22 November 2021 KANNADA Murli Today | Brahma Kumaris

Read and Listen today’s Gyan Murli in Kannada

November 21, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನೀವೀಗ ಸಂಗಮಯುಗದಲ್ಲಿದ್ದೀರಿ, ನಿಮಗೆ ಈ ಹಳೆಯ ಕಲಿಯುಗೀ ಪ್ರಪಂಚದ ಯಾವುದೇ ವಿಚಾರಗಳು ಬರಬಾರದು’’

ಪ್ರಶ್ನೆ:: -

ತಂದೆಯು ಮಕ್ಕಳಿಗೆ ಶ್ರೇಷ್ಠ ಕರ್ಮ ಮಾಡುವ ಅಥವಾ ಕರ್ಮಗಳನ್ನು ಸುಧಾರಣೆ ಮಾಡಿಕೊಳ್ಳಲು ಯಾವ ವಿಧಿಯನ್ನು ತಿಳಿಸಿದ್ದಾರೆ?

ಉತ್ತರ:-

ತಮ್ಮ ಕರ್ಮಗಳನ್ನು ಸುಧಾರಣೆ ಮಾಡಿಕೊಳ್ಳಲು ಸತ್ಯ ತಂದೆಯೊಂದಿಗೆ ಸದಾ ಸತ್ಯವಾಗಿರಿ. ಎಂದಾದರೂ ಒಂದುವೇಳೆ ಯಾವುದೇ ಉಲ್ಟಾ ಕರ್ಮವಾದರೂ ಸಹ ಅದನ್ನು ತಂದೆಗೆ ಕೂಡಲೇ ಬರೆದು ತಿಳಿಸಿ. ಸತ್ಯತೆಯಿಂದ ತಂದೆಗೆ ತಿಳಿಸುತ್ತೀರೆಂದರೆ ಅದರ ಪ್ರಭಾವವು ಕಡಿಮೆಯಾಗುವುದು. ಇಲ್ಲದಿದ್ದರೆ ವೃದ್ಧಿಯಾಗುತ್ತಾ ಇರುವುದು. ತಂದೆಯಬಳಿ ಸಮಾಚಾರವು ಬರುತ್ತದೆಯೆಂದರೆ, ಅದನ್ನು ಸುಧಾರಣೆ ಮಾಡುವ ಶ್ರೀಮತವನ್ನು ತಂದೆಯು ಕೊಡುತ್ತಾರೆ.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಶಿವ ತಂದೆಯು ಬ್ರಹ್ಮಾರವರ ಮೂಲಕ ಮಕ್ಕಳೊಂದಿಗೆ ಕೇಳುತ್ತಿದ್ದಾರೆ – ಮಕ್ಕಳೇ, ನೀವು ಇಲ್ಲಿ ಮುಂಜಾನೆಯಿಂದ ಕುಳಿತು ಏನು ಮಾಡುತ್ತಿದ್ದೀರಿ? ನೀವು ವಿದ್ಯಾರ್ಥಿಗಳಾಗಿಯೇ ಇದ್ದೀರಿ ಅಂದಮೇಲೆ ಅವಶ್ಯವಾಗಿ ಇಲ್ಲಿ ಕುಳಿತು ಈ ವಿಚಾರ ಮಾಡುತ್ತಾ ಇರುತ್ತೀರಿ – ನಮಗೆ ಓದಿಸಲು ಶಿವ ತಂದೆಯು ಬಂದಿದ್ದಾರೆ. ಈ ವಿದ್ಯೆಯಿಂದ ನಾವು ಸೂರ್ಯವಂಶಿಯರಾಗುತ್ತೇವೆ ಏಕೆಂದರೆ ನೀವು ರಾಜಯೋಗವನ್ನು ಕಲಿಯುತ್ತಿದ್ದೀರಿ ವಿಷ್ಣುಪುರಿಯ ಮಾಲೀಕರಾಗುವುದಕ್ಕಾಗಿ, ಈ ವಿಚಾರದಲ್ಲಿ ಕುಳಿತಿದ್ದೀರೋ ಅಥವಾ ಯಾವುದಾದರೂ ಜವಾಬ್ದಾರಿ, ಮಕ್ಕಳು-ಮರಿ, ಉದ್ಯೋಗ-ವ್ಯವಹಾರ ಇತ್ಯಾದಿಗಳು ನೆನಪಿಗೆ ಬರುತ್ತಿದೆಯೇ? ಇದೇ ಬುದ್ಧಿಯಲ್ಲಿ ಇರಬೇಕಾಗಿದೆ – ಇದು ಗೀತಾಪಾಠಶಾಲೆಯಾಗಿದೆ, ನಮಗೆ ಭಗವಂತ ಓದಿಸುತ್ತಾರೆ ಮತ್ತು ನಾವು ಲಕ್ಷ್ಮೀ-ನಾರಾಯಣ ಅಥವಾ ಅವರ ಕುಟುಂಬದ ಸದಸ್ಯರಾಗುತ್ತೇವೆ. ಇದು ರಾಜಯೋಗವಾಗಿದೆ, ಮಕ್ಕಳ ಬುದ್ಧಿಯಲ್ಲಿ ಇದೇ ಇರಲಿ – ನಾವು ತಂದೆಯಿಂದ ಡೈರೆಕ್ಟ್ ಕೇಳಿ ಸೂರ್ಯವಂಶಿ ಮನೆತನದವರಾಗುತ್ತೇವೆ. ಲಕ್ಷ್ಮೀ-ನಾರಾಯಣರ ಚಿತ್ರವು ಸನ್ಮುಖದಲ್ಲಿದೆ, ನಮ್ಮ ರಾಜ್ಯವಿರುವುದು, ಹೇಗೆ ಕಾಂಗ್ರೆಸ್ಸಿನವರೂ ಸಹ ತಿಳಿದುಕೊಳ್ಳುತ್ತಾರೆ. ಬ್ರಾಹ್ಮಣರಲ್ಲಿಯೂ ಸಹ ಸ್ವರ್ಗವೆಂದು ಯಾವುದಕ್ಕೆ ಹೇಳಲಾಗುತ್ತದೆ ಎಂಬುದು ಕೆಲವರಿಗೆ ಗೊತ್ತೇ ಇಲ್ಲ, ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ನಾವು ತಂದೆಯಿಂದ ಸ್ವರ್ಗದ ಸ್ವರಾಜ್ಯವಿದ್ಯೆಯನ್ನು ಕಲಿಯುತ್ತಿದ್ದೇವೆ. ನಾವೇ ಸ್ವರ್ಗದ ಮಾಲೀಕರಾಗುತ್ತೇವೆ. ಇದನ್ನು ಆಂತರ್ಯದಲ್ಲಿ ಸ್ಮರಣೆ ಮಾಡಬೇಕಾಗಿದೆ. ಹೇಗೆ ಶಾಲೆಯಲ್ಲಿ ವಿದ್ಯಾರ್ಥಿಗಳ ಬುದ್ಧಿಯಲ್ಲಿರುತ್ತದೆ – ನಾವು ಬ್ಯಾರಿಸ್ಟರ್, ಇಂಜಿನಿಯರ್ ಆಗುವುದಕ್ಕಾಗಿ ಓದುತ್ತಿದ್ದೇವೆ ಆದರೆ ನಿಮಗೆ ಇಷ್ಟಾದರೂ ನೆನಪಿರುತ್ತದೆಯೋ ಅಥವಾ ಮರೆತು ಹೋಗುತ್ತೀರೋ? ನೀವು ಶ್ರೇಷ್ಠಾತಿ ಶ್ರೇಷ್ಠ ಭಗವಂತನ ವಿದ್ಯಾರ್ಥಿಗಳಾಗಿದ್ದೀರಿ, ನಿಮ್ಮನ್ನು ಶ್ರೇಷ್ಠಾತಿ ಶ್ರೇಷ್ಠ ದೇವತೆಗಳನ್ನಾಗಿ ಮಾಡಲು ತಂದೆಯು ಓದಿಸುತ್ತಿದ್ದಾರೆ, ನೀವು ಅವರ ಮಕ್ಕಳಾಗಿದ್ದೀರಿ. ಆತ್ಮವು ಈ ಶರೀರದ ಮೂಲಕ ತಮ್ಮ ಭವಿಷ್ಯ ಪದವಿಯನ್ನು ನೆನಪು ಮಾಡಿಕೊಳ್ಳುತ್ತಿದ್ದೀರಿ ಅಥವಾ ಶರೀರದ ಸಂಬಂಧಿ, ಶರೀರದ ಸಂಪತ್ತು, ಉದ್ಯೋಗ-ವ್ಯವಹಾರವನ್ನು ನೆನಪು ಮಾಡುತ್ತೀರಾ? ಇಲ್ಲಿಗೆ ಬರುತ್ತೀರೆಂದರೆ ಇದನ್ನು ತಿಳಿದುಕೊಳ್ಳಿ – ಬೇಹದ್ದಿನ ತಂದೆಯು ನಮ್ಮನ್ನು ಬೇಹದ್ದಿನ ಮಾಲೀಕರನ್ನಾಗಿ ಮಾಡಲು ಓದಿಸಲು ಬರುತ್ತಾರೆ. ಈ ವಿದ್ಯೆಯಿಂದ ನೀವು ರಾಜ-ರಾಣಿಯಾದರೂ ಆಗಿರಿ, ಪ್ರಜೆಗಳಾದರೂ ಆಗಿರಿ. ಮಾಲೀಕರಂತೂ ಆಗುತ್ತೀರಲ್ಲವೇ. ಹೊಸ ಪ್ರಪಂಚದಲ್ಲಿಯೇ ಸೂರ್ಯವಂಶಿ ಮನೆತನವಿರುತ್ತದೆ, ನಾವು ನಮ್ಮ ರಾಜ್ಯಭಾರ ಮಾಡುತ್ತೇವೆ ಎಂಬುದನ್ನಂತೂ ತಿಳಿದುಕೊಳ್ಳುತ್ತೀರಲ್ಲವೇ.

ತಂದೆಗೆ ಗೊತ್ತಿದೆ – ಮಕ್ಕಳು ಹೊರಗಡೆ ಇರುತ್ತಾ ಮನೆ ಮಠ, ಹೊಲ ಗದ್ದೆಗಳಲ್ಲಿರುತ್ತಾ ಇಷ್ಟೊಂದು ತಂದೆಯ ನೆನಪಿರಲು ಸಾಧ್ಯವಿಲ್ಲ ಆದ್ದರಿಂದ ಇಲ್ಲಿಗೆ ಮಿಲನ ಮಾಡಲು ಬರುತ್ತೀರೆಂದರೆ ಎಲ್ಲಾ ಆಲೋಚನೆಗಳನ್ನು ಬಿಟ್ಟು ಬನ್ನಿರಿ. ನೀವೀಗ ಆ ಕಲಿಯುಗೀ ಪ್ರಪಂಚದಲ್ಲಿ ಇಲ್ಲವೇ ಇಲ್ಲ, ನೀವು ಸಂಗಮದಲ್ಲಿದ್ದೀರಿ. ಕಲಿಯುಗವನ್ನು ಬಿಟ್ಟು ಬಿಟ್ಟಿದ್ದೀರಿ. ಹೊರಗಡೆ ಕಲಿಯುಗವಿದೆ, ವಿಶೇಷವಾಗಿ ಈ ಮಧುಬನವು ಸಂಗಮವಾಗಿದೆ ಆದ್ದರಿಂದ ಮಧುಬನದ ಗಾಯನವಿದೆ. ಇಲ್ಲಿ ಈ ಮುರುಳಿಯದೇ ಸ್ಮರಣೆ ಮಾಡಬೇಕಾಗಿದೆ. ನೀವು ಏನನ್ನು ಕೇಳುತ್ತೀರೋ ಅದನ್ನು ರಿಪೀಟ್ ಮಾಡಿರಿ ಮತ್ತು ವಿಚಾರ ಸಾಗರ ಮಂಥನ ಮಾಡಿ. ಸಮಯ ಸಿಕ್ಕಿದಾಗ ಚಿತ್ರಗಳ ಮುಂದೆ ಹೋಗಿ ಕುಳಿತುಕೊಳ್ಳಿ, ಇದನ್ನು ನೋಡುತ್ತಾ ಮತ್ತು ಓದುತ್ತಾ ಇರಿ. ಬ್ರಾಹ್ಮಣಿಯರು ಯಾರು ಕರೆದುಕೊಂಡು ಬರುತ್ತಾರೆಯೋ ಅವರ ಮೇಲೂ ಬಹಳ ಜವಾಬ್ದಾರಿಯಿದೆ. ಬಹಳ ಚಿಂತೆಯಿರಬೇಕು – ಹೇಗೆ ಶಿಕ್ಷಕರಿಗೆ ನಮ್ಮ ಶಾಲೆಯಿಂದ ಒಂದುವೇಳೆ ಕಡಿಮೆ ಜನ ತೇರ್ಗಡೆಯಾದರೆ ಗೌರವ ಕಳೆಯುವುದು ಎಂದು ಚಿಂತೆಯಿರುತ್ತದೆ. ಯಾವಾಗ ಶಾಲೆಯಿಂದ ಅನೇಕರು ಉತ್ತೀರ್ಣರಾಗುವರೋ ಆಗ ಅವರು ಒಳ್ಳೆಯ ಶಿಕ್ಷಕರೆಂದು ನಂಬಲಾಗುತ್ತದೆ. ಹಾಗೆಯೇ ಬ್ರಾಹ್ಮಣಿಯರು ವಿದ್ಯಾರ್ಥಿಗಳ ಮೇಲೆ ಗಮನ ಕೊಡಬೇಕಾಗಿದೆ. ನೀವು ಹೇಗೆ ಇಲ್ಲಿ ಸಂಗಮದಲ್ಲಿ ಬಂದಿದ್ದೀರಿ, ಇಲ್ಲಿ ಡೈರೆಕ್ಟ್ ತಂದೆಯೇ ತಿಳಿಸುತ್ತಾರೆ. ಇಲ್ಲಿನ ಪ್ರಭಾವವು ಬಹಳ ಚೆನ್ನಾಗಿರುತ್ತದೆ. ಒಂದುವೇಳೆ ಇಲ್ಲಿಯೂ ಸಹ ಮನೆ ಮಠ, ಉದ್ಯೋಗ-ವ್ಯವಹಾರಗಳು ನೆನಪಿಗೆ ಬಂದರೆ ಇವರು ಸಾಧಾರಣ ಪ್ರಜೆಯಾಗುವರೆಂದು ತಂದೆಯು ತಿಳಿದುಕೊಳ್ಳುತ್ತಾರೆ. ರಾಜರಾಗಲು ಬಂದಿದ್ದರು ಆದರೆ….. ವಾಸ್ತವದಲ್ಲಿ ಮಕ್ಕಳಿಗೆ ಬಹಳ ಖುಷಿಯಿರಬೇಕು. ಈ ಚಿತ್ರಗಳೂ ಸಹ ನಿಮಗೆ ಬಹಳ ಸಹಯೋಗ ನೀಡುತ್ತವೆ. ಮನುಷ್ಯರು ನೆನಪಿಗಾಗಿ ಅಷ್ಟ ದೇವತೆಗಳ ಮತ್ತು ಗುರುಗಳ ಚಿತ್ರಗಳನ್ನು ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ ಆದರೆ ಅವರನ್ನು ನೆನಪು ಮಾಡುವುದರಿಂದ ಸಿಗುವುದೇನೂ ಇಲ್ಲ. ಭಕ್ತಿಮಾರ್ಗದಲ್ಲಿ ಏನೆಲ್ಲವನ್ನೂ ಮಾಡುತ್ತಾ ಕೆಳಗಿಳಿದು ಬಂದಿದ್ದೀರಿ, ನೀವು ಮಕ್ಕಳು ಈಗ ಮೇಲೇರುವ ಪುರುಷಾರ್ಥ ಮಾಡಬೇಕಾಗಿದೆ. ಮನೆಯಲ್ಲಿ ಶಿವ ತಂದೆಯ ಚಿತ್ರವನ್ನಿಟ್ಟುಕೊಳ್ಳಿ ಆಗ ಪದೇ-ಪದೇ ನೆನಪಿಗೆ ಬರುವುದು. ಮೊದಲು ನೀವು ಹನುಮಂತನನ್ನೋ, ಕೃಷ್ಣನನ್ನೊ, ರಾಮನನ್ನೋ ನೆನಪು ಮಾಡುತ್ತಿದ್ದಿರಿ. ಈಗ ನನ್ನನ್ನು ನೆನಪು ಮಾಡಿರಿ ಎಂದು ಶಿವ ತಂದೆಯು ಸನ್ಮುಖದಲ್ಲಿ ಹೇಳುತ್ತಾರೆ. ತ್ರಿಮೂರ್ತಿಯ ಚಿತ್ರವು ಬಹಳ ಚೆನ್ನಾಗಿದೆ. ಈ ಚಿತ್ರವನ್ನು ಸದಾ ಪಾಕೆಟ್ನಲ್ಲಿ, ಜೇಬಿನಲ್ಲಿ ಇಟ್ಟುಕೊಂಡು ಪದೇ-ಪದೇ ನೋಡುತ್ತಾ ಇರಿ ಆಗ ನೆನಪಿರುವುದು. ಇವರು (ಬ್ರಹ್ಮಾ) ಭಕ್ತನಾಗಿದ್ದಾಗ ಲಕ್ಷ್ಮೀ-ನಾರಾಯಣರ ಚಿತ್ರವನ್ನು ಜೇಬಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ಗದ್ದುಗೆಯ ಕೆಳಗಡೆ ಜೊತೆಯಲ್ಲಿಯೇ ಇಟ್ಟುಕೊಳ್ಳುತ್ತಿದ್ದರು. ಅದರಿಂದ ಏನೂ ಸಿಗಲಿಲ್ಲ, ಈಗ ತಂದೆಯಿಂದ ಬಹಳ ಪ್ರಾಪ್ತಿಯಾಗುತ್ತಿದೆ. ಅವರನ್ನೇ ನೆನಪು ಮಾಡಬೇಕಾಗಿದೆ, ಇದರಲ್ಲಿ ಮಾಯೆಯು ಎದುರಿಸುತ್ತದೆ. ಜ್ಞಾನವನ್ನಂತೂ ಭಲೆ ಬಹಳ ಕೇಳುತ್ತಾರೆ, ಹೇಳುತ್ತಾರೆ. ಇದರಲ್ಲಿ ತೀಕ್ಷ್ಣವಾಗಿ ಮುಂದೆ ಹೋಗುತ್ತಾರೆ. 84 ಜನ್ಮಗಳ ಚಕ್ರವು ಮರೆತು ಹೋಗುತ್ತದೆ ಎಂದು ಹೇಳುವುದಿಲ್ಲ. ಇಲ್ಲಿರುವವರು ಹೆಚ್ಚು ನೆನಪು ಮಾಡುತ್ತಾರೆ ಎಂದಲ್ಲ, ಇಲ್ಲಿದ್ದರೂ ಸಹ ಕೆಲವರು ಮಣ್ಣು ಪಾಲಾಗುವುದನ್ನೇ ನೆನಪು ಮಾಡುತ್ತಿರುತ್ತಾರೆ. ಯಾವ ತಂದೆಯಿಂದ ನಾವು ಸುಂದರರಾಗಲು ಬಂದಿದ್ದೇವೆಯೋ ಅವರನ್ನೇ ತಿಳಿದುಕೊಂಡಿಲ್ಲ. ಮಾಯೆಯ ನೆರಳು ಬಹಳ ಬೀಳುತ್ತದೆ. ಮೂಲ ಮಾತು ನೆನಪಿನದಾಗಿದೆ, ತಂದೆಗೆ ಗೊತ್ತಿದೆ – ಬಹಳ ಒಳ್ಳೊಳ್ಳೆಯ ಮಕ್ಕಳೂ ಸಹ ನೆನಪಿನಲ್ಲಿರುವುದಿಲ್ಲ. ಯೋಗದಲ್ಲಿರುವುದರಿಂದಲೇ ದೇಹಾಭಿಮಾನವು ಕಡಿಮೆಯಾಗುವುದು. ಬಹಳ ಮಧುರರಾಗಿರುತ್ತೀರಿ. ದೇಹಾಭಿಮಾನವಿದ್ದರೆ ಮಧುರರಾಗುವುದಿಲ್ಲ, ಕೋಪಿಸಿಕೊಳ್ಳುತ್ತಾ ಇರುತ್ತಾರೆ. ತಂದೆಯು ಈ ಮಾತನ್ನು ಎಲ್ಲರಿಗೆ ಹೇಳುವುದಿಲ್ಲ. ಕೆಲವರು ಸುಪುತ್ರರೂ ಇದ್ದಾರೆ ಯಾರು ಯೋಗದಲ್ಲಿರುತ್ತಾರೆಯೋ ಅವರಿಗೆ ಸುಪುತ್ರರೆಂದು ಹೇಳಲಾಗುತ್ತದೆ. ಅವರಿಂದ ಯಾವುದೇ ಉಲ್ಟಾ-ಸುಲ್ಟಾ ಮಾತುಗಳು ಬರುವುದಿಲ್ಲ. ಮಿತ್ರ ಸಂಬಂಧಿ ಮೊದಲಾದವರೆಲ್ಲರನ್ನೂ ಮರೆತು ಹೋಗುತ್ತಾರೆ – ನಾವು ಅಶರೀರಿಯಾಗಿ ಬಂದಿದ್ದೇವೆ, ಈಗ ಅಶರೀರಿಯಾಗಿ ಮನೆಗೆ ಹೋಗಬೇಕಾಗಿದೆ. ಈಗ ನೀವು ಮಕ್ಕಳಿಗೆ ಜ್ಞಾನದ ಮೂರನೇ ನೇತ್ರವು ಸಿಕ್ಕಿದೆ, ಇದರಿಂದ ನೀವು ಮನೆಯನ್ನು ಮತ್ತು ರಾಜಧಾನಿಯನ್ನು ತಿಳಿದುಕೊಂಡಿದ್ದೀರಿ. ಇದೂ ಸಹ ನೀವು ಮಕ್ಕಳಿಗೆ ಗೊತ್ತಿದೆ, ಶಿವ ತಂದೆಯು ಕಪ್ಪು ಲಿಂಗವಾಗಿಲ್ಲ. ಮನುಷ್ಯರು ಕಪ್ಪಾಗಿ ತೋರಿಸುತ್ತಾರೆ ಆದರೆ ಅವರು ಬಿಂದುವಾಗಿದ್ದಾರೆ. ಇದನ್ನೂ ಸಹ ನಾವು ತಿಳಿದುಕೊಂಡಿದ್ದೇವೆ. ನಾವೀಗ ಮನೆಗೆ ಹೋಗುತ್ತೇವೆ, ಅಲ್ಲಿ ನಾವು ಅಶರೀರಿಯಾಗಿರುತ್ತೇವೆ. ನಾವೀಗ ಅಶರೀರಿಗಳಾಗಬೇಕಾಗಿದೆ. ತನ್ನನ್ನು ಆತ್ಮನೆಂದು ತಿಳಿದು ಪತಿತ-ಪಾವನ ತಂದೆಯನ್ನು ನೆನಪು ಮಾಡಬೇಕಾಗಿದೆ, ಇದನ್ನಂತೂ ತಿಳಿಸಲಾಗುತ್ತದೆ – ಆತ್ಮ ಅವಿನಾಶಿಯಾಗಿದೆ, ಅದರಲ್ಲಿ 84 ಜನ್ಮಗಳ ಪಾತ್ರವು ನಿಗಧಿತವಾಗಿದೆ. ಅದರ ಅಂತ್ಯವಾಗುವುದಿಲ್ಲ. ಸ್ವಲ್ಪ ಸಮಯ ಮುಕ್ತಿಧಾಮಕ್ಕೆ ಹೋಗಿ ಮತ್ತೆ ಪಾತ್ರದಲ್ಲಿ ಬರಬೇಕಾಗಿದೆ. ನೀವು ಸರ್ವತೋಮುಖ ಪಾತ್ರವನ್ನು ಅಭಿನಯಿಸುತ್ತೀರಿ, ಇದು ಸದಾ ನೆನಪಿರಲಿ. ನಾವೀಗ ಮನೆಗೆ ಹೋಗಬೇಕಾಗಿದೆ, ತಂದೆಯನ್ನು ನೆನಪು ಮಾಡುವುದರಿಂದ ನಾವು ತಮೋಪ್ರಧಾನರಿಂದ ಸತೋಪ್ರಧಾನರಾಗಿ ಬಿಡುತ್ತೇವೆ. ಇಲ್ಲಿ ಉದ್ಯೋಗ-ವ್ಯವಹಾರಗಳನ್ನು ನೆನಪು ಮಾಡಿಕೊಳ್ಳಬಾರದು. ಇಲ್ಲಿ (ಮಧುಬನ) ಪೂರ್ಣ ಸಂಗಮಯುಗದಲ್ಲಿದ್ದೀರಿ, ನೀವೀಗ ದೋಣಿಯಲ್ಲಿ ಕುಳಿತಿದ್ದೀರಿ. ಕೆಲವರು ಮಧ್ಯದಲ್ಲಿಯೇ ಇಳಿದು ಹೋಗುತ್ತಾರೆ, ನಂತರ ಸಿಕ್ಕಿ ಹಾಕಿಕೊಂಡು ಸಾಯುತ್ತಾರೆ. ಇದರ ಮೇಲೆ ಶಾಸ್ತ್ರಗಳಲ್ಲಿ ಒಂದು ಕಥೆಯೂ ಇದೆ. ನೀವೀಗ ತಿಳಿದುಕೊಂಡಿದ್ದೀರಿ – ನಾವು ಆ ತೀರದೆಡೆಗೆ ಹೋಗುತ್ತಿದ್ದೇವೆ, ಅಂಬಿಗನು ಶಿವ ತಂದೆಯಾಗಿದ್ದಾರೆ. ಕೃಷ್ಣನಿಗೆ ಅಂಬಿಗ ಅಥವಾ ಮಾಲೀಕನೆಂದು ಹೇಳುವುದಿಲ್ಲ, ಶಿವ ಭಗವಾನುವಾಚ ಆಗಿದೆ. ಪತಿತ-ಪಾವನ ಶಿವ ತಂದೆಯಾಗಿದ್ದಾರೆ. ಕೃಷ್ಣನ ಕಡೆ ಬುದ್ಧಿಯು ಹೋಗಲು ಸಾಧ್ಯವಿಲ್ಲ. ಮನುಷ್ಯರ ಬುದ್ಧಿಯಂತೂ ಅಲೆಯುತ್ತಿರುತ್ತದೆ. ತಂದೆಯು ಬಂದು ಅಲೆಯುವುದರಿಂದ ಬಿಡಿಸುತ್ತಾರೆ, ಕೇವಲ ತಿಳಿಸುತ್ತಾರೆ – ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿರಿ ಆಗಲೇ ನೀವು ಸ್ವರ್ಗದ ಮಾಲೀಕರಾಗುತ್ತೀರಿ. ಈ ಮಾತುಗಳನ್ನು ಮರೆಯಬಾರದು. ನೀವು ಇಲ್ಲಿಂದ ಬಹಳ ರಿಫ್ರೆಷ್ ಆಗಿ ಹೋಗುತ್ತೀರಿ, ಅನುಭವವನ್ನೂ ತಿಳಿಸುತ್ತೀರಿ. ಬಾಬಾ, ನಾವು ಮತ್ತೆ ಹೇಗಿದ್ದವರು ಅದೇರೀತಿ ಆಗಿ ಬಿಡುತ್ತೇವೆ. ಮಿತ್ರ ಸಂಬಂಧಿ ಮೊದಲಾದವರ ಮುಖವನ್ನು ನೋಡುತ್ತಿದ್ದಂತೆಯೇ ಮತ್ತೆ ಸಿಕ್ಕಿ ಹಾಕಿಕೊಳ್ಳುತ್ತೀರಿ. ನೀವು ಮಕ್ಕಳು ಪ್ರಿಯತಮೆಯರಾಗಿದ್ದೀರಿ, ಕೆಲಸ ಕಾರ್ಯಗಳನ್ನು ಮಾಡುತ್ತಾ ಪ್ರಿಯತಮನನ್ನು ನೆನಪು ಮಾಡಿರಿ ಆಗ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಒಂದುವೇಳೆ ಈಗ ಪುರುಷಾರ್ಥ ಮಾಡದಿದ್ದರೆ ಸಿಂಗಲ್ ಕಿರೀಟವೂ ಸಿಗುವುದಿಲ್ಲ, ನೀವು ಮಕ್ಕಳು ಇಲ್ಲಿಗೆ ಬರುತ್ತೀರೆಂದರೆ ಸಮಯವನ್ನು ವ್ಯರ್ಥ ಮಾಡಬಾರದು. ಇಲ್ಲಿ ನಿಮಗೆ ಮತ್ತೇನೂ ಇಲ್ಲ, ಕೇವಲ ನಿಮ್ಮ ನೆನಪಾರ್ಥ ದಿಲ್ವಾಡಾ ಮಂದಿರವಿದೆ, ಅದನ್ನು ನೋಡಬಹುದು. ಅದರಲ್ಲಿ ಮೇಲೆ ವೈಕುಂಠವಿದೆ, ನಿಮ್ಮ ವೃಕ್ಷದ ಚಿತ್ರವೂ ಸ್ಪಷ್ಟವಾಗಿದೆ, ಕೆಳಗೆ ರಾಜಯೋಗದಲ್ಲಿ ಕುಳಿತಿದ್ದೀರಿ. ಮೇಲೆ ರಾಜಧಾನಿಯು ನಿಂತಿದೆ. ಅದೇ ರೀತಿಯಲ್ಲಿ ದಿಲ್ವಾಡಾ ಮಂದಿರವು ಮಾಡಲ್ಪಟ್ಟಿದೆ. ನೀವು ತಿಳಿದುಕೊಂಡಿದ್ದೀರಿ – ಶಿವ ತಂದೆಯು ನಮಗೆ ಪುನಃ ಜ್ಞಾನವನ್ನು ತಿಳಿಸಿ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಿದ್ದಾರೆ, ಈ ಕಲಿಯುಗದ ವಿನಾಶವಾಗಲಿದೆ. ಈ ಆದಿದೇವ-ಆದಿನಾಥನು ಯಾರಾಗಿದ್ದಾರೆ, ನೀವು ಎಲ್ಲರ ಪರಿಚಯವನ್ನು ತಿಳಿದುಕೊಂಡಿದ್ದೀರಲ್ಲವೆ. ಈ ಸಮಯದ ಚರ್ಚೆಯು ನಂತರ ಭಕ್ತಿಮಾರ್ಗದಲ್ಲಿ ನಡೆಯುತ್ತದೆ. ಹಬ್ಬ, ವ್ರತ ಇತ್ಯಾದಿಗಳೆಲ್ಲವೂ ಈ ಸಮಯದ್ದಾಗಿದೆ. ಸತ್ಯವಾದ ವ್ರತವು ಮನ್ಮನಾಭವ ಆಗಿದೆ ಬಾಕಿ ನಿರ್ಜಲವಾಗಿರುವುದು, ಆಹಾರವನ್ನು ಸೇವಿಸದೇ ಇರುವುದು ಯಾವುದೇ ವ್ರತವಲ್ಲ. ಈ ಸಮಯದ ಪ್ರಪಂಚದಲ್ಲಿ ಮಾಯೆಯ ಬಹಳ ಆಡಂಬರವಿದೆ. ಮೊದಲು ಈ ವಿದ್ಯುತ್, ಗ್ಯಾಸ್ ಇತ್ಯಾದಿಗಳಿರಲಿಲ್ಲ. ಇವೆಲ್ಲವೂ 100 ವರ್ಷಗಳಲ್ಲಿ ಹೊರಬಂದಿವೆ. ಇದರಲ್ಲಿ ಮನುಷ್ಯರು ಸಿಕ್ಕಿ ಹಾಕಿಕೊಂಡಿದ್ದಾರೆ. ನಮಗಾಗಿ ಇಲ್ಲಿಯೇ ಸ್ವರ್ಗವಿದೆ ಎಂದು ಹೇಳುತ್ತಾರೆ, ಮಾಯೆಯ ಪ್ರಭಾವವು ಇಷ್ಟೊಂದಿದೆ ಮನುಷ್ಯರು ತಂದೆಯನ್ನೇ ನೆನಪು ಮಾಡುವುದಿಲ್ಲ. ನೀವು ಹೋಗಿ ನೋಡಿರಿ, ನಾವು ಸ್ವರ್ಗದಲ್ಲಿ ಕುಳಿತಿದ್ದೇವೆ ಎಂದು ಹೇಳುತ್ತಾರೆ. ಈಗ ಸ್ವರ್ಗದ ಮುಂದೆ ಇದೇನೂ ಇಲ್ಲ, ಸ್ವರ್ಗವೆಲ್ಲಿ! ಈ ನರಕವೆಲ್ಲಿ! ಸ್ವರ್ಗದ ಒಂದು ವಸ್ತುವೂ ಸಹ ಇಲ್ಲಿರಲು ಸಾಧ್ಯವಿಲ್ಲ. ಅಲ್ಲಿ ಪ್ರತೀ ವಸ್ತು ಸತೋಪ್ರಧಾನವಾಗಿರುವುದು. ಹಸುಗಳೂ ಸಹ ಸುಂದರವಾಗಿರುವುದು. ಸೂಕ್ಷ್ಮವತನದಲ್ಲಿ ಫಲಪುಷ್ಫಗಳನ್ನು ನೋಡಿಕೊಂಡು ಬರುತ್ತೀರಲ್ಲವೇ, ಅದಕ್ಕೆ ಶೂಬೀ ರಸವೆಂದು ಹೆಸರನ್ನು ಇಡುತ್ತಾರೆ. ಪ್ರಪಂಚದವರಿಗೆ ಸ್ವರ್ಗವೆಲ್ಲಿದೆ ಎಂಬುದೂ ಸಹ ತಿಳಿದಿಲ್ಲ. ಸ್ವರ್ಗದಲ್ಲಿ ಎಲ್ಲವೂ ಸತೋಪ್ರಧಾನವಾಗಿರುತ್ತದೆ, ಈ ಮಣ್ಣು ಇತ್ಯಾದಿಗಳೇನೂ ಅಲ್ಲಿ ಬೀಳುವುದಿಲ್ಲ. ದುಃಖದ ಯಾವುದೇ ಮಾತಿರುವುದಿಲ್ಲ ಆದರೆ ತಂದೆಯು ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡಲು ಈ ವಿದ್ಯೆಯನ್ನು ಓದಿಸುತ್ತಿದ್ದಾರೆ ಎಂಬುದು ಇನ್ನೂ ಅಷ್ಟು ನಶೆಯೇರುತ್ತಿಲ್ಲ. ಚಿತ್ರಗಳು ಎಷ್ಟು ಸ್ಪಷ್ಟವಾಗಿವೆ! ಚಿತ್ರಗಳನ್ನು ಮಾಡಿಸುವುದರಲ್ಲಿ ಸಮಯ ಹಿಡಿಸುತ್ತದೆ. ತಂದೆಯು ಎಲ್ಲವನ್ನೂ ಸೇವಾರ್ಥವಾಗಿ ಮಾಡಿಸುತ್ತಲೇ ಇರುತ್ತಾರೆ ಆದರೆ ಕೆಲವರಂತೂ ತಮ್ಮ ಉದ್ಯೋಗ-ವ್ಯವಹಾರಗಳಲ್ಲಿ ಇಷ್ಟೊಂದು ಸಿಲುಕಿದ್ದಾರೆ, ತಂದೆಯನ್ನು ನೆನಪು ಮಾಡುವುದಿಲ್ಲ. ಪ್ರದರ್ಶನಿಯ ಚಿತ್ರಗಳ ಪುಸ್ತಕವೂ ಇದೆ, ಅದನ್ನು ಓದಬೇಕು. ಗೀತಾಪಾಠಿಗಳು ಎಲ್ಲಿಯೇ ಹೋದರೂ ಸಹ ಗೀತೆಯನ್ನು ಅವಶ್ಯವಾಗಿ ಓದುತ್ತಾರೆ. ಈಗ ನಿಮಗೆ ಸತ್ಯಗೀತೆಯು ಚಿತ್ರಗಳ ಸಹಿತ ಸಿಕ್ಕಿದೆ, ಈಗ ಚೆನ್ನಾಗಿ ಪರಿಶ್ರಮ ಪಡಬೇಕಾಗಿದೆ, ಇಲ್ಲದಿದ್ದರೆ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಯಾವಾಗ ಸಾಕ್ಷಾತ್ಕಾರವಾಗುವುದೋ ಆಗ ಅಯ್ಯೊ ಅಯ್ಯೊ ಎನ್ನಬೇಕು. ಪರೀಕ್ಷೆಯು ಪೂರ್ಣವಾಯಿತೆಂದರೆ ಮತ್ತೆ ಇನ್ನೊಂದು ತರಗತಿಯಲ್ಲಿ ನಂಬರ್ವಾರ್ ಕುಳಿತುಕೊಳ್ಳುತ್ತಾರೆ. ಇಲ್ಲಿಯೂ ಸಹ ಯಾವಾಗ ಸಾಕ್ಷಾತ್ಕಾರವಾಗುವುದೋ, ನಂಬರ್ವಾರ್ ರುದ್ರ ಮಾಲೆಯೇ ನಂತರ ವಿಜಯ ಮಾಲೆಯಲ್ಲಿ ಹೋಗುತ್ತಾರೆ. ಶಾಲೆಯಲ್ಲಿ ಮಕ್ಕಳು ಯಾರಾದರೂ ಅನುತ್ತೀರ್ಣರಾದರೆ ಎಷ್ಟೊಂದು ದುಃಖಿಯಾಗಿ ಬಿಡುತ್ತಾರೆ. ನಿಮ್ಮದು ಇದು ಕಲ್ಪ-ಕಲ್ಪಾಂತರದ ಆಟವಾಗಿದೆ.

ಕೆಲವು ಮಕ್ಕಳು ಪೂರ್ಣ ಮ್ಯಾಗಜಿನ್ ಓದುವುದೇ ಇಲ್ಲ. ಮ್ಯಾಗಜಿನ್ ಓದಿ ಸರ್ವೀಸ್ ಮಾಡಬೇಕಾಗಿದೆ. ಬಾಬಾ, ಇಂತಹವರನ್ನು ಬದಲು ಮಾಡಿ ಒಳ್ಳೆಯ ಬ್ರಾಹ್ಮಿಣಿಯನ್ನು ಕಳುಹಿಸಿ ಎಂದು ಪತ್ರ ಬರೆಯುತ್ತಾರೆ. ಕೆಲಕೆಲವರು ಬ್ರಾಹ್ಮಿಣಿಯರ ಜೊತೆ ಇಷ್ಟೊಂದು ಪ್ರೀತಿಯುಂಟಾಗುತ್ತದೆ, ಬ್ರಾಹ್ಮಿಣಿಯು ಬದಲಾದರೆ ಇವರೂ ಸಹ ಕೆಳಗೆ ಬೀಳುತ್ತಾರೆ, ಸೇವಾಕೇಂದ್ರಕ್ಕೆ ಬರುವುದನ್ನು ಬಿಟ್ಟು ಬಿಡುತ್ತಾರೆ. ಯಾವುದೇ ಉಲ್ಟಾ ಕರ್ಮವಾದರೆ ಕೂಡಲೇ ಸತ್ಯತೆಯಿಂದ ತಂದೆಗೆ ಬರೆಯಬೇಕು ಆಗ ಪಾಪದ ಪ್ರಭಾವವು ಕಡಿಮೆಯಾಗುವುದು. ಇಲ್ಲದಿದ್ದರೆ ವೃದ್ಧಿಯಾಗುತ್ತಾ ಹೋಗುವುದು. ತಂದೆಯು ಸುಧಾರಣೆ ಮಾಡಿಕೊಳ್ಳುವುದಕ್ಕಾಗಿ ಹೇಳುತ್ತಾರೆ ಆದರೆ ಯಾರಾದರೂ ಸುಧಾರಣೆ ಆಗಲಿಲ್ಲವೆಂದರೆ ಪಾಪಕರ್ಮ ಮಾಡುವುದನ್ನು ಬಿಡುವುದೇ ಇಲ್ಲ. ಅದೃಷ್ಟದಲ್ಲಿ ಇಲ್ಲವೆಂದರೆ ತಂದೆಗೆ ಸತ್ಯ ಸಮಾಚಾರವನ್ನು ತಿಳಿಸುವುದಿಲ್ಲ. ತಂದೆಯ ಬಳಿ ರಿಪೋರ್ಟ್ ಬಂದರೆ ಅವರನ್ನು ಸುಧಾರಣೆ ಮಾಡುವ ಪ್ರಯತ್ನ ಪಡುವರು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಅಶರೀರಿಯಾಗುವ ಸಂಪೂರ್ಣ ಅಭ್ಯಾಸ ಮಾಡಬೇಕಾಗಿದೆ. ಯಾವುದೇ ಉಲ್ಟಾ ಸುಲ್ಟಾ ಮಾತನಾಡಬಾರದು. ಬಹಳ ಮಧುರರಾಗಬೇಕು. ಯಾವುದೇ ಮಾತಿನಲ್ಲಿ ಮುನಿಸಿಕೊಳ್ಳಬಾರದು.

2. ಮುರುಳಿಯ ಸ್ಮರಣೆ ಮಾಡಬೇಕು. ಏನನ್ನು ಕೇಳುತ್ತೀರೋ ಅದನ್ನು ವಿಚಾರ ಸಾಗರ ಮಂಥನ ಮಾಡಬೇಕು. ಮನ್ಮನಾಭವದ ವ್ರತವನ್ನು ಇಟ್ಟುಕೊಳ್ಳಬೇಕಾಗಿದೆ.

ವರದಾನ:-

ಯಾವ ಮಕ್ಕಳ ಮಸ್ತಕದಲ್ಲಿ ಆದೇಶ ಪಾಲಕನ ಸ್ಮೃತಿಯ ತಿಲಕವಿರುತ್ತದೆಯೋ, ಒಂದು ಸಂಕಲ್ಪವೂ ಆದೇಶವಿಲ್ಲದೆ ಮಾಡುವುದಿಲ್ಲ, ಅವರಿಗೆ ಮೊದಲ ಬಹುಮಾನವು ಪ್ರಾಪ್ತಿಯಾಗುತ್ತದೆ. ಹೇಗೆ ಗೆರೆಯೊಳಗೆ ಕುಳಿತುಕೊಳ್ಳುವ ಆದೇಶವಿತ್ತು, ಹಾಗೆಯೇ ಪ್ರತೀ ಹೆಜ್ಜೆಯನ್ನಿಡುತ್ತಾ, ಪ್ರತೀ ಸಂಕಲ್ಪವನ್ನು ಮಾಡುತ್ತಾ, ತಂದೆಯ ಆದೇಶದ ಗೆರೆಯೊಳಗೆ ಇರುತ್ತೀರೆಂದರೆ ಸದಾಕಾಲವೂ ಸುರಕ್ಷಿತವಾಗಿ ಇರುತ್ತೀರಿ. ರಾವಣನ ಯಾವುದೇ ಪ್ರಕಾರದ ಸಂಸ್ಕಾರವೂ ಯುದ್ಧ ಮಾಡುವುದಿಲ್ಲ ಹಾಗೂ ಸಮಯವೂ ವ್ಯರ್ಥವಾಗಿ ಹೋಗುವುದಿಲ್ಲ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top