಕಳೇ, ಕಾಮವು ನಿಮ್ಮ ಮಹಾಶತ್ರುವಾಗಿದೆ, ಇದರ ಮೇಲೆ ಜಯ ಗಳಿಸಿರಿ. ಇದರಿಂದಲೇ ಬೀಳುತ್ತೀರಿ, ನಾವು ಕ್ರೋಧ ಮಾಡಿ ಮುಖ ಕಪ್ಪು ಮಾಡಿಕೊಂಡೆವು ಎಂದು ಹೇಳುವುದಿಲ್ಲ. ಕಾಮ ವಿಕಾರದಿಂದಲೇ ಮುಖ ಕಪ್ಪು ಮಾಡಿಕೊಂಡೆವು, ಕೆಳಗೆ ಬಿದ್ದೆವೆಂದು ಬರೆಯುತ್ತಾರೆ. ಈ ಮಾತುಗಳನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ, ಪ್ರಪಂಚದವರಿಗೆ ತಿಳಿದಿಲ್ಲ. ಡ್ರಾಮಾನುಸಾರ ಯಾರು ಬಂದು ಬ್ರಾಹ್ಮಣರು ಆಗಬೇಕಾಗಿದೆಯೋ ಅವರು ಬರತೊಡಗುತ್ತಾರೆ. ಅನ್ಯ ಸತ್ಸಂಗಗಳಲ್ಲಿ ಯಾವುದೇ ಗುರಿ-ಧ್ಯೇಯವೇ ಇಲ್ಲ. ಶಿವಾನಂದರು ಮೊದಲಾದವರ ಅನುಯಾಯಿಗಳು ಅನೇಕರಿದ್ದಾರೆ ಆದರೆ ಅವರಲ್ಲಿಯೂ ಕೆಲಕೆಲವರು ಸನ್ಯಾಸ ಸ್ವೀಕರಿಸುತ್ತಾರೆ. ಗೃಹಸ್ಥಿಗಳಂತೂ ತೆಗೆದುಕೊಳ್ಳುವುದೇ ಇಲ್ಲ. ಮನೆ-ಮಠವನ್ನು ಬಿಟ್ಟು ಹೋಗಲು ಕೆಲವರೇ ಮುಂದೆ ಬರುತ್ತಾರೆ, ಸನ್ಯಾಸಿಗಳಾಗುತ್ತಾರೆ ಆದರೂ ಸಹ ಪುನರ್ಜನ್ಮ ತೆಗೆದುಕೊಳ್ಳಬೇಕಾಗುತ್ತದೆ. ಶಿವಾನಂದರು ಜ್ಯೋತಿಯಲ್ಲಿ ಜ್ಯೋತಿ ಸಮಾವೇಶವಾಯಿತು ಎಂದು ಹೇಳುವುದಿಲ್ಲ. ನೀವು ತಿಳಿದುಕೊಂಡಿದ್ದೀರಿ – ಸರ್ವರ ಸದ್ಗತಿದಾತನು ತಂದೆಯೇ ಆಗಿದ್ದಾರೆ, ಅವರೇ ಮಾರ್ಗದರ್ಶಕನಾಗಿದ್ದಾರೆ. ಮಾರ್ಗದರ್ಶಕನಿಲ್ಲದೆ ಯಾರೂ ಹೋಗಲು ಸಾಧ್ಯವಿಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ನಮ್ಮ ತಂದೆಯು ತಂದೆಯೂ ಆಗಿದ್ದಾರೆ, ಜ್ಞಾನಪೂರ್ಣನೂ ಆಗಿದ್ದಾರೆ. ಮನುಷ್ಯ ಸೃಷ್ಟಿಯ ಬೀಜ ರೂಪನಾಗಿದ್ದಾರೆ. ಇಡೀ ಮನುಷ್ಯ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವು ಬೀಜದಲ್ಲಿಯೇ ಇರುತ್ತದೆಯಲ್ಲವೆ. ಎಲ್ಲರೂ ತಂದೆಯೆಂದು ಹೇಳುತ್ತಾರಲ್ಲವೆ. ಮಕ್ಕಳಿಗೇ ತಿಳಿದಿದೆ – ನಮ್ಮ ತಂದೆಯು ಒಬ್ಬರೇ ಆಗಿದ್ದಾರೆ ಅಂದಮೇಲೆ ಆ ತಂದೆಗೇ ಎಲ್ಲರ ಮೇಲೂ ದಯೆ ಬರುತ್ತದೆಯಲ್ಲವೆ. ಎಷ್ಟೊಂದು ಮನುಷ್ಯರಿದ್ದಾರೆ, ಎಷ್ಟೊಂದು ಜೀವ ಜಂತುಗಳಿವೆ. ಸತ್ಯಯುಗದಲ್ಲಿ ಮನುಷ್ಯರು ಕೆಲವರೇ ಇರುತ್ತಾರೆ, ಕೆಲವೇ ಜೀವ ಜಂತುಗಳಿರುತ್ತವೆ. ಅಲ್ಲಿ ಇಂತಹ ಕೊಳಕೇ ಇರುವುದಿಲ್ಲ. ಅಲ್ಲಂತೂ ಅನೇಕ ಪ್ರಕಾರದ ಖಾಯಿಲೆಗಳು ಬರುತ್ತಿರುತ್ತವೆ. ಅದಕ್ಕಾಗಿ ಹೊಸ ಔಷಧಿಗಳನ್ನು ತಯಾರಿಸುತ್ತಾ ಇರುತ್ತಾರೆ. ಡ್ರಾಮಾನುಸಾರ ಅನೇಕ ಪ್ರಕಾರದ ಕಲೆಯನ್ನು ಕಂಡು ಹಿಡಿಯುತ್ತಾರೆ. ಅವೆಲ್ಲವೂ ಮನುಷ್ಯರ ಕಲೆಗಳಾಗಿವೆ. ಪಾರಲೌಕಿಕ ತಂದೆಯ ಕಲೆಯೇನಾಗಿದೆ? ತಂದೆಗೆ ಹೇ ಪತಿತ-ಪಾವನ ಬಂದು ನಮ್ಮನ್ನು ಪಾವನ ಮಾಡು, ಶರೀರವನ್ನೂ ಪಾವನ ಮಾಡಿ ಎಂದು ಹೇಳುತ್ತಾರೆ. ಪತಿತ-ಪಾವನ, ದುಃಖಹರ್ತ-ಸುಖಕರ್ತ ಎಂದು ಹೇಳುತ್ತಾರೆ, ಒಬ್ಬರನ್ನೇ ತಿಳಿಯುತ್ತಾರಲ್ಲವೆ. ತಮ್ಮ-ತಮ್ಮ ಭಾಷೆಯಲ್ಲಿ ಅವಶ್ಯವಾಗಿ ನೆನಪು ಮಾಡುತ್ತಾರೆ. ಮನುಷ್ಯರು ಸಾಯುವಾಗಲೂ ಭಗವಂತನನ್ನು ನೆನಪು ಮಾಡುತ್ತಾರೆ, ಮತ್ತ್ಯಾರೂ ಆಶ್ರಯ ಕೊಡುವುದಿಲ್ಲ ಎಂದು ತಿಳಿಯುತ್ತಾರೆ. ಆದ್ದರಿಂದಲೇ ಪರಮಾತ್ಮನನ್ನು ನೆನಪು ಮಾಡಿರಿ ಎಂದು ಹೇಳುತ್ತಾರೆ. ಕ್ರಿಶ್ಚಿಯನ್ನರೂ ಸಹ ಗಾಡ್ಫಾದರ್ನ ನೆನಪು ಮಾಡಿರಿ ಎಂದು ಹೇಳುತ್ತಾರೆ, ಕ್ರೈಸ್ಟ್ ನ ನೆನಪು ಮಾಡಿರಿ ಎಂದು ಹೇಳುವುದಿಲ್ಲ ಏಕೆಂದರೆ ಕ್ರಿಸ್ತನಿಗೂ ಮೇಲೆ ಭಗವಂತನಿದ್ದಾರೆ ಎಂಬುದು ತಿಳಿದಿದೆ. ಭಗವಂತನಂತೂ ಎಲ್ಲರಿಗೂ ಒಬ್ಬರೇ ಇರುವರಲ್ಲವೆ. ಮೃತ್ಯುಲೋಕವೆಂದರೇನು, ಅಮರ ಲೋಕ ಎಂದರೇನು ಎಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ, ಪ್ರಪಂಚದಲ್ಲಿ ಯಾರೂ ತಿಳಿದುಕೊಂಡಿಲ್ಲ. ಸ್ವರ್ಗ-ನರಕ ಎಲ್ಲವೂ ಇಲ್ಲಿಯೇ ಇದೆ ಎಂದು ಹೇಳುತ್ತಾರೆ. ಸತ್ಯಯುಗವಿತ್ತು, ದೇವತೆಗಳ ರಾಜ್ಯವಿತ್ತು ಎಂದು ಕೆಲಕೆಲವರು ತಿಳಿದುಕೊಳ್ಳುತ್ತಾರೆ. ಈಗಲೂ ಎಷ್ಟು ಹೊಸ-ಹೊಸ ಮಂದಿರಗಳು ತಯಾರಾಗುತ್ತಿವೆ. ನಿಮಗೆ ತಿಳಿದಿದೆ, ಒಬ್ಬ ತಂದೆಯ ವಿನಃ ಮತ್ತ್ಯಾರೂ ನಮ್ಮನ್ನು ಪಾವನರನ್ನಾಗಿ ಮಾಡಿ ಹಿಂತಿರುಗಿ ನಮ್ಮನ್ನು ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ನಾವು ನಮ್ಮ ಮಧುರ ಮನೆಗೆ ಹೋಗುತ್ತಿದ್ದೇವೆಂದು ನಿಮ್ಮ ಬುದ್ಧಿಯಲ್ಲಿದೆ. ತಂದೆಯು ನಮ್ಮನ್ನು ಮರಳಿ ಕರೆದುಕೊಂಡು ಹೋಗಲು ಯೋಗ್ಯರನ್ನಾಗಿ ಮಾಡುತ್ತಿದ್ದಾರೆಂದು ಸ್ಮೃತಿಯಲ್ಲಿರಬೇಕು.

ತಂದೆಯು ತಿಳಿಸುತ್ತಾರೆ – ಮಕ್ಕಳೇ, ನೀವು ಇಷ್ಟಿಷ್ಟು ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ಈಗ ನೀವು ಬಂದು ಶೂದ್ರರಿಂದ ಬ್ರಾಹ್ಮಣರಾಗಿದ್ದೀರಿ ಮತ್ತೆ ಬ್ರಾಹ್ಮಣರಿಂದ ದೇವತೆಗಳಾಗಿ ಸ್ವರ್ಗದಲ್ಲಿ ಹೋಗಬೇಕಾಗಿದೆ, ಈಗ ಸಂಗಮವಾಗಿದೆ. ವಿರಾಟ ರೂಪದಲ್ಲಿ ಬ್ರಾಹ್ಮಣರ ಶಿಖೆಯು ಪ್ರಸಿದ್ಧವಾಗಿದೆ. ಹಿಂದೂಗಳಿಗೂ ಸಹ ಶಿಖೆಯೇ ಗುರುತಾಗಿದೆ. ಮನುಷ್ಯರು ಮನುಷ್ಯರೇ ಆಗಿದ್ದಾರೆ. ಖಾಲಸೆ, ಮುಸಲ್ಮಾನರು ಮೊದಲಾದವರು ಈ ರೀತಿಯಾಗಿ ಬಿಡುತ್ತಾರೆ ಅವರನ್ನು ನೋಡಿ ಯಾರು ಎಂಬುದು ನಿಮಗೆ ಅರ್ಥವಾಗುವುದೇ ಇಲ್ಲ ಬಾಕಿ ಚೀನಿಯರು, ಆಫ್ರಿಕನ್ನರದು ಅರ್ಥವಾಗುತ್ತದೆ. ಅವರ ಚಹರೆಯೇ ಭಿನ್ನವಾಗಿರುತ್ತದೆ. ಕ್ರಿಶ್ಚಿಯನ್ನರದು ಭಾರತದೊಂದಿಗೆ ಸಂಬಂಧವಿದೆ ಆದ್ದರಿಂದ ಇವರು ಕಲಿತಿದ್ದಾರೆ. ಎಷ್ಟೊಂದು ವಿಭಿನ್ನ ಧರ್ಮಗಳಿವೆ, ಅವರ ರೀತಿ-ನೀತಿ, ಉಡುಗೆ-ತೊಡುಗೆ ಎಲ್ಲವೂ ಭಿನ್ನವಾಗಿದೆ. ಈಗ ನೀವು ಮಕ್ಕಳಿಗೆ ಜ್ಞಾನ ಸಿಕ್ಕಿದೆ, ನಾವು ಸತ್ಯಯುಗದ ಸ್ಥಾಪನೆ ಮಾಡುತ್ತಿದ್ದೇವೆ, ಅಲ್ಲಿ ಮತ್ತ್ಯಾವುದೇ ಧರ್ಮವಿರುವುದಿಲ್ಲ. ಈಗಂತೂ ಎಲ್ಲಾ ಧರ್ಮದವರೂ ಹಾಜರಿದ್ದಾರೆ. ಈಗ ಅಂತ್ಯದಲ್ಲಿ ಇನ್ನ್ಯಾವ ಧರ್ಮ ಸ್ಥಾಪನೆ ಮಾಡುವರು? ಹಾ! ಹೊಸ ಆತ್ಮರು ಪಾವನರಾಗಿರುತ್ತಾರೆ ಆದ್ದರಿಂದ ಯಾವ ಹೊಸ ಆತ್ಮವು ಬರುತ್ತದೆಯೋ ಆ ಆತ್ಮಕ್ಕೆ ಅಲ್ಪ ಸ್ವಲ್ಪ ಮಹಿಮೆಯಾಗುತ್ತದೆ, ವಿವೇಕವು ಹೇಳುತ್ತದೆ – ಯಾರು ಕೊನೆಯಲ್ಲಿ ಬರುವರೋ ಅವರಿಗೆ ಮೊದಲು ಅವಶ್ಯವಾಗಿ ಸುಖ ಸಿಗುವುದು, ಮಹಿಮೆಯೂ ಆಗುವುದು ನಂತರ ದುಃಖವೂ ಆಗುವುದು. ಅವರದು ಇಲ್ಲಿರುವುದೇ ಒಂದು ಜನ್ಮ. ಹೇಗೆ ನೀವು ಸುಖಧಾಮದಲ್ಲಿ ಬಹಳ ಇರುತ್ತೀರೋ ಅವರು ಶಾಂತಿಧಾಮದಲ್ಲಿ ಹೆಚ್ಚು ಸಮಯ ಇರುತ್ತಾರೆ. ಅಂತ್ಯದವರೆಗೆ ಬಹಳಷ್ಟು ವೃದ್ಧಿಯಾಗುತ್ತದೆ, ದೊಡ್ಡ ವೃಕ್ಷವಲ್ಲವೆ. ಈ ಸಮಯದಲ್ಲಿ ಮನುಷ್ಯರ ಜನಸಂಖ್ಯೆಯು ಎಷ್ಟೊಂದು ವೃದ್ಧಿಯಾಗುತ್ತಾ ಇದೆ ಆದ್ದರಿಂದ ಇದನ್ನು ನಿಲ್ಲಿಸುವ ಉಪಾಯ ಮಾಡುತ್ತಿರುತ್ತಾರೆ ಆದರೆ ಇದರಿಂದ ಏನೂ ಆಗಲು ಸಾಧ್ಯವಿಲ್ಲ. ನೀವು ತಿಳಿದುಕೊಂಡಿದ್ದೀರಿ, ಡ್ರಾಮಾನುಸಾರ ಅವಶ್ಯವಾಗಿ ವೃದ್ಧಿಯಾಗಬೇಕಾಗಿದೆ, ಹೊಸ ಎಲೆಗಳು ಬರತೊಡಗುತ್ತವೆ ಮತ್ತೆ ಶಾಖೆಗಳೂ ಹರಡುತ್ತಾ ಇರುತ್ತವೆ, ಎಷ್ಟೊಂದು ವಿಭಿನ್ನತೆಯಿದೆ! ಈಗ ಮಕ್ಕಳು ತಿಳಿದುಕೊಂಡಿದ್ದೀರಿ, ನಾವು ಮತ್ತ್ಯಾರದೇ ಸಂಬಂಧದಲ್ಲಿಲ್ಲ. ತಂದೆಯೇ ನಮ್ಮನ್ನು ಪಾವನರನ್ನಾಗಿ ಮಾಡುತ್ತಾರೆ ಮತ್ತು ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಸಮಾಚಾರವನ್ನು ತಿಳಿಸುತ್ತಾರೆ. ನೀವೂ ಸಹ ಹೇ ಪತಿತ-ಪಾವನ ಬಂದು ನಮ್ಮನ್ನು ಪಾವನ ಮಾಡಿರಿ ಎಂದು ಕರೆಯುತ್ತೀರಿ ಅಂದಮೇಲೆ ಅವಶ್ಯವಾಗಿ ಪತಿತ ಪ್ರಪಂಚವು ವಿನಾಶ ಹೊಂದುವುದು. ಇದೂ ಸಹ ಲೆಕ್ಕವಿದೆ. ಸತ್ಯಯುಗದಲ್ಲಿ ಕೆಲವರೇ ಮನುಷ್ಯರಿರುತ್ತಾರೆ, ಕಲಿಯುಗದಲ್ಲಿ ಎಷ್ಟೊಂದು ಜನಸಂಖ್ಯೆಯಿದೆ! ನೀವು ಮಕ್ಕಳು ತಿಳುವಳಿಕೆಯನ್ನೂ ಕೊಡಬೇಕಾಗಿದೆ. ತಂದೆಯು ನಮಗೆ ಓದಿಸುತ್ತಾರೆ, ಈ ಹಳೆಯ ಪ್ರಪಂಚವು ಈಗ ವಿನಾಶವಾಗುತ್ತದೆ, ತಂದೆಯೇ ಸ್ಥಾಪನೆ ಮಾಡುತ್ತಾರೆ. ಭಗವಾನುವಾಚ – ನಾನು ಸ್ಥಾಪನೆ ಮಾಡಿಸುತ್ತೇನೆ, ವಿನಾಶವಂತೂ ಡ್ರಾಮಾನುಸಾರ ಆಗುತ್ತದೆ, ಭಾರತದಲ್ಲಿಯೇಚಿತ್ರಗಳೂ ಇವೆ. ಬ್ರಹ್ಮನ ಮೂಲಕ ಬ್ರಾಹ್ಮಣರು, ಬ್ರಹ್ಮಾ ಮುಖವಂಶಾವಳಿ ನೋಡಿರಿ ಎಷ್ಟೊಂದಿದೆ. ಅವರಂತೂ ಕುಖ ವಂಶಾವಳಿ ಬ್ರಾಹ್ಮಣರಾಗಿದ್ದಾರೆ, ಅವರು ತಂದೆಯನ್ನು ಅರಿತುಕೊಂಡೇ ಇಲ್ಲ. ಈಗ ನಿಮಗೆ ಸಾಹಸ ಬಂದಿದೆ. ನೀವು ತಿಳಿದುಕೊಂಡಿದ್ದೀರಿ – ಈಗ ಕಲಿಯುಗವು ವಿನಾಶವಾಗಿ ಸತ್ಯಯುಗ ಬರಲಿದೆ, ಇದು ರಾಜಸ್ವ ಅಶ್ವಮೇಧ ಅವಿನಾಶಿ ರುದ್ರ ಜ್ಞಾನ ಯಜ್ಞವಾಗಿದೆ, ಇದರಲ್ಲಿ ಹಳೆಯ ಪ್ರಪಂಚದ ಆಹುತಿಯಾಗುವುದು, ಮತ್ತ್ಯಾವುದೇ ಆಹುತಿಯಲ್ಲ. ತಂದೆಯು ತಿಳಿಸುತ್ತಾರೆ – ನಾನು ಇಡೀ ಸೃಷ್ಟಿಯಲ್ಲಿ ಈ ರಾಜಸ್ವ ಅಶ್ವಮೇಧ ಯಜ್ಞವನ್ನು ರಚಿಸಿದ್ದೇನೆ, ಇಡೀ ಭೂಮಿಯ ಮೇಲೆ ರಚಿಸಲಾಗಿದೆ, ಯಜ್ಞ ಕುಂಡ ಇರುತ್ತದೆಯಲ್ಲವೆ, ಇದರಲ್ಲಿ ಇಡೀ ಪ್ರಪಂಚವೇ ಸ್ವಾಹಾ ಆಗುವುದು. ಯಜ್ಞ ಕುಂಡವನ್ನು ಮಾಡುತ್ತಾರಲ್ಲವೆ, ಇಡೀ ಸೃಷ್ಟಿಯೇ ಯಜ್ಞ ಕುಂಡವಾಗಿದೆ, ಈ ಯಜ್ಞ ಕುಂಡದಲ್ಲಿ ಏನಾಗುವುದು? ಎಲ್ಲರೂ ಇದರಲ್ಲಿ ಸ್ವಾಹಾ ಆಗುವರು, ಈ ಕುಂಡವು ಪವಿತ್ರ ಹೊಸದಾಗಿ ಬಿಡುವುದು ಮತ್ತೆ ಇದರಲ್ಲಿ ದೇವತೆಗಳು ಬರುತ್ತಾರೆ. ಸಮುದ್ರವು ನಾಲ್ಕಾರು ಕಡೆ ಇದ್ದೇ ಇದೆ, ಇಡೀ ಪ್ರಪಂಚವೇ ಹೊಸದಾಗಿ ಬಿಡುವುದು, ಬಹಳ ಅಲ್ಲೋಲ-ಕಲ್ಲೋಲ ಆಗುವುದು, ವಾರಸುಧಾರರಿಲ್ಲದ ಸ್ಥಳವೇ ಇಲ್ಲ, ಎಲ್ಲರೂ ಇದು ನನ್ನ ಜಾಗ, ಇದು ನನ್ನ ಜಾಗ ಎಂದು ಹೇಳುತ್ತಾರೆ. ಈಗ ನನ್ನದು-ನನ್ನದು ಎಂದು ಹೇಳುವಂತಹ ಮನುಷ್ಯರೆಲ್ಲರೂ ಸಮಾಪ್ತಿಯಾಗಿ ಬಿಡುವರು ಬಾಕಿ ನಾನು ಯಾರನ್ನು ಪವಿತ್ರರನ್ನಾಗಿ ಮಾಡುತ್ತೇನೆಯೋ ಅವರು ಕೆಲವರೇ ಇಡೀ ಪ್ರಪಂಚದಲ್ಲಿ ಉಳಿದುಕೊಳ್ಳುತ್ತಾರೆ. ಮೊಟ್ಟ ಮೊದಲಿಗೆ ಆದಿ ಸನಾತನ ದೇವಿ-ದೇವತಾ ಧರ್ಮ ಇರುವುದು, ಜಮುನಾ ನದಿಯ ತೀರದಲ್ಲಿ ಅವರ ರಾಜ್ಯವಿರುವುದು. ಇವೆಲ್ಲಾ ಮಾತುಗಳು ನಿಮ್ಮ ಬುದ್ಧಿಯಲ್ಲಿ ಕುಳಿತುಕೊಳ್ಳಬೇಕು, ಖುಷಿಯಿರಬೇಕು. ಮನುಷ್ಯರು ಒಬ್ಬರು ಇನ್ನೊಬ್ಬರಿಗೆ ಕಥೆಯನ್ನು ತಿಳಿಸುತ್ತಾ ಇರುತ್ತಾರಲ್ಲವೆ. ಇದೂ ಸಹ ಸತ್ಯ ನಾರಾಯಣನ ಕಥೆಯಾಗಿದೆ, ಇದು ಬೇಹದ್ದಿನ ಕಥೆಯಾಗಿದೆ. ನಿಮ್ಮ ಬುದ್ಧಿಯಲ್ಲಿಯೇ ಈ ಮಾತುಗಳಿವೆ. ಅದರಲ್ಲಿಯೂ ಯಾರು ಒಳ್ಳೊಳ್ಳೆಯ ಸೇವಾಧಾರಿಗಳು ಆಗಿರುವರೋ ಅವರ ಬುದ್ಧಿಯಲ್ಲಿ ಧಾರಣೆಯಾಗುತ್ತದೆ, ಜೋಳಿಗೆ ತುಂಬುತ್ತದೆ, ದಾನ ಮಾಡುತ್ತಾ ಇರುತ್ತಾರೆ ಆದ್ದರಿಂದ ಧನ ದಾನ ಮಾಡಿದರೆ ಅದು ಖಾಲಿಯಾಗುವುದಿಲ್ಲವೆಂದು ಹೇಳುತ್ತಾರೆ. ದಾನ ಮಾಡುವುದರಿಂದ ಅದು ಇನ್ನೂ ಸರಿದು ಬರುತ್ತದೆಯೆಂದು ಹೇಳುತ್ತಾರೆ. ನಿಮ್ಮದು ಅವಿನಾಶಿ ಧನವಾಗಿದೆ, ಈಗ ಈ ಧನವನ್ನೂ ದಾನ ಮಾಡಿದರೆ ಇನ್ನೂ ಹೆಚ್ಚುವುದು. ಎಷ್ಟು ದಾನ ಮಾಡುತ್ತೀರೋ ಅಷ್ಟೇ ಖುಷಿಯಿರುವುದು, ಕೇಳುವ ಸಮಯದಲ್ಲಿ ಕೆಲಕೆಲವರ ತಲೆಯು ತೂಗುತ್ತಾ ಇರುತ್ತದೆ, ಕೆಲವರಂತು ಕಾದ ಹೆಂಚಿನಂತೆ ಕುಳಿತಿರುತ್ತಾರೆ. ತಂದೆಯು ಇಷ್ಟು ಒಳ್ಳೊಳ್ಳೆಯ ಮಾತುಗಳನ್ನು ತಿಳಿಸುತ್ತಾರೆ ಅಂದಮೇಲೆ ಕೇಳುವ ಸಮಯದಲ್ಲಿ ತಾನಾಗಿಯೇ ತಲೆ ಅಲುಗಾಡುತ್ತಿರುವುದು. ಇಲ್ಲಿ ಮಕ್ಕಳು ಸನ್ಮುಖದಲ್ಲಿ ತಂದೆಯಿಂದ ರಿಫ್ರೆಶ್ ಆಗುವುದಕ್ಕಾಗಿಯೇ ಬರುತ್ತೀರಿ, ತಂದೆಯು ಹೇಗೆ ಕುಳಿತು ಯುಕ್ತಿಯಿಂದ ತಿಳಿಸುತ್ತಾರೆ. ನಿಮಗೆ ತಿಳಿದಿದೆ – ಭಾರತದಲ್ಲಿ ದೇವಿ-ದೇವತೆಗಳ ರಾಜ್ಯವಿತ್ತು, ಭಾರತಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ, ಈಗಂತೂ ನರಕವಾಗಿದೆ, ನರಕವು ಬದಲಾಗಿ ಸ್ವರ್ಗವಾಗುವುದು. ಉಳಿದಂತೆ ಇದೆಲ್ಲದರ ವಿನಾಶವಾಗುವುದು. ನಿಮಗಾಗಿ ಸ್ವರ್ಗವು ನೆನ್ನೆಯ ಮಾತಾಗಿದೆ, ನೆನ್ನೆಯ ದಿನ ರಾಜ್ಯ ಮಾಡುತ್ತಿದ್ದಿರಿ, ಮತ್ತ್ಯಾರೂ ಈ ರೀತಿ ಹೇಳಲು ಸಾಧ್ಯವಿಲ್ಲ. ಕ್ರಿಸ್ತನು ಬರುವುದಕ್ಕೆ ಇಷ್ಟು ವರ್ಷಗಳ ಮೊದಲು ಸ್ವರ್ಗವಿತ್ತು ಆಗ ಮತ್ತ್ಯಾವುದೇ ಧರ್ಮವಿರಲಿಲ್ಲ ಎಂದು ಹೇಳುತ್ತಾರೆ. ದ್ವಾಪರದಿಂದ ಎಲ್ಲಾ ಧರ್ಮದವರೂ ಬರುತ್ತಾರೆ, ಬಹಳ ಸಹಜ ಮಾತಾಗಿದೆ ಆದರೆ ಮನುಷ್ಯರಿಗೆ ಅರ್ಥವಾಗಲು ಅವರ ಬುದ್ಧಿಯು ಇತ್ತ ಕಡೆಯಿಲ್ಲ. ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ ಅಂದಮೇಲೆ ಅವರು ಬಂದು ಅವಶ್ಯವಾಗಿ ಪತಿತರಿಂದ ಪಾವನರನ್ನಾಗಿ ಮಾಡುತ್ತಾರಲ್ಲವೆ, ಇಲ್ಲಂತೂ ಯಾರೂ ಪಾವನರಿರಲು ಸಾಧ್ಯವಿಲ್ಲ. ಸತ್ಯಯುಗಕ್ಕೆ ನಿರ್ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ, ಈಗ ವಿಕಾರಿ ಪ್ರಪಂಚವಾಗಿದೆ, ಮುಖ್ಯ ಮಾತು ಪವಿತ್ರತೆಯದಾಗಿದೆ, ಇದಕ್ಕಾಗಿ ನೀವು ಎಷ್ಟೊಂದು ಪರಿಶ್ರಮ ಪಡಬೇಕಾಗುತ್ತದೆ. ನೀವು ತಿಳಿದುಕೊಂಡಿದ್ದೀರಿ, ಈ ದಿನದವರೆಗೂ ಏನೆಲ್ಲವೂ ಕಳೆಯಿತೋ ಅದು ಡ್ರಾಮಾನುಸಾರವೇ ಎಂದು ಹೇಳಬಹುದು, ಇದರಲ್ಲಿ ನಾವು ಯಾರನ್ನೂ ಕೆಟ್ಟವರು, ಒಳ್ಳೆಯವರು ಎಂದು ಹೇಳುವಂತಿಲ್ಲ. ಏನೆಲ್ಲವೂ ಆಗುತ್ತದೆಯೋ ಡ್ರಾಮಾದಲ್ಲಿ ನಿಗಧಿಯಾಗಿದೆ. ಸರ್ವೀಸಿನಲ್ಲಿ ಇಂತಿಂತಹ ಕರ್ಮ ಮಾಡಬೇಡಿ, ಇಲ್ಲವೆಂದರೆ ಡಿಸ್ಸರ್ವೀಸ್ ಆಗಿ ಬಿಡುತ್ತದೆ ಎಂದು ತಂದೆಯು ಮುಂದಿನದಕ್ಕಾಗಿ ಎಚ್ಚರಿಕೆ ನೀಡುತ್ತಾರೆ. ತಂದೆಯೇ ತಿಳಿಸುತ್ತಾರಲ್ಲವೆ – ನೀವು ಪರಸ್ಪರ ಉಪ್ಪು ನೀರಾಗಿ ಬಿಟ್ಟಿದ್ದೀರಿ, ನಾವು ಉಪ್ಪು ನೀರಾಗಿದ್ದೇವೆ ಎಂದು ತಿಳಿದುಕೊಳ್ಳುತ್ತಾರೆ. ಒಬ್ಬರು ಇನ್ನೊಬ್ಬರೊಂದಿಗೆ ಸೇರುವುದಿಲ್ಲ, ಮಾತನಾಡುವುದಿಲ್ಲ ಮತ್ತೆ ಯಾರಿಗಾದರೂ ಸ್ವಲ್ಪ ಹೇಳಿದರೂ ಸಹ ಮುನಿಸಿಕೊಳ್ಳುತ್ತಾರೆ, ಶಿವ ತಂದೆಯನ್ನೇ ಮರೆತು ಹೋಗುತ್ತಾರೆ ಆದ್ದರಿಂದಲೇ ತಿಳಿಸಲಾಗುತ್ತದೆ – ಯಾವಾಗಲೂ ಶಿವ ತಂದೆಯನ್ನು ನೆನಪು ಮಾಡಿರಿ, ತಂದೆಯು ಮಕ್ಕಳಿಗೆ ಸಾವಧಾನ ನೀಡುತ್ತಾರೆ. ಇಂತಿಂತಹ ಕರ್ಮಗಳನ್ನು ಮಾಡುವುದರಿಂದ ದುರ್ಗತಿಯಾಗಿ ಬಿಡುತ್ತದೆ, ಅದೃಷ್ಟದಲ್ಲಿಲ್ಲದಿದ್ದರೆ ಅವರು ತಿಳಿದುಕೊಳ್ಳುವುದೇ ಇಲ್ಲ. ಯಾವ ತಂದೆಯಿಂದ ಆಸ್ತಿಯು ಸಿಗುತ್ತದೆಯೋ ಅವರೊಂದಿಗೂ ಮುನಿಸಿಕೊಳ್ಳುತ್ತಾರೆ, ಬ್ರಾಹ್ಮಿಣಿಯರೊಂದಿಗೂ ಮುನಿಸಿಕೊಳ್ಳುತ್ತಾರೆ, ಈ ಬ್ರಹ್ಮಾರವರೊಂದಿಗೂ ಮುನಿಸಿಕೊಳ್ಳುತ್ತಾರೆ ಮತ್ತೆ ತರಗತಿಗೇ ಬರುವುದಿಲ್ಲ. ಶಿವ ತಂದೆಯೊಂದಿಗೆ ಎಂದೂ ಮುನಿಸಿಕೊಳ್ಳುಬಾರದು ಅಲ್ಲವೆ. ಅವರ ಮುರುಳಿಯನ್ನಂತೂ ಓದಲೇಬೇಕು, ಅವರನ್ನು ನೆನಪು ಮಾಡಾಬೇಕಾಗಿದೆ. ತಂದೆಯು ಹೇಳುತ್ತಾರೆ – ಮಕ್ಕಳೇ, ತಮ್ಮನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿರಿ ಆಗ ಸದ್ಗತಿಯಾಗುವುದು. ದೇಹಾಭಿಮಾನದಲ್ಲಿ ಬರುವುದರಿಂದ ದೇಹಧಾರಿಗಳೊಂದಿಗೆ ಮುನಿಸಿಕೊಳ್ಳುತ್ತಾರೆ, ಆಸ್ತಿಯಂತೂ ತಾತನಿಂದ ಸಿಗುತ್ತದೆ. ತಂದೆಯ ಮಕ್ಕಳಾದಗಲೇ ತಾತನಿಂದ ಆಸ್ತಿಯು ಸಿಗುವುದು. ತಂದೆಗೇ ವಿಚ್ಛೇದನ ಕೊಟ್ಟು ಬಿಟ್ಟರೆ ಆಸ್ತಿಯು ಹೇಗೆ ಸಿಗುತ್ತದೆ! ಬ್ರಾಹ್ಮಣ ಕುಲವನ್ನು ಬಿಟ್ಟು ಶೂದ್ರ ಕುಲದಲ್ಲಿ ಹೋಗಿ ಬಿಟ್ಟರೆ ಆಸ್ತಿಯೇ ಸಮಾಪ್ತಿ, ಅವರನ್ನು ಪಟ್ಟಿಯಿಂದ ಹೊರ ಹಾಕಲಾಗುವುದು. ಆದರೂ ಸಹ ತಿಳಿದುಕೊಳ್ಳುವುದಿಲ್ಲ, ಮಾಯೆಯು ಕಾದ ಹಂಚಿನಂತೆ ಮಾಡಿ ಬಿಡುತ್ತದೆ. ತಂದೆಯನ್ನು ಎಷ್ಟೊಂದು ಪ್ರೀತಿಯಿಂದ ನೆನಪು ಮಾಡಬೇಕು ಆದರೆ ಮಾಡುವುದೇ ಇಲ್ಲ. ಶಿವ ತಂದೆಯ ಮಗುವಾಗಿದ್ದೇನೆ, ಅವರು ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ, ಅವಶ್ಯವಾಗಿ ಭಾರತದಲ್ಲಿಯೇ ಬರುತ್ತಾರೆ. ಶಿವ ಜಯಂತಿಯನ್ನು ಆಚರಿಸುತ್ತಾರಲ್ಲವೆ. ವಿಶ್ವದ ಚರಿತ್ರೆ-ಭೂಗೋಳವು ಪುನರಾವರ್ತನೆ ಆಗುತ್ತದೆ ಅಂದಮೇಲೆ ಮೊಟ್ಟ ಮೊದಲು ಶಿವ ತಂದೆಯೇ ಬಂದು ಸ್ವರ್ಗವನ್ನು ರಚಿಸುತ್ತಾರೆ. ನೀವು ತಿಳಿದುಕೊಂಡಿದ್ದೀರಿ – ನಮಗೆ ಸ್ವರ್ಗದ ರಾಜ್ಯಭಾಗ್ಯವು ಸಿಗುತ್ತಿದೆ, ತಂದೆಯೇ ಬಂದು ಸ್ವರ್ಗವಾಸಿಗಳನ್ನಾಗಿ ಮಾಡುತ್ತಾರೆ. ಹೊಸ ಪ್ರಪಂಚಕ್ಕಾಗಿ ರಾಜಯೋಗವನ್ನು ಕಲಿಸುತ್ತಾರೆ. ನೀವು ಹೋಗಿ ಹೊಸ ಪ್ರಪಂಚದಲ್ಲಿ ರಾಜ್ಯಭಾರ ಮಾಡುತ್ತೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಬುದ್ಧಿರೂಪಿ ಜೋಳಿಗೆಯಲ್ಲಿ ಅವಿನಾಶಿ ಜ್ಞಾನ ರತ್ನಗಳನ್ನು ತುಂಬಿಕೊಂಡು ಮತ್ತೆ ದಾನ ಮಾಡಬೇಕಾಗಿದೆ. ದಾನ ಮಾಡುವುದರಿಂದಲೇ ಖುಷಿಯಿರುವುದು, ಜ್ಞಾನ ಧನವು ಹೆಚ್ಚುತ್ತಾ ಹೋಗುವುದು.

2. ಎಂದೂ ಪರಸ್ಪರ ಮುನಿಸಿಕೊಂಡು ಉಪ್ಪು ನೀರಾಗಿ ವರ್ತಿಸಬಾರದು. ಬಹಳ ಪ್ರೀತಿಯಿಂದ ತಂದೆಯನ್ನು ನೆನಪು ಮಾಡಬೇಕು ಮತ್ತು ಮುರುಳಿಯನ್ನು ಕೇಳಬೇಕು, ಕಾದ ಹಂಚಿನಂತೆ ಆಗಬಾರದು.

ವರದಾನ:-

ನಾವು ಮಾಸ್ಟರ್ ಶಿಕ್ಷಕನು ಆಗಿದ್ದೇವೆ, ಮಾಸ್ಟರ್ ಎಂದು ಹೇಳುವುದರಿಂದ ತಂದೆಯ ನೆನಪು ಸ್ವತಹವಾಗಿಯೇ ಬರುವುದು. ಮಾಡುವಂತಹವರ ನೆನಪು ಬರುವುದರಿಂದ ಸ್ವಯಂ ನಾನು ನಿಮಿತ್ತನು ಎಂಬುದು ಸ್ವತಹವಾಗಿಯೇ ಸ್ಮೃತಿಯಲ್ಲಿ ಬಂದು ಬಿಡುತ್ತದೆ. ವಿಶೇಷವಾಗಿ ಸ್ಮೃತಿಯಿರಲಿ – ನಾವು ಪುಣ್ಯಾತ್ಮರಾಗಿದ್ದೇವೆ, ಪುಣ್ಯದ ಖಾತೆಯನ್ನು ಮಾಡಿಕೊಳ್ಳುವುದು ಹಾಗೂ ಅನ್ಯರಿಗೂ ಮಾಡಿಸುವುದೇ ವಿಶೇಷ ಸೇವೆಯಾಗಿದೆ. ಪುಣ್ಯ ಆತ್ಮನೆಂದಿಗೂ ಸಹ ಸಂಕಲ್ಪದಲ್ಲಿಯೂ ಪಾಪದ ಅಂಶವನ್ನೂ ಸಂಕಲ್ಪ ಮಾಡಲು ಸಾಧ್ಯವಿಲ್ಲ. ಮಾಸ್ಟರ್ ಶಿಕ್ಷಕನೆಂದರೆ ಸದಾ ಪುಣ್ಯದ ಖಾತೆಯನ್ನು ಜಮಾ ಮಾಡುವ ಹಾಗೂ ಅನ್ಯರಿಗೆ ಮಾಡಿಸುವವರು, ತಂದೆಯ ಸಮಾನರು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top