26 September 2021 KANNADA Murli Today | Brahma Kumaris

Read and Listen today’s Gyan Murli in Kannada

September 25, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ಸರ್ವ ಶ್ರೇಷ್ಠ ನಕ್ಷತ್ರ –‘ಸಫಲತೆಯ ನಕ್ಷತ್ರ’

♫ ಕೇಳು ಇಂದಿನ ಮುರ್ಲಿ (audio)➤

ಇಂದು ಜ್ಞಾನ ಸೂರ್ಯ, ಜ್ಞಾನ ಚಂದ್ರಮ ತಮ್ಮ ಅಲೌಕಿಕ ತಾರಾಮಂಡಲವನ್ನು ನೋಡುತ್ತಿದ್ದಾರೆ. ಇದು ಅಲೌಕಿಕ ವಿಚಿತ್ರ ತಾರಾಮಂಡಲವಾಗಿದೆ ಯಾವುದರ ವಿಶೇಷತೆಯನ್ನು ಕೇವಲ ತಂದೆ ಮತ್ತು ಮಕ್ಕಳೇ ತಿಳಿದುಕೊಂಡಿದ್ದೀರಿ. ಪ್ರತಿಯೊಂದು ನಕ್ಷತ್ರವು ತನ್ನ ಹೊಳಪಿನಿಂದ ಇಡೀ ವಿಶ್ವಕ್ಕೆ ಬೆಳಕನ್ನು ನೀಡುತ್ತಿದ್ದಾರೆ. ಬಾಪ್ದಾದಾ ಪ್ರತಿಯೊಂದು ನಕ್ಷತ್ರದ ವಿಶೇಷತೆಯನ್ನು ನೋಡುತ್ತಿದ್ದೇವೆ. ಕೆಲವರು ಶ್ರೇಷ್ಠ ಭಾಗ್ಯಶಾಲಿ ನಕ್ಷತ್ರಗಳಾಗಿದ್ದಾರೆ, ಕೆಲವರು ತಂದೆಯ ಸಮೀಪದ ನಕ್ಷತ್ರಗಳಾಗಿದ್ದಾರೆ. ಇನ್ನೂ ಕೆಲವರು ದೂರದ ನಕ್ಷತ್ರಗಳಾಗಿದ್ದಾರೆ. ಎಲ್ಲರೂ ನಕ್ಷತ್ರಗಳೇ ಆದರೆ ವಿಶೇಷತೆಯು ಭಿನ್ನ-ಭಿನ್ನವಾಗಿರುವ ಕಾರಣ ಸೇವೆಯಲ್ಲಿ ಹಾಗೂ ಸ್ವಪ್ರಾಪ್ತಿಯಲ್ಲಿ ಬೇರೆ-ಬೇರೆ ಫಲದ ಪ್ರಾಪ್ತಿಯ ಅನುಭೂತಿ ಮಾಡುವವರಾಗಿದ್ದಾರೆ. ಕೆಲವರು ಸದಾ ಸಹಜ ನಕ್ಷತ್ರಗಳಾಗಿದ್ದಾರೆ ಆದ್ದರಿಂದ ಸಹಜ ಪ್ರಾಪ್ತಿಯ ಫಲವನ್ನು ಅನುಭವ ಮಾಡುತ್ತಾರೆ. ಇನ್ನೂ ಕೆಲವರು ಪರಿಶ್ರಮ ಪಡುವ ನಕ್ಷತ್ರಗಳಾಗಿದ್ದಾರೆ. ಪರಿಶ್ರಮವು ಕಡಿಮೆಯಿರಲಿ, ಹೆಚ್ಚಾಗಿರಲಿ ಆದರೆ ಅನೇಕರು ಪರಿಶ್ರಮದ ಅನುಭವದ ನಂತರ ಫಲದ ಪ್ರಾಪ್ತಿಯ ಅನುಭೂತಿ ಮಾಡುತ್ತಾರೆ. ಕೆಲವರು ಸದಾ ಕರ್ಮದ ಮೊದಲೇ ಸಫಲತೆಯು ಜನ್ಮ ಸಿದ್ಧ ಅಧಿಕಾರವಾಗಿದೆಯೆಂದು ಅಧಿಕಾರದ ಅನುಭವ ಮಾಡುತ್ತಾರೆ. ಆದ್ದರಿಂದ ‘ನಿಶ್ಚಯ’ ಮತ್ತು ‘ನಶೆ’ಯಿಂದ ಕರ್ಮ ಮಾಡುವ ಕಾರಣ ಕರ್ಮದ ಸಫಲತೆಯನ್ನು ಸಹಜವಾಗಿ ಅನುಭವ ಮಾಡುತ್ತಾರೆ. ಇಂತಹವರಿಗೇ ಸಫಲತೆಯ ನಕ್ಷತ್ರಗಳೆಂದು ಹೇಳಲಾಗುತ್ತದೆ.

ಎಲ್ಲರಿಗಿಂತ ಶ್ರೇಷ್ಠರು ಸಫಲತೆಯ ನಕ್ಷತ್ರಗಳಾಗಿದ್ದಾರೆ, ಏಕೆಂದರೆ ಅವರು ಸದಾ ಜ್ಞಾನ ಸೂರ್ಯ, ಜ್ಞಾನ ಚಂದ್ರಮನಿಗೆ ಸಮೀಪ ಇದ್ದಾರೆ. ಆದ್ದರಿಂದ ಶಕ್ತಿಶಾಲಿಗಳೂ ಆಗಿದ್ದಾರೆ ಮತ್ತು ಸಫಲತೆಗೆ ಅಧಿಕಾರಿಗಳೂ ಆಗಿದ್ದಾರೆ. ಕೆಲವರು ಶಕ್ತಿಶಾಲಿಗಳಾಗಿದ್ದಾರೆ ಆದರೆ ಸದಾ ಶಕ್ತಿಶಾಲಿಗಳಲ್ಲ ಆದ್ದರಿಂದ ಸದಾ ಹೊಳಪು ಒಂದೇ ರೀತಿ ಇರುವುದಿಲ್ಲ, ವಿಭಿನ್ನ ನಕ್ಷತ್ರಗಳ ಹೊಳಪು ಅತಿ ಪ್ರಿಯವೆನಿಸುತ್ತದೆ. ಸೇವೆಯನ್ನಂತೂ ಎಲ್ಲಾ ನಕ್ಷತ್ರಗಳು ಮಾಡುತ್ತಾರೆ, ಸಮೀಪ ನಕ್ಷತ್ರಗಳು ಅನ್ಯರನ್ನೂ ಸೂರ್ಯ, ಚಂದ್ರಮನ ಸಮೀಪ ತರಲು ಸೇವಾಧಾರಿಗಳಾಗುತ್ತಾರೆ ಅಂದಾಗ ಪ್ರತಿಯೊಬ್ಬರೂ ತಮ್ಮೊಂದಿಗೆ ಕೇಳಿಕೊಳ್ಳಿ – ನಾನು ಯಾವ ನಕ್ಷತ್ರವಾಗಿದ್ದೇನೆ? ಲವಲೀ ನಕ್ಷತ್ರಗಳಾಗಿದ್ದೀರಾ, ಲಕ್ಕಿ ಆಗಿದ್ದೀರೋ, ಸದಾ ಶಕ್ತಿಶಾಲಿಗಳಾಗಿದ್ದೀರಾ, ಪರಿಶ್ರಮ ಪಡುವವರಾಗಿದ್ದೀರಾ ಅಥವಾ ಸದಾ ಸಫಲತೆಯ ನಕ್ಷತ್ರಗಳಾಗಿದ್ದೀರಾ? ಯಾವ ನಕ್ಷತ್ರವಾಗಿದ್ದೀರಿ? ಜ್ಞಾನ ಸೂರ್ಯ ತಂದೆಯು ಎಲ್ಲಾ ನಕ್ಷತ್ರಗಳಿಗೆ ಬೇಹದ್ದಿನ ಬೆಳಕು ಮತ್ತು ಶಕ್ತಿಯನ್ನು ಕೊಡುತ್ತವೆ. ಆದರೆ ಸಮೀಪ ಮತ್ತು ದೂರವಿರುವ ಕಾರಣ ಅಂತರವಾಗಿ ಬಿಡುತ್ತದೆ. ಎಷ್ಟು ಸಮೀಪ ಸಂಬಂಧವೋ ಅಷ್ಟು ಬೆಳಕು ಮತ್ತು ಶಕ್ತಿಯು ವಿಶೇಷವಾಗಿರುತ್ತದೆ ಏಕೆಂದರೆ ಸಮೀಪ ನಕ್ಷತ್ರಗಳ ಲಕ್ಷ್ಯವೇ ಆಗಿದೆ – ಸಮಾನರಾಗುವುದು.

ಆದ್ದರಿಂದ ಬಾಪ್ದಾದಾ ಎಲ್ಲಾ ನಕ್ಷತ್ರಗಳಿಗೆ ಸದಾ ಇದೇ ಸೂಚನೆ ನೀಡುತ್ತೇವೆ – ಲಕ್ಕಿ ಮತ್ತು ಲವಲೀ ಇದಂತೂ ಎಲ್ಲರೂ ಆಗಿದ್ದೀರಿ, ಈಗ ಇನ್ನು ಮುಂದೆ ತಮ್ಮಲ್ಲಿ ಇದೇ ನೋಡಿಕೊಳ್ಳಿ – ಸದಾ ಸಮೀಪ ಇರುವಂತಹ, ಸಹಜವಾಗಿ ಸಫಲತೆಯನ್ನು ಅನುಭವ ಮಾಡುವಂತಹ ಸಫಲತೆಯ ನಕ್ಷತ್ರಗಳು ಎಲ್ಲಿಯವರೆಗೆ ಆಗಿದ್ದೇವೆ? ಕೆಳಗೆ ಬೀಳುವ ನಕ್ಷತ್ರಗಳು ಅಥವಾ ಧೂಮಕೇತುವಂತೂ ಆಗಿಲ್ಲ ತಾನೆ? ಯಾರು ಪದೇ-ಪದೇ ಸ್ವಯಂನೊಂದಿಗೆ ಹಾಗೂ ತಂದೆಯೊಂದಿಗೆ ಇಲ್ಲವೆ ನಿಮಿತ್ತರಾಗಿರುವ ಆತ್ಮಗಳೊಂದಿಗೆ – ಇದು ಏಕೆ, ಇದು ಏನು, ಇದು ಹೇಗೆ ಎಂದು ಕೇಳುತ್ತಲೇ ಇರುವರೋ ಅವರೇ ಧೂಮಕೇತುವಾಗಿದ್ದಾರೆ. ಪದೇ-ಪದೇ ಕೇಳುವವರೇ ಬಾಲ ನಕ್ಷತ್ರವಾಗಿದ್ದಾರೆ. ತಾವಂತೂ ಇಂತಹವರಲ್ಲ ತಾನೆ? ಸಫಲತೆಯ ನಕ್ಷತ್ರಗಳು ಯಾರ ಪ್ರತೀ ಕರ್ಮದಲ್ಲಿ ಸಫಲತೆಯು ಸಮಾವೇಶವಾಗಿದೆಯೋ ಅಂತಹ ನಕ್ಷತ್ರಗಳು ಸದಾ ತಂದೆಯ ಸಮೀಪ ಅರ್ಥಾತ್ ಜೊತೆಯಿರುತ್ತಾರೆ. ವಿಶೇಷತೆಗಳನ್ನು ಕೇಳಿದಿರಿ, ಈಗ ಈ ವಿಶೇಷತೆಗಳನ್ನು ಸ್ವಯಂನಲ್ಲಿ ಧಾರಣೆ ಮಾಡಿಕೊಂಡು ಸದಾ ಸಫಲತೆಯ ನಕ್ಷತ್ರಗಳಾಗಿ, ಏನಾಗಬೇಕೆಂದು ತಿಳಿಯಿತೆ? ಲಕ್ಕಿ ಮತ್ತು ಲವ್ಲೀ, ಜೊತೆ ಜೊತೆಗೆ ಸಫಲತೆ – ಸದಾ ಈ ಶ್ರೇಷ್ಠತೆಯು ಅನುಭವ ಮಾಡುತ್ತಾ ಇರಿ. ಒಳ್ಳೆಯದು.

ಇಂದು ಎಲ್ಲರೊಂದಿಗೆ ಮಿಲನ ಮಾಡಬೇಕಾಗಿದೆ. ಬಾಪ್ದಾದಾ ಇಂದು ವಿಶೇಷವಾಗಿ ಮಿಲನ ಮಾಡುವುದಕ್ಕಾಗಿಯೇ ಬಂದಿದ್ದೇವೆ. ಎಲ್ಲರಿಗೆ ಇದೇ ಲಕ್ಷ್ಯವಿರುತ್ತದೆ – ಮಿಲನ ಮಾಡಬೇಕು ಎಂದು ಆದರೆ ಮಕ್ಕಳ ಅಲೆಯನ್ನು ನೋಡಿ ತಂದೆಯು ಎಲ್ಲಾ ಮಕ್ಕಳನ್ನು ಖುಷಿ ಪಡಿಸಬೇಕಾಗುತ್ತದೆ ಏಕೆಂದರೆ ತಂದೆಯ ಖುಷಿಯಲ್ಲಿಯೇ ಮಕ್ಕಳ ಖುಷಿಯಿದೆ. ಆದ್ದರಿಂದ ಇತ್ತೀಚೆಗೆ ಪ್ರತ್ಯೇಕವಾಗಿ ಮಿಲನ ಮಾಡುವ ಅಲೆಯಿದೆ. ಆದ್ದರಿಂದ ಸಾಗರನು ಅದೇ ಅಲೆಯಲ್ಲಿ ಬರಬೇಕಾಗುತ್ತದೆ. ಈ ಸೀಜನ್ನಿನ ಅಲೆಯು ಇದಾಗಿದೆ ಆದ್ದರಿಂದ ರಥಕ್ಕೂ ಸಹ ವಿಶೇಷವಾಗಿ ಸಕಾಶ ಕೊಟ್ಟು ನಡೆಸುತ್ತಿದ್ದೇವೆ. ಒಳ್ಳೆಯದು.

ನಾಲ್ಕಾರು ಕಡೆಯ ಅಲೌಕಿಕ ತಾರಾ ಮಂಡಲದ ಅಲೌಕಿಕ ನಕ್ಷತ್ರಗಳಿಗೆ, ಸದಾ ವಿಶ್ವಕ್ಕೆ ಬೆಳಕನ್ನು ನೀಡಿ ಅಂಧಕಾರವನ್ನು ಕಳೆಯುವಂತಹ ಹೊಳೆಯುತ್ತಿರುವ ನಕ್ಷತ್ರಗಳಿಗೆ, ಸದಾ ತಂದೆಯ ಸಮೀಪ ಇರುವಂತಹ ಶ್ರೇಷ್ಠ ಸಫಲತೆಯ ನಕ್ಷತ್ರಗಳಿಗೆ, ಅನೇಕ ಆತ್ಮರ ಭಾಗ್ಯದ ರೇಖೆಯನ್ನು ಪರಿವರ್ತನೆ ಮಾಡುವ ಭಾಗ್ಯಶಾಲಿ ನಕ್ಷತ್ರಗಳಿಗೆ, ಜ್ಞಾನ ಸೂರ್ಯ, ಜ್ಞಾನ ಚಂದ್ರಮ ಬಾಪ್ದಾದಾರವರ ವಿಶೇಷ ನೆನಪು, ಪ್ರೀತಿ ಹಾಗೂ ನಮಸ್ತೆ.

ವ್ಯಕ್ತಿಗತ ಭೇಟಿ ವಾರ್ತಾಲಾಪದ ಸಮಯದಲ್ಲಿ ವರದಾನದ ರೂಪದಲ್ಲಿ ನುಡಿಸಿರುವ ಅಮೂಲ್ಯ ಮಹಾವಾಕ್ಯಗಳು:

1. `ಸದಾ ಪ್ರತಿಯೊಂದು ಆತ್ಮನಿಗೂ ಸುಖ ಕೊಡುವ ಸುಖದಾತಾ ತಂದೆಯ ಮಗುವಾಗಿದ್ದೇನೆ’ – ಇಂತಹ ಅನುಭವ ಮಾಡುತ್ತೀರಾ? ಎಲ್ಲರಿಗೂ ಸುಖ ಕೊಡುವಂತಹ ವಿಶೇಷತೆಯು ಇದೆಯಲ್ಲವೆ. ಈ ವಿಶೇಷತೆಯೂ ಸಹ ಡ್ರಾಮಾನುಸಾರ ಸಿಕ್ಕಿದೆ, ಇದು ಎಲ್ಲರಿಗೂ ಸಿಗುವುದಿಲ್ಲ. ಯಾರು ಎಲ್ಲರಿಗೂ ಸುಖವನ್ನು ಕೊಡುತ್ತಾರೆಯೋ, ಅವರಿಗೆ ಸರ್ವರ ಆಶೀರ್ವಾದಗಳು ಸಿಗುತ್ತವೆ ಆದ್ದರಿಂದ ಸ್ವಯಂ ಸದಾ ಸುಖದಲ್ಲಿರುವ ಅನುಭವ ಮಾಡುತ್ತಾರೆ. ಈ ವಿಶೇಷತೆಯಿಂದ ವರ್ತಮಾನ ಹಾಗೂ ಭವಿಷ್ಯವೂ ಸದಾ ಒಳ್ಳೆಯದಾಗಿ ಬಿಡುತ್ತದೆ. ಎಲ್ಲರಿಂದ ಪ್ರೀತಿಯೇನು ಸಿಗುತ್ತದೆ ಹಾಗೂ ಆಶೀರ್ವಾದಗಳೂ ಸಿಗುತ್ತದೆ! ಇದು ಎಷ್ಟು ಒಳ್ಳೆಯ ಪಾತ್ರವಾಗಿದೆ! ಇದಕ್ಕೇ ಹೇಳಲಾಗುತ್ತದೆ – `ಒಂದು ಕೊಡುವುದು ಸಾವಿರ ಪಡೆಯುವುದು’ ಅಂದಮೇಲೆ ಸೇವೆಯಿಂದ ಸುಖವನ್ನು ಕೊಡುತ್ತೀರಿ, ಆದ್ದರಿಂದ ಸರ್ವರ ಪ್ರೀತಿ ಸಿಗುತ್ತದೆ. ಇದೇ ವಿಶೇಷತೆಯನ್ನು ಸದಾ ಕಾಯಂ ಆಗಿಟ್ಟುಕೊಳ್ಳಿರಿ.

2. `ಸದಾ ತಮ್ಮನ್ನು ಸರ್ವಶಕ್ತಿವಂತ ತಂದೆಯ ಶಕ್ತಿಶಾಲಿ ಆತ್ಮನಾಗಿದ್ದೇನೆ’ – ಇಂತಹ ಅನುಭವ ಮಾಡುತ್ತೀರಾ? ಶಕ್ತಿಶಾಲಿ ಆತ್ಮನು ಸದಾ ಸ್ವಯಂ ಸಹ ಸಂತುಷ್ಟವಾಗಿ ಇರುವನು ಹಾಗೂ ಅನ್ಯರನ್ನೂ ಸಂತುಷ್ಟವಾಗಿ ಇಡುತ್ತಾನೆ. ಈ ರೀತಿ ಶಕ್ತಿಶಾಲಿ ಆಗಿದ್ದೀರಾ? ಸಂತುಷ್ಟತೆಯೇ ಮಹಾನತೆಯೂ ಆಗಿದೆ, ಶಕ್ತಿಶಾಲಿ ಆತ್ಮನೆಂದರೆ ಸಂತುಷ್ಟತೆಯ ಖಜಾನೆಯಿಂದ ಸಂಪನ್ನವಾದ ಆತ್ಮ. ಇದೇ ಸ್ಮೃತಿಯಿಂದ ಸದಾ ಮುಂದುವರೆಯುತ್ತಾ ಸಾಗಿರಿ. ಈ ಖಜಾನೆಯೇ ಸರ್ವರನ್ನು ಸಂಪನ್ನ ಮಾಡುವಂತಹ ಖಜಾನೆಯಾಗಿದೆ.

3. `ತಂದೆಯವರು ಇಡೀ ವಿಶ್ವದಲ್ಲಿಂದ ನಮ್ಮನ್ನು ಆಯ್ಕೆ ಮಾಡುತ್ತಾ ತನ್ನವರನ್ನಾಗಿ ಮಾಡಿಕೊಂಡರು – ಇದೇ ಖುಷಿಯು ಇರುತ್ತದೆಯಲ್ಲವೆ! ತಂದೆಯವರು ಇಷ್ಟೆಲ್ಲಾ ಆತ್ಮರುಗಳಲ್ಲಿ ನಾನೊಬ್ಬ ಆತ್ಮನನ್ನು ಆಯ್ಕೆ ಮಾಡಿದರು – ಈ ಸ್ಮೃತಿಯು ಎಷ್ಟೊಂದು ಖುಷಿ ಕೊಡುತ್ತದೆ! ಅಂದಮೇಲೆ ಸದಾ ಇದೇ ಖುಷಿಯಿಂದ ಮುಂದುವರೆಯುತ್ತಾ ಸಾಗಿರಿ. ತಂದೆಯವರು ನನ್ನನ್ನು ತನ್ನ ಮಗುವನ್ನಾಗಿ ಮಾಡಿಕೊಂಡರು ಏಕೆಂದರೆ ನಾನೇ ಕಲ್ಪದ ಮೊದಲಿನ ಭಾಗ್ಯಶಾಲಿ ಆತ್ಮನಾಗಿದ್ದೆನು, ಈಗಲೂ ಆಗಿದ್ದೇನೆ ಮತ್ತು ನಂತರದಲ್ಲಿಯೂ ಆಗುವೆನು – ಇಂತಹ ಭಾಗ್ಯಶಾಲಿ ಆತ್ಮನಾಗಿದ್ದೇನೆ, ಇದೇ ಸ್ಮೃತಿಯಿಂದ ಸದಾ ಮುಂದುವರೆಯುತ್ತಾ ಸಾಗಿರಿ.

4. `ಸದಾ ನಿಶ್ಚಿಂತವಾಗಿದ್ದು ಸೇವೆಯನ್ನು ಮಾಡುವ ಬಲವು ಮುಂದುವರೆಸುತ್ತಾ ಇರುತ್ತದೆ’. ಇವರು ಮಾಡಿದರು ಅಥವಾ ನಾವು ಮಾಡಿದೆವು – ಈ ಸಂಕಲ್ಪದಿಂದ ನಿಶ್ಚಿಂತವಾಗಿ ಇರುವುದರಿಂದ ನಿಶ್ಚಿಂತ ಸೇವೆಯಾಗುವುದು ಹಾಗೂ ಅದರ ಬಲವು ಸದಾ ಮುಂದುವರೆಸುತ್ತದೆ. ಹಾಗಾದರೆ ನಿಶ್ಚಿಂತ ಸೇವಾಧಾರಿ ಆಗಿದ್ದೀರಲ್ಲವೆ! ಎಣಿಕೆ ಮಾಡುವಂತಹ ಸೇವೆಯಲ್ಲ, ಇದಕ್ಕೆ ನಿಶ್ಚಿಂತ ಸೇವೆ. ಅಂದಮೇಲೆ ಯಾರು ನಿಶ್ಚಿಂತವಾಗಿರುತ್ತಾ ಸೇವೆಯನ್ನು ಮಾಡುವರು, ಆ ನಿಶ್ಚಿಂತತೆಯೇ ಅವರನ್ನು ಮುಂದುವರೆಸುವುದರಲ್ಲಿ ಸಹಜ ಅನುಭೂತಿ ಆಗುವುದು. ಇದೇ ವಿಶೇಷತೆಯು ವರದಾನದ ರೂಪದಲ್ಲಿ ಮುಂದುವರೆಸುತ್ತಾ ಇರುತ್ತದೆ.

5. ಸೇವೆಯೂ ಸಹ ಅನೇಕ ಆತ್ಮರನ್ನು ತಂದೆಯ ಸ್ನೇಹಿಯನ್ನಾಗಿ ಮಾಡುವ ಸಾಧನವಾಗಿದೆ. ನೋಡುವುದರಲ್ಲಿ ಭಲೆ ಕರ್ಮಣಾ ಸೇವೆ ಆಗಿದೆ ಆದರೆ ಕರ್ಮಣಾ ಸೇವೆಯು ಮುಖದ ಸೇವೆ(ಭಾಷಣ)ಗಿಂತಲೂ ಹೆಚ್ಚು ಫಲವನ್ನು ಕೊಡುತ್ತಿದೆ. ಕರ್ಮಣಾದ ಮೂಲಕ ಯಾರ ಮನಸ್ಸನ್ನಾದರೂ ಪರಿವರ್ತನೆ ಮಾಡುವ ಸೇವೆಯಾಗಿದೆ, ಅಂದಮೇಲೆ ಆ ಸೇವೆಯ ಫಲವು `ವಿಶೇಷ ಖುಷಿ’ಯ ಪ್ರಾಪ್ತಿಯಾಗುವುದು. ಕರ್ಮಣಾ ಸೇವೆಯು ಭಲೆ ನೋಡುವುದರಲ್ಲಿ ಸ್ಥೂಲವಾಗಿ ಕಾಣಿಸುತ್ತದೆ. ಆದರೆ ಸೂಕ್ಷ್ಮ ವೃತ್ತಿಗಳನ್ನು ಪರಿವರ್ತನೆ ಮಾಡುವಂತದ್ದಾಗಿದೆ. ಇಂತಹ ಸೇವೆಗೆ ನಾವು ನಿಮಿತ್ತರಾಗಿದ್ದೇವೆ – ಇದೇ ಖುಷಿಯಿಂದ ವೃದ್ಧಿ ಮಾಡುತ್ತಾ ಸಾಗಿರಿ. ಭಾಷಣ ಮಾಡುವವರು ಭಾಷಣವನ್ನು ಮಾಡುತ್ತಾರೆ, ಆದರೆ ಕರ್ಮಣಾ ಸೇವೆಯೂ ಸಹ ಭಾಷಣ ಮಾಡುವವರ ಸೇವೆಗಿಂತಲೂ ಶ್ರೇಷ್ಠವಾಗಿದೆ. ಏಕೆಂದರೆ ಈ ಸೇವೆಯ ಪ್ರತ್ಯಕ್ಷ ಫಲದ ಅನುಭವವಾಗುವುದು.

6. `ಸದಾ ಪುಣ್ಯದ ಖಾತೆಯನ್ನು ಜಮಾ ಮಾಡಿಕೊಳ್ಳುವ ಶ್ರೇಷ್ಠಾತ್ಮನಾಗಿದ್ದೇನೆ’ ಇಂತಹ ಅನುಭವವಾಗುತ್ತದೆಯೇ? ಸೇವೆ ಎನ್ನುವುದು ಹೆಸರಿಗೆ ಸೇವೆ ಆದರೆ ಪುಣ್ಯದ ಖಾತೆಯನ್ನು ಜಮಾ ಮಾಡಿಕೊಳ್ಳುವ ಸಾಧನವಾಗಿದೆ. ಪುಣ್ಯದ ಖಾತೆಯು ಸದಾ ಸಂಪನ್ನವಾಗಿದೆ ಮತ್ತು ಮುಂದೆಯೂ ಸಂಪನ್ನವಾಗಿ ಇರುತ್ತದೆ. ತಾವೆಷ್ಟು ಸೇವೆಯನ್ನು ಮಾಡುತ್ತೀರಿ, ಅಷ್ಟು ಪುಣ್ಯದ ಖಾತೆಯು ವೃದ್ಧಿಯಾಗುವುದು. ಪುಣ್ಯದ ಖಾತೆಯು ಅವಿನಾಶಿ ಆಗಿ ಬಿಡುವುದು. ಈ ಪುಣ್ಯವು ಅನೇಕ ಜನ್ಮಗಳವರೆಗೂ ಸಂಪನ್ನಗೊಳಿಸುವುದಾಗಿದೆ. ಅಂದಮೇಲೆ ಪುಣ್ಯಾತ್ಮನಾಗಿದ್ದೀರಿ ಮತ್ತು ಸದಾಕಾಲವೂ ಪುಣ್ಯಾತ್ಮನಾಗಿದ್ದು, ಅನ್ಯರಿಗೂ ಪುಣ್ಯದ ಮಾರ್ಗವನ್ನು ತಿಳಿಸುವವರು. ಈ ಪುಣ್ಯದ ಖಾತೆಯು ಅನೇಕ ಜನ್ಮಗಳವರೆಗೆ ಜೊತೆಯಿರುತ್ತದೆ, ಅನೇಕ ಜನ್ಮಗಳಲ್ಲಿ ಸಂಪನ್ನವಾಗಿ ಇರುತ್ತೀರಿ – ಇದೇ ಖುಷಿಯಲ್ಲಿ ಸದಾ ಮುಂದುವರೆಯುತ್ತಾ ಸಾಗಿರಿ.

7. `ಸದಾ ಒಬ್ಬ ತಂದೆಯ ನೆನಪಿನಲ್ಲಿ ಇರುವವರು, ಏಕರಸ ಸ್ಥಿತಿಯ ಅನುಭವ ಮಾಡುವಂತಹ ಶ್ರೇಷ್ಠಾತ್ಮನಾಗಿದ್ದೇನೆ’ – ಇಂತಹ ಅನುಭವ ಮಾಡುತ್ತೀರಾ? ಎಲ್ಲಿ ಒಬ್ಬ ತಂದೆಯ ನೆನಪಿದೆಯೋ ಅಲ್ಲಿ ಸ್ವತಹವಾಗಿ ಮತ್ತು ಸಹಜವಾಗಿಯೇ ಏಕರಸ ಸ್ಥಿತಿಯ ಅನುಭವವಾಗುತ್ತದೆ. ಏಕರಸ ಸ್ಥಿತಿಯು ಶ್ರೇಷ್ಠ ಸ್ಥಿತಿಯಾಗಿದೆ, ಇಂತಹ ಅನುಭವ ಮಾಡುವಂತಹ ಶ್ರೇಷ್ಠಾತ್ಮನು ಆಗಿದ್ದೇನೆಂಬ ಸ್ಮೃತಿಯು ಸದಾಕಾಲವೂ ಮುಂದುವರೆಸುತ್ತಾ ಇರುತ್ತದೆ. ಇದೇ ಸ್ಥಿತಿಯ ಮೂಲಕ ಅನೇಕ ಶಕ್ತಿಗಳ ಅನುಭೂತಿಯೂ ಆಗುತ್ತಿರುತ್ತದೆ.

8. ಬಾಪ್ದಾದಾರವರ ವಿಶೇಷ ಶೃಂಗಾರ ಆಗಿದ್ದೀರಲ್ಲವೆ! ಅತಿ ಶ್ರೇಷ್ಠವಾದ ಶೃಂಗಾರವೆಂದರೆ ಮಸ್ತಕ ಮಣಿ ಆಗಿರುವುದು. ಮಣಿಯು ಸದಾ ಮಸ್ತಕದಲ್ಲಿ ಹೊಳೆಯುತ್ತಿರುತ್ತದೆ. ಹಾಗಾದರೆ ಇಂತಹ ಮಸ್ತಕ ಮಣಿಯಾಗಿದ್ದು, ಸದಾ ತಂದೆಯ ಕಿರೀಟದಲ್ಲಿ ಹೊಳೆಯುತ್ತಿರುವವರು ಎಷ್ಟೊಂದು ಪ್ರಿಯವೆನಿಸುತ್ತಾರೆ! ಮಣಿಯು ಸದಾ ತನ್ನ ಹೊಳಪಿನ ಮೂಲಕ ತಂದೆಗೂ ಶೃಂಗಾರವಾಗುತ್ತಾರೆ ಮತ್ತು ಅನ್ಯರಿಗೂ ಪ್ರಕಾಶತೆಯನ್ನು ಕೊಡುತ್ತಾರೆ. ಇಂತಹ ಮಸ್ತಕ ಮಣಿಯಾಗಿ ಇರುತ್ತಾ, ಅನ್ಯರನ್ನೂ ಇದೇ ರೀತಿ ಮಾಡುವವರು ಆಗಿದ್ದೇವೆ ಎಂಬ ಲಕ್ಷ್ಯವು ಸದಾಕಾಲ ಇರುತ್ತದೆಯೇ? ಸದಾ ಶುಭ ಭಾವನೆಯು ಸರ್ವ ಭಾವನೆಗಳನ್ನು ಪರಿವರ್ತನೆ ಮಾಡುವಂತದ್ದಾಗಿದೆ.

9. ಸದಾ ತಂದೆಯನ್ನು ಫಾಲೋ ಮಾಡುವುದರಲ್ಲಿ- ಕ್ಷಣದಲ್ಲಿ ದಾನ ಮಾಡಿ ಮಹಾಪುಣ್ಯ ಮಾಡಿಕೊಳ್ಳುವ ವಿಧಿಯಿಂದ ಮುಂದುವರೆಯುತ್ತಾ ಇದ್ದೀರಲ್ಲವೆ! ಇದೇ ವಿಧಿಯನ್ನು ಸದಾ ಪ್ರತಿಯೊಂದು ಕಾರ್ಯದಲ್ಲಿ ಉಪಯೋಗಿಸುವುದರಿಂದ, ಸದಾ ಹಾಗೂ ಸ್ವತಹವಾಗಿಯೇ ತಂದೆಯ ಸಮಾನ ಸ್ಥಿತಿಯ ಅನುಭವವಾಗುವುದು. ಅಂದಮೇಲೆ ಪ್ರತಿಯೊಂದು ಕಾರ್ಯದಲ್ಲಿ ಫಾಲೋ ಫಾದರ್ ಮಾಡುವುದರಲ್ಲಿ ಆದಿಯಿಂದ ಅನುಭವ ಆಗಿದ್ದೀರಿ. ಆದ್ದರಿಂದ ಈಗಲೂ ಇದೇ ವಿಧಿಯಿಂದ ಸಮಾನರಾಗುವುದು ಅತಿ ಸಹಜವಿದೆ. ಏಕೆಂದರೆ ಸಮಾವೇಶವಾಗಿರುವ ವಿಶೇಷತೆಯನ್ನು ಕಾರ್ಯದಲ್ಲಿ ಉಪಯೋಗಿಸಿರಿ. ತಂದೆಯ ಸಮಾನರಾಗುವ ವಿಶೇಷ ಅಲೌಕಿಕ ಅನುಭೂತಿಗಳನ್ನು ಮಾಡುತ್ತಾ ಇರುತ್ತೀರಿ ಮತ್ತು ಅನ್ಯರಿಗೂ ಮಾಡಿಸುತ್ತಾ ಇರುವಿರಿ – ಈ ವಿಶೇಷತೆಯ ವರದಾನವು ಸ್ವತಹವಾಗಿ ಸಿಕ್ಕಿರುತ್ತದೆ ಅಂದಾಗ ಈ ವರದಾನವನ್ನು ಸದಾ ಕಾರ್ಯದಲ್ಲಿ ಉಪಯೋಗಿಸುತ್ತಾ ಮುಂದುವರೆಯುತ್ತಾ ಸಾಗಿರಿ.

10. ಕಾರ್ಯದಲ್ಲಿ ಸದಾ ಪರಿವರ್ತನಾ ಶಕ್ತಿಯನ್ನು ಯಥಾರ್ಥ ರೀತಿಯಿಂದ ಉಪಯೋಗಿಸುವಂತಹ ಶ್ರೇಷ್ಠಾತ್ಮರು ಆಗಿದ್ದೀರಲ್ಲವೆ! ಈ ಪರಿವರ್ತನಾ ಶಕ್ತಿಯಿಂದಲೇ ಸರ್ವರ ಆಶೀರ್ವಾದಗಳನ್ನು ಪಡೆಯಲು ಪಾತ್ರರಾಗಿ ಬಿಡುತ್ತೀರಿ. ಹೇಗೆ ಯಾವಾಗ ಕಗ್ಗತ್ತಲೆ ಆಗುತ್ತದೆಯೋ, ಆ ಸಮಯದಲ್ಲಿ ಎಲ್ಲಿಂದಲಾದರೂ ಬೆಳಕು ಕಾಣಿಸುತ್ತದೆಯೆಂದರೆ, ಅಂಧಕಾರ ಇರುವವರ ಹೃದಯದಿಂದ ಆಶೀರ್ವಾದಗಳು ಬರುತ್ತವೆ ಅಲ್ಲವೆ. ಯಾರು ಈ ರೀತಿಯಾಗಿ ಯಥಾರ್ಥವಾದ ಪರಿವರ್ತನಾ ಶಕ್ತಿಯನ್ನು ಕಾರ್ಯದಲ್ಲಿ ಉಪಯೋಗಿಸುವರು, ಅವರಿಗೆ ಅನೇಕ ಆತ್ಮರಿಂದ ಆಶೀರ್ವಾದಗಳ ಪ್ರಾಪ್ತಿಯಾಗುವುದು ಹಾಗೂ ಎಲ್ಲರ ಆಶೀರ್ವಾದಗಳು ಆ ಆತ್ಮನನ್ನು ಸಹಜವಾಗಿಯೇ ಮುಂದುವರೆಸುತ್ತದೆ. ಇದೇ ರೀತಿಯಲ್ಲಿ, ಆಶೀರ್ವಾದಗಳನ್ನು ಪಡೆಯುವ ಕಾರ್ಯವನ್ನು ಮಾಡುವಂತಹ ಆತ್ಮನಾಗಿದ್ದೇನೆ – ಇದನ್ನು ಸದಾ ಸ್ಮೃತಿಯಲ್ಲಿ ಇಟ್ಟುಕೊಳ್ಳುತ್ತೀರೆಂದರೆ, ಯಾವುದೇ ಕಾರ್ಯವನ್ನು ಮಾಡುತ್ತೀರೆಂದರೆ ಆಶೀರ್ವಾದಗಳನ್ನು ಪಡೆಯುವ ಕಾರ್ಯವನ್ನು ಮಾಡುವಿರಿ. ಆಶೀರ್ವಾದಗಳಂತು ಶ್ರೇಷ್ಠ ಕಾರ್ಯವನ್ನು ಮಾಡುವುದರಿಂದಲೇ ಸಿಗುತ್ತದೆ. ಅಂದಾಗ ಸದಾ ಈ ಸ್ಮೃತಿಯಿರಲಿ – `ಬಹಳಷ್ಟು ಆಶೀರ್ವಾದಗಳನ್ನು ತೆಗೆದುಕೊಳ್ಳುವ ಆತ್ಮನಾಗಿದ್ದೇನೆ’ ಇದೇ ಸ್ಮೃತಿಯು ಶ್ರೇಷ್ಠರಾಗುವ ಸಾಧನವಾಗಿದೆ, ಈ ಸ್ಮೃತಿಯಿಂದಲೇ ಅನೇಕರ ಕಲ್ಯಾಣಕ್ಕೆ ನಿಮಿತ್ತರಾಗಿ ಬಿಡುವಿರಿ. ಸದಾ ನೆನಪಿಟ್ಟುಕೊಳ್ಳಿರಿ – ಪರಿವರ್ತನಾ ಶಕ್ತಿಯ ಮೂಲಕ ಸರ್ವರ ಆಶೀರ್ವಾದಗಳನ್ನು ತೆಗೆದುಕೊಳ್ಳುವ ಆತ್ಮನಾಗಿದ್ದೇನೆ. ಒಳ್ಳೆಯದು!

“ಗ್ಲೋಬಲ್ ಕೊ-ಆಪರೇಷನ್” ಪ್ರಾಜೆಕ್ಟ್ನ ಮೀಟಿಂಗ್ನ ಸಮಾಚಾರವನ್ನು ಬಾಪ್ದಾದಾರವರಿಗೆ ತಿಳಿಸಿದರು.

ಇಷ್ಟೆಲ್ಲರೂ ಸೇರಿ ಯೋಜನೆಯನ್ನು ಮಾಡುತ್ತೀರಿ ಅಥವಾ ಪ್ರತ್ಯಕ್ಷದಲ್ಲಿ ತರುತ್ತೀರಿ ಮತ್ತು ತರುತ್ತಾ ಇರುತ್ತೀರಿ, ಇದರಿಂದ ಬಾಪ್ದಾದಾರವರು ಖುಷಿಯಾಗುತ್ತಾರೆ. ಬಾಪ್ದಾದಾರವರಿಗೆ ಮತ್ತೇನು ಬೇಕು! ಆದ್ದರಿಂದ ಬಾಪ್ದಾದಾರವರಿಗೆ ಪ್ರಿಯವಾಗಿದೆ. ಇದರಲ್ಲಿ ಯಾವುದೇ ಕಷ್ಟವಿದೆಯೆಂದರೆ ಬಾಪ್ದಾದಾರವರು ಸಹಜ ಗೊಳಿಸುತ್ತಾರೆ. ಬುದ್ಧಿಯನ್ನು ಉಪಯೋಗಿಸುವುದೂ ಸಹ ಒಂದು ವರದಾನವಾಗಿದೆ, ಇದರಲ್ಲಿ ಕೇವಲ ಸಮತೋಲನವನ್ನು ಇಟ್ಟುಕೊಳ್ಳುತ್ತಾ ನಡೆಯಿರಿ. ಯಾವಾಗ ಸಮತೋಲನವು ಇರುತ್ತದೆಯೋ ಆಗ ಬುದ್ಧಿಯು ಬಹಳ ಬೇಗನೆ ನಿರ್ಣಯ ಮಾಡುವುದು ಮತ್ತು 4 ಗಂಟೆಗಳಲ್ಲಿ ಯಾವ ವಿಚಾರ ವಿಮರ್ಷೆಯನ್ನು ಮಾಡುತ್ತೀರಿ, ಅದರಲ್ಲಿ ಒಂದು ಗಂಟೆಯೂ ಹಿಡಿಸುವುದಿಲ್ಲ. ಎಲ್ಲರಿಂದ ಒಂದೇ ರೀತಿ ವಿಚಾರವು ಬರುತ್ತದೆ ಆದರೆ ಇದೂ ಸಹ ಒಳ್ಳೆಯದು, ಇದು ಆಟವಾಗಿದೆ, ಅದರಲ್ಲಿ ಸ್ವಲ್ಪ ತಯಾರು ಮಾಡಿ, ಇನ್ನೂ ಸ್ವಲ್ಪ ಕ್ಯಾನ್ಸಲ್ ಮಾಡುತ್ತೀರಿ…. ಇದರಲ್ಲಿಯೂ ಮಜಾ ಬರುತ್ತದೆ. ಭಲೆ ಯೋಜನೆಗಳನ್ನು ಮಾಡಿರಿ ನಂತರದಲ್ಲಿ ರಿಫೈನ್ ಮಾಡಿರಿ, ಆದರೆ ಇದರಲ್ಲಿ ಬ್ಯುಸಿಯಂತು ಇರುತ್ತೀರಿ. ಇದರಲ್ಲಿ ಕೇವಲ ಹೊರೆಯೆನಿಸಬಾರದು, ಆಟವಾಡಿರಿ. ಸಮಯವು ಕಡಿಮೆ ಇದೆ, ಇದರಲ್ಲಿ ಎಷ್ಟು ಸಾಧ್ಯವೋ ಅಷ್ಟೂ ಮಾಡಿರಿ. ಒಂದುವೇಳೆ ಈ ವರ್ಷದಲ್ಲಿ ಆಗುತ್ತದೆಯೆಂದರೆ ಆಗುವುದು, ಮತ್ತೆ ಇನ್ನೊಂದು ವರ್ಷದಲ್ಲಿ ಇನ್ನೂ ಒಳ್ಳೆಯ ಕಾರ್ಯಕ್ರಮವು ತಯಾರಾಗುವುದು. ಈ ಸೇವೆಯೂ ಸಹ ನಡೆಯುತ್ತಾ ಇರುತ್ತದೆ. ಹೇಗೆಂದರೆ ಭಂಡಾರವು ಸ್ಥಗಿತಗೊಳ್ಳುವುದಿಲ್ಲ, ಅದೇರೀತಿ ಇದೂ ಸಹ ಭಂಡಾರವೇ ಆಗಿದೆ ಅವಿನಾಶಿಯಾಗಿ ನಡೆಯುತ್ತಿರುತ್ತದೆ. ಒಂದುವೇಳೆ ಯಾವುದೇ ಕಾರ್ಯದಲ್ಲಿ ತಡವಾಗುತ್ತದೆಯೆಂದರೆ, ಇನ್ನೂ ಒಳ್ಳೆಯದಾಗುವುದಿದೆ ಎಂದರೆ ತಡವಾಗುತ್ತದೆ. ಪರಿಶ್ರಮವನ್ನಂತು ಪಡುತ್ತಿದ್ದೀರಿ, ಸುಸ್ತಾಗಿಲ್ಲ. ಆದ್ದರಿಂದ ಬಾಪ್ದಾದಾರವರು ದೂರನ್ನು ಕೊಡುವುದಿಲ್ಲ. ಒಳ್ಳೆಯದು!

ವರದಾನ:-

ಬಾಪ್ದಾದಾರವರು ವತನದಿಂದ ನೋಡುತ್ತಾರೆ – ಹಲವು ಮಕ್ಕಳ ಸ್ಥಿತಿಯು ಬಹಳ ಬದಲಾಗುತ್ತದೆ, ಕೆಲವೊಮ್ಮೆ ಆಶ್ಚರ್ಯ ಪಡುವ ಮೂಡ್, ಕೆಲವೊಮ್ಮೆ ಪ್ರಶ್ನಾರ್ಥಕ ಚಿಹ್ನೆಯ ಮೂಡ್, ಕೆಲವೊಮ್ಮೆ ತಬ್ಬಿಬ್ಬಾಗುವ ಮೂಡ್, ಕೆಲವೊಮ್ಮೆ ಒತ್ತಡ, ಕೆಲವೊಮ್ಮೆ ಗಮನದ ಉಯ್ಯಾಲೆಯಲ್ಲಿ…. ಆದರೆ ಸಂಗಮಯುಗವು ಪ್ರಾಲಬ್ಧದ ಯುಗವಾಗಿದೆಯೇ ಹೊರತು ಪುರುಷಾರ್ಥಿಯಾಗಿ ಇರುವುದಲ್ಲ. ಆದ್ದರಿಂದ ತಂದೆಯ ಗುಣವೇನಿದೆಯೋ ಅದು ಮಕ್ಕಳದು, ತಂದೆಯ ಸ್ಥಿತಿಯೇನಾಗಿದೆಯೋ ಅದೇ ಮಕ್ಕಳಾಗಿದೆ – ಇದೇ ಸಂಗಮಯುಗದ ಪ್ರಾಲಬ್ಧವಾಗಿದೆ. ಅಂದಮೇಲೆ ಸದಾ ಏಕರಸ ಒಂದೇ ಸಂಪನ್ನ ಸ್ಥಿತಿಯಲ್ಲಿ ಇರುತ್ತೀರೆಂದರೆ ತಂದೆಯ ಸಮಾನರೆಂದು ಹೇಳಲಾಗುತ್ತದೆ ಅರ್ಥಾತ್ ಪ್ರಾಲಬ್ಧ ಸ್ವರೂಪರೆಂದು ಹೇಳಲಾಗುತ್ತದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top