27 May 2021 KANNADA Murli Today – Brahma Kumaris

May 26, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಈಗ ವಿನಾಶದ ಸಮಯ ಬಹಳ ಹತ್ತಿರ ಇರುವುದರಿಂದ ಯಾವ ದೇಹಧಾರಿಯ ಜೊತೆ ಪ್ರೀತಿಯನ್ನು ಇಡದೆ ಒಬ್ಬ ತಂದೆಯ ಜೊತೆ ಸತ್ಯವಾದ ಪ್ರೀತಿಯನ್ನು ಇಡಬೇಕು”

ಪ್ರಶ್ನೆ:: -

ತಂದೆಯ ಜೊತೆ ಸತ್ಯವಾದ ಪ್ರೀತಿಯಿರುವ ಮಕ್ಕಳ ಗುರುತುಗಳು ಯಾವುವು?

ಉತ್ತರ:-

1. ಅಂತಹ ಮಕ್ಕಳ ಬುದ್ದಿ ಯಾವುದೇ ದೇಹಧಾರಿಯ ಕಡೆ ಹೋಗಲು ಸಾಧ್ಯವಿಲ್ಲ. ಅವರು ಪರಸ್ಪರದಲ್ಲಿ ಒಬ್ಬರಿಗೊಬ್ಬರು ಪ್ರಿಯತಮ ಪ್ರಿಯತಮೆಯರು ಆಗುವುದಿಲ್ಲ. 2. ಯಾರ ಪ್ರೀತಿಯು ಸತ್ಯವಾಗಿರುತ್ತದೆಯೋ ಅವರು ಸದಾ ವಿಜಯಿಗಳಾಗಿರುತ್ತಾರೆ. ವಿಜಯಿಗಳಾಗುವುದೆಂದರೆ ಸತ್ಯಯುಗದ ಮಹಾರಾಜ ಮಹಾರಾಣಿಯಾಗುವುದು. 3. ಪ್ರೀತಿ ಬುದ್ದಿಯವರು ಸದಾ ತಂದೆಯ ಜೊತೆ ಸತ್ಯವಾಗಿರುತ್ತಾರೆ. ಅವರು ಏನನ್ನೂ ಮುಚ್ಚಿಡುವುದಿಲ್ಲ. 4. ಪ್ರತಿದಿನ ಅಮೃತವೇಳೆ ಎದ್ದು ತಂದೆಯನ್ನು ಪ್ರೀತಿಯಿಂದ ನೆನಪು ಮಡುತ್ತಾರೆ. 5. ದಧೀಚಿ ಋಷಿಯ ಹಾಗೆ ಸೇವೆಯಲ್ಲಿ ತಮ್ಮ ಮೂಳೆಗಳನ್ನು ಸವೆಸುತ್ತಾರೆ. 6. ಅವರ ಬುದ್ದಿ ಪ್ರಾಪಂಚಿಕ ಮಾತುಗಳ ಕಡೆ ಹೋಗುವುದಿಲ್ಲ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಅವರು ನಮ್ಮಿಂದ ಬೇರೆಯಾಗುವುದಿಲ್ಲ…

ಓಂ ಶಾಂತಿ. ಇದು ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣ ಕುಲ ಭೂಷಣರು ಪ್ರತಿಜ್ಞೆ ಮಾಡುತ್ತಾರೆ, ಏಕೆಂದರೆ ಅವರ ಪ್ರೀತಿ ಒಬ್ಬ ತಂದೆಯ ಜೊತೆ ಇದೆ. ಇದು ವಿನಾಶದ ಸಮಯ ಎಂದು ನೀವು ತಿಳಿದಿದ್ದೀರಿ. ವಿನಾಶವಂತೂ ಆಗಲೇಬೇಕೆಂದು ತಂದೆ ತಿಳಿಸುತ್ತಾರೆ. ವಿನಾಶ ಕಾಲದಲ್ಲಿ ತಂದೆಯ ಜೊತೆ ಪ್ರೀತಿ ಇರುವವರೆ ವಿಜಯವನ್ನು ಪಡೆಯುತ್ತಾರೆ ಅರ್ಥಾತ್ ಸತ್ಯಯುಗದ ಮಾಲೀಕರಾಗುತ್ತಾರೆ. ವಿಶ್ವದ ಮಾಲೀಕರು ರಾಜರು ಆಗುತ್ತಾರೆ ಪ್ರಜೆಗಳು ಆಗುತ್ತಾರೆ ಎಂದು ಶಿವ ತಂದೆಯು ತಿಳಿಸಿದ್ದಾರೆ ಆದರೆ ಪದವಿಯಲ್ಲಿ ಬಹಳ ಅಂತರವಿರುತ್ತದೆ. ಎಷ್ಟು ತಂದೆಯ ಜೊತೆ ಪ್ರೀತಿಯನ್ನಿಡುತ್ತಿರೋ ನೆನಪಿನಲ್ಲಿ ಇರುತ್ತಿರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ತಂದೆಯ ನೆನಪಿನಿಂದಲೇ ನಿಮ್ಮ ವಿಕರ್ಮಗಳ ಹೊರೆ ಭಸ್ಮವಾಗುವುದು ಎಂದು ತಂದೆ ತಿಳಿಸುತ್ತಾರೆ. ವಿನಾಶ ಕಾಲೇ ವಿಪರೀತ ಬುದ್ದಿ… ಎಂದು ನೀವು ಬರೆಯುವುದಕ್ಕೆ ಹೆದರಬೇಕಾಗಿಲ್ಲ. ವಿಪರೀತ ಬುದ್ದಿಯವರ ವಿನಾಶವಾಗುತ್ತದೆ ಮತ್ತು ಪ್ರೀತಿ ಬುದ್ದಿ ಇರುವವರ ವಿಜಯವಾಗುತ್ತದೆ ಎಂದು ತಂದೆಯ ಸ್ವತಹವಾಗಿ ತಿಳಿಸುತ್ತಾರೆ. ತಂದೆಯು ಅವಶ್ಯವಾಗಿ ತಿಳಿಸುತ್ತಾರೆ – ಈ ಜಗತ್ತಿನಲ್ಲಿ ಯಾರಲ್ಲಿಯೂ ಪ್ರೀತಿಯಿಲ್ಲ. ನಿಮ್ಮದೇ ಪ್ರೀತಿಯಿರುವುದು. ಪರಮಾತ್ಮ ಮತ್ತು ಶ್ರೀಕೃಷ್ಣನ ಮಹಿಮೆಯು ಭಿನ್ನವಾಗಿದೆ ಎಂದು ಬರೆದರೆ ಗೀತೆಯ ಭಗವಂತ ಯಾರು ಎಂದು ಅವಶ್ಯವಾಗಿ ಸಿದ್ದವಾಗುತ್ತದೆ. ಜ್ಞಾನ ಸಾಗರ, ಪತಿತ-ಪಾವನ, ಪರಮಪಿತ ಪರಮಾತ್ಮನಾಗಿದ್ದಾರೆಯೋ ಅಥವಾ ನೀರಿನ ನದಿಯೋ? ಜ್ಞಾನದ ಗಂಗೆಯೇ ಅಥವಾ ನೀರಿನ ಗಂಗೆಯೇ ಎಂದು ಬಾಬಾ ಬಹಳ ಸಹಜವಾಗಿ ತಿಳಿಸುತ್ತಾರೆ. ಎರಡನೆಯ ಮಾತು ನೀವು ಯಾವಾಗ ಪ್ರದರ್ಶನಿಗಳನ್ನು ಇಡುತ್ತಿರೆಂದರೆ ಮೊಟ್ಟ ಮೊದಲು ಗೀತಾ ಪಾಠಶಾಲೆಯವರನ್ನು ನಿಮಂತ್ರಣ ಕೊಟ್ಟು ಕರೆಯಬೇಕು. ಅವರಂತೂ ಬೇಕಾದಷ್ಟು ಜನ ಇದ್ದಾರೆ. ಅವರಿಗೆ ನಿಮಂತ್ರಣ ಕೊಡಬೇಕು. ಯಾರು ಶ್ರೀಮದ್ಬಗವದ್ಗೀತೆಯ ಅಭ್ಯಾಸ ಮಾಡುತ್ತಾರೆಯೋ ಅವರಿಗೆ ಮೊದಲು ನಿಮಂತ್ರಣ ಕೊಡಬೇಕು ಏಕೆಂದರೆ ಅವರು ಮರೆತು ಬಿಟ್ಟಿದ್ದಾರೆ, ಎಲ್ಲರಿಗೂ ಮರೆಸಿದ್ದಾರೆ. ಅವರನ್ನು ಕರೆದು ಹೇಳಬೇಕು – ಇಲ್ಲಿ ಬಂದು ತಿಳಿದುಕೊಳ್ಳಿ, ನಂತರ ನಿಮಗೆ ಹೇಗೆ ಬೇಕೊ ಹಾಗೆ ಮಾಡಿ. ಗೀತೆಯ ಬಗ್ಗೆ ತಿಳಿಸುತ್ತಾ, ಗೀತೆಯ ಬಗ್ಗೆಯೇ ಇವರು ಪ್ರಚಾರ ಮಾಡುತ್ತಾರೆಂದು ಮನುಷ್ಯರು ತಿಳಿಯುತ್ತಾರೆ. ಗೀತೆಯಿಂದಲೇ ಸ್ವರ್ಗದ ಸ್ಠಾಪನೆಯಾಯಿತು. ಗೀತೆಯ ಮಹಿಮೆ ಬಹಳ ಇದೆ ಆದರೆ ಭಕ್ತಿಮಾರ್ಗದ ಗೀತೆಯಲ್ಲ. ನಾನು ಸತ್ಯವಾಗಿದ್ದೇನೆ, ಸತ್ಯವನ್ನೇ ಹೇಳುತ್ತೇನೆ ಎಂದು ಬಾಬಾ ತಿಳಿಸುತ್ತಾರೆ. ಮನುಷ್ಯರು ತಪ್ಪಾಗಿ ತಿಳಿದುಕೊಂಡಿದ್ದಾರೆ. ಯಾರು ಸತ್ಯವನ್ನು ಹೇಳುವುದಿಲ್ಲ, ನಾನೇ ಸತ್ಯವನ್ನು ಹೇಳುವುದು. ಪರಮಾತ್ಮನನ್ನು ಸರ್ವವ್ಯಾಪಿ ಎನ್ನುವುದು ಅಸತ್ಯವಾಗಿದೆ, ಇವೆಲ್ಲವೂ ವಿನಾಶ ಹೊಂದುತ್ತವೆ ಮತ್ತು ಕಲ್ಪ-ಕಲ್ಪ ಹೀಗೆಯೇ ಆಗುತ್ತದೆ. ನೀವೂ ಸಹ ಮೊಟ್ಟ ಮೊದಲು ಮುಖ್ಯವಾಗಿ ಇದನ್ನೇ ತಿಳಿಸಬೇಕಾಗಿದೆ – ಯುರೋಪಿಯನ್ನರು ವಿನಾಶ ಕಾಲೆ ವಿಪರೀತ ಬುದ್ದಿಯವರು ಎಂದು ತಂದೆ ತಿಳಿಸುತ್ತಾರೆ. ವಿನಾಶಕ್ಕಾಗಿ ತಯಾರಿಗಳು ಚೆನ್ನಾಗಿ ನಡೆಯುತ್ತಿವೆ ಆದರೆ ಕಲ್ಲು ಬುದ್ದಿಯವರು ಇದನ್ನು ತಿಳಿಯಲು ಸಾಧ್ಯವಿಲ್ಲ. ನೀವೂ ಸಹ ಕಲ್ಲು ಬುದ್ದಿಯವರಾಗಿದ್ದಿರಿ, ಈಗ ವಜ್ರ ಸಮಾನರಾಗುತ್ತಿದ್ದೀರಿ. ಪಾರಸ ಬುದ್ದಿಯವರು ಪುನಃ ಕಲ್ಲು ಬುದ್ದಿಯವರು ಹೇಗೆ ಆದೆವು – ಇದು ಅದ್ಭುತವಾಗಿದೆ. ತಂದೆಯನ್ನು ಜ್ಞಾನ ಸಾಗರ, ದಯಾ ಸಾಗರ ಎಂದು ಕರೆಯುತ್ತಾರೆ. ಕೇವಲ ತಮ್ಮ ಕಲ್ಯಾಣವನ್ನೇ ಮಾಡಿಕೊಳ್ಳಲು ಬಾರದವರು ಬೇರೆಯವರ ಕಲ್ಯಾಣವನ್ನು ಹೇಗೆ ಮಾಡಲು ಸಾಧ್ಯ! ಯಾರು ಜ್ಞಾನವನ್ನು ಧಾರಣೆ ಮಾಡುವುದಿಲ್ಲವೋ ಪದವಿಯೂ ಅಂತಹದ್ದೇ ಪಡೆಯುತ್ತಾರೆ, ಯಾರು ಸೇವಾಧಾರಿಗಳಿರುತ್ತಾರೆಯೊ ಅವರು ಉನ್ನತ ಪದವಿ ಪಡೆಯುತ್ತಾರೆ. ಅವರನ್ನೆ ಬಾಬಾರವರು ಪ್ರೀತಿ ಮಾಡುತ್ತಾರೆ. ನಂಬರ್ವಾರ್ ಪುರುಷಾರ್ಥ ಅನುಸಾರವಾಗಿಯೇ ಆಗುತ್ತದೆ. ತಂದೆಯ ಜೊತೆ ನಮಗೆ ಪ್ರೀತಿ ಇಲ್ಲದಿದ್ದರೆ ಪದವಿಯು ಸಿಗುವುದಿಲ್ಲ ಎಂದು ಕೆಲವರು ಇದನ್ನು ತಿಳಿದುಕೊಂಡಿಲ್ಲ. ಅವರು ಸ್ವಂತ ಮಕ್ಕಳಾಗಿರಲಿ ಅಥವಾ ಮಲ ತಾಯಿ ಮಕ್ಕಳಾಗಿರಲಿ ವಿನಾಶಕಾಲೇ ಪ್ರೀತಿ ಬುದ್ದಿ ಇಲ್ಲದಿದ್ದರೆ ತಂದೆಯನ್ನು ಅನುಸರಿಸದಿದ್ದರೆ ಹೋಗಿ ಸಣ್ಣ ಪದವಿಯನ್ನು ಪಡೆಯುತ್ತಾರೆ. ದೈವೀ ಗುಣವು ಬೇಕಾಗಿದೆ. ಎಂದೂ ಸುಳ್ಳು ಹೇಳಬಾರದಾಗಿದೆ. ನಾನು ಸತ್ಯವನ್ನೇ ಹೇಳುತ್ತೇನೆ, ಯಾರು ನನ್ನಜೊತೆ ಪ್ರೀತಿ ಮಾಡುವುದಿಲ್ಲವೋ ಅವರಿಗೆ ಪದವಿಯೂ ಸಿಗುವುದಿಲ್ಲ. ಪ್ರಯತ್ನ ಪಟ್ಟು 21 ಜನ್ಮಗಳ ಆಸ್ತಿಯನ್ನು ಪಡೆಯಬೇಕು. ಅಂದಮೇಲೆ ಪ್ರದರ್ಶನಿ ಮೇಳಗಳಲ್ಲಿ ಮೊಟ್ಟ ಮೊದಲು ಗೀತಾ ಪಾಠಶಾಲೆಯವರಿಗೆ ನಿಮಂತ್ರಣ ಕೊಡಬೇಕು. ಏಕೆಂದರೆ ಅವರು ಭಕ್ತರಲ್ಲವೆ! ಗೀತಾಪಾಠಿಗಳು ಅವಶ್ಯವಾಗಿ ಕೃಷ್ಣನನ್ನು ನೆನಪು ಮಾಡುತ್ತಾರೆ. ಆದರೆ ಏನನ್ನು ತಿಳಿದು ಕೊಂಡಿಲ್ಲ. ಕೃಷ್ಣ ಕೊಳಲನ್ನು ಊದಿದನು ಹಾಗಾದರೆ ರಾಧೆ ಎಲ್ಲಿ ಹೋದಳು. ಸರಸ್ವತಿಗೆ ವೀಣೆಯನ್ನು ಕೊಟ್ಟರು ಕೊಳಲನ್ನು ಕೃಷ್ಣನಿಗೆ ಕೊಟ್ಟರು. ಮನುಷ್ಯರು ಹೇಳುತ್ತಾರೆ ನಮ್ಮನ್ನು ಅಲ್ಲಾ ಹುಟ್ಟಿಸಿದನು ಎಂದು ಆದರೆ ಅಲ್ಲಾ ಯಾರು ಎಂದೆ ಗೊತ್ತಿಲ್ಲ. ಇದು ಭಾರತದ ಮಾತಾಗಿದೆ. ಭಾರತದಲ್ಲೇ ದೇವತೆಗಳ ರಾಜ್ಯವಿತ್ತು, ಅವರ ಚಿತ್ರಗಳಿಗೆ ಮಂದಿರದಲ್ಲಿ ಪೂಜೆಯಾಗುತ್ತದೆ. ಇನ್ನಿಇತರೆ ರಾಜರುಗಳ ಮೂರ್ತಿಗಳನ್ನು ಹೊರಗಡೆ ಇಡುತ್ತಾರೆ, ಅವುಗಳ ಮೇಲೆ ಪಕ್ಷಿಗಳು ಕೊಳಕು ಮಾಡುತ್ತವೆ. ಲಕ್ಷ್ಮೀ- ನಾರಾಯಣ, ರಾಧೆ-ಕ್ರಿಷ್ಣ ಮೂರ್ತಿಗಳನ್ನು ಎಂತಹ ಒಳ್ಳೆಯ ಸ್ಥಳದಲ್ಲಿ ಕೂರಿಸುತ್ತಾರೆ. ಅವರಿಗೆ ಮಹಾರಾಜ ಮಹಾರಾಣಿ ಎನ್ನುತ್ತಾರೆ. ಕಿಂಗ್ ಎನ್ನುವ ಅಕ್ಷರ ಆಂಗ್ಲ ಭಾಷೆಯದಾಗಿದೆ. ಎಷ್ಟೊಂದು ಧನವನ್ನು ವ್ಯಯ ಮಾಡಿ ಮಂದಿರಗಳನ್ನು ಕಟ್ಟುತ್ತಾರೆ ಏಕೆಂದರೆ ಆ ಮಹಾರಾಜರುಗಳು ಪವಿತ್ರವಾಗಿದ್ದರು. ಯಥಾ ರಾಜ-ರಾಣಿ ತಥಾ ಪ್ರಜಾ ಎನ್ನುವಂತೆ ಎಲ್ಲರು ಪೂಜ್ಯರಾಗಿದ್ದರು. ನೀವೇ ಪೂಜ್ಯ ಮತ್ತು ಪೂಜಾರಿಗಳು ಆಗುತ್ತೀರಿ. ಮೊದಲ ಮಾತಾಗಿದೆ ತಂದೆಯನ್ನು ನೆನಪು ಮಾಡುವುದು ತಂದೆಯ ನೆನಪು ಮಾಡುವ ಅಭ್ಯಾಸದಿಂದಲೇ ಧಾರಣೆಯಾಗುವುದು. ಒಬ್ಬರ ಜೊತೆ ಪ್ರೀತಿ ಇಲ್ಲ ಎಂದರೆ ಬೇರೆ ಬೇರೆಯವರ ಜೊತೆ ಪ್ರೀತಿ ಅಂಟಿಕೊಂಡು ಬಿಡುತ್ತದೆ. ಕೆಲವರು ಇಂತಹ ಮಕ್ಕಳಿದ್ದಾರೆ ಒಬ್ಬರನ್ನು ಒಬ್ಬರು ಎಷ್ಟು ಪ್ರೀತಿಸುತ್ತಾರೆ ಶಿವಬಾಬಾರವರನ್ನು ಕೂಡ ಅಷ್ಟು ಪ್ರೀತಿಸುವುದಿಲ್ಲ. ನಿಮ್ಮ ಬುದ್ದಿಯೊಗ ನನ್ನ ಜೊತೆ ಇರಬೇಕೊ ಅಥವಾ ಒಬ್ಬರಿಗೊಬ್ಬರು ಪ್ರಿಯತಮೆ ಪ್ರಿಯತಮರಾಗಬೇಕೋ ಎಂದು ಶಿವಬಾಬಾ ಕೇಳುತ್ತಾರೆ. ನಂತರ ನನ್ನನ್ನು ಸಂಪೂರ್ಣವಾಗಿ ಮರೆತೇ ಹೊಗುತ್ತಾರೆ. ನಿಮಗಂತೂ ಬುದ್ದಿಯೋಗ ನನ್ನ ಜೊತೆ ಸೇರಿಸಬೇಕಾಗಿದೆ ಇದರಲ್ಲೇ ಪರಿಶ್ರಮವಿರುವುದು. ಬುದ್ದಿ ಮುರಿಯುವುದೇ ಇಲ್ಲ. ಶಿವಬಾಬನ ಬದಲಾಗಿ ಒಬ್ಬರನ್ನು ಒಬ್ಬರು ನೆನಪು ಮಾಡುತ್ತಲೇ ಇರುತ್ತಾರೆ ಬಾಬಾ ಹೆಸರನ್ನು ಹೇಳಿದರೆ ವಿರೋಧಿಗಳಾಗಿ ಬಿಡುತ್ತಾರೆ, ನಂತರ ನಿಂದನೆ ಮಾಡುವುದಕ್ಕೂ ತಡಮಾಡುವುದಿಲ್ಲ. ಈ ಬಾಬಾನನ್ನು ನಿಂದಿಸಿದರೆ ಆ ಕ್ಷಣವೇ ಶಿವ ಬಾಬಾರವರಿಗೆ ಕೇಳಿಸುತ್ತದೆ. ಬ್ರಹ್ಮನಿಂದ ಓದಲಿಲ್ಲ ಎಂದ ಮೇಲೆ ಶಿವ ಬಾಬಾರವರಿಂದಲೂ ಓದಲು ಸಾಧ್ಯವಿಲ್ಲ. ಬ್ರಹ್ಮನ ಹೊರತು ಶಿವ ಬಾಬಾ ಕೂಡಾ ಏನು ಹೇಳಲು ಸಾಧ್ಯವಿಲ್ಲ, ಆದ್ದರಿಂದಲೇ ಸಾಕಾರ ಬಾಬಾನನ್ನು ಕೇಳಿ ಎಂದು ಬಾಬಾ ಹೇಳುತ್ತಾರೆ. ಕೆಲವು ಒಳ್ಳೊಳ್ಳೆಯ ಮಕ್ಕಳು ಸಾಕಾರ ತಂದೆಯ ಮಾತನ್ನು ಕೇಳುವುದೇ ಇಲ್ಲ. ಇವರಂತು ಪುರುಷಾರ್ಥಿ ಎಂದು ಹೇಳುತ್ತಾರೆ. ಪುರುಷಾರ್ಥಿಗಳಂತೂ ಎಲ್ಲರೂ ಆಗಿದ್ದಾರೆ ಆದರೆ ನೀವಂತು ತಂದೆ ತಾಯಿಯನ್ನು ಅನುಸರಿಸಬೇಕಲ್ಲವೆ? ಕೆಲವರು ತಿಳಿಸಿ ಹೇಳಿದರೆ ತಿಳಿದು ಕೊಳ್ಳುತ್ತಾರೆ, ಕೆಲವರ ಅದೃಷ್ಟದಲ್ಲಿ ಇಲ್ಲವೆಂದರೆ ತಿಳಿದು ಕೊಳ್ಳುವುದೇಇಲ್ಲ. ಸೇವಾಧಾರಿಗಳು ಆಗುವುದೇ ಇಲ್ಲ. ಆದರೆ ಬುದ್ದಿ ಒಬ್ಬ ತಂದೆಯ ಜೊತೆ ಇಡಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಬಹಳ ಆತ್ಮಗಳು ತಮ್ಮಲ್ಲಿ ಶಿವಬಾಬಾ ಬರತ್ತಾರೆ ಎನ್ನುತ್ತಾರೆ ಇದರಿಂದ ಜಾಗರೂಕರಾಗಬೇಕಾಗಿದೆ. ಮಾಯೆಯ ಪ್ರವೇಶ ಆಗುತ್ತದೆ. ಹಿಂದೆ ಯಾರಲ್ಲಿ ಶ್ರೀ ನಾರಾಯಣ ಇತ್ಯಾದಿಗಳು ಬರುತ್ತಿದ್ದರೋ ಅವರುಗಳೂ ಈಗ ಇಲ್ಲ. ಕೇವಲ ಪ್ರವೇಶದಿಂದ ಏನೂ ಆಗುವುದಿಲ್ಲ. ನನ್ನನ್ನು ನೆನಪು ಮಾಡಿ ಎಂದು ತಂದೆ ತಿಳಿಸುತ್ತಾರೆ. ಉಳಿದಂತೆ ನನ್ನಲ್ಲಿ ಇವರು ಬರುತ್ತಾರೆ ಅವರು ಬರುತ್ತಾರೆ ಎನ್ನುವುದೆಲ್ಲಾ ಬರೀ ಮಾಯೆಯಾಗಿದೆ. ನನ್ನ ನೆನಪೇ ಇಲ್ಲವೆಂದರೆ ಪ್ರಾಪ್ತಿ ಹೇಗೆ ಆಗುತ್ತದೆ, ಎಲ್ಲಿಯವರೆಗೂ ತಂದೆಯ ಜೊತೆ ಡೈರೆಕ್ಟ್ ಯೋಗ ಇರುವುದಿಲ್ಲವೋ ಅಲ್ಲಿಯವರೆಗೆ ಪದವಿಯೂ ಸಿಗುವುದಿಲ್ಲ, ಧಾರಣೆಯೂ ಆಗುವುದಿಲ್ಲ.

ನೀವು ನನ್ನೊಬ್ಬನ್ನನ್ನೇ ನೆನಪು ಮಾಡಬೇಕು ಎಂದು ತಂದೆ ತಿಳಿಸುತ್ತಾರೆ. ಬ್ರಹ್ಮನ ಮೂಲಕವೇ ನಾನು ತಿಳಿಸುವುದು ಬ್ರಹ್ಮನ ಮೂಲಕವೇ ಸ್ಥಾಪನೆಯಾಗಿರುವುದು. ತ್ರಿಮೂರ್ತಿಗಳು ಅವಶ್ಯವಾಗಿ ಬೇಕು. ಕೆಲವರು ಬ್ರಹ್ಮಾ ಚಿತ್ರವನ್ನು ನೋಡಿ ಕೋಪಗೊಳ್ಳುತ್ತಾರೆ. ಇನ್ನು ಕೆಲವರು ಕೃಷ್ಣ 84 ಜನ್ಮ ತೆಗೆದುಕೊಳ್ಳುತ್ತಾನೆ ಎಂದರೆ ಕೋಪಗೊಳ್ಳುತ್ತಾರೆ. ಚಿತ್ರವನ್ನು ಹರಿದು ಬಿಡುತ್ತಾರೆ. ಅರೆ! ಇವಂತು ತಂದೆ ಮಾಡಿಸಿರುವ ಚಿತ್ರಗಳು. ಮರೆಯಬೇಡಿ ತಂದೆಯನ್ನು ಮಾತ್ರ ನೆನಪು ಮಾಡಿ ಎಂದು ತಂದೆ ತಿಳಿಸುತ್ತಾರೆ. ಬಂಧನದಲ್ಲಿರುವವರು ಕೂಡ ಅಳುವ ಅವಶ್ಯಕತೆ ಇಲ್ಲ. ಮನೆಯಲ್ಲಿ ಕುಳಿತು ತಂದೆಯನ್ನು ನೆನಪು ಮಾಡುತ್ತಾ ಇರಿ. ಬಂಧನದಲ್ಲಿ ಇರುವವರಿಗೆ ಇನ್ನೂ ಹೆಚ್ಚಿನ ಪದವಿ ಸಿಗಬಹುದು. ನೀವು ಮಕ್ಕಳಿಗೆ ಜ್ಞಾನ ಕೊಡುವವರು ಒಬ್ಬರೇ ತಂದೆಯಾಗಿದ್ದಾರೆ. ಸ್ಪಿರಿಚುಯಲ್ ಜ್ಞಾನ ಒಬ್ಬ ತಂದೆಯ ಬಳಿ ಮಾತ್ರ ಇದೆ ಬೇರೆ ಯಾರ ಬಳಿಯೂ ಇಲ್ಲ. ಜ್ಞಾನ ಸಾಗರ ಒಬ್ಬ ಪರಮಪಿತ ಪರಮಾತ್ಮ ಮಾತ್ರ ಆಗಿದ್ದಾರೆ, ಅವರಿಗೆ ಮುಕ್ತಿದಾತ ಎಂದು ಕರೆಯುತ್ತಾರೆ, ಇದರಲ್ಲಿ ಹೆದರುವ ಮಾತೇನಿದೆ. ತಂದೆ ಮಕ್ಕಳಿಗೆ ತಿಳಿಸುತ್ತಾರೆ, ಮಕ್ಕಳು ಬೇರೆಯವರಿಗೆ ತಿಳಿಸಬೇಕು. ನನ್ನನ್ನು ನೆನಪು ಮಾಡುವುದರಿಂದ ಸದ್ಗತಿಯನ್ನು ಪಡೆಯುತ್ತೀರಿ ಎಂದು ತಂದೆ ತಿಳಿಸುತ್ತಾರೆ. ಸತ್ಯಯುಗದಲ್ಲಿ ರಾಮ ರಾಜ್ಯವಿರುತ್ತದೆ ಕಲಿಯುಗದಲ್ಲಿ ಅದು ಇಲ್ಲ. ಸತ್ಯ ಯುಗದಲ್ಲಿ ಒಂದೇ ರಾಜ್ಯವಿರುತ್ತದೆ. ಈ ಮಾತುಗಳು ಸಹ ನಿಮ್ಮಲ್ಲಿ ನಂಬರ್ವಾರ್ ಬುದ್ದಿಯಲ್ಲಿ ಧಾರಣೆಯಾಗುತ್ತದೆ, ಯಾರ ಬುದ್ದಿಯಲ್ಲಿ ಧಾರಣೆಯಾಗುವುದಿಲ್ಲವೋ ಅವರನ್ನು ವಿನಾಶಕಾಲೇ ವಿಪರೀತ ಬುದ್ದಿ ಎನ್ನುತ್ತಾರೆ, ಪದವಿಯೂ ಪಡೆಯುವುದಿಲ್ಲ. ಎಲ್ಲರ ವಿನಾಶವಂತೂ ಆಗಲೇಬೇಕಾಗಿದೆ. ಈ ಮಾತೇನು ಕಡಿಮೆಯಲ್ಲ. ವಿನಾಶ ಕಾಲೆ ಪ್ರೀತಿ ಬುದ್ದಿಯವರಾಗಿ ಎಂದು ತಂದೆಯು ತಿಳಿಸುತ್ತಾರೆ. ಇದು ನಿಮ್ಮ ಅಂತಿಮ ಜನ್ಮವಾಗಿದೆ. ಈಗ ನೀವು ಪ್ರೀತಿಯನ್ನಿಡದೆ ಇದ್ದರೆ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಸತ್ಯವಾದ ಹೃದಯದವರ ಮೇಲೆ ತಂದೆ ರಾಜಿಯಾಗುತ್ತಾರೆ. ದಧೀಚಿ ಋಷಿಯ ಹಾಗೆ ಮೂಳೆಗಳನ್ನು ಸೇವೆಯಲ್ಲಿ ಸವೆಸಬೇಕು. ಯಾವಾಗ ಗ್ರಹಚಾರ ಕುಳಿತುಕೊಳ್ಳುತ್ತದೆ ಎಂದರೆ ಅನೇಕ ತರಹದ ಮಾಯೆಯ ಬಿರುಗಾಳಿ ಬರುತ್ತಲೇ ಇರುತ್ತದೆ. ಇದಕ್ಕಿಂತ ಲೌಕಿಕವೇ ಸರಿ, ಅಲ್ಲಿಗೆ ಹೊರಟು ಹೋಗೋಣ, ಇಲ್ಲಂತು ಯಾವ ಮಜವೂ ಇಲ್ಲ ಎಂದು ಹೇಳುತ್ತಾರೆ. ಅಲ್ಲಂತೂ ನಾಟಕವಿದೆ, ಸಿನೆಮಾಗಳಿವೆ, ಯಾರು ಈ ಮಾತುಗಳಲ್ಲಿ ಇರುತ್ತಾರೆಯೋ ಅವರು ಇಲ್ಲಿ ಇರುವುದು ಬಹಳ ಕಷ್ಟ. ಹಾ! ಪುರುಷಾರ್ಥ ಮಾಡಿ ಉನ್ನತ ಪದವಿಯನ್ನು ಪಡೆಯಬಹುದು. ಬೆಳಗ್ಗೆ ಎದ್ದು ಕುಳಿತುಕೊಳ್ಳದಿದ್ದರೆ ಮಜಾ ಬರುವುದಿಲ್ಲ, ಮಲಗಿಕೊಂಡರೆ ಕೆಲವೊಮ್ಮೆ ನಿದ್ದೆ ಬರುತ್ತದೆ. ಎದ್ದು ಕುಳಿತುಕೊಳ್ಳುವುದರಿಂದ ಒಳ್ಳೆಯ ವಿಚಾರಗಳು ಬರುತ್ತವೆ. ಬಹಳ ಮಜಾ ಬರುತ್ತದೆ ಎಂದು ಬಾಬಾ ತಿಳಿಸುತ್ತಾರೆ.

ಇನ್ನು ಸ್ವಲ್ಪ ದಿನಗಳು ಮಾತ್ರ ಬಾಕಿ ಉಳಿದಿವೆ, ನಾವು ತಂದೆಯಿಂದ ವಿಶ್ವದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತಿದ್ದೇವೆ. ಈ ರೀತಿ ನೆನಪು ಮಾಡಿದರೂ ಸಹ ಖುಶಿಯ ನಶೆ ಏರುತ್ತದೆ. ಬೆಳಗ್ಗೆ ಚಿಂತನೆ ನಡೆಯುತ್ತದೆ ಎಂದರೆ ದಿನದಲ್ಲೂ ಕೂಡ ಖುಶಿ ಇರುತ್ತದೆ. ಒಂದುವೇಳೆ ಖುಶಿ ಇಲ್ಲ ಎಂದರೆ ತಂದೆಯ ಜೊತೆ ಪ್ರೀತಿ ಇಲ್ಲ ಎಂದರ್ಥ. ಅಮೃತವೇಳೆಯಲ್ಲಿ ಏಕಾಂತ ಚೆನ್ನಾಗಿರುತ್ತದೆ, ಎಷ್ಟು ತಂದೆಯನ್ನು ನೆನಪು ಮಾಡುತ್ತೀರೋ ಅಷ್ಟು ಖುಶಿಯ ನಶೆ ಏರಿರುತ್ತದೆ. ಈ ಓದಿನಲ್ಲಿ ಗ್ರಹಚಾರಿ ಕುಳಿತುಕೊಳ್ಳುತ್ತದೆ ಏಕೆಂದರೆ ತಂದೆಯನ್ನು ಮರೆತು ಬಿಡುತ್ತಾರೆ. ತಂದೆಯಿಂದ ಆಸ್ತಿಯನ್ನು ಪಡೆಯಬೇಕಾದರೆ ಮನಸಾ-ವಾಚಾ-ಕರ್ಮಣಾ ಸೇವೆಯನ್ನು ಮಾಡಬೇಕು. ಈ ಸೇವೆಯಲ್ಲಿಯೇ ಈ ಅಂತಿಮ ಜನ್ಮವನ್ನು ಕಳೆಯಬೇಕು. ಒಂದುವೇಳೆ ಪ್ರಾಪಂಚಿಕ ಮಾತುಗಳಿಗೆ ಏನಾದರೂ ಅಂಟಿಕೊಂಡರೆ ಈ ಸೇವೆಯನ್ನು ಯಾವಾಗ ಮಾಡುತ್ತೀರಿ? ನಾಳೆ, ನಾಳೆ ಎನ್ನುತ್ತಾ ಶರೀರವನ್ನು ಬಿಟ್ಟು ಬಿಡುತ್ತಾರೆ. ಸ್ವರ್ಗಕ್ಕೆ ಕರೆದುಕೊಂಡು ಹೋಗಲು ತಂದೆ ಬಂದಿದ್ದಾರೆ. ಇಲ್ಲಂತು ಯುದ್ಧಗಳಲ್ಲಿ ಎಷ್ಟೊಂದು ಜನ ಸಾಯುತ್ತಾರೆ, ಎಷ್ಟೊಂದು ಜನರಿಗೆ ದು:ಖವಾಗುತ್ತದೆ. ಅಲ್ಲಂತೂ ಜಗಳ ಇತ್ಯಾದಿ ಇರುವುದೇ ಇಲ್ಲ. ಇದೆಲ್ಲಾ ಅಂತ್ಯದಲ್ಲಿ ಆಗಬೇಕಾಗಿದೆ. ನಿರ್ಧನಿಕರು ಸಾಯುತ್ತಾರೆ, ಆದರೆ ದಣಿಯನ್ನು ತಿಳಿದಿರುವವರು ರಾಜ್ಯಭಾಗ್ಯವನ್ನು ಪಡೆಯುವರು.

ನಾವು ನಮ್ಮ ಸಂಪಾದನೆಯನ್ನು, ನಮ್ಮದೇ ತನು-ಮನ-ಧನದಿಂದ ನಮ್ಮ ರಾಜ್ಯವನ್ನು ಸ್ಥಾಪಿಸುತ್ತಿದ್ದೇವೆ ಎಂದು ಪ್ರದರ್ಶನಗಳಲ್ಲಿ ತಿಳಿಸಬೇಕು, ಭಿಕ್ಷೆ ಬೇಡುವ ಅಗತ್ಯವಿಲ್ಲ. ಅನೇಕ ಸಹೋದರ-ಸಹೋದರಿಯರು ಒಟ್ಟುಗೂಡಿ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿರುವರು. ನೀವು ಕೋಟಿ ಗಟ್ಟಲೆ ಒಟ್ಟು ಸೇರಿಸಿ ವಿನಾಶ ಮಾಡುತ್ತೀರಿ, ನಾವು ಒಂದೊಂದು ಪೈಸೆಯನ್ನು ಒಟ್ಟುಗೂಡಿಸಿ ವಿಶ್ವದ ಮಾಲಿಕರಾಗುತ್ತೇವೆ. ಎಷ್ಟು ಅಧ್ಭುತವಾದ ಮಾತಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಅಮೃತವೇಳೆ ಏಕಾಂತದಲ್ಲಿ ಕುಳಿತು ತಂದೆಯನ್ನು ಪ್ರೀತಿಯಿಂದ ನೆನಪು ಮಾಡಬೇಕು. ಪ್ರಾಪಂಚಿಕ ಮಾತುಗಳಲ್ಲನ್ನು ಬಿಟ್ಟು ಈಶ್ವರೀಯ ಸೇವೆಯಲ್ಲಿ ತೊಡಗಬೇಕು.

2. ತಂದೆಯ ಜೊತೆ ಸತ್ಯವಾದ ಹೃದಯವನ್ನು ಇಡಬೇಕು. ಪರಸ್ಪರದಲ್ಲಿ ಒಬ್ಬರಿಗೊಬ್ಬರು ಪ್ರಿಯತಮ-ಪ್ರಿಯತಮೆಯರಾಗಬಾರದು. ಯಾವುದೇ ದೇಹಧಾರಿಯ ಜೊತೆ ಪ್ರೀತಿ ಇಡಬೇಡಿ. ಒಬ್ಬ ತಂದೆಯ ಜೊತೆ ಪ್ರೀತಿಯನ್ನು ಇಡಬೇಕಾಗಿದೆ.

ವರದಾನ:-

ವರ್ತಮಾನದಲ್ಲಿ ಒಬ್ಬರಿನ್ನೊಬ್ಬರಲ್ಲಿ ಯಾವ ಸೆಳೆತವಿದೆಯೋ ಅದು ಸ್ನೇಹದಿಂದಲ್ಲ, ಆದರೆ ಸ್ವಾರ್ಥದಿಂದ ಇದೆ. ಸ್ವಾರ್ಥದ ಕಾರಣ ಸೆಳೆತವಿದೆ ಮತ್ತು ಸೆಳೆತದ ಕಾರಣ ನಿರ್ಲಿಪ್ತರಾಗಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸ್ವಾರ್ಥದ ಶಬ್ಧದ ಅರ್ಥದಲ್ಲಿ ಸ್ಥಿತರಾಗಿ ಬಿಡಿ ಅರ್ಥಾತ್ ಮೊದಲು ಸ್ವಯಂನ ರಥವನ್ನು ಸ್ವಾಹಾ ಮಾಡಿರಿ. ಈ ಸ್ವಾರ್ಥವು ಸಮಾಪ್ತಿಯಾಯಿತೆಂದರೆ ನಿರ್ಲಿಪ್ತರಾಗುತ್ತೀರಿ. ಈ ಒಂದು ಶಬ್ಧದ ಅರ್ಥವನ್ನು ತಿಳಿಯುವುದರಿಂದ ಸದಾ ಒಬ್ಬರಲ್ಲಿಯೇ ಸ್ಥಿತರು ಹಾಗೂ ಏಕರಸ ಸ್ಥಿತಿಯವರು ಆಗಿ ಬಿಡುತ್ತೀರಿ – ಇದೇ ಸಹಜ ಪುರುಷಾರ್ಥವಾಗಿದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top