09 June 2021 KANNADA Murli Today – Brahma Kumaris

June 8, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಇಡೀ ಪ್ರಪಂಚದಿಂದ ವಿಕಾರಗಳ ತಾಪವನ್ನು ನೀಗಿಸಿ ಎಲ್ಲರನ್ನೂ ಶೀತಲರನ್ನಾಗಿ ಮಾಡಲು ತಂದೆಯು ಬಂದಿದ್ದಾರೆ, ಜ್ಞಾನದ ಮಳೆಯು ಶೀತಲರನ್ನಾಗಿ ಮಾಡಿ ಬಿಡುತ್ತದೆ”

ಪ್ರಶ್ನೆ:: -

ಯಾವ ತಾಪವು ಇಡೀ ಪ್ರಪಂಚವನ್ನು ಸುಡುತ್ತಿದೆ?

ಉತ್ತರ:-

ಕಾಮ ವಿಕಾರದ ತಾಪವು ಇಡೀ ಪ್ರಪಂಚವನ್ನು ಸುಡುತ್ತಿದೆ. ಎಲ್ಲರೂ ಕಾಮಾಗ್ನಿಯಲ್ಲಿ ಸುಟ್ಟು ಕಪ್ಪಾಗಿ ಬಿಟ್ಟಿದ್ದಾರೆ. ತಂದೆಯು ಜ್ಞಾನದ ಮಳೆಯಿಂದ ಅವರನ್ನು ಶೀತಲರನ್ನಾಗಿ ಮಾಡಿ ಬಿಡುತ್ತಾರೆ. ಹೇಗೆ ಮಳೆ ಬಿದ್ದರೆ ಧರಣಿಯೂ ಶೀತಲವಾಗಿ ಬಿಡುತ್ತದೆ ಹಾಗೆಯೇ ಈ ಜ್ಞಾನದ ಮಳೆಯಿಂದ 21 ಜನ್ಮಗಳಿಗಾಗಿ ನೀವು ಶೀತಲರಾಗಿ ಬಿಡುತ್ತೀರಿ. ಯಾವುದೇ ಪ್ರಕಾರದ ತಾಪವಿರುವುದಿಲ್ಲ. ತತ್ವಗಳೂ ಸತೋಪ್ರಧಾನವಾಗಿ ಬಿಡುತ್ತವೆ. ಯಾರೂ ತಪಿಸುವುದಿಲ್ಲ.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಆತ್ಮಿಕ ಮಕ್ಕಳು ಯಾರ ನೆನಪಿನಲ್ಲಿ ಕುಳಿತಿದ್ದೀರಿ? ಅವಶ್ಯವಾಗಿ ತಮ್ಮ ಆತ್ಮಿಕ ತಂದೆಯ ನೆನಪಿನಲ್ಲಿ ಕುಳಿತಿದ್ದೀರಿ. ನಮಗೆ ಆತ್ಮಿಕ ತಂದೆಯು ಬಂದು ರಿಫ್ರೆಷ್ ಮಾಡಿ ಶೀತಲರನ್ನಾಗಿ ಮಾಡಲಿ ಎಂದು ಆತ್ಮವು ತನ್ನ ಪರಮಪಿತ ಪರಮಾತ್ಮನ ನೆನಪಿನಲ್ಲಿ ಕುಳಿತಿದೆ ಏಕೆಂದರೆ ಭಾರತವು ಕಾಮ ಚಿತೆಯ ಮೇಲೆ ಕುಳಿತು ಸುಟ್ಟು ಹೋಗಿದೆ. ತಾಪವನ್ನು ನೀಗಿಸಿದರೆಂದು ಹಾಡುತ್ತಾರೆ. ಯಾವ ತಾಪ? ಕಾಮ ಚಿತೆಯ ತಾಪ. ತಾಪವು ಹೆಚ್ಚಾಗಿ ಬಿಟ್ಟರೆ ಮನುಷ್ಯರು ಸತ್ತು ಹೋಗುತ್ತಾರೆ. ಈ ಕಾಮ ಚಿತೆಯ ತಾಪದಲ್ಲಿ ಭಾರತವು ಸಂಪೂರ್ಣ ಸುಟ್ಟು ಹೋಗಿದೆ ಆದ್ದರಿಂದ ಬಂದು ಶೀತಲರನ್ನಾಗಿ ಮಾಡಿ ಎಂದು ತಂದೆಯನ್ನು ನೆನಪು ಮಾಡುತ್ತಾರೆ. ಮಳೆ ಬಿದ್ದರೆ ಶೀತಲತೆಯಾಗಿ ಬಿಡುತ್ತದೆ, ಧರಣಿಯು ಶೀತಲವಾಗಿ ಬಿಡುತ್ತದೆ. ಇದಂತೂ ಜ್ಞಾನದ ಮಾತಾಗಿದೆ. ತಂದೆಯು ಒಂದೇ ಬಾರಿ ಬಂದು ಇಷ್ಟು ಶೀತಲರನ್ನಾಗಿ ಮಾಡುತ್ತಾರೆ. ಇಷ್ಟೆಲ್ಲವನ್ನೂ ಕೊಟ್ಟು ಬಿಡುತ್ತಾರೆ ಸತ್ಯಯುಗದಲ್ಲಿ ಯಾವುದೇ ವಸ್ತುವಿನ ಬಯಕೆಯಿರುವುದಿಲ್ಲ. ಅರ್ಧಕಲ್ಪ ಉತ್ಕಂಠದಲ್ಲಿಯೇ ಇರುತ್ತಾ ಬಂದಿದ್ದೀರಿ – ಬಾಬಾ, ಬಂದು ಶೀತಲರನ್ನಾಗಿ ಮಾಡಿ. ಪತಿತ-ಪಾವನ ತಂದೆಯು ಬಂದು ನಮ್ಮನ್ನು ಶೀತಲರನ್ನಾಗಿ ಮಾಡಲಿ ಎಂದು. ಈಗ ಈ ಜ್ಞಾನದ ಮಳೆಯಿಂದ ಭಾರತ ಅಥವಾ ಇಡೀ ಪ್ರಪಂಚವೇ ಶೀತಲವಾಗಿ ಬಿಡುತ್ತದೆ, ನೀವು ಸ್ವರ್ಗದ ಮಾಲೀಕರಾಗಿ ಬಿಡುತ್ತೀರಿ. ಮನುಷ್ಯರು ಮರಣ ಹೊಂದಿದಾಗ ಸ್ವರ್ಗವಾಸಿಯಾದರೆಂದು ಹೇಳುತ್ತಾರೆ. ಅವರಂತೂ ಕೇವಲ ಹೀಗೆ ಹೇಳಿ ಬಾಯಿ ಸಿಹಿ ಮಾಡಿಕೊಳ್ಳುತ್ತಾರೆ. ನಿಮಗೆ ತಿಳಿದಿದೆ, ಈಗ ಸ್ವರ್ಗದ ಸ್ಥಾಪನೆಯಾಗುತ್ತಿದೆ, ತಂದೆಯು ಬಂದಿದ್ದಾರೆ, ಈ ಜ್ಞಾನದ ಮಳೆಯನ್ನು ಸುರಿಸುತ್ತಿದ್ದಾರೆ. 21 ಜನ್ಮಗಳವರೆಗೆ ಈ ಶೀತಲತೆಯ ಪ್ರಭಾವವಿರುತ್ತದೆ. ಅಲ್ಲಿ ಮಳೆಯದಾಗಲಿ, ಯಾವುದೇ ವಸ್ತುವಿನ ಇಚ್ಛೆಯಾಗಲಿ ಇರುವುದಿಲ್ಲ. ಸದಾ ಹಸಿರೇ ಹಸಿರಾಗಿರುತ್ತದೆ. ಅಲ್ಲಿ ಯಾವುದೇ ಪ್ರಕಾರದ ದುಃಖವಿರುವುದಿಲ್ಲ, ಸೂರ್ಯನೂ ಸಹ ಸತೋಪ್ರಧಾನವಾಗಿ ಬಿಡುತ್ತಾನೆ. ಎಂದೂ ತಾಪವನ್ನು ತೋರಿಸುವುದಿಲ್ಲ. ನೀವು ಇಡೀ ವಿಶ್ವದ ಮಾಲೀಕರಾಗಿ ಬಿಡುತ್ತೀರಿ, ಈಗಂತೂ ಗುಲಾಮರಾಗಿದ್ದೀರಲ್ಲವೆ. ಆದ್ದರಿಂದಲೇ ನಾನು ನಿಮ್ಮ ಗುಲಾಮನಾಗಿದ್ದೇನೆ…. ಎಂದು ಹಾಡುತ್ತಾರೆ, ತಂದೆಯನ್ನು ನೆನಪು ಮಾಡುತ್ತಾರೆ. ತಂದೆಯು ಹೇಳುತ್ತಾರೆ – ನಿಮ್ಮ ಸೇವೆಯಲ್ಲಿ ನಾನು ಗುಲಾಮನಾಗಿ ಬಂದಿದ್ದೇನೆ. ನಾನು ನೀವು ಮಕ್ಕಳ ಸೇವೆ ಮಾಡುತ್ತೇನೆ, ಪರ ಪತಿತದೇಶ, ಪತಿತ ಶರೀರದಲ್ಲಿ ನಾನು ಬರುತ್ತೇನೆ. ಈ ಪತಿತ ಪ್ರಪಂಚದಲ್ಲಿ ಯಾರೊಬ್ಬರೂ ಪಾವನರಿರಲು ಸಾಧ್ಯವಿಲ್ಲ. ಸತ್ಯಯುಗಕ್ಕೆ ಪಾವನ, ಕಲಿಯುಗಕ್ಕೆ ಪತಿತವೆಂದು ಹೇಳಲಾಗುತ್ತದೆ ಏಕೆಂದರೆ ಎಲ್ಲರೂ ವಿಕಾರಿಗಳಾಗಿದ್ದಾರೆ. ಭಾರತವಾಸಿಗಳೇ ಈ ಜ್ಞಾನವನ್ನು ತಿಳಿದುಕೊಳ್ಳುವರು. ಯಾರು 84 ಜನ್ಮಗಳನ್ನು ತೆಗೆದುಕೊಂಡಿದ್ದಾರೆಯೋ ಅವರೇ ಈ ಜ್ಞಾನವನ್ನು ಕೇಳುತ್ತಾರೆ ಅಥವಾ ಯಾರು ಸತ್ಯ-ತ್ರೇತಾಯುಗದಲ್ಲಿ ಬರುವವರಿದ್ದಾರೆಯೋ ಅವರೇ ಬಂದು ನಂಬರ್ವಾರ್ ಪುರುಷಾರ್ಥದ ಅನುಸಾರ ಬ್ರಾಹ್ಮಣರಾಗುತ್ತಾರೆ. ತಂದೆಯು ತಿಳಿಸುತ್ತಾರೆ – ನೀವೀಗ ಬ್ರಾಹ್ಮಣ ವರ್ಣದಲ್ಲಿದ್ದೀರಿ ಮತ್ತೆ ನೀವೇ ದೇವತಾ ವರ್ಣದಲ್ಲಿ ಬಂದಿದ್ದೀರಿ. ತಂದೆಯು ಬ್ರಾಹ್ಮಣ ವರ್ಣ ಅಂದರೆ ಬ್ರಾಹ್ಮಣ ಧರ್ಮ ಸ್ಥಾಪನೆ ಮಾಡಲು ಬರುತ್ತಾರೆ. ಬ್ರಹ್ಮನು ಬ್ರಾಹ್ಮಣ ಧರ್ಮ ಸ್ಥಾಪನೆ ಮಾಡುತ್ತಾರೆ. ಪರಮಪಿತ ಪರಮಾತ್ಮನು ಬಂದು ಶೂದ್ರರನ್ನು ಬ್ರಾಹ್ಮಣರನ್ನಾಗಿ ಮಾಡುತ್ತಾರೆಂದು ಹೇಳುವುದಿಲ್ಲ. ಇದು ನಿಮ್ಮ ಬಾಜೋಲಿ ಆಟವು ನಡೆಯುತ್ತದೆ. ಇದು ಬಹಳ ಸಹಜವಾಗಿದೆ. ಈ ಚಕ್ರವು ಹೇಗೆ ಸುತ್ತುತ್ತದೆ ಎಂಬುದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ವಿರಾಟ ರೂಪದಲ್ಲಿ ಬ್ರಾಹ್ಮಣರ ಶಿಖೆ ಮತ್ತು ಶಿವ ತಂದೆಯನ್ನೇ ಮರೆತು ಹೋಗಿದ್ದಾರೆ. ದೇವತಾ, ಕ್ಷತ್ರಿಯ, ವೈಶ್ಯ, ಶೂದ್ರ…… ಮತ್ತೆ ಶೂದ್ರನಿಂದ ದೇವತೆ ಎಂದು ಹೇಳುತ್ತಾರೆ. ಅಂದಾಗ ಬ್ರಾಹ್ಮಣರು ಎಲ್ಲಿ ಹೋದರು? ಬ್ರಾಹ್ಮಣರೂ ಸಹ ಬ್ರಾಹ್ಮಣ ದೇವತಾಯ ನಮಃ ಎಂದು ಹೇಳುತ್ತಾರೆ ಅಂದಮೇಲೆ ಪ್ರಜಾಪಿತ ಬ್ರಹ್ಮನ ವಂಶಾವಳಿ ಎಲ್ಲಿ ಹೋಯಿತು? ಪ್ರಜಾಪಿತ ಬ್ರಹ್ಮನ ಹೆಸರು ಎಷ್ಟು ಪ್ರಸಿದ್ಧವಾಗಿದೆ! ಚಿತ್ರಗಳಲ್ಲಿಯೂ ಎಷ್ಟೊಂದು ತಪ್ಪು ಮಾಡಿ ಬಿಟ್ಟಿದ್ದಾರೆ. ಪ್ರಜಾಪಿತ ಬ್ರಹ್ಮನ ಸಂತಾನರ ಯಾವುದೇ ಹೆಸರು, ಗುರುತೇ ಇಲ್ಲ. ಶಾಲೆಯಲ್ಲಿ ಶಿಕ್ಷಕರು ಓದಿಸುತ್ತಾರೆ. ಅದೂ ಸಹ ಆದಾಯದ ಮೂಲವಾಗುತ್ತದೆ ಅಂದಾಗ ಗುರಿ-ಧ್ಯೇಯವಂತೂ ಅವಶ್ಯವಾಗಿ ಬೇಕು. ಆ ವಿದ್ಯೆಯಿಂದಲೇ ಪದವಿ ಸಿಗುತ್ತದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಭಗವಂತನು ಪತಿತ ಪ್ರಪಂಚದಲ್ಲಿಯೇ ಬಂದು ಪತಿತರಿಗೆ ಓದಿಸುತ್ತಾರೆ. ತಂದೆ ತಿಳಿಸುತ್ತಾರೆ ನಾನು ನೀವು ಮಕ್ಕಳಿಗೆ ಓದಿಸಿ ನಾನು ಪಾವನರನ್ನಾಗಿ ಮಾಡುತ್ತೇನೆಂದು ಹೇಳುತ್ತಾರೆ. ನೋಡಿ, ಈ ವಿದ್ಯೆಯಿಂದ ಎಷ್ಟೊಂದು ಆದಾಯವಿದೆ! ಅರ್ಧ ಕಲ್ಪಕ್ಕಾಗಿ ನೀವು ಅದೃಷ್ಟವನ್ನು ಬೆಳಗಿಸಿಕೊಳ್ಳುತ್ತೀರಿ. 21 ಪೀಳಿಗೆಯೆಂದು ಭಾರತದಲ್ಲಿ ಗಾಯನವಿದೆ. ನೀವೀಗ ಬೇಹದ್ದಿನ ತಂದೆಯಿಂದ 21 ಪೀಳಿಗೆಗಳ ಬೇಹದ್ದಿನ ಆಸ್ತಿಯನ್ನು ಪಡೆಯುತ್ತೀರಿ. ಲೌಕಿಕ ತಂದೆಯದು ಅಲ್ಪಕಾಲದ ಕ್ಷಣ ಭಂಗುರ ಆಸ್ತಿಯಾಗಿದೆ, ಆದರೆ ಈ ತಂದೆಯಿಂದ ನೀವು ಇಂತಹ ಆಸ್ತಿಯನ್ನು ಪಡೆಯುತ್ತೀರಿ ಯಾವುದರಿಂದ ಜನ್ಮ-ಪ್ರತಿ ಜನ್ಮ ನಿಮಗೆ ಯಾವುದೇ ದುಃಖವಿರುವುದಿಲ್ಲ. ಭಾರತದಲ್ಲಿಯೇ ಬೇಹದ್ದಿನ ಸುಖವಿತ್ತು, ಈ ಜ್ಞಾನವು ಮತ್ತ್ಯಾರ ಬುದ್ಧಿಯಲ್ಲಿಯೂ ಇರುವುದಿಲ್ಲ. ಈ ಜ್ಞಾನವನ್ನು ಕೊಡುವಂತಹ ತಂದೆಗೇ ಗೊತ್ತು ಮತ್ತು ಯಾರಿಗೆ ಕೊಡುವರೋ ಅವರಿಗೇ ಗೊತ್ತು, ಮತ್ತ್ಯಾರಿಗೂ ಗೊತ್ತಿಲ್ಲ. ಗ್ರಂಥದಲ್ಲಿಯೂ ಅವರ ಮಹಿಮೆಯ ಗಾಯನವಿದೆ, ಏಕ್ ಓಂಕಾರ್… ನಿರಾಕಾರ್, ನಿರ್-ಅಹಂಕಾರ್, ಇದರ ಅರ್ಥವನ್ನು ಈಗ ನೀವು ತಿಳಿದುಕೊಂಡಿದ್ದೀರಿ. ಅವರಂತೂ ಕೇವಲ ನಿರಹಂಕಾರಿ ಎಂದು ಹಾಡುತ್ತಾರೆ. ಇಷ್ಟು ದೊಡ್ಡ ಅಥಾರಿಟಿಯಾಗಿದ್ದರೂ ಸಹ ತಂದೆಗೆ ಯಾವುದೇ ಅಹಂಕಾರವಿಲ್ಲ. ಇಲ್ಲಿ ಒಂದು ಚಿಕ್ಕ ಪದವಿಯಲ್ಲಿದ್ದರೂ ಸಹ ಅವರಿಗೆ ಎಷ್ಟೊಂದು ನಶೆಯಿರುತ್ತದೆ. ನಾನು ಇಂತಹ ಪದವೀಧರನಾಗಿದ್ದೇನೆ….. ಎಂದು ಅದು ಅಲ್ಪಕಾಲದ ಪದವಿಯ ನಶೆಯಿರುತ್ತದೆ. ಈಗ ನಿಮಗೆ ಈ ಆತ್ಮಿಕ ವಿದ್ಯೆಯ ನಶೆಯಿದೆ. ಈಗ ನಿಮಗೆ ತಿಳಿದಿದೆ – ಆತ್ಮಾಭಿಮಾನಿಯಾಗಬೇಕಾಗಿದೆ, ಆಗಲೇ ತಂದೆಯನ್ನು ನೆನಪು ಮಾಡಲು ಸಾಧ್ಯ. ತಂದೆಯ ಜೊತೆ ಯೋಗವು ತುಂಡಾದರೆ ಮಾಯೆಯ ಮುತ್ತಿಗೆ ಬೀಳುತ್ತದೆ, ಬಾಡಿ ಹೋಗುತ್ತಾರೆ. ನೆನಪು ಮಾಡುತ್ತಾ ಇದ್ದಾಗಲೇ ಖುಷಿಯ ನಶೆಯೇರಿರುವುದು. ಯಾರಾದರೂ ದೊಡ್ಡ ಪರೀಕ್ಷೆಯನ್ನು ತೇರ್ಗಡೆ ಮಾಡಿದರೆ ಅವರಿಗೆ ಖುಷಿಯಾಗುತ್ತದೆ. ಇದಕ್ಕಿಂತಲೂ ಮೇಲೆ ಮತ್ತ್ಯಾವುದೂ ಪರೀಕ್ಷೆಯಿಲ್ಲವೆಂದು ತಿಳಿದುಕೊಳ್ಳುತ್ತಾರೆ ಹಾಗೆಯೇ ನೀವೂ ಸಹ ತಿಳಿದುಕೊಂಡಿದ್ದೀರಿ – ನಮ್ಮ ಈ ವಿದ್ಯೆಗಿಂತಲೂ ಶ್ರೇಷ್ಠ ವಿದ್ಯೆಯು ಮತ್ತ್ಯಾವುದೂ ಇಲ್ಲ. ಈ ಲಕ್ಷ್ಮೀ-ನಾರಾಯಣರು ಅವರ ಹಿಂದಿನ ಜನ್ಮದಲ್ಲಿ ಅವಶ್ಯವಾಗಿ ಅಂತಹ ವಿದ್ಯೆಯನ್ನು ಓದಿದ್ದಾರೆ, ರಾಜಯೋಗವನ್ನು ಕಲಿತಿದ್ದಾರೆ ಆದ್ದರಿಂದಲೇ ಮಹಾರಾಜ-ಮಹಾರಾಣಿಯಾಗಿದ್ದಾರೆ. ರಾಜಯೋಗವು ಪ್ರಸಿದ್ಧವಾಗಿದೆ, ಪರಮಪಿತ ಪರಮಾತ್ಮನು ಬಂದು ಸ್ವರ್ಗಕ್ಕಾಗಿ ರಾಜಯೋಗವನ್ನು ಕಲಿಸುತ್ತಾರೆ. ಹಿಂದೆ ಇಂತಹ ಕರ್ಮ ಮಾಡಿರುವ ಕಾರಣ ಈ ರೀತಿಯಾಗಿದ್ದಾರೆ ಎಂದು ಹೇಳುತ್ತಾರೆ.

ನೀವು ತಿಳಿದುಕೊಂಡಿದ್ದೀರಿ – ಈ ಜನ್ಮದಲ್ಲಿ ನಾವು ಇಂತಹ ಕರ್ಮವನ್ನು ಕಲಿಯುತ್ತೇವೆ ಯಾವುದರಿಂದ ಭವಿಷ್ಯ 21 ಜನ್ಮಗಳಿಗಾಗಿ ರಾಜ್ಯಭಾರ ಮಾಡುತ್ತೇವೆ ಅಥವಾ ಸ್ವರ್ಗದಲ್ಲಿ ವಿರಾಜಮಾನರಾಗುತ್ತೇವೆ. ಯಥಾ ರಾಜ-ರಾಣಿ ತಥಾ ಪ್ರಜೆಗಳೂ ಇರುತ್ತಾರಲ್ಲವೆ. ರಾಜಧಾನಿಯಿರುತ್ತದೆ. ರಾಜಧಾನಿಯನ್ನು ಸ್ಥಾಪನೆ ಮಾಡಲು ತಂದೆಯು ಬಂದಿದ್ದಾರೆ ನಂತರ ನೀವು ಹೋಗಿ 21 ಜನ್ಮಗಳ ಕಾಲ ರಾಜ್ಯ ಪರಿಪಾಲನೆ ಮಾಡುತ್ತೀರಿ. 63 ಜನ್ಮಗಳಿಂದಲೂ ನೀವು ದುಃಖವನ್ನು ಅನುಭವಿಸಿದ್ದೀರಿ. ಈಗ ಅದೆಲ್ಲವೂ ಸಮಾಪ್ತಿಯಾಗಿ ಬಿಡುತ್ತದೆ. ಭಾರತಕ್ಕೆ ಸ್ವರ್ಗವೆಂದು ಹೇಳಲಾಗುತ್ತಿತ್ತು, ಈಗಂತೂ ನರಕವಾಗಿದೆ. ಸೃಷ್ಟಿಯು ಎಷ್ಟೊಂದು ಬದಲಾಗಿ ಬಿಟ್ಟಿದೆ! ಆ ರಾಜಧಾನಿಯು ಎಲ್ಲಿಗೆ ಹೋಯಿತು. ರಾವಣ ರಾಜ್ಯವು ಆರಂಭವಾಗುವುದರಿಂದ ನೀವು ಪತಿತರಾಗಿ ಬಿಡುತ್ತೀರಿ. ತಂದೆಯು ಹೇಳುತ್ತಾರೆ – ನೀವು ತಮ್ಮ 84 ಜನ್ಮಗಳ ಚಕ್ರವನ್ನು ಅರಿತುಕೊಂಡಿಲ್ಲ. ಈಗ ನೀವು ಮಕ್ಕಳಿಗೆ ಪದೇ-ಪದೇ ತಿಳಿಸಲಾಗುತ್ತದೆ. ನೀವು 84 ಜನ್ಮಗಳ ಚಕ್ರವನ್ನು ಪೂರ್ಣ ಮಾಡಿದ್ದೀರಿ, ಈಗ ನಿಮ್ಮದು ಇದು ಅಂತಿಮ ಜನ್ಮವಾಗಿದೆ, ಈಗ ಪುನಃ ತಮ್ಮ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ನೀವು ಹೋಗಿ ಮುಕ್ತಿಧಾಮದಲ್ಲಿ ಕುಳಿತು ಬಿಡುವುದಲ್ಲ. ನಿಮ್ಮದು ಸರ್ವತೋಮುಖ ಪಾತ್ರವಿದೆ. ಇಂತಹವರೂ ಅನೇಕರಿದ್ದಾರೆ ಸತ್ಯಯುಗದಿಂದ ಹಿಡಿದು ದ್ವಾಪರ-ಕಲಿಯುಗದವರೆಗೂ ಮುಕ್ತಿಧಾಮದಲ್ಲಿಯೇ ಇರುತ್ತಾರೆ. ಇಲ್ಲಿ ಬರುವುದಕ್ಕಿಂತ ಮುಕ್ತಿಧಾಮವೇ ಒಳ್ಳೆಯದು ಎಂದು ಹೇಳುವಂತಿಲ್ಲ. ಅವರ ಜನ್ಮವಂತೂ ಸೊಳ್ಳೆಗಳ ಸಮಾನವಾಯಿತು ಏಕೆಂದರೆ ಬಂದರು ಹೊರಟು ಹೋದರು. ಮನುಷ್ಯರ ಮಹಿಮೆಯನ್ನು ಹಾಡಲಾಗುತ್ತದೆ. ಈ ಮಂದಿರಗಳು ಯಾರದಾಗಿದೆ? ಯಾರು ಆರಂಭದಿಂದ ಹಿಡಿದು ಪಾತ್ರವನ್ನು ಅಭಿನಯಿಸುತ್ತಾ ಬಂದಿದ್ದಾರೆಯೋ ಅವರದೇ ನೆನಪಾರ್ಥವಾಗುತ್ತಾ ಬಂದಿದೆ. ಯಾರು ಕೊನೆಯಲ್ಲಿ ಬರುವರೋ ಅವರದು ನೆನಪಾರ್ಥವಾಗುವುದೇ? ಏನೂ ಇಲ್ಲ. ನಿಮ್ಮದು ಎಷ್ಟು ದೊಡ್ಡ ನೆನಪಾರ್ಥವಾಗಿದೆ! ನೀವೇ ಎಲ್ಲರಿಗಿಂತ ಹೆಚ್ಚು ಪಾತ್ರವನ್ನು ಅಭಿನಯಿಸುತ್ತೀರಿ. ನೀವು ತಮ್ಮ ಪ್ರಾಲಬ್ಧದ ಸಮಯವನ್ನು ಮುಗಿಸಿ ಯಾವಾಗ ಭಕ್ತಿಮಾರ್ಗದಲ್ಲಿ ಬರುತ್ತೀರೋ ಆಗ ನಿಮ್ಮ ನೆನಪಾರ್ಥ ಹಾಗೂ ಶಿವ ತಂದೆಯ ಮಂದಿರಗಳನ್ನೂ ಕಟ್ಟಲಾರಂಭಿಸುತ್ತಾರೆ, ಮತ್ತೆ ಅನ್ಯ ಧರ್ಮದವರು ಬರುತ್ತಾರೆ. ಅವರ ಧರ್ಮ ಸ್ಥಾಪನೆಯಾಗುತ್ತದೆ. ನೀವು ನಿಮ್ಮ ಚರಿತ್ರೆ-ಭೂಗೋಳವನ್ನು ತಿಳಿದುಕೊಂಡಿದ್ದೀರಿ. ಮತ್ತೆಲ್ಲಾ ಧರ್ಮದವರನ್ನೂ ತಿಳಿದುಕೊಂಡಿದ್ದೀರಿ. 84 ಜನ್ಮಗಳ ಏಣಿಯಾಗಿದೆ, ಮೊದಲು ನಾವು ಸ್ವರ್ಗದಲ್ಲಿ ಬರುತ್ತೇವೆ. ನಂತರ ಹೇಗೆ ಇಳಿಯುತ್ತೇವೆ ಎಂಬುದು ನಿಮ್ಮ ಬುದ್ಧಿಯಲ್ಲಿದೆ. ಪ್ರತಿಯೊಂದು ಜನ್ಮದಲ್ಲಿ ಭಿನ್ನ ನಾಮ-ರೂಪದ ಮಿತ್ರ ಸಂಬಂಧಿಗಳು ಸಿಕ್ಕಿದ್ದಾರೆ. ಇದೆಲ್ಲಾ ಪಾತ್ರವು ಡ್ರಾಮಾದಲ್ಲಿ ಮೊದಲಿನಿಂದಲೇ ನಿಶ್ಚಿತವಾಗಿದೆ. ಈ ಬೇಹದ್ದಿನ ನಾಟಕವು ಚಾಚೂ ತಪ್ಪದೆ ಪುನರಾವರ್ತನೆಯಾಗುತ್ತದೆ. ನೀವು ತಿಳಿದುಕೊಂಡಿದ್ದೀರಿ – ನಾವೇ ದೇವಿ-ದೇವತೆಗಳಾಗಿದ್ದೆವು, 84 ಜನ್ಮಗಳನ್ನು ತಿಳಿದುಕೊಂಡು ಶೂದ್ರರಾದೆವು. ಈಗ ಪುನಃ ನಾವು ದೇವಿ-ದೇವತೆಗಳಾಗುತ್ತೇವೆ. ಮನುಷ್ಯರಂತೂ ಆತ್ಮವೇ ಪರಮಾತ್ಮನೆಂದು ಹೇಳಿ ಬಿಡುತ್ತಾರೆ. ವಾಸ್ತವದಲ್ಲಿ ಹಮ್ ಸೋ, ಸೋ ಹಮ್ನ ಅರ್ಥವೇ ಬೇರೆಯಾಗಿದೆ. ಆದರೆ ಮನುಷ್ಯರು ಆತ್ಮವೇ ಪರಮಾತ್ಮ, ಪರಮಾತ್ಮನೇ ಆತ್ಮವೆಂದು ಹೇಳಿ ಬಿಡುತ್ತಾರೆ. ರಾತ್ರಿ-ಹಗಲಿನ ಅಂತರವಾಯಿತಲ್ಲವೆ. ನೀವೀಗ ಇದೆಲ್ಲಾ ಮಾತುಗಳನ್ನು ತಿಳಿದುಕೊಂಡಿದ್ದೀರಿ. ನೀವೀಗ ಪಾಂಡವರಾಗಿದ್ದೀರಿ, ಕೌರವ-ಪಾಂಡವರು ಸಹೋದರರಾಗಿದ್ದರಲ್ಲವೆ. ಈಗ ತಂದೆಯು ಸಿಕ್ಕಿದ್ದಾರೆ ಆದ್ದರಿಂದ ನೀವು ಪಾಂಡವರಾಗಿದ್ದೀರಿ. ತಂದೆಯು ನಿಮ್ಮನ್ನು ದುಃಖದಿಂದ ಬಿಡಿಸಿ ಮಾರ್ಗದರ್ಶಕನಾಗಿ ಕರೆದುಕೊಂಡು ಹೋಗುತ್ತಾರೆ. ಮನೆಯ ಪರಿಚಯ ಯಾರಿಗೂ ತಿಳಿದಿಲ್ಲ. ಆತ್ಮವು ಬ್ರಹ್ಮ್ತತ್ವದಲ್ಲಿ ಲೀನವಾಗಿ ಬಿಡುತ್ತದೆಯೆಂದು ಅವರು ಹೇಳಿ ಬಿಡುತ್ತಾರೆ ಅಂದಮೇಲೆ ಅದು ಮನೆಯಾಯಿತೇ? ವಾಸ್ತವದಲ್ಲಿ ನಿವಾಸ ಸ್ಥಾನಕ್ಕೆ ಮನೆಯೆಂದು ಹೇಳಲಾಗುತ್ತದೆ. ಅದಕ್ಕೆ ನಿರಾಕಾರಿ ಪ್ರಪಂಚವೆಂದು ಹೇಳಲಾಗುತ್ತದೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ನಾವು ನಿರಾಕಾರಿ ಆತ್ಮರು ನಿರಾಕಾರಿ ಪ್ರಪಂದದಲ್ಲಿ ಬಿಂದುವಿನ ಮಾದರಿಯಾಗಿ ನಿವಾಸ ಮಾಡುತ್ತೇವೆ. ಅಲ್ಲಿಯೂ ಆತ್ಮಗಳ ನಿರಾಕಾರಿ ವೃಕ್ಷವಿದೆ. ಈ ನಾಟಕವು ಮಾಡಲ್ಪಟ್ಟಿದೆ. ಬೀಜ ಮತ್ತು ವೃಕ್ಷವನ್ನು ಅರಿತುಕೊಳ್ಳಬೇಕಾಗಿದೆ. ಇದರ ಹೆಸರೇ ಆಗಿದೆ – ವಿಭಿನ್ನ ಧರ್ಮಗಳ ವೃಕ್ಷ. ಇದು ಮನುಷ್ಯ ಸೃಷ್ಟಿಯಾಗಿದೆ. ಇದರ ಬೀಜ ರೂಪ ತಂದೆಯಾಗಿದ್ದಾರೆ. ಎಷ್ಟೊಂದು ವಿಭಿನ್ನತೆಯಿದೆ. ಪ್ರತಿಯೊಂದು ಧರ್ಮದವರ ರೂಪವೇ ಭಿನ್ನವಾಗಿದೆ, ಇಲ್ಲಿಯೂ ಸಹ ಒಬ್ಬರ ಚಹರೆಯು ಇನ್ನೊಬ್ಬರಿಗೆ ಹೋಲುವುದಿಲ್ಲ. ಇದೂ ಸಹ ನಾಟಕದಲ್ಲಿ ಮಾಡಲ್ಪಟ್ಟಿದೆ. ಕಲ್ಪವೃಕ್ಷದ ಆಯಸ್ಸು 5000 ವರ್ಷಗಳಾಗಿದೆ, ಇದನ್ನು ತಂದೆಯೂ ತಿಳಿಸುತ್ತಾರೆ. ಮನುಷ್ಯರು ಪಾತ್ರಧಾರಿಗಳಾಗಿದ್ದಾರೆ, ಇಲ್ಲಿ ಪಾತ್ರವನ್ನು ಅಭಿನಯಿಸಲು ಬರುತ್ತಾರೆ. ಇದು ರಂಗ ಮಂಟಪವಾಗಿದೆ ಬೆಳಕು ಕೊಡುವುದಕ್ಕಾಗಿ ಸೂರ್ಯ, ಚಂದ್ರರಿದ್ದಾರೆ. ಸೂರ್ಯ-ಚಂದ್ರರು ದೇವತೆಗಳಲ್ಲ, ಇವು ದೀಪಗಳಾಗಿವೆ ಆದರೆ ಜಗತ್ತಿನ ಸೇವೆ ಮಾಡುವ ಕಾರಣ ದೇವತೆಗಳೆಂದು ಹೇಳಿ ಬಿಡುತ್ತಾರೆ. ವಾಸ್ತವದಲ್ಲಿ ದೇವತೆಗಳು ಯಾವುದೇ ಸೇವೆ ಮಾಡುವುದಿಲ್ಲ. ಸೇವೆಯನ್ನು ಈಗ ನೀವು ಮಕ್ಕಳೇ ಮಾಡುತ್ತೀರಿ. ತಂದೆಯೇ ವಿಧೇಯ ಸೇವಕನಾಗಿದ್ದಾರೆ. ಮಕ್ಕಳು ಭೇಟಿಯಾದಾಗ ತಂದೆಗೆ ದಯೆ ಬರುತ್ತದೆ. ಆದ್ದರಿಂದ ತಂದೆಯು ತಿಳಿಸಿ ಕೊಡಲು ಬಂದಿದ್ದಾರೆ. ನೀವು ಮಕ್ಕಳಿಗೇ ಪುನಃ ದೇವಿ-ದೇವತಾ ಪದವಿಯನ್ನು ಪ್ರಾಪ್ತಿ ಮಾಡಿಸಲು ಬರುತ್ತೇನೆ. ಪ್ರತಿಯೊಂದು ವಸ್ತುವಿನದು ಏರುವ ಕಲೆ ಮತ್ತು ಇಳಿಯುವ ಕಲೆಯಾಗುತ್ತದೆ. ಹಳೆಯ ಪ್ರಪಂಚಕ್ಕೆ ತಮೋಪ್ರಧಾನ ಎಂತಲೂ ಹೊಸ ಪ್ರಪಂಚಕ್ಕೆ ಸತೋಪ್ರಧಾನವೆಂತಲೂ ಹೇಳಲಾಗುತ್ತದೆ. ಪ್ರತಿಯೊಂದು ವಸ್ತು ಹೊಸದರಿಂದ ಹಳೆಯದಾಗುತ್ತದೆ. ಆತ್ಮವು ಹೇಳುತ್ತದೆ – ಈ ಶರೀರವೂ ಸಹ ತಮೋಪ್ರಧಾನ, ಪತಿತವಾಗಿದೆ. ಸತ್ಯಯುಗದಲ್ಲಿ ಆತ್ಮ ಮತ್ತು ಶರೀರವೆರಡು ಸತೋಪ್ರಧಾನವಾಗಿತ್ತು, ಆತ್ಮಕ್ಕೆ ಈಗ ಜ್ಞಾನ ಸಿಕ್ಕಿದೆ. ನಾವು 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಸ್ಮೃತಿ ಬಂದಿದೆ. ಈ ರಹಸ್ಯವನ್ನು ಬೇಹದ್ದಿನ ತಂದೆಯು ತಿಳಿಸುತ್ತಾರೆ. ದುಃಖದಲ್ಲಿ ಎಲ್ಲರೂ ತಂದೆಯನ್ನೇ ಕರೆಯುತ್ತಿರುತ್ತಾರೆ – ಹೇ ದುಃಖಹರ್ತ-ಸುಖಕರ್ತ ದಯೆ ತೋರಿಸಿ, ಭಾರತವೇ ಎಲ್ಲದಕ್ಕಿಂತ ಸುಖಿಯಾಗಿತ್ತಲ್ಲವೆ. ಭಾರತದಂತಹ ಪವಿತ್ರ ಖಂಡವು ಮತ್ತ್ಯಾವುದೂ ಇರಲು ಸಾಧ್ಯವಿಲ್ಲ. ಈಗ ತಂದೆಯು ನೀವು ಮಕ್ಕಳ ಜೋಳಿಗೆಯನ್ನು ಅವಿನಾಶಿ ಜ್ಞಾನ ರತ್ನಗಳಿಂದ ತುಂಬುತ್ತಾರೆ. ಇಂತಹ ತಂದೆಯನ್ನು ಎಂದಾದರೂ ನೋಡಿದ್ದೀರಾ? ತಿಳಿಸುತ್ತಾರೆ – ಮಕ್ಕಳೇ, ನಾನು ನಿಮಗಾಗಿ ವೈಕುಂಠದ ಉಡುಗೊರೆಯನ್ನು ತಂದಿದ್ದೇನೆ, ನೀವು ಸ್ವರ್ಗವಾಸಿಗಳಾಗಿದ್ದಿರಿ, ಈಗ ಪತಿತ-ನರಕವಾಸಿಗಳಾಗಿ ಬಿಟ್ಟಿದ್ದೀರಿ. ಯಾರು ವಿಕಾರದಲ್ಲಿ ಹೋಗುವುದಿಲ್ಲವೋ ಅವರಿಗೆ ಪಾವನರೆಂದು ಹೇಳಲಾಗುತ್ತದೆ. ಸತ್ಯಯುಗದಲ್ಲಿ ಸಂಪೂರ್ಣ ನಿರ್ವಿಕಾರಿಗಳಿರುತ್ತಾರೆ. ಈ ಸಮಯದಲ್ಲಿ ಸಂಪೂರ್ಣ ವಿಕಾರಿಗಳಾಗಿದ್ದಾರೆ, ತಂದೆಯು ತಿಳಿಸುತ್ತಾರೆ – ನೀವೂ ಸಹ ಸಂಪೂರ್ಣ ನಿರ್ವಿಕಾರಿಗಳಾಗಿದ್ದಿರಿ, ಈಗ ಸಂಪೂರ್ಣ ವಿಕಾರಿಗಳಾಗಿದ್ದೀರಿ. ಪುನಃ ತಂದೆಯನ್ನು ನೆನಪು ಮಾಡಿ ಸಂಪೂರ್ಣ ನಿರ್ವಿಕಾರಿ ದೇವತಾ ಪದವಿಯನ್ನು ಪಡೆಯಬೇಕಾಗಿದೆ. ಅಕ್ಷರವು ನೋಡಿ ಎಷ್ಟು ಚೆನ್ನಾಗಿದೆ! ಮನ್ಮನಾಭವ. ತಂದೆಯಾದ ನನ್ನನ್ನು ನೆನಪು ಮಾಡಿದರೆ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗಿ ಬಿಡುತ್ತೀರಿ. ನಾನು ಸರ್ವಶಕ್ತಿವಂತ ಆಗಿದ್ದೇನಲ್ಲವೆ. ನನ್ನನ್ನು ನೆನಪು ಮಾಡಿರಿ, ನೆನಪಿಗೇ ಯೋಗಾಗ್ನಿಯೆಂದು ಹೇಳಲಾಗುತ್ತದೆ ಯಾವುದರಿಂದ ನಿಮ್ಮ ಪಾಪಗಳು ಭಸ್ಮವಾಗುತ್ತವೆ, ನೀವು ಪವಿತ್ರರಾಗಿ ಬಿಡುತ್ತೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಆತ್ಮಿಕ ವಿದ್ಯೆಯ ನಶೆಯಲ್ಲಿರಬೇಕಾಗಿದೆ. ತಂದೆಯ ಸಮಾನ ನಿರಹಂಕಾರಿಗಳಾಗಬೇಕಾಗಿದೆ. ತನ್ನ ಪದವಿ ಇತ್ಯಾದಿಗಳ ಅಹಂಕಾರವನ್ನು ಇಟ್ಟುಕೊಳ್ಳಬಾರದು.

2. ಜ್ಞಾನ ರತ್ನಗಳಿಂದ ತಮ್ಮ ಜೋಳಿಗೆಯನ್ನು ತುಂಬಿಸಿಕೊಳ್ಳಬೇಕಾಗಿದೆ. ಸಂಪೂರ್ಣ ನಿರ್ವಿಕಾರಿಗಳಾಗಿ ದೇವತಾ ಪದವಿಯನ್ನು ಪಡೆಯಬೇಕಾಗಿದೆ. ಎಂದೂ ಬಾಡಿ ಹೋಗಬಾರದು.

ವರದಾನ:-

ಸೂರ್ಯನು ಹೇಗೆ ತನ್ನ ಕಿರಣಗಳಿಂದ ಅಶುದ್ಧತೆ, ಕೊಳಕಾದ ಕೀಟಾಣುಗಳನ್ನು ಭಸ್ಮಗೊಳಿಸುತ್ತಾನೆಯೋ, ಹಾಗೆಯೇ ಯಾವಾಗ ತಾವು ಯಾವುದೇ ಪತಿತ ಆತ್ಮನನ್ನು ಮಾಸ್ಟರ್ ಜ್ಞಾನ ಸೂರ್ಯನಾಗಿ ನೋಡುತ್ತೀರೆಂದರೆ, ಅವರ ಪತಿತ ಸಂಕಲ್ಪ, ಪತಿತ ವೃತ್ತಿ ಅಥವಾ ದೃಷ್ಟಿಯನ್ನು ಭಸ್ಮವಾಗಿ ಬಿಡುತ್ತದೆ. ಪತಿತ-ಪಾವನಿ ಆತ್ಮನಲ್ಲಿ ಪತಿತ ಸಂಕಲ್ಪಗಳ ಯುದ್ಧವಾಗಲು ಸಾಧ್ಯವಿಲ್ಲ. ಪತಿತ ಆತ್ಮರು ಪತಿತ-ಪಾವನಿಯರ ಮೇಲೆ ಅರ್ಪಣೆಯಾಗುವರು. ಇದಕ್ಕಾಗಿ ಮೈಟ್ ಹೌಸ್ ಅರ್ಥಾತ್ ಸದಾ ಮಾಸ್ಟರ್ ಜ್ಞಾನ ಸೂರ್ಯನ ಸ್ಥಿತಿಯಲ್ಲಿ ಸ್ಥಿತರಾಗಿರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top