11 October 2021 KANNADA Murli Today | Brahma Kumaris

Read and Listen today’s Gyan Murli in Kannada

October 10, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಯೋಗಾಗ್ನಿಯಿಂದ ಪಾಪಗಳನ್ನು ಭಸ್ಮ ಮಾಡಿಕೊಂಡು ಸಂಪೂರ್ಣ ಸತೋಪ್ರಧಾನರಾಗಬೇಕಾಗಿದೆ, ಯಾವುದೇ ಪಾಪ ಕರ್ಮ ಮಾಡಬಾರದು”

ಪ್ರಶ್ನೆ:: -

ಸತ್ಯಯುಗದಲ್ಲಿ ಶ್ರೇಷ್ಠ ಪದವಿಯು ಯಾವ ಆಧಾರದ ಮೇಲೆ ದೊರೆಯುತ್ತದೆ? ಇಲ್ಲಿನ ಯಾವ ಕಾಯಿದೆಯನ್ನು ಎಲ್ಲರಿಗೆ ತಿಳಿಸುವಿರಿ.

ಉತ್ತರ:-

ಸತ್ಯಯುಗದಲ್ಲಿ ಪವಿತ್ರತೆಯ ಆಧಾರದ ಮೇಲೆ ಶ್ರೇಷ್ಠ ಪದವಿಯು ಸಿಗುತ್ತದೆ. ಯಾರು ಪವಿತ್ರತೆಯನ್ನು ಕಡಿಮೆ ಧಾರಣೆ ಮಾಡಿಕೊಳ್ಳುವರೋ ಅವರು ಸತ್ಯಯುಗದಲ್ಲಿ ತಡವಾಗಿ ಬರುತ್ತಾರೆ ಮತ್ತು ಕಡಿಮೆ ಪದವಿಯನ್ನು ಪಡೆಯುತ್ತಾರೆ. ಇಲ್ಲಿ ಯಾರಾದರೂ ಬರಲಿ ಅವರಿಗೆ ಕಾಯಿದೆಯನ್ನು ತಿಳಿಸಿ – ದಾನ ಕೊಟ್ಟರೆ ಗ್ರಹಣ ಬಿಟ್ಟು ಹೋಗುವುದು. 5 ವಿಕಾರಗಳ ದಾನ ನೀಡಿರಿ ಆಗ ನೀವು 16 ಕಲಾ ಸಂಪೂರ್ಣರಾಗಿ ಬಿಡುವಿರಿ. ನೀವು ಮಕ್ಕಳೂ ಸಹ ತಮ್ಮ ಹೃದಯದಿಂದ ಕೇಳಿಕೊಳ್ಳಿ – ನನ್ನಲ್ಲಿ ಯಾವುದೇ ವಿಕಾರವಿಲ್ಲವೆ?

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ, ಈಗ ಸ್ವರ್ಗದ ಸ್ಥಾಪನೆಯಾಗುತ್ತಿದೆ. 5000 ವರ್ಷಗಳ ಮೊದಲೂ ಸಹ ಭಾರತದಲ್ಲಿ ಸ್ವರ್ಗವಿತ್ತು, ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು ಎಂಬುದನ್ನು ಹೇಗೆ ತಿಳಿಸಿಕೊಡಬೇಕು ಎಂದು. ಅಂದಮೇಲೆ ವಿಚಾರ ಮಾಡಬೇಕು, ಆ ಸಮಯದಲ್ಲಿ ಎಷ್ಟು ಜನ ಸಂಖ್ಯೆಯಿರಬಹುದು! ಸತ್ಯಯುಗದ ಆದಿಯಲ್ಲಿ ಹೆಚ್ಚು ಎಂದರೆ 9-10 ಲಕ್ಷ ಜನ ಇರುತ್ತಾರೆ. ಆರಂಭದಲ್ಲಿ ವೃಕ್ಷವು ಚಿಕ್ಕದಾಗಿಯೇ ಇರುತ್ತದೆ, ಈ ಸಮಯದಲ್ಲಿ ಕಲಿಯುಗದ ಅಂತ್ಯವಾಗಿದೆ ಅಂದಮೇಲೆ ಎಷ್ಟು ದೊಡ್ಡ ವೃಕ್ಷವಾಗಿ ಬಿಟ್ಟಿದೆ, ಈಗ ಇದರ ವಿನಾಶವೂ ಆಗಬೇಕಾಗಿದೆ. ಮಕ್ಕಳು ತಿಳಿದುಕೊಂಡಿದ್ದೀರಿ, ಇದು ಅದೇ ಮಹಾಭಾರತ ಯುದ್ಧವಾಗಿದೆ. ಈ ಸಮಯದಲ್ಲಿಯೇ ಗೀತೆಯ ಭಗವಂತನು ರಾಜಯೋಗವನ್ನು ಕಲಿಸಿದರು ಮತ್ತು ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡಿದರು. ಸಂಗಮದಲ್ಲಿಯೇ ಅನೇಕ ಧರ್ಮಗಳ ವಿನಾಶ, ಒಂದು ಧರ್ಮದ ಸ್ಥಾಪನೆಯಾಗಿತ್ತು, ಮಕ್ಕಳಿಗೆ ಇದೂ ಸಹ ತಿಳಿದಿದೆ. ಇಂದಿಗೆ 5000 ವರ್ಷಗಳ ಮೊದಲು ಸ್ವರ್ಗವಾಗಿತ್ತು, ಮತ್ತ್ಯಾವುದೇ ಧರ್ಮವಿರಲಿಲ್ಲ, ಅಂತಹ ಹೊಸ ಪ್ರಪಂಚವನ್ನು ಸ್ಥಾಪನೆ ಮಾಡಲು ತಂದೆಯು ಸಂಗಮದಲ್ಲಿ ಬರುತ್ತಾರೆ, ಈಗ ಅದು ಸ್ಥಾಪನೆಯಾಗುತ್ತಿದೆ, ಹಳೆಯ ಪ್ರಪಂಚವು ವಿನಾಶವಾಗಿ ಬಿಡುವುದು. ಸತ್ಯಯುಗದಲ್ಲಿ ಭಾರತ ಖಂಡ ಒಂದೇ ಇತ್ತು, ಮತ್ತ್ಯಾವುದೇ ಖಂಡವಿರಲಿಲ್ಲ. ಈಗಂತೂ ಎಷ್ಟೊಂದು ಖಂಡಗಳಿವೆ! ಭಾರತ ಖಂಡವೂ ಇದೆ ಆದರೆ ಇದರಲ್ಲಿ ಆದಿ ಸನಾತನ ದೇವಿ-ದೇವತಾ ಧರ್ಮವಿಲ್ಲ ಅದು ಪ್ರಾಯಲೋಪವಾಗಿ ಬಿಟ್ಟಿದೆ, ಈಗ ಪುನ ಪರಮಪಿತ ಪರಮಾತ್ಮನು ಬ್ರಹ್ಮಾರವರ ಮೂಲಕ ಸ್ಥಾಪನೆ ಮಾಡುತ್ತಿದ್ದಾರೆ. ಉಳಿದ ಅನೇಕ ಧರ್ಮಗಳು ವಿನಾಶವಾಗುತ್ತವೆ. ಇದು ನೆನಪಿರಬೇಕಾಗಿದೆ – ಸತ್ಯ-ತ್ರೇತಾಯುಗದಲ್ಲಿ ಮತ್ತ್ಯಾರ ರಾಜ್ಯವೂ ಇರಲಿಲ್ಲ. ಮತ್ತೆಲ್ಲಾ ಧರ್ಮಗಳು ಈಗ ಬಂದಿವೆ. ಎಷ್ಟೊಂದು ದುಃಖ-ಅಶಾಂತಿ, ಹೊಡೆದಾಟಗಳಿದೆ. ಮಹಾಭಾರಿ ಮಹಾಭಾರತ ಯುದ್ಧವೂ ಅದೇ ಆಗಿದೆ. ಒಂದು ಕಡೆ ಯುರೋಪಿಯನ್ ಯಾದವರೂ ಇದ್ದಾರೆ, 5000 ವರ್ಷಗಳ ಮೊದಲೂ ಸಹ ಇವರು ಅಣ್ವಸ್ತ್ರಗಳನ್ನು ಕಂಡುಹಿಡಿದಿದ್ದರು. ಕೌರವರು-ಪಾಂಡವರು ಇದ್ದರು, ಪಾಂಡವರ ಕಡೆ ಸ್ವಯಂ ಪರಮಪಿತ ಪರಮಾತ್ಮನು ಸಹಯೋಗಿಯಾಗಿದ್ದರು. ಎಲ್ಲರಿಗೆ ಇದನ್ನೇ ಹೇಳಿದರು – ಗೃಹಸ್ಥ ವ್ಯವಹಾರದಲ್ಲಿರುತ್ತಾ ನನ್ನನ್ನು ನೆನಪು ಮಾಡಿದರೆ ನಿಮ್ಮ ಪಾಪವು ವೃದ್ಧಿಯಾಗುವುದಿಲ್ಲ ಮತ್ತು ಹಿಂದಿನ ವಿಕರ್ಮಗಳು ವಿನಾಶವಾಗುತ್ತವೆ. ಈಗಲೂ ಸಹ ತಂದೆಯು ತಿಳಿಸುತ್ತಾರೆ, ನೀವೇ ಭಾರತವಾಸಿಗಳು ಸತ್ಯಯುಗದಲ್ಲಿ ಸತೋಪ್ರಧಾನರಿದ್ದವರು ನೀವೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಈಗ ನೀವಾತ್ಮರು ತಮೋಪ್ರಧಾನರಾಗಿ ಬಿಟ್ಟಿದ್ದೀರಿ. ಈಗ ಸತೋಪ್ರಧಾನರಾಗುವುದು ಹೇಗೆ! ಯಾವಾಗ ಪತಿತ-ಪಾವನ ತಂದೆಯಾದ ನನ್ನನ್ನು ನೆನಪು ಮಾಡುತ್ತೀರೋ ಆಗಲೇ ಸತೋಪ್ರಧಾನರಾಗುವಿರಿ. ಈ ಯೋಗಾಗ್ನಿಯಿಂದಲೇ ಪಾಪಗಳು ಭಸ್ಮವಾಗುತ್ತವೆ ಮತ್ತು ಆತ್ಮಗಳು ಸತೋಪ್ರಧಾನವಾಗುತ್ತವೆ ನಂತರ ಸ್ವರ್ಗದಲ್ಲಿ 21 ಜನ್ಮಗಳಿಗಾಗಿ ಆಸ್ತಿಯನ್ನು ಪಡೆಯುತ್ತೀರಿ. ಉಳಿದಂತೆ ಈ ಹಳೆಯ ಪ್ರಪಂಚದ ವಿನಾಶವಂತೂ ಆಗಲೇಬೇಕಾಗಿದೆ. ಭಾರತವು ಸತ್ಯಯುಗದಲ್ಲಿ ಶ್ರೇಷ್ಠಾಚಾರಿಯಾಗಿತ್ತು ಮತ್ತು ಸೃಷ್ಟಿಯ ಆದಿಯಲ್ಲಿ ಬಹಳ ಕಡಿಮೆ ಮನುಷ್ಯರಿದ್ದರು, ಭಾರತವು ಸ್ವರ್ಗವಾಗಿತ್ತು ಮತ್ತ್ಯಾವುದೇ ಖಂಡವಿರಲಿಲ್ಲ. ಈಗ ಅನ್ಯಧರ್ಮಗಳೆಲ್ಲವೂ ವೃದ್ಧಿಯಾಗುತ್ತಾ ಆಗುತ್ತಾ ವೃಕ್ಷವು ಎಷ್ಟು ದೊಡ್ಡದಾಗಿ ಬಿಟ್ಟಿದೆ! ಮತ್ತು ತಮೋಪ್ರಧಾನ ಜಡಜಡೀಭೂತವಾಗಿ ಬಿಟ್ಟಿದೆ. ಈಗ ಈ ತಮೋಪ್ರಧಾನ ವೃಕ್ಷದ ವಿನಾಶ ಮತ್ತು ಹೊಸ ದೇವಿ-ದೇವತಾ ವೃಕ್ಷದ ಸ್ಥಾಪನೆಯು ಅವಶ್ಯವಾಗಿ ಆಗಬೇಕಾಗಿದೆ, ಅದು ಸಂಗಮದಲ್ಲಿಯೇ ಆಗುವುದು. ನೀವೀಗ ಸಂಗಮದಲ್ಲಿದ್ದೀರಿ, ಆದಿ ಸನಾತನ ದೇವಿ-ದೇವತಾ ಧರ್ಮದ ನಾಟಿ ಮಾಡಲಾಗುತ್ತಿದೆ. ತಂದೆಯು ಪತಿತ ಮನುಷ್ಯರನ್ನು ಪಾವನ ಮಾಡುತ್ತಿದ್ದಾರೆ. ಯಾರನ್ನು ಮಾಡುತ್ತಿದ್ದಾರೆಯೋ ಅವರೇ ಮತ್ತೆ ದೇವತೆಗಳಾಗುವರು. ಯಾರು ಮೊಟ್ಟ ಮೊದಲಿಗರಾಗಿದ್ದರೋ ಅವರೇ 84 ಜನ್ಮಗಳನ್ನು ತೆಗೆದುಕೊಂಡಿದ್ದಾರೆ. ಪುನಃ ಅವರೇ ಮೊಟ್ಟ ಮೊದಲಿಗೆ ಬರುತ್ತಾರೆ. ಎಲ್ಲರಿಗಿಂತ ಮೊದಲು ದೇವಿ-ದೇವತೆಗಳ ಪಾತ್ರವಿತ್ತು, ಅವರೇ ಮೊದಲು ಅಗಲಿದ್ದಾರೆ ಮತ್ತೆ ಅವರದೇ ಪಾತ್ರವಿರಬೇಕಲ್ಲವೆ. ಸತ್ಯಯುಗದಲ್ಲಿ ಸರ್ವಗುಣ ಸಂಪನ್ನರು…… ಆಗಿರುತ್ತಾರೆ. ಈಗ ವಿಕಾರಿ ಪ್ರಪಂಚವಾಗಿದೆ, ಇವೆರಡರಲ್ಲಿ ರಾತ್ರಿ-ಹಗಲಿನ ಅಂತರವಿದೆ. ಈಗ ವಿಕಾರಿ ಪ್ರಪಂಚವನ್ನು ನಿರ್ವಿಕಾರಿಯನ್ನಾಗಿ ಯಾರು ಮಾಡುವರು! ಹೇ ಪತಿತ-ಪಾವನ ಬನ್ನಿರಿ ಎಂದು ಯಾರನ್ನು ಕರೆಯುತ್ತಾರೆಯೋ ಅವರು ಈಗ ಬಂದಿದ್ದಾರೆ. ತಂದೆಯು ತಿಳಿಸುತ್ತಾರೆ – ನಾನು ನಿಮ್ಮನ್ನು ನಿರ್ವಿಕಾರಿಗಳನ್ನಾಗಿ ಮಾಡುತ್ತಿದ್ದೇನೆ. ಈ ವಿಕಾರಿ ಪ್ರಪಂಚದ ವಿನಾಶಕ್ಕಾಗಿ ಯುದ್ಧವೂ ಆಗಬೇಕಾಗಿದೆ. ಎಲ್ಲರೂ ಸೇರಿ ಒಂದಾಗುವುದು ಹೇಗೆ ಎಂದು ಅವರು ಹೇಳುತ್ತಾರೆ ಏಕೆಂದರೆ ಈಗ ಅನೇಕ ಮತಗಳಿವೆಯಲ್ಲವೆ. ಇಷ್ಟು ಅನೇಕ ಮತ-ಮತಾಂತರಗಳ ನಡುವೆ ಒಂದು ಧರ್ಮದ ಮತವನ್ನು ಯಾರು ಸ್ಥಾಪನೆ ಮಾಡುವರು! ತಂದೆಯು ತಿಳಿಸುತ್ತಾರೆ – ಈಗ ಒಂದು ಮತದ ಸ್ಥಾಪನೆಯಾಗುತ್ತಿದೆ, ಉಳಿದೆಲ್ಲವೂ ವಿನಾಶವಾಗುವುದು. ಯಾವ ಆದಿ ಸನಾತನ ದೇವಿ-ದೇವತಾ ಧರ್ಮದವರು ಪಾವನರಾಗಿದ್ದರೋ ಅವರೇ 84 ಜನ್ಮಗಳನ್ನು ತೆಗೆದುಕೊಂಡು ಈಗ ಪತಿತರಾಗಿದ್ದಾರೆ. ಪುನಃ ತಂದೆಯು ಬಂದು ಭಾರತವಾಸಿಗಳಿಗೆ ಸ್ವರ್ಗದ ಆಸ್ತಿಯನ್ನು ಕೊಡುತ್ತಿದ್ದಾರೆ ಅರ್ಥಾತ್ ಅಸುರರಿಂದ ದೇವತೆಗಳನ್ನಾಗಿ ಮಾಡುತ್ತಿದ್ದಾರೆ. ನೀವು ಇದನ್ನು ಯಾರಿಗಾದರೂ ತಿಳಿಸಬಹುದು – ತಂದೆಯು ಹೇಳುತ್ತಾರೆ, ನನ್ನನ್ನು ನೆನಪು ಮಾಡಿದರೆ ನೀವು ಪತಿತರಿಂದ ಪಾವನರಾಗುತ್ತೀರಿ. ನೀವೀಗ ಜ್ಞಾನ ಚಿತೆಯ ಮೇಲೆ ಕುಳಿತುಕೊಳ್ಳಿರಿ. ಚಿತೆಯ ಮೇಲೆ ಕುಳಿತುಕೊಳ್ಳುವುದರಿಂದ ನೀವು ಪಾವನರಾಗಿ ಬಿಡುತ್ತೀರಿ. ನಂತರ ದ್ವಾಪರದಲ್ಲಿ ರಾವಣ ರಾಜ್ಯವಾಗುವ ಕಾರಣ ಕಾಮ ಚಿತೆಯ ಮೇಲೆ ಕುಳಿತುಕೊಳ್ಳುತ್ತಾ-ಕುಳಿತುಕೊಳ್ಳುತ್ತಾ ಭ್ರಷ್ಟಾಚಾರಿ ಪ್ರಪಂಚವಾಗಿ ಬಿಟ್ಟಿದೆ, ಇಂದಿಗೆ 5000 ವರ್ಷಗಳ ಮೊದಲು ದೇವಿ-ದೇವತೆಗಳಿದ್ದರು, ಕಡಿಮೆ ಜನಸಂಖ್ಯೆಯಿತ್ತು. ಈಗಂತೂ ಎಷ್ಟೊಂದು ಅಸುರರಾಗಿ ಬಿಟ್ಟಿದ್ದಾರೆ. ಅನ್ಯ ಧರ್ಮಗಳು ಸೇರುತ್ತಾ ವೃಕ್ಷವು ವಿಸ್ತಾರವಾಗಿ ಬಿಟ್ಟಿದೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ವೃಕ್ಷವು ಈಗ ಜಡಜಡೀಭೂತವಾಗಿದೆ, ಇದನ್ನು ಪುನಃ ನಾನು ಏಕಮತದ ರಾಜ್ಯವನ್ನು ಸ್ಥಾಪನೆ ಮಾಡಬೇಕಾಗಿದೆ. ಒಂದು ಧರ್ಮದಲ್ಲಿ ಏಕಮತವಿರಲಿ ಎಂದು ಭಾರತವಾಸಿಗಳು ಹೇಳುತ್ತಾರೆ, ಸತ್ಯಯುಗದಲ್ಲಿ ಒಂದೇ ಧರ್ಮವಿತ್ತು ಎಂಬುದನ್ನು ಭಾರತವಾಸಿಗಳೂ ಸಹ ಮರೆತು ಹೋಗಿದ್ದಾರೆ. ಇಲ್ಲಂತೂ ಅನೇಕ ಧರ್ಮಗಳಿವೆ, ಈಗ ತಂದೆಯು ಬಂದು ಪುನಃ ಒಂದು ಧರ್ಮವನ್ನು ಸ್ಥಾಪನೆ ಮಾಡುತ್ತಿದ್ದಾರೆ. ನೀವು ಮಕ್ಕಳು ರಾಜಯೋಗವನ್ನು ಕಲಿಯುತ್ತಿದ್ದೀರಿ, ಅವಶ್ಯವಾಗಿ ಭಗವಂತನೇ ರಾಜಯೋಗವನ್ನು ಕಲಿಸುತ್ತಾರೆ, ಇದು ಯಾರಿಗೂ ತಿಳಿದಿಲ್ಲ. ಯಾರಾದರೂ ಪ್ರದರ್ಶನಿಯ ಉದ್ಘಾಟನೆ ಮಾಡಲು ಬರುತ್ತಾರೆಂದರೆ ಅವರಿಗೂ ತಿಳಿಸಿ, ನೀವು ಯಾವುದರ ಉದ್ಘಾಟನೆ ಮಾಡುತ್ತೀರಿ ಎಂದು. ತಂದೆಯು ಈ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಿದ್ದಾರೆ, ಬಾಕಿ ನರಕವಾಸಿಗಳೆಲ್ಲರೂ ವಿನಾಶ ಹೊಂದುವರು. ವಿನಾಶಕ್ಕೆ ಮೊದಲು ಯಾರು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆಯೋ ಅವರು ಬಂದು ತಿಳಿದುಕೊಳ್ಳಿರಿ. ಇದು ಬ್ರಹ್ಮಾಕುಮಾರ-ಕುಮಾರಿಯರ ಆಶ್ರಮವಾಗಿದೆ, ಇಲ್ಲಿ ಸಾಪ್ತಾಹಿಕ ಕೋರ್ಸ್ನ್ನು ತೆಗೆದುಕೊಳ್ಳಬೇಕಾಗಿದೆ ಯಾವುದರಿಂದ 5 ವಿಕಾರಗಳು ಬಿಟ್ಟು ಹೋಗುತ್ತವೆ. ದೇವತೆಗಳಲ್ಲಿ ಈ ಪಂಚ ವಿಕಾರಗಳಿರುವುದಿಲ್ಲ, ಈಗ ಇಲ್ಲಿ ಪಂಚವಿಕಾರಗಳ ದಾನವನ್ನು ಕೊಡಬೇಕಾಗಿದೆ, ಆಗಲೇ ಗ್ರಹಣವು ಬಿಡುವುದು. ದಾನ ಕೊಟ್ಟರೆ ಗ್ರಹಣವು ಬಿಟ್ಟು ಹೋಗುವುದು. ಮತ್ತೆ ನೀವು 16 ಕಲಾ ಸಂಪೂರ್ಣರಾಗುವಿರಿ. ಭಾರತವು ಸತ್ಯಯುಗದಲ್ಲಿ 16 ಕಲಾ ಸಂಪೂರ್ಣನಾಗಿತ್ತು, ಈಗ ಯಾವುದೇ ಕಲೆಯಿಲ್ಲ. ಎಲ್ಲರೂ ಕಂಗಾಲರಾಗಿ ಬಿಟ್ಟಿದ್ದಾರೆ. ಯಾರಾದರೂ ಉದ್ಘಾಟನೆ ಮಾಡಲು ಬರುತ್ತಾರೆಂದರೆ ಅವರಿಗೆ ತಿಳಿಸಿರಿ, ಇಲ್ಲಿಯ ಕಾಯಿದೆಯಾಗಿದೆ, ತಂದೆಯು ತಿಳಿಸುತ್ತಾರೆ – 5 ವಿಕಾರಗಳ ದಾನ ಕೊಟ್ಟರೆ ಗ್ರಹಣವು ಬಿಟ್ಟು ಹೋಗುವುದು. ನೀವು 16 ಕಲಾ ಸಂಪೂರ್ಣ ದೇವತೆಗಳಾಗಿ ಬಿಡುವಿರಿ. ಪವಿತ್ರತೆಯ ಅನುಸಾರ ಪದವಿಯನ್ನು ಪಡೆಯುತ್ತಾರೆ. ಒಂದುವೇಳೆ ಯಾವುದಾದರೊಂದು ಕಲೆಯು ಕಡಿಮೆಯಾಯಿತೆಂದರೆ ತಡವಾಗಿ ಜನ್ಮ ಪಡೆಯುವರು. ವಿಕಾರಗಳ ದಾನ ಕೊಡುವುದು ಒಳ್ಳೆಯದಲ್ಲವೆ! ಚಂದ್ರನಿಗೆ ಗ್ರಹಣ ಹಿಡಿದರೆ ಮೊದಲು ಬ್ರಾಹ್ಮಣರು ದಾನ ಪಡೆಯುತ್ತಿದ್ದರು. ಈಗಂತೂ ಬ್ರಾಹ್ಮಣರು ದೊಡ್ಡ ವ್ಯಕ್ತಿಗಳಾಗಿ ಬಿಟ್ಟಿದ್ದಾರೆ, ಪಾಪ! ಬಡವರು ಭಿಕ್ಷೆಯನ್ನು ಬೇಡುತ್ತಿರುತ್ತಾರೆ. ಹಳೆಯ ವಸ್ತ್ರಗಳು ಇತ್ಯಾದಿಗಳನ್ನು ತೆಗೆದುಕೊಳ್ಳುತ್ತಾ ಇರುತ್ತಾರೆ. ವಾಸ್ತವದಲ್ಲಿ ಬ್ರಾಹ್ಮಣರು ಹಳೆಯ ವಸ್ತ್ರಗಳನ್ನು ತೆಗೆದುಕೊಳ್ಳುವುದಿಲ್ಲ, ಅವರಿಗೆ ಹೊಸದನ್ನು ಕೊಡಲಾಗುತ್ತದೆ ಆದ್ದರಿಂದ ಈಗ ನೀವು ತಿಳಿಸುತ್ತೀರಿ, ಭಾರತವು 16 ಕಲಾ ಸಂಪೂರ್ಣವಾಗಿತ್ತು, ಈಗ ತಮೋಪ್ರಧಾನವಾಗಿ ಬಿಟ್ಟಿದೆ. 5 ವಿಕಾರಗಳ ಗ್ರಹಣವು ಹಿಡಿದಿದೆ. ಈಗ ನೀವು ಈ 5 ವಿಕಾರಗಳ ದಾನ ಕೊಟ್ಟು ಈ ಅಂತಿಮ ಜನ್ಮ ಪವಿತ್ರರಾಗಿರುತ್ತೀರೆಂದರೆ ಹೊಸ ಪ್ರಪಂಚದ ಮಾಲೀಕರಾಗುತ್ತೀರಿ. ಸ್ವರ್ಗದಲ್ಲಿ ಕೆಲವರೇ ಇದ್ದರು, ನಂತರ ವೃದ್ಧಿಯನ್ನು ಪಡೆದಿದ್ದಾರೆ. ಈಗಂತೂ ವಿನಾಶವೂ ಸಹ ಸನ್ಮುಖದಲ್ಲಿ ನಿಂತಿದೆ. ತಂದೆಯು ತಿಳಿಸುತ್ತಾರೆ – 5 ವಿಕಾರಗಳ ದಾನಕೊಟ್ಟರೆ ಗ್ರಹಣವು ಬಿಟ್ಟು ಹೋಗುವುದು. ನೀವೀಗ ಶ್ರೇಷ್ಠಾಚಾರಿಗಳಾಗಿ ಸ್ವರ್ಗದ ಸೂರ್ಯವಂಶಿ ರಾಜ್ಯವನ್ನು ತೆಗೆದುಕೊಳ್ಳಬೇಕಾಗಿದೆ ಆದ್ದರಿಂದ ಭ್ರಷ್ಟಾಚಾರವನ್ನು ಬಿಡಬೇಕಾಗುವುದು. 5 ವಿಕಾರಗಳ ದಾನವನ್ನು ಕೊಡಿ, ತಮ್ಮ ಹೃದಯದಿಂದ ಕೇಳಿಕೊಳ್ಳಿ – ನಾನು ಸರ್ವಗುಣ ಸಂಪನ್ನ, ಸಂಪೂರ್ಣ ನಿರ್ವಿಕಾರಿ ಆಗಿದ್ದೇನೆಯೇ! ನಾರದನ ಉದಾಹರಣೆಯಿದೆಯಲ್ಲವೆ. ಒಂದು ವಿಕಾರವಿದ್ದರೂ ಸಹ ಲಕ್ಷ್ಮಿಯನ್ನು ವರಿಸಲು ಹೇಗೆ ಸಾಧ್ಯ! ಪ್ರಯತ್ನ ಪಡುತ್ತಾ ಇರಿ, ತುಕ್ಕಿಗೆ ಬೆಂಕಿಯನ್ನು ಹಾಕುತ್ತಾ ಇರಿ. ಚಿನ್ನವನ್ನು ಭಟ್ಟಿಯಲ್ಲಿ ಹಾಕಿ ಕರಗಿಸುತ್ತಾರೆ, ಕರಗುತ್ತಾ-ಕರಗುತ್ತಾ ಒಂದುವೇಳೆ ಬೆಂಕಿಯು ತಣ್ಣಗಾಗಿ ಬಿಟ್ಟರೆ ತುಕ್ಕು ಬಿಡುವುದಿಲ್ಲ. ಆದ್ದರಿಂದ ತೀಕ್ಷ್ಣವಾದ ಬೆಂಕಿಯಲ್ಲಿ ಕರಗಿಸುತ್ತಾರೆ ನಂತರ ಅದರಲ್ಲಿರುವ ತುಕ್ಕು ಬಿಟ್ಟು ಹೋಗಿದೆಯೇ ಎಂಬುದನ್ನು ನೋಡಿ ನಂತರ ಕಾರ್ಬ್ನಲ್ಲಿ ಹಾಕುತ್ತಾರೆ. ಈಗ ತಂದೆಯು ಸ್ವಯಂ ಹೇಳುತ್ತಾರೆ – ಮಕ್ಕಳೇ, ವಿಕಾರದಲ್ಲಿ ಹೋಗಬೇಡಿರಿ, ತೀವ್ರ ವೇಗದಿಂದ ಪುರುಷಾರ್ಥ ಮಾಡಿರಿ. ಮೊದಲು ಪವಿತ್ರತೆಯ ಪ್ರತಿಜ್ಞೆ ಮಾಡಿ – ಬಾಬಾ, ತಾವು ಪಾವನರನ್ನಾಗಿ ಮಾಡಲು ಬಂದಿದ್ದೀರಿ, ನಾವೆಂದೂ ವಿಕಾರದಲ್ಲಿ ಹೋಗುವುದಿಲ್ಲ. ದೇಹೀ-ಅಭಿಮಾನಿಗಳಾಗಬೇಕಾಗಿದೆ, ತಂದೆಯು ನಾವಾತ್ಮರಿಗೆ ತಿಳಿಸುತ್ತಾರೆ. ಅವರು ಪರಮ ಆತ್ಮನಾಗಿದ್ದಾರೆ, ನಾವು ಪತಿತರಾಗಿದ್ದೇವೆಂದು ತಿಳಿದುಕೊಂಡಿದ್ದೀರಿ. ಆತ್ಮದಲ್ಲಿಯೇ ಸಂಸ್ಕಾರವಿರುತ್ತದೆ. ನಿಮ್ಮ ತಂದೆಯಾದ ನಾನು ನೀವಾತ್ಮರೊಂದಿಗೆ ಮಾತನಾಡುತ್ತೇನೆ. ನಾನು ನಿಮ್ಮ ತಂದೆ ಪರಮಾತ್ಮನಾಗಿದ್ದೇನೆ. ಪಾವನರನ್ನಾಗಿ ಮಾಡಲು ನಾನು ಬಂದಿದ್ದೇನೆ ಎಂದು ಮತ್ತ್ಯಾರೂ ಹೇಳಲು ಸಾಧ್ಯವಿಲ್ಲ. ನೀವು ಮೊಟ್ಟ ಮೊದಲು ಸತೋಪ್ರಧಾನರಾಗಿದ್ದಿರಿ ನಂತರ ಸತೋ, ರಜೋ, ತಮೋದಲ್ಲಿ ಬಂದಿರಿ, ತಮೋಪ್ರಧಾನರಾಗಿದ್ದೀರಿ. ಈ ಸಮಯದಲ್ಲಿ ಪಂಚತತ್ವಗಳೂ ತಮೋಪ್ರಧಾನವಾಗಿದೆ ಆದ್ದರಿಂದ ದುಃಖ ಕೊಡುತ್ತದೆ. ಪ್ರತಿಯೊಂದು ವಸ್ತು ದುಃಖ ಕೊಡುತ್ತದೆ, ಇದೇ ತತ್ವಗಳು ಸತೋಪ್ರಧಾನವಾದಾಗ ಸುಖ ಕೊಡುತ್ತವೆ. ಅದರ ಹೆಸರೇ ಸುಖಧಾಮವಾಗಿದೆ, ಇದು ದುಃಖಧಾಮವಾಗಿದೆ. ಸುಖಧಾಮವು ಬೇಹದ್ದಿನ ತಂದೆಯ ಆಸ್ತಿಯಾಗಿದೆ, ದುಃಖಧಾಮವು ರಾವಣನ ಆಸ್ತಿಯಾಗಿದೆ. ಈಗ ಎಷ್ಟು ಶ್ರೀಮತದಂತೆ ನಡೆಯುತ್ತೀರೋ ಅಷ್ಟು ಶ್ರೇಷ್ಠರಾಗುತ್ತೀರಿ. ಕಲ್ಪ-ಕಲ್ಪವೂ ಇವರು ಇದೇ ರೀತಿ ಪುರುಷಾರ್ಥ ಮಾಡುವವರಾಗಿದ್ದಾರೆ ಎಂದು ಪ್ರಸಿದ್ಧರಾಗಿ ಬಿಡುತ್ತೀರಿ. ಇದು ಕಲ್ಪ-ಕಲ್ಪದ ಆಟವಾಗಿದೆ. ಯಾರು ಹೆಚ್ಚು ಪುರುಷಾರ್ಥ ಮಾಡುತ್ತಿದ್ದಾರೆಯೋ ಅವರು ತಮ್ಮ ರಾಜ್ಯವನ್ನು ತೆಗೆದುಕೊಳ್ಳುತ್ತಿದ್ದಾರೆ. ಸರಿಯಾಗಿ ಪುರುಷಾರ್ಥ ಮಾಡದಿದ್ದರೆ ಕನಿಷ್ಟ ದರ್ಜೆಯಲ್ಲಿ ಬರುವರು. ಪ್ರಜೆಗಳಲ್ಲಿಯೂ ಸಹ ಯಾವ ಪದವಿಯನ್ನು ಪಡೆಯುವರೋ ಗೊತ್ತಿಲ್ಲ. ಲೌಕಿಕ ತಂದೆಯೂ ಸಹ ಹೇಳುತ್ತಾರಲ್ಲವೆ – ನೀವು ನನ್ನ ಹೆಸರನ್ನು ಕೆಡಿಸುತ್ತೀರಿ, ಮನೆಯಿಂದ ಹೊರಟು ಹೋಗಿ ಎಂದು. ಅದೇರೀತಿ ಬೇಹದ್ದಿನ ತಂದೆಯೂ ಸಹ ಹೇಳುತ್ತಾರೆ – ನಿಮಗೆ ಮಾಯೆಯ ಇಂತಹ ಪೆಟ್ಟು ಬೀಳುವುದು, ಸೂರ್ಯವಂಶಿ-ಚಂದ್ರವಂಶಿಯರಲ್ಲಿ ಬರುವುದೇ ಇಲ್ಲ. ತಮಗೆ ತಾವೇ ಪೆಟ್ಟನ್ನು ಕೊಟ್ಟುಕೊಳ್ಳುತ್ತೀರಿ. ತಂದೆಯಂತೂ ಹೇಳುತ್ತಾರೆ – ಮಕ್ಕಳೇ, ವಾರಸುಧಾರರಾಗಿರಿ. ರಾಜ ತಿಲಕವನ್ನು ಇಟ್ಟುಕೊಳ್ಳಬೇಕೆಂದರೆ ನನ್ನನ್ನು ನೆನಪು ಮಾಡಿರಿ ಮತ್ತು ಅನ್ಯರಿಗೂ ನೆನಪು ತರಿಸಿರಿ ಆಗ ನೀವು ರಾಜರಾಗುವಿರಿ. ನಂಬರ್ವಾರಂತೂ ಇರುತ್ತಾರಲ್ಲವೆ. ವಕೀಲರಲ್ಲಿ ಕೆಲವರು ಒಂದೊಂದು ಕೇಸ್ನಿಂದ ಲಕ್ಷಾಂತರ ರೂಪಾಯಿಗಳನ್ನೂ ಸಂಪಾದಿಸುತ್ತಾರೆ, ಇನ್ನೂ ಕೆಲವರಿಗೆ ಧರಿಸುವುದಕ್ಕಾಗಿ ಕೋಟು ಸಹ ಇರುವುದಿಲ್ಲ. ಎಲ್ಲವೂ ಪುರುಷಾರ್ಥದ ಮೇಲೆ ಅವಲಂಭಿಸಿದೆಯಲ್ಲವೆ. ನೀವೂ ಸಹ ಪುರುಷಾರ್ಥ ಮಾಡುತ್ತೀರೆಂದರೆ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಮನುಷ್ಯರಿಂದ ದೇವತೆಗಳಾಗಬೇಕಾಗಿದೆ ಅಂದಮೇಲೆ ಮಾಲೀಕರಾದರೂ ಆಗಿರಿ, ಪ್ರಜೆಗಳಾದರೂ ಆಗಿರಿ. ಪ್ರಜೆಗಳಲ್ಲಿಯೂ ನೌಕರ-ಚಾಕರ ಆಗುತ್ತಾರೆ, ವಿದ್ಯಾರ್ಥಿಯ ಚಲನೆಯಿಂದಲೇ ಶಿಕ್ಷಕರಿಗೆ ಅರ್ಥವಾಗಿ ಬಿಡುತ್ತದೆ. ಆಶ್ಚರ್ಯವೇನೆಂದರೆ ಹಳಬರಿಗಿಂತಲೂ ಹೊಸಬರು ತೀಕ್ಷ್ಣವಾಗಿ ಮುಂದೆ ಹೋಗುತ್ತಾರೆ ಏಕೆಂದರೆ ಈಗ ದಿನ-ಪ್ರತಿದಿನ ಬಹಳ ರಿಫೈನ್ ಮಾತುಗಳನ್ನು ತಂದೆಯು ತಿಳಿಸುತ್ತಿದ್ದಾರೆ. ದೈವೀ ವೃಕ್ಷದ ನಾಟಿಯಾಗುತ್ತಾ ಹೋಗುತ್ತದೆ. ಮೊದಲಿನವರಂತೂ ಕೆಲವರು ಬಿಟ್ಟು ಹೋದರು, ಹೊಸಬರು ಸೇರುತ್ತಾ ಹೋಗುತ್ತಾರೆ. ಹೊಸ-ಹೊಸ ಜ್ಞಾನದ ಮಾತುಗಳು ಸಿಗುತ್ತಾ ಇರುತ್ತವೆ. ಬಹಳ ಯುಕ್ತಿಯಿಂದ ತಿಳಿಸಬೇಕಾಗುತ್ತದೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ಬಹಳ ಗುಹ್ಯ-ಗುಹ್ಯವಾದ ರಮಣೀಕ ಮಾತುಗಳನ್ನು ತಿಳಿಸುತ್ತೇನೆ, ಇದರಿಂದ ನೀವು ಬಹುಬೇಗ ನಿಶ್ಚಯ ಬುದ್ಧಿಯವರಾಗಿರಿ. ನನ್ನ ಪಾತ್ರವಿರುವವರೆಗೂ ನಿಮಗೆ ಓದಿಸುತ್ತಾ ಇರುತ್ತೇನೆ. ಇದೂ ಸಹ ಡ್ರಾಮಾದಲ್ಲಿ ನಿಗಧಿತವಾಗಿದೆ. ಕರ್ಮಾತೀತ ಸ್ಥಿತಿಯನ್ನು ಹೊಂದುವವರೆಗೂ ವಿದ್ಯಾಭ್ಯಾಸವು ನಡೆಯುತ್ತಲೇ ಇರುವುದು. ಮಕ್ಕಳೂ ಸಹ ಅರಿತುಕೊಳ್ಳಬಹುದು. ಕೊನೆಯಲ್ಲಿ ಪರೀಕ್ಷಾ ಸಮಯದಲ್ಲಿ ಫಲಿತಾಂಶವು ಅರ್ಥವಾಗುತ್ತದೆಯಲ್ಲವೆ. ಈ ವಿದ್ಯೆಯಲ್ಲಿ ಪವಿತ್ರತೆಯು ನಂ.1 ಸಬ್ಜೆಕ್ಟ್ ಆಗಿದೆ. ಎಲ್ಲಿಯವರೆಗೆ ತಂದೆಯ ನೆನಪಿರುವುದಿಲ್ಲ, ಸೇವೆಯನ್ನು ಮಾಡುವುದಿಲ್ಲವೋ ಅಲ್ಲಿಯವರೆಗೂ ವಿಶ್ರಾಂತಿಯೆನಿಸಬಾರದು. ನಿಮ್ಮ ಯುದ್ಧವು ಮಾಯೆಯ ಜೊತೆಯಿದೆ, ಭಲೆ ರಾವಣನನ್ನು ಸುಡುತ್ತಾರೆ ಆದರೆ ರಾವಣನು ಯಾರೆಂಬುದನ್ನು ತಿಳಿದುಕೊಂಡಿಲ್ಲ. ದಸರಾ ಹಬ್ಬವನ್ನು ಬಹಳ ಆಚರಿಸುತ್ತಾರೆ, ರಾಮ ಭಗವಂತನ, ಭಗವತಿ ಸೀತೆಯ ಅಪಹರಣವಾಯಿತು ನಂತರ ವಾನರ ಸೇನೆಯ ಸಹಯೋಗ ತೆಗೆದುಕೊಳ್ಳಲಾಯಿತು ಎಂದು ಹೇಳಿದರೆ ನಿಮಗೆ ಆಶ್ಚರ್ಯವೆನಿಸುತ್ತದೆ ಏಕೆಂದರೆ ಇದು ಎಂದಾದರೂ ಸಾಧ್ಯವೇ? ಮನುಷ್ಯರು ಏನನ್ನೂ ತಿಳಿದುಕೊಂಡಿಲ್ಲ. ಪ್ರದರ್ಶನಿಯಲ್ಲಿ ಮೊಟ್ಟ ಮೊದಲಿಗೆ ತಿಳಿಸಬೇಕು – ಭಾರತದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿದ್ದಾಗ ಎಷ್ಟು ಕಡಿಮೆ ಜನಸಂಖ್ಯೆಯಿತ್ತು, ಇದು 5000 ವರ್ಷಗಳ ಮಾತಾಗಿದೆ. ಈಗ ಕಲಿಯುಗವಾಗಿದೆ, ಅದೇ ಮಹಾಭಾರಿ ಮಹಾಭಾರತ ಯುದ್ಧವೂ ನಿಂತಿದೆ. ತಂದೆಯು ಬಂದು ರಾಜಯೋಗವನ್ನು ಕಲಿಸುತ್ತಾರೆ ನಂತರ ವಿನಾಶವೂ ಆಗುವುದು. ಇಲ್ಲಿ ಒಂದು ಧರ್ಮ, ಒಂದು ಮತ ಅಥವಾ ಶಾಂತಿ ಸ್ಥಾಪನೆಯಾಗಲು ಹೇಗೆ ಸಾಧ್ಯ! ಏಕಮತವಾಗಬೇಕು ಎಂದು ಎಷ್ಟು ತಲೆ ಕೆಡಿಸಿಕೊಳ್ಳುತ್ತಾರೆಯೋ ಅಷ್ಟೇ ಇನ್ನೂ ಹೆಚ್ಚಿನದಾಗಿ ಹೊಡೆದಾಡುತ್ತಿರುತ್ತಾರೆ. ಈಗ ನಾನು ಅವರೆಲ್ಲರೂ ಹೊಡೆದಾಡುತ್ತಿರಬೇಕಾಗಿದೆ ಮಧ್ಯದಲ್ಲಿ ಬೆಣ್ಣೆಯನ್ನು ನಿಮಗೆ ಕೊಡುತ್ತೇನೆ. ಯಾರು ಮಾಡುವರೋ ಅವರು ಪಡೆಯುವರು ಎಂದು ತಂದೆಯು ತಿಳಿಸುತ್ತಾರೆ. ಕೆಲಕೆಲವರು ತಂದೆಗಿಂತಲೂ ಶ್ರೇಷ್ಠರಾಗುವರು. ನೀವು ನನಗಿಂತಲೂ ಸಾಹುಕಾರರು, ವಿಶ್ವದ ಮಾಲೀಕರಾಗುವಿರಿ, ನಾನು ಆಗುವುದಿಲ್ಲ. ನಾನು ನೀವು ಮಕ್ಕಳಿಗೆ ನಿಷ್ಕಾಮ ಸೇವೆ ಮಾಡುತ್ತೇನೆ, ನಾನು ದಾತನಾಗಿದ್ದೇನೆ. ನಾವು ಶಿವ ತಂದೆಗೆ 5 ರೂಪಾಯಿಗಳನ್ನು ಕೊಡುತ್ತೇವೆಂದು ಯಾರೂ ತಿಳಿದುಕೊಳ್ಳಬೇಡಿ. ಶಿವ ತಂದೆಯಿಂದ 5 ರೂಪಾಯಿಗಳಿಗೆ 5 ಪದುಮದಷ್ಟು ಸ್ವರ್ಗದಲ್ಲಿ ಪಡೆಯುತ್ತೀರಿ ಅಂದಮೇಲೆ ಇದು ಕೊಡುವುದಾಯಿತೇ! ಒಂದುವೇಳೆ ನಾವು ಕೊಡುತ್ತೇವೆಂದು ತಿಳಿದುಕೊಳ್ಳುತ್ತೀರೆಂದರೆ ಶಿವ ತಂದೆಗೆ ದೊಡ್ಡ ನಿಂದನೆ ಮಾಡುತ್ತೀರೆಂದರ್ಥ. ತಂದೆಯು ನಿಮ್ಮನ್ನು ಎಷ್ಟು ಶ್ರೇಷ್ಠರನ್ನಾಗಿ ಮಾಡುತ್ತಾರೆ! ನೀವು 5 ರೂಪಾಯಿಗಳನ್ನು ಶಿವ ತಂದೆಯ ಖಜಾನೆಯಲ್ಲಿ ತೊಡಗಿಸುತ್ತೀರಿ, ತಂದೆಯು ನಿಮಗೆ 5 ಕೋಟಿಗಳನ್ನು ಕೊಡುತ್ತಾರೆ, ಕವಡೆಯಿಂದ ವಜ್ರ ಸಮಾನರನ್ನಾಗಿ ಮಾಡುತ್ತಾರೆ. ನಾವು ಶಿವ ತಂದೆಗೆ ಕೊಟ್ಟೆವು ಎಂಬ ಸಂಶಯವನ್ನು ಎಂದೂ ತರಬಾರದು. ಇವರು ಎಷ್ಟು ಭೋಲಾನಾಥನಾಗಿದ್ದಾರೆ ಅಂದಮೇಲೆ ನಾವು ತಂದೆಗೆ ಕೊಡುತ್ತೇವೆಂಬ ಸಂಕಲ್ಪವು ಎಂದೂ ಬರಬಾರದು. ನಾವು ಕೊಡುವುದಿಲ್ಲ ಬದಲಾಗಿ ಶಿವ ತಂದೆಯಿಂದ 21 ಜನ್ಮಗಳಿಗಾಗಿ ಆಸ್ತಿಯನ್ನು ಪಡೆಯುತ್ತೇವೆ. ಶುದ್ಧ ಮನಸ್ಸಿನಿಂದ ಕೊಡದಿದ್ದರೆ ಅದು ಸ್ವೀಕಾರವಾಗುವುದಿಲ್ಲ. ಎಲ್ಲಾ ಮಾತುಗಳ ತಿಳುವಳಿಕೆಯನ್ನು ಬುದ್ಧಿಯಲ್ಲಿ ಇಟ್ಟುಕೊಳ್ಳಬೇಕು. ಈಶ್ವರಾರ್ಥವಾಗಿ ದಾನ ಮಾಡುತ್ತಾರೆ ಅಂದಾಗ ತಂದೆಯೇನು ಭಿಕ್ಷಕರೇ? ಇಲ್ಲ. ಅವರು ನಮಗೆ ಇನ್ನೊಂದು ಜನ್ಮದಲ್ಲಿ ಕೊಡುವರೆಂದು ತಿಳಿದು ದಾನ ಮಾಡುತ್ತಾರೆ. ಈಗ ನಿಮಗೆ ತಂದೆಯು ಕರ್ಮ-ಅಕರ್ಮ-ವಿಕರ್ಮದ ರಹಸ್ಯವನ್ನು ತಿಳಿಸುತ್ತಾರೆ. ಇಲ್ಲಿ ಯಾವ ಕರ್ಮ ಮಾಡುವಿರೋ ಅದು ವಿಕರ್ಮವೇ ಆಗುವುದು ಏಕೆಂದರೆ ರಾವಣ ರಾಜ್ಯವಾಗಿದೆ. ಸತ್ಯಯುಗದಲ್ಲಿ ಕರ್ಮವು ಅಕರ್ಮವಾಗುತ್ತದೆ, ನಾನು ನಿಮ್ಮನ್ನು ಈಗ ಅಂತಹ ಪ್ರಪಂಚಕ್ಕೆ ವರ್ಗಾವಣೆ ಮಾಡುತ್ತೇನೆ ಎಲ್ಲಿ ನಿಮ್ಮಿಂದ ವಿಕರ್ಮಗಳಾಗುವುದೇ ಇಲ್ಲ. ಯಾವಾಗ ಅನೇಕ ಮಕ್ಕಳು ಬಂದು ಬಿಡುವರೋ ಆಗ ನಿಮ್ಮ ಹಣವನ್ನು ತೆಗೆದುಕೊಂಡು ನಾನೇನು ಮಾಡಲಿ! ನಿಮ್ಮಿಂದ ಪಡೆದು ಅದು ಕೆಲಸಕ್ಕೆ ಬರಲಿಲ್ಲ ಮತ್ತೆ ನಾನು ಅದನ್ನು ಹೆಚ್ಚಿಸಿ ಕೊಡಲು ನಾನು ಅಂತಹ ಕಚ್ಚಾ ಆದಂತಹ ಅಕ್ಕಸಾಲಿಗನಲ್ಲ, ನಾನು ಪಕ್ಕಾ ಆಚಾರಿಯಾಗಿದ್ದೇನೆ. ಅಂತಿಮದಲ್ಲಿ ನಿಮ್ಮ ಸೇವೆಯು ಅವಶ್ಯಕತೆಯಿಲ್ಲ ಎಂದು ತಂದೆಯು ಹೇಳಿ ಬಿಡುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತೀವ್ರ ವೇಗದಿಂದ ಪುರುಷಾರ್ಥ ಮಾಡಿ ವಿಕಾರಗಳ ತುಕ್ಕನ್ನು ಯೋಗಾಗ್ನಿಯಲ್ಲಿ ಕರಗಿಸಬೇಕಾಗಿದೆ. ಪವಿತ್ರತೆಯ ಸಂಪೂರ್ಣ ಪ್ರತಿಜ್ಞೆ ಮಾಡಬೇಕಾಗಿದೆ.

2. ಕರ್ಮ-ಅಕರ್ಮ, ವಿಕರ್ಮದ ಗತಿಯನ್ನು ಬುದ್ಧಿಯಲ್ಲಿಟ್ಟುಕೊಂಡು ತಮ್ಮದೆಲ್ಲವನ್ನೂ ಹೊಸ ಪ್ರಪಂಚಕ್ಕಾಗಿ ವರ್ಗಾವಣೆ ಮಾಡಬೇಕಾಗಿದೆ.

ವರದಾನ:-

ಹೇಗೆ ಜ್ಯೋತಿಷಿಯು ತನ್ನ ಜ್ಯೋತಿಷ್ಯದ ಜ್ಞಾನದಿಂದ ಮುಂದೆ ಬರುವಂತಹ ಆಪತ್ತುಗಳನ್ನು ತಿಳಿದು ಬಿಡುತ್ತಾರೆ, ಹಾಗೆಯೇ ತಾವು ಮಕ್ಕಳು ಮಾಯೆಯಿಂದ ಬರುವ ಪರೀಕ್ಷೆಗಳನ್ನು ಮುಂಚಿತವಾಗಿಯೇ ಪರಿಶೀಲಿಸುತ್ತಾ, ಗೌರವಾನ್ವಿತವಾಗಿ ತೇರ್ಗಡೆಯಾಗುವುದಕ್ಕಾಗಿ ಬುದ್ಧಿಯೆಂಬ ನೇತ್ರವನ್ನು ಸ್ಪಷ್ಟವಾಗಿಟ್ಟುಕೊಳ್ಳಿರಿ ಮತ್ತು ಸುರಕ್ಷಿತವಾಗಿರಿ. ದಿನ ಕಳೆದಂತೆ ನೆನಪಿನ ಅಥವಾ ಶಾಂತಿಯ ಶಕ್ತಿಯನ್ನು ವೃದ್ಧಿ ಮಾಡಿಕೊಳ್ಳುತ್ತೀರೆಂದರೆ, ಇಂದು ಏನಾಗುವುದಿದೆ ಎಂಬುದು ಮುಂಚಿತವಾಗಿಯೇ ತಿಳಿದುಬಿಡುತ್ತದೆ. ಮಾಸ್ಟರ್ ಜ್ಞಾನಪೂರ್ಣ, ಶಕ್ತಿಪೂರ್ಣರಾಗುತ್ತೀರೆಂದರೆ ಎಂದಿಗೂ ಸೋಲಾಗಲು ಸಾಧ್ಯವಿಲ್ಲ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top