28 May 2021 KANNADA Murli Today – Brahma Kumaris

May 27, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ತಂದೆಯ ಮೂಲಕ ನಿಮಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಯಾವ ಜ್ಞಾನ ಸಿಕ್ಕಿದೆಯೋ ಇದನ್ನು ನೀವು ಬುದ್ಧಿಯಲ್ಲಿ ಇಟ್ಟುಕೊಳ್ಳುತ್ತೀರಿ, ಆದ್ದರಿಂದ ನೀವು ಸ್ವದರ್ಶನ ಚಕ್ರಧಾರಿಗಳಾಗಿದ್ದೀರಿ”

ಪ್ರಶ್ನೆ:: -

ಆತ್ಮವನ್ನು ಪಾವನ ಮಾಡಿಕೊಳ್ಳಲು ಆತ್ಮಿಕ ತಂದೆಯು ಯಾವ ಇಂಜೆಕ್ಷನ್ ಕೊಡುತ್ತಾರೆ?

ಉತ್ತರ:-

ಮನ್ಮನಾಭವದ ಇಂಜೆಕ್ಷನ್ ಕೊಡುತ್ತಾರೆ. ಇದನ್ನು ಆತ್ಮಿಕ ತಂದೆಯ ವಿನಃ ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ – ಮಧುರ ಮಕ್ಕಳೇ, ನೀವು ನನ್ನನ್ನು ನೆನಪು ಮಾಡಿ ಸಾಕು. ಈ ನೆನಪಿನಿಂದಲೇ ಆತ್ಮವು ಪಾವನವಾಗುವುದು. ಇದರಲ್ಲಿ ಸಂಸ್ಕೃತ ಇತ್ಯಾದಿಗಳನ್ನು ಓದುವ ಅವಶ್ಯಕತೆಯೂ ಇಲ್ಲ. ತಂದೆಯಂತೂ ಹಿಂದಿ ಭಾಷೆಯಲ್ಲಿ ಸರಳ ಶಬ್ಧಗಳಲ್ಲಿ ತಿಳಿಸುತ್ತಾರೆ. ಆತ್ಮಿಕ ತಂದೆಯೇ ನಮಗೆ ಪಾವನರಾಗುವ ಯುಕ್ತಿಯನ್ನು ತಿಳಿಸುತ್ತಿದ್ದಾರೆಂದು ಯಾವಾಗ ಆತ್ಮಕ್ಕೆ ನಿಶ್ಚಯ ಆಗಿ ಬಿಡುವುದೋ ಆಗ ವಿಕಾರಗಳನ್ನು ಬಿಡುತ್ತಾ ಹೋಗುತ್ತದೆ.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಓಂ ಶಾಂತಿಯ ಅರ್ಥವನ್ನು ಮಕ್ಕಳಿಗೆ ತಿಳಿಸಲಾಗಿದೆ. ಆತ್ಮವು ತನ್ನ ಪರಿಚಯ ಕೊಡುತ್ತದೆ, ನನ್ನ ಸ್ವರೂಪವು ಶಾಂತಿಯಾಗಿದೆ ಮತ್ತು ನಾನಿರುವ ಸ್ಥಾನವು ಶಾಂತಿಧಾಮವಾಗಿದೆ ಯಾವುದಕ್ಕೆ ಪರಮಧಾಮ, ನಿರ್ವಾಣ ಧಾಮವೆಂದೂ ಹೇಳಲಾಗುತ್ತದೆ. ತಂದೆಯೂ ಸಹ ಹೇಳುತ್ತಾರೆ – ದೇಹಾಭಿಮಾನವನ್ನು ಬಿಟ್ಟು ದೇಹೀ-ಅಭಿಮಾನಿಯಾಗಿ ತಂದೆಯನ್ನು ನೆನಪು ಮಾಡಿ. ಅವರು ಪತಿತ-ಪಾವನನಾಗಿದ್ದಾರೆ, ಇದನ್ನು ಯಾರೂ ತಿಳಿದುಕೊಂಡಿಲ್ಲ – ನಾವಾತ್ಮರಾಗಿದ್ದೇವೆ, ಇಲ್ಲಿಗೆ ಪಾತ್ರವನ್ನಭಿನಯಿಸಲು ಬಂದಿದ್ದೇವೆ. ಈಗ ನಾಟಕವು ಮುಕ್ತಾಯವಾಗುತ್ತದೆ, ಹಿಂತಿರುಗಿ ಹೋಗಬೇಕಾಗಿದೆ, ಆದ್ದರಿಂದ ತಿಳಿಸುತ್ತಾರೆ – ನನ್ನನ್ನು ನೆನಪು ಮಾಡಿರಿ. ಆಗ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ಇದಕ್ಕೇ ಸಂಸ್ಕೃತದಲ್ಲಿ ಮನ್ಮನಾಭವ ಎಂದು ಹೇಳುತ್ತಾರೆ. ತಂದೆಯು ಸಂಸ್ಕೃತ ಭಾಷೆಯಲ್ಲಿ ತಿಳಿಸಲಿಲ್ಲ, ತಂದೆಯಂತೂ ಹಿಂದಿ ಭಾಷೆಯಲ್ಲಿಯೇ ತಿಳಿಸುತ್ತಾರೆ. ಹೇಗೆ ಸರ್ಕಾರವು ಒಂದೇ ಹಿಂದಿ ಭಾಷೆಯಿರಬೇಕೆಂದು ಹೇಳುತ್ತದೆ. ತಂದೆಯೂ ಸಹ ವಾಸ್ತವದಲ್ಲಿ ಹಿಂದಿ ಭಾಷೆಯಲ್ಲಿಯೇ ತಿಳಿಸಿದ್ದಾರೆ ಆದರೆ ಈ ಸಮಯದಲ್ಲಿ ಅನೇಕ ಧರ್ಮ, ಮಠ ಪಂಥಗಳಿರುವ ಕಾರಣ ಅನೇಕ ಪ್ರಕಾರದ ಭಾಷೆಗಳನ್ನು ಮಾಡಿ ಬಿಟ್ಟಿದ್ದಾರೆ. ಸತ್ಯಯುಗದಲ್ಲಿ ಇಲ್ಲಿರುವಷ್ಟು ಭಾಷೆಗಳು ಇರುವುದಿಲ್ಲ. ಗುಜರಾತಿನಲ್ಲಿರುವ ಭಾಷೆಯೇ ಬೇರೆ, ಯಾರು ಯಾವ ಪ್ರಾಂತ್ಯದಲ್ಲಿರುವರೋ ಅವರು ಅಲ್ಲಿನ ಭಾಷೆಯನ್ನು ಅರಿತಿರುತ್ತಾರೆ. ಅನೇಕ ಮನುಷ್ಯರು ಅನೇಕ ಭಾಷೆಗಳಿವೆ, ಸತ್ಯಯುಗದಲ್ಲಿ ಒಂದೇ ಧರ್ಮ, ಒಂದೇ ಭಾಷೆಯಿತ್ತು. ಈಗ ನೀವು ಮಕ್ಕಳಿಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವು ಬುದ್ಧಿಯಲ್ಲಿದೆ. ಇದು ಯಾವುದೇ ಶಾಸ್ತ್ರದಲ್ಲಿಲ್ಲ. ಈ ಜ್ಞಾನವಿರುವಂತಹ ಶಾಸ್ತ್ರವು ಯಾವುದೂ ಇಲ್ಲ. ಕಲ್ಪದ ಆಯಸ್ಸನ್ನೂ ಬರೆದಿಲ್ಲ ಅಥವಾ ಇದು ಯಾರಿಗೂ ತಿಳಿದಿಲ್ಲ. ಸೃಷ್ಟಿಯು ಒಂದೇ ಆಗಿದೆ, ಸೃಷ್ಟಿಚಕ್ರವು ಸುತ್ತುತ್ತಾ ಇರುತ್ತದೆ. ಹೊಸದರಿಂದ ಹಳೆಯದು, ಹಳೆಯದರಿಂದ ಹೊಸದಾಗುತ್ತದೆ, ಇದಕ್ಕೇ ಸ್ವದರ್ಶನ ಚಕ್ರವೆಂದು ಹೇಳಲಾಗುತ್ತದೆ. ಯಾರಿಗೆ ಈ ಚಕ್ರದ ಜ್ಞಾನವಿದೆಯೋ ಅವರಿಗೆ ಸ್ವದರ್ಶನ ಚಕ್ರಧಾರಿಗಳೆಂದು ಕರೆಯಲಾಗುತ್ತದೆ. ಆತ್ಮಕ್ಕೆ ಜ್ಞಾನವಿರುತ್ತದೆ, ಇದನ್ನು ಮನುಷ್ಯರು ಕೃಷ್ಣನಿಗೆ, ವಿಷ್ಣುವಿಗೆ ಸ್ವದರ್ಶನ ಚಕ್ರವನ್ನು ತೋರಿಸುತ್ತಾರೆ. ಈಗ ತಂದೆಯು ತಿಳಿಸುತ್ತಾರೆ – ಅವರಿಗಂತೂ ಜ್ಞಾನವೇ ಇರಲಿಲ್ಲ. ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಂದೆಯೇ ಕೊಡುತ್ತಾರೆ, ಇದು ಸ್ವದರ್ಶನ ಚಕ್ರವಾಗಿದೆ ಬಾಕಿ ತಲೆಯನ್ನು ಕತ್ತರಿಸಲು ಇಲ್ಲಿ ಯಾವುದೇ ಹಿಂಸೆಯ ಮಾತಿಲ್ಲ. ಇದೆಲ್ಲವನ್ನೂ ಸುಳ್ಳು ಬರೆದು ಬಿಟ್ಟಿದ್ದಾರೆ. ಈ ಜ್ಞಾನವನ್ನು ತಂದೆಯ ವಿನಃ ಯಾವುದೇ ಮನುಷ್ಯ ಮಾತ್ರರು ಕೊಡಲು ಸಾಧ್ಯವಿಲ್ಲ. ಮನುಷ್ಯರನ್ನೆಂದೂ ಭಗವಂತನೆಂದು ಹೇಳಲು ಸಾಧ್ಯವಿಲ್ಲ, ಬ್ರಹ್ಮಾ-ವಿಷ್ಣು-ಶಂಕರರಿಗೂ ಸಹ ದೇವತೆಗಳೆಂದು ಹೇಳಲಾಗುತ್ತದೆ. ತಂದೆಯ ಮಹಿಮೆಯು ದೇವತೆಗಳಿಗೂ ಇರುವುದಿಲ್ಲ. ತಂದೆಯಂತೂ ರಾಜಯೋಗವನ್ನು ಕಲಿಸುತ್ತಿದ್ದಾರೆ. ತಂದೆಯ ಮಹಿಮೆಯೇ ಮಕ್ಕಳ ಮಹಿಮೆಯೆಂದು ಹೇಳುವುದಿಲ್ಲ. ಮಕ್ಕಳಾದರೆ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತೀರಿ, ತಂದೆಯು ಪುನರ್ಜನ್ಮದಲ್ಲಿ ಬರುವುದಿಲ್ಲ. ಮಕ್ಕಳು ತಂದೆಯನ್ನು ನೆನಪು ಮಾಡುತ್ತೀರಿ. ಶ್ರೇಷ್ಠಾತಿ ಶ್ರೇಷ್ಠನು ಭಗವಂತನಾಗಿದ್ದಾರೆ, ಅವರು ಸದಾ ಪಾವನನಾಗಿದ್ದಾರೆ. ಮಕ್ಕಳು ಪಾವನರಾಗಿ ಮತ್ತೆ ಪತಿತರಾಗುತ್ತೀರಿ, ತಂದೆಯಂತೂ ಸದಾ ಪಾವನನಾಗಿದ್ದಾರೆ. ಮಕ್ಕಳಿಗೆ ತಂದೆಯ ಆಸ್ತಿಯೂ ಅವಶ್ಯವಾಗಿ ಬೇಕು. ಒಂದು ಮುಕ್ತಿ ಬೇಕು, ಇನ್ನೊಂದು ಜೀವನ್ಮುಕ್ತಿ ಬೇಕು. ಶಾಂತಿಧಾಮಕ್ಕೆ ಮುಕ್ತಿ, ಸುಖಧಾಮಕ್ಕೆ ಜೀವನ್ಮುಕ್ತಿಯೆಂದು ಹೇಳಲಾಗುತ್ತದೆ. ಮುಕ್ತಿಯು ಎಲ್ಲರಿಗೂ ಸಿಗುತ್ತದೆ ಆದರೆ ಜೀವನ್ಮುಕ್ತಿಯು ಯಾರು ಓದುವರೋ ಅವರಿಗೇ ಸಿಗುತ್ತದೆ. ಭಾರತದಲ್ಲಿ ಅವಶ್ಯವಾಗಿ ಜೀವನ್ಮುಕ್ತಿಯಿತ್ತು ಉಳಿದೆಲ್ಲರೂ ಮುಕ್ತಿಧಾಮದಲ್ಲಿದ್ದರು. ಸತ್ಯಯುಗದಲ್ಲಿ ಕೇವಲ ಒಂದೇ ಭಾರತ ಖಂಡವಿತ್ತು, ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ತಂದೆಯು ತಿಳಿಸಿದ್ದಾರೆ – ಎಲ್ಲದಕ್ಕಿಂತ ಹೆಚ್ಚಿನದಾಗಿ ಲಕ್ಷ್ಮೀ-ನಾರಾಯಣರ ಮಂದಿರಗಳನ್ನು ಕಟ್ಟಿಸುತ್ತಾರೆ. ಮಂದಿರವನ್ನು ಕಟ್ಟಿಸುವ ಬಿರ್ಲಾದವರಿಗೂ ಸಹ ಲಕ್ಷ್ಮೀ-ನಾರಾಯಣರಿಗೆ ಈ ರಾಜ್ಯವು ಎಲ್ಲಿಂದ ಸಿಕ್ಕಿತು? ಎಷ್ಟು ಸಮಯ ರಾಜ್ಯ ಮಾಡಿದರು? ಮತ್ತೆ ಎಲ್ಲಿ ಹೋದರು? ಏನೂ ತಿಳಿದಿಲ್ಲ ಅಂದಮೇಲೆ ಇದು ಗೊಂಬೆ ಪೂಜೆಯ ಹಾಗೆ ಆಯಿತಲ್ಲವೆ! ಇದಕ್ಕೆ ಭಕ್ತಿ ಎಂದು ಹೇಳಲಾಗುತ್ತದೆ. ತಾವೇ ಪೂಜ್ಯ ಮತ್ತು ತಾವೇ ಪೂಜಾರಿ. ಪೂಜ್ಯ ಮತ್ತು ಪೂಜಾರಿಯಲ್ಲಿ ಬಹಳ ಅಂತರವಿದೆ. ಅದಕ್ಕೂ ಅರ್ಥವಿರಬೇಕಲ್ಲವೆ. ವಿಕಾರಿಗೆ ಪತಿತರೆಂದು ಹೇಳಲಾಗುತ್ತದೆ. ಕ್ರೋಧಿಗೆ ಪತಿತರೆಂದು ಹೇಳುವುದಿಲ್ಲ, ವಿಕಾರದಲ್ಲಿ ಹೋಗುವವರಿಗೇ ಪತಿತರೆಂದು ಹೇಳಲಾಗುತ್ತದೆ. ಈ ಸಮಯದಲ್ಲಿ ನಿಮಗೆ ಜ್ಞಾನಾಮೃತ ಸಿಗುತ್ತದೆ. ಜ್ಞಾನ ಸಾಗರನು ಒಬ್ಬರೇ ತಂದೆಯಾಗಿದ್ದಾರೆ. ತಂದೆಯು ತಿಳಿಸಿದ್ದಾರೆ – ಈ ಭಾರತವೇ ಸತೋಪ್ರಧಾನ, ಶ್ರೇಷ್ಠಾತಿ ಶ್ರೇಷ್ಠವಾಗಿತ್ತು, ಈಗ ತಮೋಪ್ರಧಾನವಾಗಿದೆ, ಇದು ನಿಮ್ಮ ಬುದ್ಧಿಯಲ್ಲಿದೆ. ಇಲ್ಲಿ ಯಾವುದೇ ರಾಜಧಾನಿಯಿಲ್ಲ, ಇದು ಪ್ರಜೆಗಳ ರಾಜ್ಯವಾಗಿದೆ. ಸತ್ಯಯುಗದಲ್ಲಿ ಬಹಳ ಕಡಿಮೆ ಜನಸಂಖ್ಯೆಯಿರುತ್ತದೆ, ಇಲ್ಲಿ ಎಷ್ಟೊಂದು ಜನಸಂಖ್ಯೆಯಿದೆ, ವಿನಾಶದ ತಯಾರಿಗಳೂ ಆಗುತ್ತಿದೆ. ದೆಹಲಿಯು ಪರಿಸ್ಥಾನವು ಆಗಲೇಬೇಕಾಗಿದೆ ಆದರೆ ಇದನ್ನು ಯಾರೂ ತಿಳಿದುಕೊಂಡಿಲ್ಲ. ಇದು ಹೊಸ ದೆಹಲಿಯೆಂದು ಅವರು ತಿಳಿದುಕೊಳ್ಳುತ್ತಾರೆ. ಈ ಹಳೆಯ ಪ್ರಪಂಚವನ್ನು ಪರಿವರ್ತನೆ ಮಾಡುವವರು ಯಾರು! ಇದು ಯಾರಿಗೂ ತಿಳಿದಿಲ್ಲ, ಯಾವುದೇ ಶಾಸ್ತ್ರದಲ್ಲಿಯೂ ಇಲ್ಲ. ತಿಳಿಸುವವರು ಒಬ್ಬರೇ ತಂದೆಯಾಗಿದ್ದಾರೆ, ಈಗ ನೀವು ಮಕ್ಕಳು ಹೊಸ ಪ್ರಪಂಚಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದೀರಿ. ಕವಡೆಯಿಂದ ವಜ್ರ ಸಮಾನರಾಗುತ್ತಿದ್ದೀರಿ, ಭಾರತವು ಎಷ್ಟು ಸಾಹುಕಾರನಾಗಿತ್ತು ಮತ್ತ್ಯಾವುದೇ ಧರ್ಮವಿರಲಿಲ್ಲ. ಈಗಂತೂ ಅನೇಕ ಧರ್ಮಗಳಿವೆ. ಈಗ ದಯಾಹೃದಯಿ ತಂದೆಯನ್ನು ನೆನಪು ಮಾಡುತ್ತಾರೆ. ಭಾರತವು ಸುಖಧಾಮವಾಗಿತ್ತು ಎಂಬುದನ್ನು ಮರೆತು ಬಿಟ್ಟಿದ್ದಾರೆ. ಈಗ ಭಾರತದ ಗತಿಯೇನಾಗಿದೆ! ವಾಸ್ತವದಲ್ಲಿ ಭಾರತವು ಸ್ವರ್ಗವಾಗಿತ್ತು, ತಂದೆಯ ಜನ್ಮ ಸ್ಥಾನವಲ್ಲವೆ ಆದ್ದರಿಂದ ಡ್ರಾಮಾನುಸಾರ ಅವರಿಗೆ ದಯೆ ಬರುತ್ತದೆ. ಭಾರತವು ಪ್ರಾಚೀನ ದೇಶವಾಗಿದೆ. ಕ್ರಿಸ್ತನಿಗೆ 3000 ವರ್ಷಗಳ ಮೊದಲು ಭಾರತವು ಸ್ವರ್ಗವಾಗಿತ್ತು ಮತ್ತ್ಯಾವುದೇ ಧರ್ಮವಿರಲಿಲ್ಲವೆಂದು ಹೇಳುತ್ತಾರೆ. ಈಗ ಈ ಭಾರತವು ಸಂಪೂರ್ಣ ಕನಿಷ್ಟ ಮಟ್ಟಕ್ಕೆ ಬಂದು ಬಿಟ್ಟಿದೆ. ನಮ್ಮ ಭಾರತ ದೇಶವು ಎಲ್ಲದಕ್ಕಿಂತ ಶ್ರೇಷ್ಠವಾಗಿತ್ತು ಎಂದು ಹಾಡುತ್ತಾರೆ. ಅದರ ಹೆಸರೇ ಸ್ವರ್ಗ ಎಂದಿತ್ತು. ಭಾರತದ ಮಹಿಮೆಯು ಯಾರಿಗೂ ತಿಳಿದಿಲ್ಲ. ತಂದೆಯೇ ಬಂದು ಭಾರತದ ಕಥೆಯನ್ನು ತಿಳಿಸುತ್ತಾರೆ. ಭಾರತದ ಕಥೆಯೆಂದರೆ ಪ್ರಪಂಚದ ಕಥೆಯಾಗಿದೆ. ಇದಕ್ಕೆ ಸತ್ಯ ನಾರಾಯಣನ ಕಥೆಯೆಂದು ಹೇಳಲಾಗುತ್ತದೆ. ತಂದೆಯೇ ಕುಳಿತು ತಿಳಿಸುತ್ತಾರೆ – ಪೂರ್ಣ 5000 ವರ್ಷಗಳ ಮೊದಲು ಭಾರತದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಅವರ ಚಿತ್ರಗಳೂ ಇವೆ ಆದರೆ ಈ ರಾಜ್ಯವು ಹೇಗೆ ಸಿಕ್ಕಿತು? ಸತ್ಯಯುಗಕ್ಕೆ ಮೊದಲು ಏನಿತ್ತು? ಸಂಗಮಯುಗಕ್ಕೆ ಮೊದಲು ಏನಿತ್ತು? ಕಲಿಯುಗ. ಇದು ಸಂಗಮಯುಗವಾಗಿದೆ. ಇದರಲ್ಲಿ ತಂದೆಯೇ ಬರಬೇಕಾಗುತ್ತದೆ ಏಕೆಂದರೆ ಯಾವಾಗ ಹಳೆಯ ಪ್ರಪಂಚವನ್ನು ಹೊಸದನ್ನಾಗಿ ಮಾಡಬೇಕೋ ಆಗಲೇ ನಾನು ಪತಿತ ಪ್ರಪಂಚವನ್ನು ಪಾವನ ಮಾಡಲು ಬರಬೇಕಾಗುತ್ತದೆ, ಆದರೆ ನನ್ನನ್ನು ಸರ್ವವ್ಯಾಪಿ ಎಂದು ಹೇಳಿ ಬಿಟ್ಟಿದ್ದಾರೆ. ಯುಗ-ಯುಗದಲ್ಲಿ ಬರುತ್ತಾರೆಂದು ಹೇಳಿ ಮನುಷ್ಯರು ತಬ್ಬಿಬ್ಬಾಗಿದ್ದಾರೆ. ಸಂಗಮಯುಗವನ್ನು ಕೇವಲ ನೀವೇ ತಿಳಿದುಕೊಂಡಿದ್ದೀರಿ, ನೀವು ಯಾರು – ಬೋರ್ಡಿನ ಮೇಲೆ ಬರೆಯಲ್ಪಟ್ಟಿದೆ, ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರು. ಬ್ರಹ್ಮನ ತಂದೆ ಯಾರು? ಸರ್ವಶ್ರೇಷ್ಠ ಶಿವ, ನಂತರ ಬ್ರಹ್ಮಾ, ನಂತರ ಬ್ರಹ್ಮನ ಮೂಲಕ ರಚನೆಯಾಗುತ್ತದೆ. ಪ್ರಜಾಪಿತನೆಂದು ಬ್ರಹ್ಮನಿಗೇ ಹೇಳಲಾಗುತ್ತದೆ, ಶಿವನಿಗೆ ಪ್ರಜಾಪಿತನೆಂದು ಹೇಳುವುದಿಲ್ಲ. ಶಿವನು ಎಲ್ಲಾ ಆತ್ಮರ ನಿರಾಕಾರ ತಂದೆಯಾಗಿದ್ದಾರೆ ಮತ್ತೆ ಇಲ್ಲಿಗೆ ಬಂದು ಪ್ರಜಾಪಿತ ಬ್ರಹ್ಮನ ಮೂಲಕ ದತ್ತು ಮಾಡಿಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ – ನಾನು ಇವರಲ್ಲಿ ಪ್ರವೇಶ ಮಾಡಿದ್ದೇನೆ, ಅವರ ಮೂಲಕ ನೀವು ಮುಖವಂಶಾವಳಿ ಬ್ರಾಹ್ಮಣರಾಗಿದ್ದೀರಿ, ಬ್ರಹ್ಮಾರವರ ಮೂಲಕವೇ ನಿಮ್ಮನ್ನು ಬ್ರಾಹ್ಮಣರನ್ನಾಗಿ ಮಾಡಿ ಮತ್ತೆ ದೇವತೆಗಳನ್ನಾಗಿ ಮಾಡುತ್ತೇನೆ. ನೀವೇ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರಾಗುತ್ತೀರಿ. ಈಗ ಮತ್ತೆ ಶೂದ್ರರಿಂದ ಬ್ರಾಹ್ಮಣರನ್ನಾಗಿ ಮಾಡಬೇಕಾಗಿದೆ. ನೀವು ಬಂದು ಬ್ರಹ್ಮನ ಮಕ್ಕಳಾಗಿದ್ದೀರಿ, ಬ್ರಹ್ಮನು ಯಾರ ಮಗ? ಬ್ರಹ್ಮನ ತಂದೆಗೆ ಯಾವುದಾದರೂ ಹೆಸರಿದೆಯೇ? ಅವರು ಶಿವ, ನಿರಾಕಾರ ತಂದೆಯಾಗಿದ್ದಾರೆ. ಅವರು ಬಂದು ಇವರಲ್ಲಿ ಪ್ರವೇಶ ಮಾಡಿ ದತ್ತು ಮಾಡಿಕೊಳ್ಳುತ್ತಾರೆ, ಮುಖ ವಂಶಾವಳಿಯನ್ನಾಗಿ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ – ನಾನು ಇವರ ಬಹಳ ಜನ್ಮಗಳ ಅಂತಿಮದಲ್ಲಿ ಪ್ರವೇಶ ಮಾಡುತ್ತೇನೆ, ಇವರು ನನ್ನವರಾಗಿ ಬಿಡುತ್ತಾರೆ, ಸನ್ಯಾಸ ಧಾರಣೆ ಮಾಡುತ್ತಾರೆ. ಯಾವುದರ ಸನ್ಯಾಸ? 5 ವಿಕಾರಗಳ ಸನ್ಯಾಸ. ಮನೆ-ಮಠವನ್ನು ಬಿಡುವ ಅವಶ್ಯಕತೆಯಿಲ್ಲ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಪವಿತ್ರರಾಗಿರಬೇಕಾಗಿದೆ. ನನ್ನೊಬ್ಬನನ್ನೇ ನೆನಪು ಮಾಡಿರಿ ಆಗ ನಿಮ್ಮ ವಿಕರ್ಮಗಳು ವಿನಾಶವಾಗುತ್ತದೆ, ಇದೇ ಯೋಗವಾಗಿದೆ, ಇದರಿಂದ ತುಕ್ಕು ಬಿಟ್ಟು ಹೋಗುತ್ತದೆ ಮತ್ತು ನೀವು ಸತೋಪ್ರಧಾನರಾಗಿ ಬಿಡುತ್ತೀರಿ. ಭಕ್ತಿಯಲ್ಲಿ ಭಲೆ ಎಷ್ಟಾದರೂ ಗಂಗಾ ಸ್ನಾನ ಮಾಡಲಿ, ಜಪ-ತಪ ಇತ್ಯಾದಿಗಳನ್ನು ಮಾಡಲಿ ಆದರೆ ಅವಶ್ಯವಾಗಿ ಕೆಳಗಿಳಿಯಲೇಬೇಕಾಗಿದೆ. ಸತೋಪ್ರಧಾನರಾಗಿದ್ದಿರಿ, ಈಗ ತಮೋಪ್ರಧಾನರಾಗಿದ್ದೀರಿ. ಮತ್ತೆ ಸತೋಪ್ರಧಾನರಾಗುವುದು ಹೇಗೆ? ಆ ಮಾರ್ಗವನ್ನು ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ನನ್ನೊಬ್ಬನನ್ನೇ ನೆನಪು ಮಾಡಿ ಎಂದು ತಂದೆಯು ಬಹಳ ಸಹಜ ರೀತಿಯಲ್ಲಿ ತಿಳಿಸುತ್ತಾರೆ, ಆತ್ಮಗಳೊಂದಿಗೆ ಮಾತನಾಡುತ್ತಾರೆ. ಯಾವುದೇ ಗುಜರಾತಿನವರೊಂದಿಗೆ ಅಥವಾ ಸಿಂಧಿಗಳೊಂದಿಗೆ ಮಾತನಾಡುವುದಿಲ್ಲ. ಇದು ಆತ್ಮಿಕ ಜ್ಞಾನವಾಗಿದೆ. ಶಾಸ್ತ್ರಗಳಲ್ಲಿ ದೈಹಿಕ ಜ್ಞಾನವಿದೆ. ಆತ್ಮಕ್ಕೇ ಜ್ಞಾನವು ಬೇಕು. ಆತ್ಮವೇ ಪತಿತನಾಗಿದೆ ಆದ್ದರಿಂದ ಅದಕ್ಕೆ ಆತ್ಮಿಕ ಇಂಜೆಕ್ಷನ್ ಬೇಕು. ತಂದೆಗೆ ಆತ್ಮಿಕ ಅವಿನಾಶಿ ಸರ್ಜನ್ ಎಂದು ಹೇಳಲಾಗುತ್ತದೆ. ಅವರು ಬಂದು ತಮ್ಮ ಪರಿಚಯ ನೀಡುತ್ತಾರೆ – ನಾನು ನಿಮ್ಮ ಆತ್ಮಿಕ ಸರ್ಜನ್ ಆಗಿದ್ದೇನೆ. ನಿಮ್ಮ ಆತ್ಮವು ಪತಿತನಾಗಿರುವ ಕಾರಣ ಶರೀರವೂ ರೋಗಿಯಾಗಿ ಬಿಟ್ಟಿದೆ. ಈ ಸಮಯದಲ್ಲಿ ಭಾರತವಾಸಿ ಹಾಗೂ ಇಡೀ ಪ್ರಪಂಚವೇ ನರಕವಾಸಿಯಾಗಿದೆ ಮತ್ತೆ ಹೇಗೆ ಸ್ವರ್ಗವಾಸಿಯಾಗುವುದು ಎಂಬುದನ್ನು ತಂದೆಯು ತಿಳಿಸುತ್ತಾರೆ. ನಾನೇ ಬಂದು ಎಲ್ಲಾ ಮಕ್ಕಳನ್ನು ಸ್ವರ್ಗವಾಸಿಗಳನ್ನಾಗಿ ಮಾಡುತ್ತೇನೆ. ಅವಶ್ಯವಾಗಿ ನಾವು ನರಕವಾಸಿಗಳಾಗಿದ್ದೆವು ಎಂಬುದನ್ನು ನೀವೂ ಸಹ ತಿಳಿದುಕೊಳ್ಳುತ್ತೀರಿ. ಕಲಿಯುಗಕ್ಕೆ ನರಕವೆಂದು ಹೇಳಲಾಗುತ್ತದೆ. ಈಗ ಈ ನರಕಕ್ಕೂ ಅಂತ್ಯವಾಗಿದೆ, ಭಾರತವಾಸಿಗಳು ಈ ಸಮಯದಲ್ಲಿ ರೌರವ ನರಕದಲ್ಲಿದ್ದಾರೆ, ಇದಕ್ಕೆ ಸ್ವರ್ಗವೆಂದು ಹೇಳುವುದಿಲ್ಲ. ಹೊಡೆದಾಡುತ್ತಾ-ಜಗಳವಾಡುತ್ತಾ ಇರುತ್ತಾರೆ. ಈಗ ತಂದೆಯು ಸ್ವರ್ಗದಲ್ಲಿ ಕರೆದುಕೊಂಡು ಹೋಗಲು ಯೋಗ್ಯರನ್ನಾಗಿ ಮಾಡುತ್ತಾರೆ ಅಂದಮೇಲೆ ಅವರ ಮಾತನ್ನು ಒಪ್ಪಬೇಕಲ್ಲವೆ. ತಮ್ಮ ಧರ್ಮ ಶಾಸ್ತ್ರವನ್ನೂ ಸಹ ತಿಳಿದುಕೊಂಡಿಲ್ಲ, ತಂದೆಯನ್ನೇ ತಿಳಿದುಕೊಂಡಿಲ್ಲ.

ತಂದೆಯು ತಿಳಿಸುತ್ತಾರೆ- ನಾನು ನಿಮ್ಮನ್ನು ಪತಿತರಿಂದ ಪಾವನರನ್ನಾಗಿ ಮಾಡಿದ್ದೆನು, ಶ್ರೀಕೃಷ್ಣನಲ್ಲ. ಕೃಷ್ಣನಂತೂ ನಂಬರ್ವನ್ ಪಾವನನಾಗಿದ್ದನು, ಅವನಿಗೆ ಶ್ಯಾಮ ಸುಂದರನೆಂದು ಹೇಳುತ್ತಾರೆ. ಕೃಷ್ಣನ ಆತ್ಮವು ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಈಗ ಪತಿತನಾಗಿದೆ. ಕಾಮ ಚಿತೆಯನ್ನೇರಿ ಕಪ್ಪಾಗಿದ್ದಾರೆ. ಜಗದಂಬೆಯನ್ನು ಕಪ್ಪಾಗಿ ಏಕೆ ತೋರಿಸುತ್ತಾರೆ? ಇದನ್ನು ಯಾರೂ ತಿಳಿದುಕೊಂಡಿಲ್ಲ. ಹೇಗೆ ಕೃಷ್ಣನನ್ನು ಕಪ್ಪಾಗಿ ತೋರಿಸಿದ್ದಾರೆಯೋ ಹಾಗೆಯೇ ಜಗದಂಬೆಯನ್ನು ಕಪ್ಪಾಗಿ ತೋರಿಸುತ್ತಾರೆ. ಈಗ ನೀವು ಕಪ್ಪಾಗಿದ್ದೀರಿ ಮತ್ತೆ ಸುಂದರರಾಗುತ್ತೀರಿ. ನೀವು ಇದನ್ನು ತಿಳಿಸಬಹುದು – ಭಾರತವು ಬಹಳ ಸುಂದರವಾಗಿತ್ತು, ಸುಂದರತೆಯನ್ನು ನೋಡಬೇಕೆಂದರೆ ಅಜ್ಮೀರ್ನಲ್ಲಿ ನೋಡಿ. ಸ್ವರ್ಗದಲ್ಲಿ ಚಿನ್ನ, ವಜ್ರ, ವೈಡೂರ್ಯಗಳ ಮಹಲುಗಳಿತ್ತು, ಈಗಂತೂ ಕಲ್ಲಿನಿಂದ ಮಾಡಲ್ಪಟ್ಟಿದೆ. ಎಲ್ಲರೂ ತಮೋಪ್ರಧಾನರಾಗಿದ್ದಾರೆ ಅಂದಾಗ ಮಕ್ಕಳಿಗೆ ತಿಳಿದಿದೆ – ಶಿವ ತಂದೆ, ಬ್ರಹ್ಮಾದಾದಾ ಇಬ್ಬರೂ ಒಟ್ಟಿಗೆ ಇದ್ದಾರೆ ಆದ್ದರಿಂದ ಬಾಪ್ದಾದಾ ಎಂದು ಹೇಳುತ್ತೇವೆ. ಆಸ್ತಿಯು ಶಿವ ತಂದೆಯಿಂದಲೇ ಸಿಗುತ್ತದೆ. ಒಂದುವೇಳೆ ದಾದಾರವರಿಂದ ಸಿಗುತ್ತದೆ ಎಂದು ಹೇಳುವುದಾದರೆ ಬಾಕಿ ಶಿವ ತಂದೆಯ ಬಳಿ ಏನಿದೆ? ಆಸ್ತಿಯು ಶಿವ ತಂದೆಯಿಂದ ಬ್ರಹ್ಮಾರವರ ಮೂಲಕ ಸಿಗುತ್ತದೆ. ಬ್ರಹ್ಮನ ಮೂಲಕ ವಿಷ್ಣು ಪುರಿಯ ಸ್ಥಾಪನೆ. ಈಗಂತೂ ರಾವಣ ರಾಜ್ಯವಾಗಿದೆ. ನಿಮ್ಮನ್ನು ಬಿಟ್ಟು ಮತ್ತೆಲ್ಲರೂ ನರಕವಾಸಿಗಳಾಗಿದ್ದಾರೆ, ನೀವೀಗ ಸಂಗಮದಲ್ಲಿದ್ದೀರಿ. ಈಗ ಪತಿತರಿಂದ ಪಾವನರಾಗುತ್ತಿದ್ದೀರಿ ನಂತರ ವಿಶ್ವದ ಮಾಲೀಕರಾಗಿ ಬಿಡುತ್ತೀರಿ. ಈ ವಿದ್ಯೆಯನ್ನು ಮನುಷ್ಯರು ಓದಿಸುವುದಿಲ್ಲ. ನಿಮಗೆ ಮುರುಳಿಯನ್ನು ಯಾರು ನುಡಿಸುತ್ತಾರೆ? ಶಿವ ತಂದೆ. ತಂದೆಯು ಪರಮಧಾಮದಿಂದ ಹಳೆಯ ಪ್ರಪಂಚ, ಹಳೆಯ ಶರೀರದಲ್ಲಿ ಬರುತ್ತಾರೆ. ಯಾರಿಗಾದರೂ ಈ ನಿಶ್ಚಯವಾಗಿ ಬಿಟ್ಟರೆ ಮತ್ತೆ ತಂದೆಯೊಂದಿಗೆ ಮಿಲನ ಮಾಡದೆ ಇರಲು ಸಾಧ್ಯವೇ ಇಲ್ಲ. ಮೊದಲು ಬೇಹದ್ದಿನ ತಂದೆಯೊಂದಿಗೆ ಮಿಲನ ಮಾಡಬೇಕೆಂದು ಹೇಳುತ್ತಾರೆ, ಅವರು ನಿಲ್ಲುವುದಿಲ್ಲ. ಯಾವ ಬೇಹದ್ದಿನ ತಂದೆಯು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆಯೋ ಅವರ ಬಳಿ ನಮ್ಮನ್ನು ಬೇಗನೆ ಕರೆದುಕೊಂಡು ಹೋಗಿ, ಶಿವ ತಂದೆಯ ರಥವು ಯಾವುದೆಂಬುದನ್ನು ನಾವು ನೋಡಲೇಬೇಕೆಂದು ಹೇಳುತ್ತಾರೆ. ಅವರಂತೂ ಕುದುರೆಗೆ ಶೃಂಗಾರ ಮಾಡುತ್ತಾರೆ, ಆ ರಥವು ಮಹಮ್ಮದ್ನದಾಗಿತ್ತು, ಯಾರು ಧರ್ಮ ಸ್ಥಾಪನೆ ಮಾಡಿದರು. ಭಾರತವಾಸಿಗಳು ನಂದಿಗೆ ತಿಲಕವನ್ನಿಟ್ಟು ಮಂದಿರದಲ್ಲಿ ಇಡುತ್ತಾರೆ. ಇದರ ಮೇಲೆ ಶಿವನ ಸವಾರಿಯಾಯಿತು ಎಂದು ತಿಳಿಯುತ್ತಾರೆ ಆದರೆ ಬಸವನ ಮೇಲೆ ಶಿವನ ಸವಾರಿಯಾಗಲಿ, ಶಂಕರನ ಸವಾರಿಯಾಗಲಿ ಆಗಲಿಲ್ಲ. ಮನುಷ್ಯರು ಏನನ್ನೂ ತಿಳಿದುಕೊಳ್ಳುವುದಿಲ್ಲ. ಶಿವನು ನಿರಾಕಾರನಾಗಿದ್ದಾರೆ ಅಂದಮೇಲೆ ಅವರು ಹೇಗೆ ಸವಾರಿಯಾಗುತ್ತಾರೆ! ಎತ್ತಿನ ಮೇಲೆ ಕುಳಿತುಕೊಳ್ಳಲು ಕಾಲುಗಳು ಬೇಕಲ್ಲವೆ. ಇದು ಅಂಧಶ್ರದ್ಧೆಯಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತಂದೆಯಿಂದ ಯಾವ ಜ್ಞಾನಾಮೃತವು ಸಿಗುತ್ತಿದೆಯೋ ಆ ಅಮೃತವನ್ನು ಕುಡಿಯಬೇಕು ಮತ್ತು ಕುಡಿಸಬೇಕಾಗಿದೆ. ಪೂಜಾರಿಗಳಿಂದ ಪೂಜ್ಯರಾಗಲು ವಿಕಾರಗಳ ತ್ಯಾಗ ಮಾಡಬೇಕಾಗಿದೆ.

2. ಯಾವ ತಂದೆಯು ಸ್ವರ್ಗದಲ್ಲಿ ಕರೆದುಕೊಂಡು ಹೋಗಲು ಯೋಗ್ಯರನ್ನಾಗಿ ಮಾಡುತ್ತಿದ್ದಾರೆಯೋ ಅವರ ಪ್ರತಿಯೊಂದು ಮಾತನ್ನು ಪಾಲಿಸಬೇಕಾಗಿದೆ. ಪೂರ್ಣ ನಿಶ್ಚಯ ಬುದ್ಧಿಯವರಾಗಬೇಕಾಗಿದೆ.

ವರದಾನ:-

ಈಗ ತಮ್ಮ ಸಂಪೂರ್ಣ ಸ್ಥಿತಿ ಹಾಗೂ ಸಂಪೂರ್ಣ ಸ್ವರೂಪದ ಆಹ್ವಾನ ಮಾಡಿರಿ, ಇದರಿಂದ ಆ ಸ್ವರೂಪವೇ ಸದಾ ಸ್ಮೃತಿಯಲ್ಲಿರುತ್ತದೆ ನಂತರ ಹೇಗೆ ಕೆಲವೊಮ್ಮೆ ಶ್ರೇಷ್ಠ ಸ್ಥಿತಿ, ಕೆಲವೊಮ್ಮೆ ಕನಿಷ್ಟ ಸ್ಥಿತಿಯಲ್ಲಿ ಬಂದು-ಹೋಗುವ ಚಕ್ರ ಸುತ್ತುತ್ತದೆ, ಮತ್ತೆ-ಮತ್ತೆ ಸ್ಮೃತಿ ಮತ್ತು ವಿಸ್ಮೃತಿಯ ಚಕ್ರದಲ್ಲಿ ಬರುತ್ತೀರಿ, ಈ ಚಕ್ರದಿಂದ ಮುಕ್ತರಾಗಿ ಬಿಡುತ್ತೀರಿ. ಅವರುಗಳು ಜನನ-ಮರಣದ ಚಕ್ರದಿಂದ ಮುಕ್ತರಾಗಲು ಬಯಸುತ್ತಾರೆ ಮತ್ತು ತಾವು ವ್ಯರ್ಥ ಮಾತುಗಳಿಂದ ಮುಕ್ತರಾಗಿ ಹೊಳೆಯುತ್ತಿರುವ ಅದೃಷ್ಟ ನಕ್ಷತ್ರಗಳು ಆಗಿ ಬಿಡುತ್ತೀರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top