24 May 2021 KANNADA Murli Today – Brahma Kumaris

May 23, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನೀವು ರಾವಣನ ಮತದಂತೆ ತಂದೆಯ ನಿಂದನೆ ಮಾಡಿದಿರಿ, ಆದ್ದರಿಂದ ಭಾರತವು ಕವಡೆಯಂತಾಯಿತು, ಈಗ ಅವರನ್ನು ಅರಿತು ನೆನಪು ಮಾಡಿರಿ ಆಗ ಧನವಂತರಾಗಿ ಬಿಡುತ್ತೀರಿ”

ಪ್ರಶ್ನೆ:: -

ಏಣಿಯ ಚಿತ್ರದಲ್ಲಿ ಯಾವ ಅದ್ಭುತ ರಹಸ್ಯವು ಸಮಾವೇಶವಾಗಿದೆ?

ಉತ್ತರ:-

ಅರ್ಧ ಕಲ್ಪ ಭಕ್ತಿಯ ನೃತ್ಯ ಮತ್ತು ಇನ್ನರ್ಧ ಕಲ್ಪ ಜ್ಞಾನದ ನೃತ್ಯವಾಗಿದೆ. ಯಾವಾಗ ಭಕ್ತಿಯ ನೃತ್ಯವಾಗುವುದೋ ಆಗ ಜ್ಞಾನವಿರುವುದಿಲ್ಲ ಮತ್ತು ಜ್ಞಾನದ ನೃತ್ಯವಿದ್ದಾಗ ಭಕ್ತಿಯಿರುವುದಿಲ್ಲ. ಅರ್ಧ ಕಲ್ಪ ರಾವಣನ ಪ್ರಾಲಬ್ಧವಾಗಿದೆ, ಇನ್ನರ್ಧ ಕಲ್ಪ ನೀವು ಮಕ್ಕಳು ಪ್ರಾಲಬ್ಧವನ್ನು ಭೋಗಿಸುತ್ತೀರಿ. ಈ ಗುಹ್ಯ ರಹಸ್ಯವು ಏಣಿಯ ಚಿತ್ರದಲ್ಲಿ ಸಮಾವೇಶವಾಗಿದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಓಂ ನಮಃ ಶಿವಾಯ……..

ಓಂ ಶಾಂತಿ. ತಂದೆಯು ತಿಳಿಸುತ್ತಾರೆ – ಭಕ್ತಿಮಾರ್ಗದಲ್ಲಿ ಬಹಳ ಭಕ್ತಿಯ ನೃತ್ಯ ಮಾಡಿದಿರಿ, ಜ್ಞಾನದ ನೃತ್ಯ ಮಾಡಲಿಲ್ಲ. ಭಕ್ತಿಯ ನೃತ್ಯವಿರುವಾಗ ಜ್ಞಾನದ ನೃತ್ಯವಿರುವುದಿಲ್ಲ, ಜ್ಞಾನದ ನೃತ್ಯವಿರುವಾಗ ಭಕ್ತಿಯ ನೃತ್ಯವಿರುವುದಿಲ್ಲ ಏಕೆಂದರೆ ಭಕ್ತಿಯ ನೃತ್ಯವು ಇಳಿಯುವ ಕಲೆಯಲ್ಲಿ ತರುತ್ತದೆ. ಸತ್ಯ-ತ್ರೇತಾಯುಗದಲ್ಲಿ ಭಕ್ತಿಯಿರುವುದಿಲ್ಲ. ಭಕ್ತಿಯು ದ್ವಾಪರ ಯುಗದಿಂದಲೇ ಪ್ರಾರಂಭವಾಗುತ್ತದೆ, ಭಕ್ತಿಯು ಆರಂಭವಾದಾಗ ಜ್ಞಾನದ ಪ್ರಾಲಬ್ಧವು ಪೂರ್ಣವಾಗಿ ಬಿಡುತ್ತದೆ ಮತ್ತು ಇಳಿಯುವ ಕಲೆಯಾಗುತ್ತದೆ. ಹೇಗೆ ಇಳಿಯುತ್ತೀರಿ ಎಂಬುದನ್ನು ತಂದೆಯು ತಿಳಿಸುತ್ತಾರೆ. ನಾನು ಕಲ್ಪ-ಕಲ್ಪವೂ ಬಂದು ಮಕ್ಕಳಿಗೆ ತಿಳಿಸುತ್ತೇನೆ – ನೀವು ಮಕ್ಕಳು ನನಗೆ ಬಹಳ ನಿಂದನೆ ಮಾಡಿದಿರಿ. ಯಾವಾಗ ಭಾರತದಲ್ಲಿ ಈ ಆದಿ ಸನಾತನ ದೇವಿ-ದೇವತಾ ಧರ್ಮಕ್ಕೆ ಬಹಳ ನಿಂದನೆಯಾಗುವುದೋ ಆಗ ನಾನು ಬರುತ್ತೇನೆ. ಗ್ಲಾನಿ ಎಂದು ಯಾವುದಕ್ಕೆ ಹೇಳಲಾಗುತ್ತದೆ ಎಂಬುದನ್ನೂ ತಿಳಿಸುತ್ತಾರೆ. ತಂದೆಯು ಹೇಳುತ್ತಾರೆ – ನಾನು ಕಲ್ಪ-ಕಲ್ಪವೂ ಬಂದು ವಿಕಾರಿ, ನರಕವಾಸಿ ಭಾರತವನ್ನು ಸ್ವರ್ಗವಾಸಿಯನ್ನಾಗಿ ಮಾಡುತ್ತೇನೆ. ನೀವು ನನ್ನ ನಿಂದನೆ ಮಾಡಿದಿರಿ, ಆಸುರೀ ಮತದಂತೆ ಮಾಡುವ ಕಾರಣ ಇಷ್ಟು ಕಂಗಾಲಾಗಿ ಬಿಟ್ಟಿದ್ದೀರಿ. ರಾಮ ರಾಜ್ಯವಿತ್ತು, ಈಗ ರಾವಣ ರಾಜ್ಯವಾಗಿದೆ. ಇದಕ್ಕೆ ಸೋಲು ಮತ್ತು ಗೆಲುವು, ದಿನ ಮತ್ತು ರಾತ್ರಿ ಎಂದು ಹೇಳಲಾಗುತ್ತದೆ. ಈಗ ವಿಚಾರ ಮಾಡಿ – ನಾನು ಯಾವಾಗ ಬರಲಿ! ಯಾರಿಗೆ ರಾಜ್ಯವನ್ನು ಕೊಟ್ಟೆನೋ ಅವರೇ ರಾಜ್ಯವನ್ನು ಕಳೆದುಕೊಂಡು ಕುಳಿತಿದ್ದಾರೆ. ಲೆಕ್ಕಾಚಾರವೆಲ್ಲವನ್ನೂ ಮೊದಲೇ ತಿಳಿಸುತ್ತೇನೆ. ನಾನು ಬಂದು ಆಸ್ತಿಯನ್ನು ಕೊಡುತ್ತೇನೆ ಮತ್ತೆ ರಾವಣನು ಬಂದು ನಿಮ್ಮನ್ನು ವಿಶೇಷವಾಗಿ ಭಾರತವನ್ನು ಹಾಗೂ ಇಡೀ ಪ್ರಪಂಚವನ್ನು ಶಾಪಗ್ರಸ್ತರನ್ನಾಗಿ ಮಾಡುತ್ತಾನೆ. ಭಾರತದ ಮಹಿಮೆಯ ಬಗ್ಗೆ ಯಾರಿಗೂ ತಿಳಿದಿಲ್ಲ. ಮೊಟ್ಟ ಮೊದಲಿಗೆ ಭಾರತವೇ ಇತ್ತು, ಯಾವಾಗ ಇತ್ತು, ಹೇಗೆ ಇತ್ತು, ಯಾರು ರಾಜ್ಯಭಾರ ಮಾಡುತ್ತಿದ್ದರು, ಇದು ಯಾರಿಗೂ ತಿಳಿದಿಲ್ಲ. ಏನನ್ನೂ ತಿಳಿದುಕೊಳ್ಳುವುದಿಲ್ಲ. ಯಾರು ದೇವತೆಗಳಾಗಿದ್ದರೋ ಅವರ ಮುಖವು ಮನುಷ್ಯನದು, ಗುಣಗಳು ದೈವೀ ಗುಣಗಳಿತ್ತು, ಈಗ ಭಲೆ ಮುಖವು ಮನುಷ್ಯನದಾಗಿದೆ ಗುಣಗಳು ಆಸುರಿಯದಾಗಿದೆ. ಆದ್ದರಿಂದ ಯಾರಿಗೆ ತಿಳಿಸಿದರೂ ಅವರು ತಿಳಿದುಕೊಳ್ಳುವುದಿಲ್ಲ ಏಕೆಂದರೆ ಪಾರಲೌಕಿಕ ತಂದೆಯನ್ನೇ ತಿಳಿದುಕೊಂಡಿಲ್ಲ. ಕುಳಿತು ಇನ್ನೂ ಹೆಚ್ಚು ನಿಂದನೆ ಮಾಡುತ್ತಾರೆ. ತಂದೆಯ ನಿಂದನೆ ಮಾಡುತ್ತಾ-ಮಾಡುತ್ತಾ ಸಂಪೂರ್ಣ ಕವಡೆಯಂತೆ ಆಗಿ ಬಿಟ್ಟಿದ್ದಾರೆ. ಭಾರತದ ಅವನತಿಯಾಗಿ ಬಿಟ್ಟಿದೆ. ಯಾವಾಗ ಇಂತಹ ಸ್ಥಿತಿಯು ಆಗುವುದೋ ಆಗ ತಂದೆಯು ತಿಳಿಸುತ್ತಾರೆ – ನಾನು ಬರುತ್ತೇನೆ. ನೀವು ಮಕ್ಕಳಿಗೆ ಈಗ ಸನ್ಮುಖದಲ್ಲಿ ತಿಳಿಸುತ್ತಿದ್ದೇನೆ. ಕಲ್ಪದ ಮೊದಲೂ ಸಹ ಇದೇರೀತಿ ತಿಳಿಸಿದ್ದೆನು, ಇದು ದೈವೀಸಂಪ್ರದಾಯದ ಸ್ಥಾಪನೆಯಾಗುತ್ತಿದೆ, ಮನುಷ್ಯರಿಂದ ದೇವತೆಗಳಾಗುತ್ತಿದ್ದೀರಿ. ತಂದೆಯು ಯಾವಾಗ ಬರುತ್ತಾರೆ ಎಂಬುದು ಮನುಷ್ಯರಿಗೆ ತಿಳಿದೇ ಇಲ್ಲ. ಸತ್ಯ-ತ್ರೇತಾ ಯುಗದಲ್ಲಿ ನೀವು ಬಹಳ ಖುಷಿಯಲ್ಲಿ ಪ್ರಾಲಬ್ಧವನ್ನು ಭೋಗಿಸುತ್ತೀರಿ ಮತ್ತೆ ದ್ವಾಪರದಿಂದ ರಾವಣನ ಶಾಪವು ತಗುಲುತ್ತಾ ಸಂಪೂರ್ಣ ಸಮಾಪ್ತಿಯಾಗಿ ಬಿಡುತ್ತೀರಿ. ಹೇಗೆ ದೇವತೆಗಳು ಪ್ರಾಲಬ್ಧವನ್ನು ಭೋಗಿಸುತ್ತಾ-ಭೋಗಿಸುತ್ತಾ ತ್ರೇತಾದ ಅಂತ್ಯದಲ್ಲಿ ಬಂದು ಸಮಾಪ್ತಿಯಾಗಿ ಬಿಡುತ್ತಾರೆ ನಂತರ ರಾವಣನ ಆಸುರೀ ಪ್ರಾಲಬ್ಧವು ಆರಂಭವಾಗುತ್ತದೆ. ಭಕ್ತಿಯೂ ಸಹ ಮೊದಲು ಅವ್ಯಭಿಚಾರಿಯಾಗುತ್ತದೆ ನಂತರ ವ್ಯಭಿಚಾರಿಯಾಗುತ್ತದೆ, ಏಣಿಯ ಚಿತ್ರವು ಸರಿಯಾಗಿ ಮಾಡಲ್ಪಟ್ಟಿದೆ. ಸೃಷ್ಟಿಯಲ್ಲಿ ಪ್ರತಿಯೊಂದು ವಸ್ತುವು ಸತೋಪ್ರಧಾನ, ಸತೋ, ರಜೋ, ತಮೋ ಆಗುತ್ತದೆ, ತುಕ್ಕು ಬೀಳುತ್ತಾ ಹೋಗುತ್ತದೆ. ನೀವು ಮಕ್ಕಳಿಗಂತೂ ಬಹಳ ಚೆನ್ನಾಗಿ ತಿಳಿಸಲಾಗುತ್ತದೆ ಆದರೆ ಧಾರಣೆ ಕಡಿಮೆ. ಕೆಲವರಲ್ಲಿ ತಿಳಿಸಿಕೊಡುವ ಬುದ್ಧಿವಂತಿಕೆಯೇ ಇಲ್ಲ. ಕೆಲವರು ಒಳ್ಳೆಯ ಅನುಭವಿಗಳಾಗಿದ್ದಾರೆ ಅವರಿಗೆ ಬಹಳ ಚೆನ್ನಾಗಿ ಧಾರಣೆಯಾಗುತ್ತದೆ. ನಂಬರ್ವಾರ್ ಇರುತ್ತಾರಲ್ಲವೆ. ವಿದ್ಯಾರ್ಥಿಗಳು ಒಂದೇ ಸಮಾನ ಓದುವುದಿಲ್ಲ, ಸ್ವಲ್ಪ ಹೆಚ್ಚು ಕಡಿಮೆ ಅಂಕಗಳನ್ನು ಪಡೆಯುತ್ತಾರೆ. ಯಾರಿಗೆ ಬೇಕಾದರೂ ತಿಳಿಸುವುದು ಬಹಳ ಸಹಜವಾಗಿದೆ. ತಂದೆಯು ತಿಳಿಸುತ್ತಾರೆ – ನನ್ನನ್ನು ನೆನಪು ಮಾಡಿ, ನಾನು ನಿಮ್ಮ ಬೇಹದ್ದಿನ ತಂದೆ, ಸೃಷ್ಟಿಯ ರಚಯಿತನಾಗಿದ್ದೇನೆ. ನನ್ನನ್ನು ನೆನಪು ಮಾಡಿದರೆ ನಿಮಗೆ ಬೇಹದ್ದಿನ ಆಸ್ತಿಯು ಸಿಗುವುದು. ನೆನಪಿನಿಂದಲೇ ತುಕ್ಕು ಬಿಟ್ಟು ಹೋಗುತ್ತದೆ. ಕೇವಲ ಇದನ್ನು ತಿಳಿಸಿ, ನೀವು ಭಾರತವಾಸಿಗಳು ಸತ್ಯಯುಗದಲ್ಲಿ ಸತೋಪ್ರಧಾನರಾಗಿದ್ದಿರಿ, ಈಗ ಕಲಿಯುಗದಲ್ಲಿ ತಮೋಪ್ರಧಾನರಾಗಿದ್ದೀರಿ. ಆತ್ಮದಲ್ಲಿ ತುಕ್ಕು ಏರುತ್ತದೆ, ಪವಿತ್ರರಾಗದೆ ಯಾರೂ ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಹೊಸ ಪ್ರಪಂಚದಲ್ಲಿ ಸತೋಪ್ರಧಾನರೇ ಇರುತ್ತಾರೆ. ವಸ್ತ್ರಗಳು ಹೊಸದಾಗಿದ್ದರೆ ಸತೋಪ್ರಧಾನವೆಂದು ಹೇಳುತ್ತಾರೆ ನಂತರ ಅವು ಹಳೆಯ ತಮೋಪ್ರಧಾನವಾಗಿ ಬಿಡುತ್ತದೆ. ಈಗ ಎಲ್ಲರ ವಸ್ತ್ರಗಳು ಹರಿದು ಹೋಗುವಂತಾಗಿದೆ, ಎಲ್ಲರೂ ಜಡಜಡೀಭೂತ ಸ್ಥಿತಿಯನ್ನು ತಲುಪಿದ್ದಾರೆ. ಯಾರು ವಿಶ್ವದ ಮಾಲೀಕರಾಗಿದ್ದರೋ ಅವರೇ ಸಂಪೂರ್ಣ ಬಡವರಾಗಿದ್ದಾರೆ, ಪುನಃ ಅವರೇ ಸಾಹುಕಾರರಾಗಬೇಕಾಗಿದೆ. ಈ ಮಾತುಗಳನ್ನು ಮನುಷ್ಯರು ತಿಳಿದುಕೊಂಡಿಲ್ಲ. ಭಾರತವು ಸ್ವರ್ಗವಾಗಿತ್ತು, ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು ಮತ್ತೆಲ್ಲಾ ಧರ್ಮದವರು ಕೊನೆಯಲ್ಲಿ ಬಂದಿದ್ದಾರೆ. ತಂದೆಯು ನಿಮಗೆ ಸತ್ಯ ಮಾತನ್ನು ತಿಳಿಸುತ್ತಾರೆ. ಗೀತೆಯನ್ನು ನೋಡಿ ಎಷ್ಟು ಮಾನ್ಯತೆಯಿದೆ! ಓದುತ್ತಾ-ಓದುತ್ತಾ ಸಂಪೂರ್ಣ ಕೆಳಗಿಳಿದು ಬಿಟ್ಟಿದ್ದಾರೆ ಆದ್ದರಿಂದಲೇ ಹೇ ಪತಿತ-ಪಾವನ ಬನ್ನಿ, ನಾವು ಭ್ರಷ್ಟಾಚಾರಿಗಳಾಗಿ ಬಿಟ್ಟಿದ್ದೇವೆ ಎಂದು ಕರೆಯುತ್ತಾರೆ. ಸದ್ಗತಿಯನ್ನು ಭಗವಂತನೇ ಕೊಡಬಲ್ಲರು ಬಾಕಿ ಶಾಸ್ತ್ರಗಳಲ್ಲಿ ಎಲ್ಲವೂ ಭಕ್ತಿಮಾರ್ಗವಾಗಿದೆ. ನಿಮ್ಮ ಬುದ್ಧಿಯಲ್ಲಿ ಕುಳಿತಿದೆ- ನಾವು ತಂದೆಯ ಜ್ಞಾನದಿಂದ ದೇವತೆಗಳಾಗುತ್ತೇವೆ. ಈಗ ಇಡೀ ಪ್ರಪಂಚದೊಂದಿಗೆ ವೈರಾಗ್ಯವಿದೆ, ಸನ್ಯಾಸಿಗಳೂ ಸಹ ಭಕ್ತಿ ಮಾಡುತ್ತಾರೆ, ಗಂಗಾ ಸ್ನಾನ ಇತ್ಯಾದಿಗಳನ್ನು ಮಾಡುತ್ತಾರೆ. ಭಕ್ತಿಯೂ ಸಹ ಸತೋಪ್ರಧಾನ ನಂತರ ರಜೋ, ತಮೋ ಆಗುತ್ತದೆ, ಇದೂ ಹಾಗೆಯೇ ಅರ್ಧ ಕಲ್ಪ ದಿನ, ಅರ್ಧ ಕಲ್ಪ ರಾತ್ರಿ ಎಂದು ಗಾಯನವಿದೆ. ಬ್ರಹ್ಮನ ಜೊತೆ ಅವಶ್ಯವಾಗಿ ಬ್ರಾಹ್ಮಣರದೂ ರಾತ್ರಿಯಾಗುವುದು. ನೀವೀಗ ದಿನದಲ್ಲಿ ಹೋಗುತ್ತೀರಿ. ಭಕ್ತಿಯ ರಾತ್ರಿಯು ಮುಕ್ತಾಯವಾಗುತ್ತದೆ. ಭಕ್ತಿಯಲ್ಲಿ ಬಹಳ ದುಃಖವಿದೆ, ಅದಕ್ಕೆ ರಾತ್ರಿಯೆಂದು ಹೇಳಲಾಗುತ್ತದೆ. ಅಂಧಕಾರದಲ್ಲಿ ಮನುಷ್ಯರು ಭಗವಂತನನ್ನು ಹುಡುಕಾಡುತ್ತಿರುತ್ತಾರೆ. ಭಕ್ತಿಮಾರ್ಗದಲ್ಲಿ ಸದ್ಗತಿ ನೀಡುವವರು ಯಾರೂ ಇರುವುದಿಲ್ಲ. ನಿಮ್ಮ ವಿನಃ ಯಾರೂ ಸಹ ಯಥಾರ್ಥ ರೀತಿಯಿಂದ ಭಗವಂತನನ್ನು ಅರಿತುಕೊಂಡಿಲ್ಲ. ಆತ್ಮವೂ ಬಿಂದು, ಪರಮಾತ್ಮನೂ ಬಿಂದುವಾಗಿದ್ದಾರೆ, ಈ ಮಾತನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ಸ್ವಯಂ ಪರಮಾತ್ಮನೇ ಬಂದು ಬ್ರಹ್ಮಾರವರ ತನುವಿನಿಂದ ತಿಳಿಸುತ್ತಾರೆ. ಇದನ್ನು ಅವರು ಭಗೀರಥನೆಂದು ಬಸವನ ಮೇಲೆ ತೋರಿಸಿದ್ದಾರೆ. ಆದರೆ ಈಗ ಬಸವನ ಮಾತಿಲ್ಲ, ತಂದೆಯು ಎಲ್ಲಾ ಮಾತುಗಳನ್ನು ಬಹಳ ಚೆನ್ನಾಗಿ ತಿಳಿಸಿಕೊಡುತ್ತಾರೆ. ಆದರೆ ಯಾರ ಬುದ್ಧಿಯಲ್ಲಿಯೂ ಪೂರ್ಣ ರೀತಿಯಿಂದ ಕುಳಿತುಕೊಳ್ಳುವುದಿಲ್ಲ. ತಂದೆಯು ತಿಳಿಸುತ್ತಾರೆ – ನಾನು ನೀವಾತ್ಮರ ತಂದೆಯಾಗಿದ್ದೇನೆ. ನೀವು ನನ್ನನ್ನು ನೆನಪು ಮಾಡಿ ಮತ್ತು ಆಸ್ತಿಯನ್ನು ನೆನಪು ಮಾಡಿರಿ ಆಗ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ, ಆದರೂ ಸಹ ಮರೆತು ಹೋಗುತ್ತಾರೆ. ವಾಹ್! ಇಂತಹ ಪ್ರಿಯತಮ ಅಥವಾ ತಂದೆಯನ್ನು ಮರೆಯುವಿರಾ? ಸ್ತ್ರೀ-ಪತಿಯನ್ನು ಅಥವಾ ಮಕ್ಕಳು-ತಂದೆಯನ್ನು ಎಂದಾದರೂ ಮರೆಯುತ್ತಾರೆಯೇ? ಇಲ್ಲಿ ನೀವು ಮರೆತು ಹೋಗುತ್ತೀರಿ? ಬಾಬಾ, ತಾವು ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಿದ್ದೀರಿ ಎಂದು ಹೇಳುತ್ತೀರಿ ಮತ್ತೆ ಮರೆತು ಹೋಗುತ್ತೀರಿ ಆದ್ದರಿಂದ ತಂದೆಯು ತಿಳಿಸುತ್ತಾರೆ – ನೆನಪು ಮಾಡದಿದ್ದರೆ ಒಳಗಿರುವ ತುಕ್ಕು ಹೇಗೆ ಬಿಡುವುದು? ಮುಖ್ಯ ಮಾತು ನೆನಪಿನದಾಗಿದೆ. ಅನ್ಯ ಧರ್ಮದೊಂದಿಗೆ ಯಾವುದೇ ಸಂಬಂಧವಿಲ್ಲ. ಶಾಲೆಯಲ್ಲಿ ಇತಿಹಾಸ-ಭೂಗೋಳವನ್ನು ತಿಳಿಸುತ್ತೀರಿ. ಯಾರು ಸಂಪೂರ್ಣ ತಿಳಿದುಕೊಂಡಿಲ್ಲ, ತಂದೆಯು ಓದಿಸುತ್ತಾರೆ ಎಂಬುದೇ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಹೋಗಲಿ, ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ ಎಂದರೆ ಇದನ್ನೂ ಮರೆತು ಹೋಗುತ್ತೀರಿ. ಯಾರಿಗಾಗಿ ಅರ್ಧ ಕಲ್ಪದಿಂದ ಭಕ್ತಿ ಮಾಡುತ್ತಾ ಬಂದಿರಿ ಆ ತಂದೆಯನ್ನೇ ನೆನಪು ಮಾಡುವುದಿಲ್ಲ. ನೀವು ಮಕ್ಕಳ ಬುದ್ಧಿಯಲ್ಲಿದೆ – ನಾವೀಗ ಒಂದು ಶರೀರವನ್ನು ಬಿಟ್ಟು ರಾಜಧಾನಿಯಲ್ಲಿ ಹೋಗುತ್ತೇನೆ, ಇದು ಅಂತಿಮ ಜನ್ಮವಾಗಿದೆ. ಸೂಕ್ಷ್ಮವತನದಲ್ಲಿ ಅವರ ಅದೇರೂಪವನ್ನು ನೋಡುತ್ತೀರಿ, ವೈಕುಂಠವನ್ನೂ ನೋಡುತ್ತೀರಿ. ನಿಮಗೆ ತಿಳಿದಿದೆ – ಮಮ್ಮಾ-ಬಾಬಾರವರು ಲಕ್ಷ್ಮೀ-ನಾರಾಯಣರಾಗುತ್ತಾರೆ. ನೀವು ಸತ್ಯಯುಗದಲ್ಲಿದ್ದಾಗ ತಿಳಿದುಕೊಳ್ಳುತ್ತೀರಿ – ಈ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳಬೇಕಾಗಿದೆ. ಆದರೆ ಸತ್ಯಯುಗದ ನಂತರ ತ್ರೇತಾಯುಗ, ದ್ವಾಪರ ಯುಗವು ಬರುವುದು ನಾವು ಕೆಳಗಿಳಿಯುತ್ತಾ ಹೋಗುತ್ತೇವೆ ಎಂಬುದು ಅವರಿಗೆ ತಿಳಿದಿರುವುದಿಲ್ಲ. ಜ್ಞಾನದ ಮಾತೇ ಇಲ್ಲ. ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ ಇರುತ್ತಾರೆ, ಅಲ್ಲಿ ಆತ್ಮಾಭಿಮಾನಿಯಾಗಿರುತ್ತಾರೆ ನಂತರ ಆತ್ಮಾಭಿಮಾನಿಯಿಂದ ದೇಹಾಭಿಮಾನಿಗಳಾಗಿ ಬಿಡುತ್ತಾರೆ. ಈ ಜ್ಞಾನವು ಕೇವಲ ಬ್ರಾಹ್ಮಣರಿಗೆ ಇದೆ, ಮತ್ತ್ಯಾರಿಗೂ ಇಲ್ಲ. ಇವರು ಜ್ಞಾನ ಜ್ಞಾನೇಶ್ವರ, ಜ್ಞಾನ ಸಾಗರ ತಂದೆಯಾಗಿದ್ದಾರೆ. ಅವರೇ ತಿಳಿಸುತ್ತಾರೆ – ಅವಶ್ಯವಾಗಿ ಬ್ರಾಹ್ಮಣ ಮಕ್ಕಳಾದ ಬ್ರಾಹ್ಮಣರಿಗೇ ತಿಳಿಸುತ್ತಾರಲ್ಲವೆ. ಬ್ರಾಹ್ಮಣ ಮಕ್ಕಳು ಬ್ರಾಹ್ಮಣ ಸಂಪ್ರದಾಯದವರಾಗಿದ್ದೀರಿ. ರಾತ್ರಿ-ಹಗಲಿನ ಅಂತರವಿದೆ. ನೀವು ಪುರುಷಾರ್ಥ ಮಾಡಿ ಸಂಪೂರ್ಣ ಗುಣವಂತರಾಗುತ್ತೀರಿ, ಸಂಪೂರ್ಣ ನಿರ್ವಿಕಾರಿ, ಗೃಹಸ್ಥ ವ್ಯವಹಾರದಲ್ಲಿದ್ದರೂ ಸಹ ನೀವು ತಂದೆಯನ್ನು ನೆನಪು ಮಾಡುತ್ತೀರಿ. ಕರ್ಮವನ್ನಂತೂ ಮಾಡಲೇಬೇಕಾಗಿದೆ. ಬುದ್ಧಿಯೋಗವು ತಂದೆಯ ಜೊತೆಯಿರಲಿ. ಭಲೆ ಯಾವುದೇ ಕರ್ಮ ಮಾಡಿ, ಚಿಕ್ಕದನ್ನೇ ಮಾಡಿ ಆದರೆ ರಾಜಧಾನಿಯ ಕೆಲಸವನ್ನಾದರೂ ಮಾಡಿ. ರಾಜ ಜನಕನ ಗಾಯನವಿದೆಯಲ್ಲವೆ. ರಾಜ್ಯಭಾರವನ್ನೂ ಮಾಡುತ್ತಾ ಇರಿ ಆದರೆ ಬುದ್ಧಿಯೋಗವು ತಂದೆಯ ಜೊತೆ ಜೋಡಿಸಿ ಆಗ ಆಸ್ತಿಯು ಸಿಗುವುದು. ತಂದೆಯು ತಿಳಿಸುತ್ತಾರೆ – ಮನ್ಮನಾಭವ, ನನ್ನೊಬ್ಬನನ್ನೇ ನೆನಪು ಮಾಡಿ. ಶಿವ ತಂದೆಯನ್ನು ಕೇವಲ ಶಿವ ಎಂದು ಹೇಳಿದಾಗ ಲಿಂಗ ರೂಪವೇ ನೆನಪಿಗೆ ಬರುವುದು, ಮತ್ತೆಲ್ಲರಿಗೆ ಶರೀರದ ಹೆಸರನ್ನು ತೆಗೆದುಕೊಳ್ಳಲಾಗುತ್ತದೆ, ಶರೀರದಿಂದ ಪಾತ್ರವನ್ನಭಿನಯಿಸುತ್ತಾರೆ, ಈಗ ನಿಮ್ಮನ್ನು ಆತ್ಮಾಭಿಮಾನಿಯನ್ನಾಗಿ ಮಾಡಲಾಗುತ್ತದೆ ಯಾವುದು ಅರ್ಧ ಕಲ್ಪ ನಡೆಯುತ್ತದೆ. ಈ ಸಮಯದಲ್ಲಿ ಎಲ್ಲರೂ ದೇಹಾಭಿಮಾನದಲ್ಲಿದ್ದಾರೆ. ಅಲ್ಲಿ ಆತ್ಮಾಭಿಮಾನಿಯಾಗಿರುತ್ತಾರೆ. ಯಥಾ ರಾಜ-ರಾಣಿ ತಥಾ ಪ್ರಜಾ. ಎಲ್ಲರಿಗೆ ಧೀರ್ಘಾಯಸ್ಸು ಇರುತ್ತದೆ, ಇಲ್ಲಿ ಎಲ್ಲರ ಆಯಸ್ಸು ಕಡಿಮೆಯಿದೆ ಅಂದಾಗ ತಂದೆಯು ಸನ್ಮುಖದಲ್ಲಿ ಕುಳಿತು ಮಕ್ಕಳಿಗೆ ಎಷ್ಟು ಚೆನ್ನಾಗಿ ತಿಳಿಸುತ್ತಾರೆ – ಹೇ ಆತ್ಮಗಳೇ ಎಂದು, ಏಕೆಂದರೆ ಆತ್ಮವೇ ಜ್ಞಾನವನ್ನು ತೆಗೆದುಕೊಳ್ಳುತ್ತದೆ, ಆತ್ಮದಲ್ಲಿಯೇ ಧಾರಣೆಯಾಗುತ್ತದೆ. ತಂದೆಗೆ ಶರೀರವಂತೂ ಇಲ್ಲ. ಆತ್ಮದಲ್ಲಿ ಸಂಪೂರ್ಣ ಜ್ಞಾನವಿದೆ, ಆತ್ಮವೂ ನಕ್ಷತ್ರ, ತಂದೆಯೂ ನಕ್ಷತ್ರವಾಗಿದ್ದಾರೆ ಆದರೆ ಅವರು ಪುನರ್ಜನ್ಮವನ್ನು ತೆಗೆದುಕೊಳ್ಳುವುದಿಲ್ಲ, ಆತ್ಮಗಳೇ ತೆಗೆದುಕೊಳ್ಳುತ್ತಾರೆ. ಆದ್ದರಿಂದ ತಂದೆಯು ಕೆಲಸ ಕೊಟ್ಟಿದ್ದರು – ಪರಮಾತ್ಮನ ಮಹಿಮೆ ಮತ್ತು ಮಕ್ಕಳ ಮಹಿಮೆಯನ್ನು ಬರೆದುಕೊಂಡು ಬನ್ನಿ. ಇಬ್ಬರದೂ ಬೇರೆ-ಬೇರೆಯಾಗಿದೆ, ಶ್ರೀಕೃಷ್ಣನ ಮಹಿಮೆಯೇ ಬೇರೆಯಾಗಿದೆ, ಅವರು ಸಾಕಾರ ಇವರು ನಿರಾಕಾರನಾಗಿದ್ದಾರೆ. ಇಷ್ಟೊಂದು ಗುಣವಂತರನ್ನಾಗಿ ಯಾರು ಮಾಡಿದರು? ಅವಶ್ಯವಾಗಿ ಪರಮಾತ್ಮನೇ ಮಾಡಿದರೆಂದು ಹೇಳುತ್ತಾರೆ.

ಈ ಸಮಯದಲ್ಲಿ ನೀವು ಈಶ್ವರೀಯ ಸಂಪ್ರದಾಯದವರಾಗಿದ್ದೀರಿ, ನಿಮಗೆ ತಂದೆಯು ಕಲಿಸುತ್ತಿದ್ದಾರೆ ನಂತರ ಪ್ರಾಲಬ್ಧವನ್ನೂ ಭೋಗಿಸುತ್ತೀರಿ. ಸತ್ಯಯುಗದಲ್ಲಿ ಯಾರೂ ಕಲಿಸಿ ಕೊಡುವುದಿಲ್ಲ, ಭಕ್ತಿಮಾರ್ಗದ ಸಾಮಗ್ರಿಯೇ ಸಮಾಪ್ತಿಯಾಗುತ್ತದೆ. ಈ ಪ್ರಪಂಚದೊಂದಿಗೆ ವೈರಾಗ್ಯವೂ ಇರಬೇಕು ಅರ್ಥಾತ್ ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಬಿಟ್ಟು ತನ್ನನ್ನು ಅಶರೀರಿ ಆತ್ಮನೆಂದು ತಿಳಿಯಬೇಕಾಗಿದೆ. ಅಶರೀರಿಯಾಗಿ ಬಂದಿದ್ದಿರಿ, ಅಶರೀರಿಯಾಗಿ ಹೋಗಬೇಕಾಗಿದೆ. ಈ ಹಳೆಯ ಪ್ರಪಂಚವು ಸಮಾಪ್ತಿಯಾಗುವುದಿದೆ, ನಾವೆಲ್ಲರೂ ಹೊಸ ಪ್ರಪಂಚಕ್ಕೆ ಹೋಗಲಿದ್ದೇವೆ. ಕೇವಲ ಈ ನೆನಪಿನಲ್ಲಿಯೇ ಪರಿಶ್ರಮ ಪಡುತ್ತಾ ಇರಿ ಆದರೆ ಇದರಲ್ಲಿಯೇ ಮಕ್ಕಳು ಅನುತ್ತೀರ್ಣರಾಗುತ್ತಾರೆ. ನೆನಪು ಮಾಡುವುದೇ ಇಲ್ಲ, ತಿಳಿದುಕೊಳ್ಳಲು ಯಾರೆಲ್ಲಾ ಬರುವರೋ ಅವರಿಗೂ ಸಹ ಇದನ್ನೇ ತಿಳಿಸಬೇಕಾಗಿದೆ – ಶಿವ ತಂದೆಯು ಬ್ರಹ್ಮಾರವರ ಮೂಲಕ ತಿಳಿಸುತ್ತಾರೆ – ನನ್ನನ್ನು ನೆನಪು ಮಾಡಿದರೆ ನೆನಪಿನಿಂದ ನಿಮ್ಮ ತುಕ್ಕು ಬಿಟ್ಟು ಹೋಗುವುದು, ನೀವು ವಿಷ್ಣು ಪುರಿಯ ಮಾಲೀಕರಾಗುತ್ತೀರಿ. ವಿಷ್ಣು ಪುರಿಯೇ ಸ್ವರ್ಗ ಪುರಿಯಾಗಿದೆ ಅಂದಾಗ ಎಷ್ಟು ಸಾಧ್ಯವೋ ತಂದೆಯನ್ನು ನೆನಪು ಮಾಡಿ, ಯಾವ ತಂದೆಯನ್ನು ಅರ್ಧ ಕಲ್ಪ ನೆನಪು ಮಾಡಿದಿರಿ, ಈಗ ಅವರು ಸನ್ಮುಖದಲ್ಲಿ ಬಂದಿದ್ದಾರೆ, ನನ್ನನ್ನು ನೆನಪು ಮಾಡಿ ಎಂದು ತಿಳಿಸುತ್ತಾರೆ ಆದರೆ ಯಾರೂ ತಿಳಿದುಕೊಂಡಿಲ್ಲ. ಸ್ವಯಂ ತಾವೇ ಬಂದು ತಮ್ಮ ಪರಿಚಯವನ್ನು ಕೊಡುತ್ತಾರೆ. ಯಾರಾಗಿದ್ದೇನೆ, ಹೇಗಿದ್ದೇನೆ ಹಾಗೆಯೇ ನನ್ನನ್ನು ತಿಳಿದುಕೊಳ್ಳುವವರು ಮತ್ತು ನಿಶ್ಚಯ ಮಾಡಿಕೊಳ್ಳುವವರು ಬಹಳ ವಿರಳ. ನಿಶ್ಚಯ ಮಾಡಿಕೊಂಡರೆ ಪುರುಷಾರ್ಥ ಮಾಡಿ ಆಸ್ತಿಯನ್ನು ಪಡೆದುಕೊಳ್ಳುವರು. ಶಿವ ತಂದೆಯು ತಿಳಿಸುತ್ತಾರೆ – ನನ್ನನ್ನು ನೆನಪು ಮಾಡುವುದರಿಂದಲೇ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ನೀವು ಪವಿತ್ರರಾಗಿ ಪವಿತ್ರ ಪ್ರಪಂಚದ ಮಾಲೀಕರಾಗುತ್ತೀರಿ, ಯಾವುದೇ ವಿಕರ್ಮ ಮಾಡಬಾರದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಪುರುಷಾರ್ಥ ಮಾಡಿ ಸಂಪೂರ್ಣ ಗುಣವಂತರಾಗಬೇಕಾಗಿದೆ, ಯಾವುದೇ ಕರ್ಮವಿರಲಿ ತಂದೆಯ ನೆನಪಿನಲ್ಲಿದ್ದು ಮಾಡಬೇಕಾಗಿದೆ. ಯಾವುದೇ ವಿಕರ್ಮ ಮಾಡಬಾರದು.

2. ಈ ಹಳೆಯ ಶರೀರವು ಜಡಜಡೀಭೂತವಾಗಿದೆ, ಇದರಿಂದ ಮಮತ್ವವನ್ನು ತೆಗೆಯಬೇಕಾಗಿದೆ. ಆತ್ಮವನ್ನು ಸತೋಪ್ರಧಾನ ಮಾಡಿಕೊಳ್ಳುವ ಸಂಪೂರ್ಣ ಪುರುಷಾರ್ಥ ಮಾಡಬೇಕಾಗಿದೆ.

ವರದಾನ:-

ಸದಾ ಗಮನವಿರಲಿ – ಮೊದಲು ಮಾಡಬೇಕು ನಂತರ ಹೇಳಬೇಕು. ಹೇಳುವುದು ಸಹಜವಿರುತ್ತದೆ, ಮಾಡುವುದರಲ್ಲಿ ಪರಿಶ್ರಮವಿದೆ, ಪರಿಶ್ರಮದ ಫಲವು ಒಳ್ಳೆಯದಾಗಿರುತ್ತದೆ. ಆದರೆ ಕೇವಲ ಅನ್ಯರಿಗಷ್ಟೇ ಹೇಳುತ್ತೀರಿ, ಸ್ವಯಂ ತಾವು ಮಾಡುವುದಿಲ್ಲವೆಂದರೆ ಸರ್ವೀಸಿನ ಜೊತೆ ಜೊತೆಗೆ ಡಿಸ್-ಸರ್ವೀಸ್ ಸಹ ಪ್ರತ್ಯಕ್ಷವಾಗುತ್ತದೆ. ಹೇಗೆ ಅಮೃತದಲ್ಲಿ ವಿಷದ ಒಂದು ಹನಿ ಬೀಳುವುದರಿಂದ, ಅಮೃತವೆಲ್ಲವೂ ವಿಷಮಯವಾಗುತ್ತದೆ. ಹಾಗೆಯೇ ಎಷ್ಟಾದರೂ ಸರ್ವೀಸ್ ಮಾಡಿರಿ ಆದರೆ ಒಂದು ಚಿಕ್ಕದಾದ ತಪ್ಪು ಸರ್ವೀಸನ್ನೂ ಸಮಾಪ್ತಿ ಮಾಡಿ ಬಿಡುತ್ತದೆ. ಆದ್ದರಿಂದ ತಮ್ಮ ಮೇಲೆ ಮೊದಲು ಗಮನವಿಟ್ಟುಕೊಂಡಾಗ ಹೇಳಲಾಗುತ್ತದೆ – ಸತ್ಯ ಸೇವಾಧಾರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top