25 May 2021 KANNADA Murli Today – Brahma Kumaris

May 24, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಈ ಡ್ರಾಮಾದಲ್ಲಿ ವಿನಾಶದ ಬಹಳ ಭಾರಿ ನೊಂದಾವಣೆಯಿದೆ, ನೀವು ವಿನಾಶಕ್ಕೆ ಮೊದಲೇ ಕರ್ಮಾತೀತರಾಗಬೇಕು”

ಪ್ರಶ್ನೆ:: -

ತಂದೆಯ ಯಾವ ಶಬ್ಧಗಳ ಆಕರ್ಷಣೆ ಸನ್ಮುಖದಲ್ಲಿದ್ದಾಗ ಬಹಳ ಆಗುತ್ತದೆ?

ಉತ್ತರ:-

ತಂದೆಯು ನೀವು ನನ್ನ ಮಕ್ಕಳಾಗಿದ್ದೀರಿ ಎಂದು ಹೇಳಿದಾಗ ಈ ಶಬ್ಧಗಳು ಸನ್ಮುಖದಲ್ಲಿದ್ದಾಗ ಬಹಳ ಆಕರ್ಷಿಸುತ್ತವೆ, ಸನ್ಮುಖದಲ್ಲಿ ಕೇಳಲು ಬಹಳ ಚೆನ್ನಾಗಿರುತ್ತದೆ. ಮಧುಬನವು ಎಲ್ಲಾ ಮಕ್ಕಳನ್ನು ಆಕರ್ಷಣೆ ಮಾಡುತ್ತದೆ ಏಕೆಂದರೆ ಇಲ್ಲಿ ಈಶ್ವರೀಯ ಪರಿವಾರವಿದೆ, ಬ್ರಾಹ್ಮಣರ ಸಂಘಟನೆಯಿದೆ, ಬ್ರಾಹ್ಮಣರು ಪರಸ್ಪರ ಜ್ಞಾನದ ವಿನಿಮಯವನ್ನೇ ಮಾಡುತ್ತಾರೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನಮ್ಮ ತೀರ್ಥ ಸ್ಥಾನವು ಭಿನ್ನವಾಗಿದೆ……..

ಓಂ ಶಾಂತಿ. ಮಕ್ಕಳು ತಿಳಿದುಕೊಂಡಿದ್ದೀರಿ – ನಾವು ಅವಿನಾಶಿ ಯಾತ್ರೆ ಅಥವಾ ಆತ್ಮಿಕ ಯಾತ್ರೆಯಲ್ಲಿ ಹೋಗುತ್ತಿದ್ದೇವೆ. ಯಾವ ಯಾತ್ರೆಯಿಂದ ನಾವು ಹಿಂತಿರುಗಿ ಮತ್ತೆ ಇದೇ ಮೃತ್ಯುಲೋಕದಲ್ಲಿ ಬರುವುದಿಲ್ಲ, ಮನುಷ್ಯರಂತೂ ಈ ಮಾತುಗಳನ್ನು ಅರಿತುಕೊಂಡೇ ಇಲ್ಲ – ಇಂತಹ ಯಾತ್ರೆಯೂ ಒಂದು ಇರುತ್ತದೆ ಎಲ್ಲಿಂದ ಮತ್ತೆ ಹಿಂತಿರುಗಿ ಬರಬೇಕಾಗುವುದಿಲ್ಲ. ನೀವು ಭಾಗ್ಯಶಾಲಿ ನಕ್ಷತ್ರಗಳಿಗೆ ಈಗ ಅರ್ಥವಾಗಿದೆ. ಇದನ್ನು ಪಕ್ಕಾ ನೆನಪು ಮಾಡಿಕೊಳ್ಳಬೇಕಾಗಿದೆ. ನಾವಾತ್ಮರು ಪಾತ್ರವನ್ನಭಿನಯಿಸುತ್ತೇವೆ. ನಾನಾತ್ಮನು ಈ ವಸ್ತ್ರವನ್ನು ಧರಿಸಿ ಪಾತ್ರವನ್ನಭಿನಯಿಸಿದೆನು, ಈಗ ಮನೆಗೆ ಹೋಗುತ್ತೇವೆಂದು ಆ ನಾಟಕದಲ್ಲಿ ಹೇಳುವುದಿಲ್ಲ. ಅವರಂತೂ ತಮ್ಮನ್ನು ಶರೀರವೆಂದೇ ತಿಳಿದುಕೊಳ್ಳುತ್ತಾರೆ. ಇಲ್ಲಿ ನೀವು ಮಕ್ಕಳಿಗೆ ಜ್ಞಾನವಿದೆ – ನಾವಾತ್ಮರಾಗಿದ್ದೇವೆ, ಈ ಶರೀರರೂಪಿ ವಸ್ತ್ರವನ್ನು ಬಿಟ್ಟು ಹೋಗಿ ಇನ್ನೊಂದನ್ನು ತೆಗೆದುಕೊಳ್ಳುತ್ತೇವೆ. ಇದು 84 ಜನ್ಮಗಳ ಹಳೆಯ ವಸ್ತ್ರವಾಗಿದೆ. ಇದನ್ನು ಬಿಟ್ಟು ಹೊಸ ಪ್ರಪಂಚದಲ್ಲಿ ಹೊಸ ವಸ್ತ್ರವನ್ನು ಧರಿಸುತ್ತೇವೆ. ಈ ಲಕ್ಷ್ಮೀ-ನಾರಾಯಣರು ಹೊಸ ವಸ್ತ್ರವನ್ನು (ಶರೀರ) ಧರಿಸಿದ್ದಾರಲ್ಲವೆ. ನಿಮ್ಮ ರಾಜಧಾನಿಯವರೇ ಆಗಿದ್ದಾರೆ, ನೀವೂ ಸಹ ಹೋಗಿ ಇಂತಹ ಹೊಸ ದೈವೀ ವಸ್ತ್ರವನ್ನು ಧರಿಸುತ್ತೀರಿ, ಇಲ್ಲಂತೂ ನಾನು ನಿರ್ಗುಣನಲ್ಲಿ ಯಾವುದೇ ಗುಣವಿಲ್ಲವೆಂದು ಹೇಳುತ್ತಾರೆ. ತಂದೆಯೇ ಪುನಃ ಇಂತಹ ಗುಣವಂತರನ್ನಾಗಿ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ – ನನ್ನದೂ ಪಾತ್ರವಿದೆ, ನಾನು ಬಂದು ಪುನಃ ನಿಮ್ಮನ್ನು ನಿರ್ವಿಕಾರಿಗಳನ್ನಾಗಿ ಮಾಡುತ್ತೇನೆ. ಇಲ್ಲಿ ಇದು ಜೀವನ ಬಂಧನ ಧಾಮವಾಗಿದೆ, ರಾವಣ ರಾಜ್ಯವಾಗಿದೆ. ನಾವು ಪತಿತರಿಂದ ಪಾವನರು ಮತ್ತೆ ಪಾವನರಿಂದ ಪತಿತರು ಹೇಗಾಗುತ್ತೇವೆ ಎಂಬುದು ನಿಮ್ಮ ಬುದ್ಧಿಯಲ್ಲಿದೆ, ನಿಮಗೆ ತಿಳಿದಿದೆ – ಕಲಿಯುಗವು ಅಂಧಕಾರವಾಗಿದೆ. ಈಗ ರಾವಣ ರಾಜ್ಯದ ಅಂತ್ಯವಾಗಿದೆ, ರಾಮ ರಾಜ್ಯದ ಆದಿಯಾಗುವುದಿದೆ. ಈಗ ಸಂಗಮವಾಗಿದೆ. ಕಲ್ಪದ ಸಂಗಮಯುಗದಲ್ಲಿಯೇ ತಂದೆಯು ಬರಬೇಕಾಗುತ್ತದೆ. ಪ್ರಪಂಚದವರೂ ಸಹ ಈಗ ಇದನ್ನು ತಿಳಿದುಕೊಳ್ಳುತ್ತಿದ್ದಾರೆ – ಈಗ ವಿನಾಶದ ಸಮಯವಾಗಿದೆ ಮತ್ತು ಸ್ಥಾಪನಾರ್ಥವಾಗಿ ಭಗವಂತನು ಎಲ್ಲಿಯೋ ಗುಪ್ತ ವೇಷದಲ್ಲಿದ್ದಾರೆ ಎಂದು. ಈಗ ಗುಪ್ತ ವೇಶದಲ್ಲಿ ನೀವಾತ್ಮರೂ ಇದ್ದೀರಿ. ಆತ್ಮವೇ ಬೇರೆ, ಶರೀರವೇ ಬೇರೆಯಾಗಿದೆ. ಈ ಮನುಷ್ಯ ಶರೀರವು ಗುಪ್ತ ವೇಷವಾಗಿದೆ. ತಂದೆಯೂ ಇದರಲ್ಲಿ ಬರಬೇಕಾಗಿದೆ. ನಿಮ್ಮ ಶರೀರಕ್ಕೇ ಹೆಸರನ್ನು ಇಡಲಾಗುತ್ತದೆ, ತಂದೆಗಂತೂ ಶರೀರವಿಲ್ಲ. ನೀವೂ ಆತ್ಮರಾಗಿದ್ದೀರಿ, ಅವರೂ ಆತ್ಮರಾಗಿದ್ದಾರೆ. ಆತ್ಮಕ್ಕೆ ಆತ್ಮನ ಜೊತೆ ಮೋಹವುಂಟಾಗಿದೆ. ಅನ್ಯ ಸಂಗಗಳನ್ನು ಬಿಟ್ಟು ನಿಮ್ಮ ಸಂಗವನ್ನು ಸೇರುವೆನು, ಹೇಗೆ ನೀವು ಮೋಹಜೀತರಾಗಿದ್ದೀರೋ ಹಾಗೆಯೇ ನಾವೂ ಆಗುತ್ತೇವೆ ಎಂದು ಹಾಡುತ್ತಾರೆ. ತಂದೆಯು ಬಹಳ ಮೋಹಜೀತನಾಗಿದ್ದಾರೆ. ಎಷ್ಟೊಂದು ಮಂದಿ ಮಕ್ಕಳಿದ್ದಾರೆ, ಯಾರು ಕಾಮ ಚಿತೆಯನ್ನೇರಿ ಸುಟ್ಟು ಕಪ್ಪಾಗಿದ್ದಾರೆ. ಪರಮಪಿತ ಪರಮಾತ್ಮನು ಹಳೆಯ ಪ್ರಪಂಚದ ವಿನಾಶ ಮಾಡಿಸುವುದಕ್ಕಾಗಿಯೇ ಬರುತ್ತಾರೆ ಅಂದಮೇಲೆ ಅವರಿಗೆ ಮೋಹವೆಲ್ಲಿದೆ! ಯಾವಾಗ ಪತಿತರ ವಿನಾಶವಾಗುವುದೋ ಆಗಲೇ ಶಾಂತಿಯ ರಾಜ್ಯವು ಸ್ಥಾಪನೆಯಾಗುವುದು. ಈ ಸಮಯದಲ್ಲಿ ಸುಖವಂತೂ ಯಾರಿಗೂ ಇಲ್ಲ, ಎಲ್ಲರೂ ತಮೋಪ್ರಧಾನ, ದುಃಖಿಯಾಗಿ ಬಿಟ್ಟಿದ್ದಾರೆ, ಇದು ಪತಿತ ಪ್ರಪಂಚವಾಗಿದೆ. ಶಿವ ತಂದೆಯೇ ಬಂದು ಸ್ವರ್ಗದ ಸ್ಥಾಪನೆ ಮಾಡುತ್ತಾರೆ, ಅದಕ್ಕೆ ಶಿವಾಲಯವೆಂದು ಹೆಸರಿದೆ. ಶಿವ ತಂದೆಯು ದೇವತೆಗಳ ರಾಜಧಾನಿಯನ್ನು ಸ್ಥಾಪನೆ ಮಾಡಿದರು, ಅದು ಚೈತನ್ಯ ಶಿವಾಲಯವಾಗಿದೆ ಮತ್ತು ಈ ಶಿವಾಲಯ ಯಾವುದರಲ್ಲಿ ಶಿವನ ಚಿತ್ರವಿರುವುದೋ ಅದಂತೂ ಜಡವಾಗಿದೆ. ನೀವೀಗ ತಿಳಿದುಕೊಂಡಿದ್ದೀರಿ – ಲಕ್ಷ್ಮೀ-ನಾರಾಯಣರು ಅವಶ್ಯವಾಗಿ ಸ್ವರ್ಗದ ಮಾಲೀಕರಾಗಿದ್ದರು, ಪೂಜ್ಯರಾಗಿದ್ದರು. ಈಗ ಪುನಃ ಪೂಜ್ಯರಾಗುತ್ತಿದ್ದಾರೆ. ಈಗ ನಿಮಗೆ ಜ್ಞಾನವಿದೆ, ನೀವು ಲಕ್ಷ್ಮೀ-ನಾರಾಯಣರ ಮಂದಿರದಲ್ಲಿ ಹೋಗಿ ಅವರಿಗೆ ತಲೆ ಬಾಗುವುದಿಲ್ಲ. ನೀವಂತೂ ಚೈತನ್ಯದಲ್ಲಿ ಅವರ ರಾಜಧಾನಿಯಲ್ಲಿ ಹೋಗುತ್ತೀರಿ. ನಿಮಗೆ ತಿಳಿದಿದೆ – ನಾವು ದೇವತೆಗಳಾಗಿದ್ದೆವು ಈಗ ಇಲ್ಲ. ಯಾರು ಇದ್ದು ಹೋದರೋ ಅವರ ಚಿತ್ರಗಳು ರಚಿಸಲ್ಪಡುತ್ತವೆ. ಎಲ್ಲರಿಗಿಂತ ಹೆಚ್ಚಿನದಾಗಿ ಬಿರ್ಲಾದವರು ಲಕ್ಷ್ಮೀ-ನಾರಾಯಣರ ಮಂದಿರಗಳನ್ನು ಕಟ್ಟಿಸುತ್ತಾರೆ ಆದ್ದರಿಂದ ಅವರಿಗೂ ಹೋಗಿ ತಿಳಿಸಬೇಕು – ನೀವು ಯಾವ ಲಕ್ಷ್ಮೀ-ನಾರಾಯಣರ ಮಂದಿರವನ್ನು ಕಟ್ಟಿಸುತ್ತೀರಿ, ಇವರ 84 ಜನ್ಮಗಳ ಕಥೆಯನ್ನು ನಾವು ನಿಮಗೆ ತಿಳಿಸುತ್ತೇವೆ. ಯುಕ್ತಿಯಿಂದ ಈ ಉಡುಗೊರೆ ಕೊಡಬೇಕಾಗಿದೆ. ತಂದೆಯು ಸರ್ವೀಸಿನ ಯುಕ್ತಿಗಳನ್ನು ತಿಳಿಸುತ್ತಾರೆ. ಮಾತೆಯರು ಹೋಗಿ ತಿಳಿಸಿ – ತಾವು ಅವರ ಮಂದಿರವನ್ನಂತೂ ಕಟ್ಟಿಸುತ್ತೀರಿ ಆದರೆ ಅವರ ಜೀವನದ ಕಥೆಯನ್ನು ತಿಳಿದುಕೊಂಡಿಲ್ಲ, ನಾವು ತಿಳಿದುಕೊಂಡಿದ್ದೇವೆ ಮತ್ತು ತಿಳಿಸಿಕೊಡುತ್ತೇವೆ. ಹೀಗೆ ತಿಳಿಸಿಕೊಡುವವರು ಬಹಳ ಜಾಣ್ಮೆ ಹೊಂದಿರುವವರಾಗಿರಬೇಕು. ತಂದೆಯೂ ಸಹ ಕುಳಿತು ತಿಳಿಸುತ್ತಾರಲ್ಲವೆ. ತಂದೆಯು ತಿಳಿಸುತ್ತಾರೆ – ಒಂದುವೇಳೆ ಅನುಮತಿ ಸಿಗಲಿಲ್ಲವೆಂದರೆ ಮನೆಯಲ್ಲಿ ಕುಳಿತುಕೊಂಡೇ ನೆನಪು ಮಾಡಿ. ನಾವು ಶಿವ ತಂದೆಯ ಸಂತಾನರಾಗಿದ್ದೇವೆ ಎಂಬುದನ್ನಂತೂ ತಿಳಿದುಕೊಂಡಿದ್ದೀರಿ ಅಂದಮೇಲೆ ಮುರುಳಿಯಂತೂ ಎಲ್ಲಿ ಬೇಕಾದರೂ ಸಿಗುತ್ತದೆ. ಇಲ್ಲಿ ಬಂದಾಗ ನೆನಪಿನ ಯಾತ್ರೆಯು ಚೆನ್ನಾಗಿರುತ್ತದೆ, ಮನೆಯಲ್ಲಿ ಕುಳಿತುಕೊಂಡಾಗ ನೆನಪಿನ ಯಾತ್ರೆಯು ಕಡಿಮೆಯಾಗಿ ಬಿಡುತ್ತದೆ ಎಂದಲ್ಲ. ಮೋಡಗಳು ರಿಫ್ರೆಷ್ ಆಗಲು ಬರುತ್ತವೆ, ನೀವೂ ಸಹ ತಂದೆಯ ಸನ್ಮುಖದಲ್ಲಿ ಹೋಗೋಣವೆಂದು ರಿಫ್ರೆಷ್ ಆಗಲು ಬರುತ್ತೀರಿ. ಆತ್ಮಕ್ಕೆ ಜ್ಞಾನವಿದೆ, ಸನ್ಮುಖದಲ್ಲಿ ಕೇಳುವುದು ಬಹಳ ಚೆನ್ನಾಗಿರುತ್ತದೆ. ಅದೇ ಮಾತುಗಳೇ ಆಗಿವೆ ಆದರೆ ನೋಡುತ್ತೀರಿ, ಶಿವ ತಂದೆಯು ಹೇಗೆ ಕುಳಿತು ಮಕ್ಕಳಿಗೆ ತಿಳಿಸುತ್ತಾರೆ – “ಮಕ್ಕಳೇ, ನೀವು ನನ್ನವರಾಗಿದ್ದೀರಿ”, ನೀವು 84 ಜನ್ಮಗಳ ಪಾತ್ರವನ್ನಭಿನಯಿಸಿದ್ದೀರಿ, ನೀವು ಜನನ-ಮರಣದಲ್ಲಿ ಬರುತ್ತೀರಿ, ನಾನು ಬರುವುದಿಲ್ಲ, ಪುನರ್ಜನ್ಮವನ್ನು ತೆಗೆದುಕೊಳ್ಳುವುದಿಲ್ಲ. ಅಜನ್ಮನೂ ಅಲ್ಲ, ಬರುತ್ತೇನೆ ಆದರೆ ವೃದ್ಧನ ತನುವಿನಲ್ಲಿ ಪ್ರವೇಶ ಮಾಡುತ್ತೇನೆ. ನೀವಾತ್ಮರು ಚಿಕ್ಕ ಮಗುವಿನ ಶರೀರದಲ್ಲಿ ಪ್ರವೇಶ ಮಾಡುತ್ತೀರಿ, ನಾನು ಪರಮಧಾಮದಿಂದ ಕೆಳಗೆ ಪಾತ್ರವನ್ನು ಅಭಿನಯಿಸಲು ಬರುತ್ತೇನೆ ಆದರೆ ನಾನು ವಿಕಾರಿಯ ಗರ್ಭದಲ್ಲಿ ಬರುವುದಿಲ್ಲ. ತ್ವಮೇವ ಮಾತಾಶ್ಚ ಪಿತಾ…. ಎಂದು ಹೇಳುತ್ತೀರಿ. ನನಗೆ ಯಾವುದೇ ತಂದೆ, ತಾಯಿಯಿಲ್ಲ. ನಾನು ಕೇವಲ ಶರೀರದ ಆಧಾರವನ್ನು ತೆಗೆದುಕೊಂಡು ಪಾತ್ರವನ್ನಭಿನಯಿಸುತ್ತೇನೆ. ದುಃಖವನ್ನು ದೂರ ಮಾಡಿ ಸುಖ ಕೊಡುವುದಕ್ಕಾಗಿ ನೀವು ನನ್ನನ್ನು ಕರೆಯುತ್ತೀರಿ. ಈಗ ನಾನು ಸನ್ಮುಖದಲ್ಲಿ ಬಂದಿದ್ದೇನೆ. ಆತ್ಮಗಳೊಂದಿಗೆ ಮಾತನಾಡುತ್ತಿದ್ದೇನೆ, ಇಲ್ಲಂತೂ ಎಲ್ಲರೂ ಬ್ರಾಹ್ಮಣರೇ ಇದ್ದೀರಿ, ನೀವು ಹೊರಗಡೆ ಹೋಗುತ್ತೀರೆಂದರೆ ಹಂಸ ಮತ್ತು ಕೊಕ್ಕರೆಗಳಾಗಿ ಬಿಡುತ್ತೀರಿ. ಇಲ್ಲಿ (ಮಧುಬನ) ನಿಮಗೆ ಬ್ರಾಹ್ಮಣರ ಸಂಗವೇ ಇದೆ, ಪರಸ್ಪರ ಜ್ಞಾನದ ಚರ್ಚೆಯನ್ನೇ ಮಾಡುತ್ತೀರಿ. ನಾವು ನಮ್ಮ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆ. ತಂದೆಯು ಬಂದಿದ್ದಾರೆ ಹೀಗೆ ಒಬ್ಬರು ಇನ್ನೊಬ್ಬರಿಗೆ ತಂದೆಯನ್ನು ನೆನಪು ಮಾಡುವ ಈ ಯುಕ್ತಿಯನ್ನು ತಿಳಿಸುತ್ತಾ ಇರಿ. ಭೋಜನದ ಸಮಯದಲ್ಲಿಯೂ ಒಬ್ಬರು ಇನ್ನೊಬ್ಬರಿಗೆ ತಂದೆಯನ್ನು ನೆನಪು ಮಾಡಿ ಎಂದು ಸೂಚನೆ ನೀಡುತ್ತಾ ಇರಿ. ಬಹಳ ದೊಡ್ಡ ಸಂಘಟನೆಯಲ್ಲವೆ. ಅಲ್ಲಂತೂ ವಿಕಾರಿಗಳು ಜೊತೆಯಲ್ಲಿರುತ್ತಾರೆ ಆದ್ದರಿಂದ ಅವರ ಆಕರ್ಷಣೆಯಾಗುತ್ತದೆ. ಇಲ್ಲಂತೂ ಯಾರದೇ ಆಕರ್ಷಣೆಯಾಗುವುದಿಲ್ಲ. ಯೋಧರು ಯೋಧರ ಜೊತೆ ಇರುತ್ತಾರೆ. ನಿಮ್ಮದು ಇದು ಕುಟುಂಬವಾಗಿದೆ. ಬುದ್ಧಿಯಲ್ಲಿ ಇದೇ ಇರುತ್ತದೆ, ಯಾರು ಸಿಕ್ಕಿದರೂ ಸಹ ಅವರಿಗೆ ಭಗವಂತನನ್ನು ನೆನಪು ಮಾಡುತ್ತಾ ಇರಿ ಎಂದು ತಂದೆಯ ಪರಿಚಯ ಕೊಡಿ. ಇಬ್ಬರು ತಂದೆಯರಿದ್ದಾರಲ್ಲವೆ, ಲೌಕಿಕ ತಂದೆಯಿದ್ದರೂ ಸಹ ಭಗವಂತನನ್ನು ನೆನಪು ಮಾಡುತ್ತೀರಲ್ಲವೆ. ಅವರು ಲೌಕಿಕ ತಂದೆಯಾಗಿದ್ದಾರೆ. ಲೌಕಿಕ ತಂದೆಗೆ ಪರಮಪಿತನೆಂದು ಹೇಳುವುದಿಲ್ಲ. ಇವರು ಪಾರಲೌಕಿಕ ತಂದೆಯಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಪರಮಪಿತನಿಂದಲೇ ಆಸ್ತಿಯು ಸಿಗುವುದು. ಹೀಗೆ ಜ್ಞಾನದ ಭೂ ಭೂ ಮಾಡುತ್ತಾ ಇರಿ. ನೀವು ಬ್ರಾಹ್ಮಣರಲ್ಲವೆ, ಸನ್ಯಾಸಿಗಳೂ ಸಹ ಭೂ ಭೂ ಮಾಡುತ್ತಾರಲ್ಲವೆ. ಈ ಪ್ರಪಂಚದ ಸುಖವು ಕಾಗವಿಷ್ಟ ಸಮಾನವಾಗಿದೆ, ಎಷ್ಟೊಂದು ದುಃಖವಿದೆ. ಅವರಂತೂ ಹಠಯೋಗಿ, ನಿವೃತ್ತಿ ಮಾರ್ಗದವರಾಗಿದ್ದಾರೆ, ಅವರ ಧರ್ಮವೇ ಬೇರೆಯಾಗಿದೆ. ಸತ್ಯಯುಗದಲ್ಲಿ ನಾವು ಎಷ್ಟು ಸುಖಿ, ಪವಿತ್ರರಾಗಿರುತ್ತೇವೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಭಾರತವು ಪ್ರವೃತ್ತಿ ಮಾರ್ಗದ್ದಾಗಿತ್ತು, ದೇವಿ-ದೇವತೆಗಳ ರಾಜ್ಯವಿತ್ತು, ಯಾರು ಪವಿತ್ರರಾಗಿದ್ದರೋ ಅವರೇ ಪತಿತರಾಗಿದ್ದಾರೆ. ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಿರುತ್ತಾರೆ ಮತ್ತೆ ಪರಮಾತ್ಮನು ಸರ್ವವ್ಯಾಪಿ ಎಂದು ಹೇಳಿ ಬಿಡುತ್ತಾರೆ. ನಾವು ಹೋಗಿ ಜ್ಯೋತಿಯಲ್ಲಿ ಜ್ಯೋತಿ ಸಮಾವೇಶವಾಗುತ್ತೇವೆ ಎಂದು ಹೇಳುತ್ತಾರೆ, ಪುನರ್ಜನ್ಮವನ್ನೂ ಒಪ್ಪುವುದಿಲ್ಲ. ಅನೇಕ ಮತಗಳಿವೆಯಲ್ಲವೆ, ದಿನ-ಪ್ರತಿದಿನ ವೃದ್ದಿಯಾಗುತ್ತಾ ಇರುತ್ತದೆ. ಇದನ್ನೂ ಸಹ ತಿಳಿಸಬೇಕಾಗಿದೆ – ಸನ್ಯಾಸಿಗಳ ವೃದ್ಧಿಯು ಹೇಗೆ ಆಗುತ್ತದೆ? ದಿಗಂಬರರ ವೃದ್ಧಿಯೂ ಆಗುತ್ತದೆ, ಯಾರದು ಯಾವ ಧರ್ಮವಾಗಿದೆಯೋ ಅದರಲ್ಲಿಯೇ ಇರುವುದರಿಂದ ಮತ್ತೆ ಅಂತಿಮ ಗತಿ ಸೋ ಗತಿಯಾಗಿ ಬಿಡುತ್ತದೆ. ಯಾರು ಯಾವುದನ್ನು ಹೆಚ್ಚು ಅಭ್ಯಾಸ ಮಾಡುವರು, ಹೇಗೆ ಕೆಲವರು ಶಾಸ್ತ್ರಗಳನ್ನು ಓದುತ್ತಾರೆಂದರೆ ಅಂತ್ಯಮತಿ ಸೋ ಗತಿ ಮತ್ತು ಬಾಲ್ಯದಲ್ಲಿಯೂ ಶಾಸ್ತ್ರಗಳು ಕಂಠಪಾಠವಾಗಿ ಬಿಡುತ್ತದೆ. ಈಗ ತಂದೆಯು ತಿಳಿಸುತ್ತಾರೆ – ನಾನು ಇಂತಹವನಾಗಿದ್ದೇನೆ, ನಾನು ಇದಾಗಿದ್ದೇನೆ…. ಇವೆಲ್ಲಾ ದೇಹಾಭಿಮಾನದ ಮಾತುಗಳನ್ನೂ ಬಿಟ್ಟು ಬಿಡಿ, ತನ್ನನ್ನು ಅಶರೀರಿ ಆತ್ಮನೆಂದು ತಿಳಿಯಿರಿ ಮತ್ತು ತಂದೆಯನ್ನು ನೆನಪು ಮಾಡಿ. ಈ ಶರೀರವನ್ನು ನೋಡಿಯೂ ನೋಡಂತೆ ಇರಿ. ದೇಹ ಸಹಿತವಾಗಿ ದೇಹದ ಯಾವ ಸಂಬಂಧ ಇತ್ಯಾದಿಗಳಿವೆಯೋ ಎಲ್ಲವನ್ನೂ ಬಿಡಿ, ತಮ್ಮನ್ನು ಆತ್ಮನಿಶ್ಚಯ ಮಾಡಿಕೊಳ್ಳಿ, ಪರಮಾತ್ಮನನ್ನು ನೆನಪು ಮಾಡಿ. ಇದರಲ್ಲಿ ಬಹಳ ಸಮಯ ಹಿಡಿಸುತ್ತದೆ. ಮಾಯೆಯು ನೆನಪು ಮಾಡಲು ಬಿಡುವುದಿಲ್ಲ, ಇಲ್ಲದಿದ್ದರೆ ವಾನಪ್ರಸ್ಥಿಗಳಿಗಾಗಿ ಬಹಳ ಸಹಜವಾಗಿದೆ. ಸ್ವಯಂ ತಂದೆಯೇ ಹೇಳುತ್ತಾರೆ – ಈಗ ನೀವು ಹಿರಿಯರು, ಕಿರಿಯರು ಎಲ್ಲರದೂ ವಾನಪ್ರಸ್ಥ ಸ್ಥಿತಿಯಾಗಿದೆ. ಒಂದು ಕಡೆ ವಿನಾಶವೂ ಆಗುತ್ತಿರುವುದು, ಇನ್ನೊಂದು ಕಡೆ ಜನ್ಮವನ್ನೂ ಪಡೆಯುತ್ತಿರುತ್ತಾರೆ. ಪುನರ್ಜನ್ಮವನ್ನು ತೆಗೆದುಕೊಳ್ಳುವುದಿದ್ದರೆ ಬಂದು ಬಿಡುತ್ತಾರೆ, ಮಕ್ಕಳು ಜನ್ಮ ಪಡೆಯುತ್ತಾರೆ ಮತ್ತೆ ವಿನಾಶವಾಗಿ ಬಿಡುತ್ತದೆ. ಇದನ್ನಂತೂ ನೀವು ತಿಳಿದುಕೊಂಡಿರುತ್ತೀರಿ – ಕೆಲವರು ಗರ್ಭದಲ್ಲಿರುತ್ತಾರೆ, ಕೆಲವರು ಕೆಲವೊಂದು ಕಡೆ ಇರುತ್ತಾರೆ ಆದರೆ ಎಲ್ಲರೂ ಸಮಾಪ್ತಿಯಾಗಿ ಬಿಡುತ್ತಾರೆ. ಎಲ್ಲರೂ ತಮ್ಮ ಲೆಕ್ಕಾಚಾರವನ್ನು ಮುಗಿಸಿ ಹಿಂತಿರುಗಿ ಹೋಗುತ್ತಾರೆ. ಲೆಕ್ಕಾಚಾರವು ಉಳಿದುಕೊಂಡಿದ್ದರೆ ಬಹಳ ಶಿಕ್ಷೆಗಳನ್ನು ಅನುಭವಿಸಬೇಕಾಗುವುದು. ಮತ್ತೆ ಅವರೂ ಹಗುರವಾಗಿ ಬಿಡುವರು. ಯೋಗದಲ್ಲಿಯೂ ಇದ್ದು ಪಾಪಗಳನ್ನೂ ಮಾಡುತ್ತಿರುವುದಲ್ಲ. ಕೆಲವು ಮಕ್ಕಳು ಒಂದು ಕಡೆ ಚಾರ್ಟನ್ನೂ ಬರೆಯುತ್ತಾರೆ ಮತ್ತೆ ಇನ್ನೊಂದು ಕಡೆ ಬಾಬಾ, ಮಾಯೆಯು ಮುಖ ಕಪ್ಪು ಮಾಡಿ ಬಿಟ್ಟಿತು ಎಂದು ಹೇಳುತ್ತಾರೆ. ಮಾಯೆಯು ಸೋಲಿಸಿತೆಂದರೆ ಅಂತಹವರಿಗೆ ಕಚ್ಚಾ ಎಂದೇ ಹೇಳಲಾಗುತ್ತದೆಯಲ್ಲವೆ. ಆದ್ದರಿಂದ ತಂದೆಯು ತಿಳಿಸುತ್ತಾರೆ – ಮಕ್ಕಳೇ, ನೀವು ಈ ರೀತಿ ತಿಳಿದುಕೊಳ್ಳಿ – ನಾವು ಇನ್ನು ಸ್ವಲ್ಪ ದಿನಗಳು ಮಾತ್ರವೇ ಇಲ್ಲಿ ಇರುತ್ತೇವೆ ನಂತರ ಹೊರಟು ಹೋಗುತ್ತೇವೆ. ಇವರೆಲ್ಲರ ವಿನಾಶವಾಗುತ್ತದೆ, ತಂದೆಯು ತಿಳಿಸುತ್ತಾರೆ – ನನ್ನನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ, ನಾವು ಎಷ್ಟು ಆತ್ಮರಿಗೆ ಮಾರ್ಗವನ್ನು ತಿಳಿಸುತ್ತೇವೆ ಮತ್ತು ಪುರುಷಾರ್ಥ ಮಾಡುತ್ತೇವೆ ಎಂದು ತಮ್ಮ ಚಾರ್ಟನ್ನು ನೋಡಿಕೊಳ್ಳುತ್ತಾ ಇರಿ. ತನು, ಮನ, ಧನದಿಂದ ಆತ್ಮಿಕ ಸೇವೆಯಲ್ಲಿ ಸಹಯೋಗಿಗಳಾಗಬೇಕಾಗಿದೆ. ಮನಸ್ಸನ್ನು ನಿಲ್ಲಿಸಲು ಸಾಧ್ಯವಿಲ್ಲವೆಂದು ಹೇಳುತ್ತಾರೆ. ಆತ್ಮವಂತೂ ಶಾಂತ ಸ್ವರೂಪನಾಗಿದೆ. ನಾನಾತ್ಮನು ಹೋಗಿ ಪರಮಧಾಮದಲ್ಲಿ ಕುಳಿತುಕೊಳ್ಳುವೆನು, ಯಾವುದೇ ಪ್ರಪಂಚದ ಸಂಕಲ್ಪವೂ ಬರುವುದಿಲ್ಲ, ಕಣ್ಣು ಮುಚ್ಚಿಕೊಂಡು ಮೂರ್ಛಿತರಾಗಬೇಕೆಂದಲ್ಲ. ಈ ರೀತಿಯೂ ಅನೇಕರು ಕಲಿಯುತ್ತಾರೆ, 10-15 ದಿನಗಳವರೆಗೆ ಮೂರ್ಛಿತರಾಗಿ ಬಿಡುತ್ತಾರೆ. ಈ ಅಭ್ಯಾಸ ಮಾಡುತ್ತಾರೆ, ನಂತರ ಕೆಲವೊಂದು ದಿನಗಳ ನಂತರ ಜಾಗೃತರಾಗುತ್ತಾರೆ. ಹೇಗೆ ಟೈಂ ಬಾಂಬುಗಳು ಇರುತ್ತವೆಯಲ್ಲವೆ. ಅದಕ್ಕೂ ಸಹ ಇವು ಇಷ್ಟು ಗಂಟೆಗಳಾದ ನಂತರ ಸ್ಫೋಟವಾಗುವುದೆಂದು ಸಮಯವಿರುತ್ತದೆ.

ನೀವು ಮಕ್ಕಳಿಗೆ ತಿಳಿದಿದೆ – ನಾವು ಯೋಗವನ್ನು ಜೋಡಿಸುತ್ತಿದ್ದೇವೆ, ಯಾವಾಗ ತಮೋಪ್ರಧಾನ ಕೊಳಕು ಹೊರಟು ಹೋಗುವುದೋ ಆಗ ನಾವು ಸತೋಪ್ರಧಾನರಾಗಿ ಬಿಡುತ್ತೇವೆ ಮತ್ತು ಈ ಶರೀರವನ್ನೇ ಬಿಟ್ಟು ಬಿಡುತ್ತೇವೆ. ನಾವೀಗ ಯೋಗದ ಯಾತ್ರೆಯಲ್ಲಿದ್ದೇವೆ, ಸಮಯ ಸಿಕ್ಕಿದೆ ನಂತರ ಈ ಶರೀರವನ್ನು ಬಿಡಲೇಬೇಕಾಗಿದೆ ಮತ್ತೆಲ್ಲವೂ ಸಮಾಪ್ತಿಯಾಗಿ ಬಿಡುವುದು. ಡ್ರಾಮಾದಲ್ಲಿ ಸಮಯವು ನಿಶ್ಚಿತವಾಗಿದೆ ಮತ್ತೆ ಅಂತ್ಯದಲ್ಲಿ ಸೊಳ್ಳೆಗಳೋಪಾದಿಯಲ್ಲಿ ಶರೀರಗಳನ್ನು ಬಿಡುತ್ತಾರೆ. ವಿನಾಶವಾಗುವುದು, ನೀವು ಕರ್ಮಾತೀತ ಸ್ಥಿತಿಯನ್ನು ಪಡೆಯುವಿರಿ, ನಂತರ ವಿನಾಶವು ಆರಂಭವಾಗಿ ಬಿಡುವುದು. ವಿನಾಶದ ಬಹಳ ಭಯಂಕರ ದೃಶ್ಯವಿದೆ, ಇದು ಡ್ರಾಮಾದಲ್ಲಿ ಬಹಳ ಭಾರಿ ನೊಂದಾವಣೆಯಿದೆ. ನೀವು ತಿಳಿದುಕೊಂಡಿದ್ದೀರಿ, ಆ ಸಮಯದಲ್ಲಿ ನಮ್ಮ ಸ್ಥಿತಿಯು ಏಕರಸವಾಗಿರುವುದು. ಖುಷಿಯಲ್ಲಿ ಸದಾ ಹರ್ಷಿತರಾಗಿರುತ್ತೀರಿ. ಈ ಪ್ರಪಂಚವಂತೂ ಸಮಾಪ್ತಿಯಾಗಲೇಬೇಕಾಗಿದೆ. ನಿಮಗೆ ತಿಳಿದಿದೆ – ಕಲ್ಪ-ಕಲ್ಪವೂ ಸಂಗಮಯುಗವಾದಾಗ ವಿನಾಶವಾಗುತ್ತದೆ. ಕೇವಲ ಬಾಂಬುಗಳನ್ನು ಪ್ರಾಕೃತಿಕ ವಿಕೋಪಗಳೂ ಸಹ ವಿನಾಶಕ್ಕೆ ಸಹಾಯ ಮಾಡುತ್ತದೆ ಅಂದಾಗ ಮಕ್ಕಳಿಗೆ ಇದು ಬುದ್ಧಿಯಲ್ಲಿರಲಿ – ನಾವೀಗ ಹೋಗಬೇಕಾಗಿದೆ. ತಂದೆಯನ್ನು ಎಷ್ಟು ನೆನಪು ಮಾಡುತ್ತೀರೋ ಅಷ್ಟು ವಿಕರ್ಮಗಳು ವಿನಾಶವಾಗುತ್ತವೆ. ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಮೊದಲು ಸ್ವಯಂ ಪ್ರಯತ್ನ ಪಡಬೇಕು. ತಂದೆಯ ಮನೆ ಮತ್ತು ಮಾವನ ಮನೆಯ ಉದ್ಧಾರ ಮಾಡುವವರೇ ಕನ್ಯೆಯಾಗಿದ್ದಾರೆ. ಅಂದಮೇಲೆ ದಾನವು ಮನೆಯಿಂದಲೇ ಆರಂಭವಾಗುವುದಲ್ಲವೆ. ಸರ್ವೀಸಿನಲ್ಲಿ ತೊಡಗಿರಬೇಕು. ತಿಳಿಸಿರಿ, ಶಿವತಂದೆಯು ಹೇಳುತ್ತಾರೆ – ನನ್ನನ್ನು ನೆನಪು ಮಾಡಿದರೆ ಆಸ್ತಿಯು ಸಿಗುವುದು. ಇದು ನೇರಮಾತಾಗಿದೆ. ನೀವು ತಂದೆಯನ್ನು ನೆನಪು ಮಾಡಿದ್ದೇ ಆದರೆ ಸ್ವರ್ಗದ ಆಸ್ತಿಯು ನಿಮ್ಮದಾಗುವುದು, ನೀವು ವಿಶ್ವದ ಮಾಲೀಕರಾಗಿ ಬಿಡುತ್ತೀರಿ. ಈಗ ಆಸ್ತಿಯನ್ನು ಪಡೆಯಬೇಕೆಂದರೆ ನನ್ನನ್ನು ನೆನಪು ಮಾಡಿ. ಈ ಸಂದೇಶವನ್ನು ಕೊಡುವುದು ಮಕ್ಕಳ ಕರ್ತವ್ಯವಾಗಿದೆ. ಕಲ್ಪದ ಮೊದಲೂ ಕೊಟ್ಟಿದ್ದಿರಿ, ಈಗ ತಿಳಿಸಿ – ವಿನಾಶವು ಸನ್ಮುಖದಲ್ಲಿ ನಿಂತಿದೆ. ಕಲಿಯುಗದ ನಂತರ ಸತ್ಯಯುಗವು ಬರಲಿದೆ. ತಂದೆಯೇ ಬಂದು ಆಸ್ತಿಯನ್ನು ಕೊಡುತ್ತಾರೆ. ರಾವಣನು ನರಕವಾಸಿಗಳನ್ನಾಗಿ ಮಾಡುತ್ತಾರೆ. ತಂದೆಯು ಬಂದು ಪುನಃ ಸ್ವರ್ಗವಾಸಿಗಳನ್ನಾಗಿ ಮಾಡುತ್ತಾರೆ. ಭಾರತದ್ದೇ ಕಥೆಯಾಗಿದೆ. ಭಾರತವಾಸಿಗಳನ್ನು ಮೇಲೆತ್ತಬೇಕಾಗಿದೆ. ಮೊದಲು ಶಿವನ ಮಂದಿರದಲ್ಲಿ ಹೋಗಿ ತಿಳಿಸಬೇಕು – ಈ ತಂದೆಯು ಹೊಸ ಸೃಷ್ಟಿಯನ್ನು ರಚಿಸುವವರಾಗಿದ್ದಾರೆ. ನನ್ನನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳೂ ವಿನಾಶವಾಗುವುದೆಂದು ತಿಳಿಸುತ್ತಾರೆ. ಈ ನಿರಾಕಾರ ತಂದೆಯು ಧರೆಗೆ ಬಂದಿದ್ದಾರೆ. ಬ್ರಹ್ಮಾರವರ ಮೂಲಕ ಸ್ವರ್ಗದ ಸ್ಥಾಪನೆ ಮಾಡುತ್ತಿದ್ದಾರೆ. ಈಗ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ. 84 ಜನ್ಮಗಳು ಪೂರ್ಣವಾಯಿತು, ಈಗ ನಾವು ನಿಮಗೆ ತಿಳಿಸುತ್ತೇವೆ, ಇದನ್ನು ನಂಬಿ ಅಥವಾ ನಂಬದಿರಿ ನಿಮ್ಮಿಷ್ಟ. ಮಾತುಗಳಂತೂ ಬಹಳ ಚೆನ್ನಾಗಿವೆ, ತಂದೆಯೇ ದುಃಖಹರ್ತ, ಸುಖಕರ್ತನಾಗಿದ್ದಾರೆ. ಸ್ವಲ್ಪ ತಿಳಿಸಿದರು ಹೊರಟು ಹೋದರು, ಇದು ನಿಮ್ಮ ವ್ಯಾಪಾರವಾಗಿದೆ, ಪರಿಶ್ರಮವೇನೂ ಇಲ್ಲ. ಕೇವಲ ಬಾಯಿಂದ ತಿಳಿಸಬೇಕಾಗಿದೆ – ನನ್ನನ್ನು ನೆನಪು ಮಾಡಿ, ದೇಹೀ-ಅಭಿಮಾನಿಯಾಗಿ ಎಂದು ತಂದೆಯು ಹೇಳುತ್ತಾರೆ. ಶಿವನ ಪೂಜಾರಿಗಳ ಬಳಿ ಹೋಗಿ ಮತ್ತು ಲಕ್ಷ್ಮೀ-ನಾರಾಯಣರ ಪೂಜಾರಿಗಳ ಬಳಿಗೆ ಹೋಗಿರಿ. ಅವರಿಗೆ ದೇವತೆಗಳ ಜೀವನ ಚರಿತ್ರೆಯನ್ನು ತಿಳಿಸಿರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತನು-ಮನ-ಧನದಿಂದ ಆತ್ಮಿಕ ಸೇವೆಯಲ್ಲಿ ಸಹಯೋಗಿಗಳಾಗಬೇಕಾಗಿದೆ. ಎಲ್ಲರಿಗೆ ತಂದೆಯ ಪರಿಚಯ ನೀಡಿ ಆಸ್ತಿಗೆ ಅಧಿಕಾರಿಗಳನ್ನಾಗಿ ಮಾಡಬೇಕಾಗಿದೆ. ವಿನಾಶಕ್ಕೆ ಮೊದಲೇ ಕರ್ಮಾತೀತರಾಗಲು ತಂದೆಯ ನೆನಪಿನಲ್ಲಿರಬೇಕಾಗಿದೆ.

2. ತಂದೆಯ ಸಮಾನ ಮೋಹಜೀತರಾಗಬೇಕಾಗಿದೆ. ಆತ್ಮಕ್ಕೆ ಆತ್ಮದ ಜೊತೆ ಉಂಟಾಗಿರುವ ಮೋಹವನ್ನು ತೆಗೆದು ಒಬ್ಬ ತಂದೆಯೊಂದಿಗೆ ಪ್ರೀತಿಯನ್ನಿಡಬೇಕಾಗಿದೆ.

ವರದಾನ:-

ವರ್ತಮಾನ ಸಮಯದಲ್ಲಿ ಅತಿ ಸೂಕ್ಷ್ಮ ಮತ್ತು ಸುಂದರವಾದ ಎಳೆ – ಈ ನಾನು ಎನ್ನುವುದಾಗಿದೆ. ಈ ನಾನು ಎಂಬ ಶಬ್ಧವೇ ದೇಹ-ಅಭಿಮಾನದಿಂದ ದೂರದಲ್ಲಿ ಕರೆದುಕೊಂಡು ಹೋಗುವಂತಹ ಶಬ್ಧವೂ ಆಗಿದೆ, ಮತ್ತು ದೇಹ-ಅಭಿಮಾನದಲ್ಲಿ ತರುವಂತಹದ್ದೂ ಆಗಿದೆ. ಯಾವಾಗ ನಾನು ಎಂಬುದು ಉಲ್ಟಾ ರೂಪದಲ್ಲಿ ಬರುತ್ತದೆಯೆಂದರೆ, ತಂದೆಯ ಪ್ರಿಯರನ್ನಾಗಿ ಮಾಡುವ ಬದಲು ಯಾವುದಾದರೂ ಆತ್ಮನ, ಹೆಸರು-ಮಾನ್ಯತೆ-ಸ್ಥಾನದ ಪ್ರಿಯರನ್ನಾಗಿ ಮಾಡಿ ಬಿಡುತ್ತದೆ. ಈ ಬಂಧನದಿಂದ ಮುಕ್ತರಾಗುವುದಕ್ಕಾಗಿ ನಿರಂತರ ನಿರಾಕಾರಿ ಸ್ಥಿತಿಯಲ್ಲಿ ಸ್ಥಿತರಾಗಿರುತ್ತಾ ಸಾಕಾರದಲ್ಲಿ ಬನ್ನಿರಿ – ಈ ಅಭ್ಯಾಸವನ್ನು ಸ್ವಾಭಾವಿಕ ಸ್ವಭಾವವನ್ನಾಗಿ ಮಾಡಿಕೊಳ್ಳುತ್ತೀರೆಂದರೆ ನಿರಹಂಕಾರಿ ಆಗಿ ಬಿಡುತ್ತೀರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top